ನಿಮ್ಮ ನಿದ್ರೆ ಹಾಳು ಮಾಡೋ ಆಹಾರಗಳಿವು, ರಾತ್ರಿ ಇವುಗಳಿಂದ ದೂರವಿರಿ!
ಆರೋಗ್ಯಕರ ಜೀವನವನ್ನು ನಡೆಸಲು, ಉತ್ತಮ ಆಹಾರದೊಂದಿಗೆ ಸಾಕಷ್ಟು ನಿದ್ರೆಯ ಅಗತ್ಯವಿದೆ. ಯಾಕಂದ್ರೆ ನಿದ್ರೆ ಪೂರ್ಣಗೊಳ್ಳದಿದ್ದರೆ ಅಥವಾ ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದರೆ, ದೇಹವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗಾಗಿ ನಿದ್ರೆಯನ್ನು ಹಾಳುಮಾಡುವ ಕೆಲವು ಆಹಾರಗಳ ಬಗ್ಗೆ ಇಲ್ಲಿ ತಿಳಿಯಿರಿ.
ಆರೋಗ್ಯಕರ ಜೀವನವನ್ನು ನಡೆಸಲು, ಉತ್ತಮ ಆಹಾರದೊಂದಿಗೆ ಸಾಕಷ್ಟು ನಿದ್ರೆಯ (Sleep) ಅಗತ್ಯವಿದೆ. ಯಾಕಂದ್ರೆ ನಿದ್ರೆ ಪೂರ್ಣಗೊಳ್ಳದಿದ್ದರೆ ಅಥವಾ ರಾತ್ರಿಯಲ್ಲಿ ಸರಿಯಾಗಿ ನಿದ್ರೆ ಮಾಡದಿದ್ದರೆ, ದೇಹವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು. ಹಾಗಾಗಿ ನಿದ್ರೆಯನ್ನು ಹಾಳುಮಾಡುವ ಕೆಲವು ಆಹಾರಗಳ ಬಗ್ಗೆ ಇಲ್ಲಿ ತಿಳಿಯಿರಿ.
ಕೊಬ್ಬಿನ ಮತ್ತು ಎಣ್ಣೆಯುಕ್ತ ವಸ್ತುಗಳು(Oily food): ಕೆಲವು ಜನರು ಟಿವಿ ಅಥವಾ ಮೊಬೈಲ್ ನೋಡುವಾಗ ಏನನ್ನಾದರೂ ತಿನ್ನಲು ಇಷ್ಟಪಡ್ತಾರೆ. ಮತ್ತು ಹಸಿವನ್ನು ತಣಿಸಲು, ಕರಿದ ಚಿಪ್ಸ್, ಫ್ರೆಂಚ್ ಫ್ರೈ, ಸ್ನಾಕ್ಸ್ ಇತ್ಯಾದಿಗಳನ್ನು ತಿನ್ನುತ್ತೇವೆ. ಈ ಎಲ್ಲಾ ವಸ್ತುಗಳನ್ನು ತಿನ್ನುವ ಪ್ರಕ್ರಿಯೆಯಲ್ಲಿ, ಸರಿಯಾದ ಆಹಾರ ಸೇವಿಸೋದಿಲ್ಲ. ನಂತರ ಮಲಗಲು ಹೋದಾಗ, ನಿದ್ರೆ ಬರೋದಿಲ್ಲ. ಯಾಕಂದ್ರೆ ಈ ಎಣ್ಣೆಯುಕ್ತ ವಸ್ತುಗಳಲ್ಲಿರುವ ಹೆಚ್ಚಿನ ಕೊಬ್ಬು ನಮ್ಮ ನಿದ್ರೆಯನ್ನು ಹಾಳುಮಾಡುತ್ತೆ. ಆದ್ದರಿಂದ, ಮಲಗುವ ಮೊದಲು ಈ ಎಲ್ಲಾ ವಸ್ತು ತಿನ್ನೋದನ್ನು ತಪ್ಪಿಸುವುದು ಬಹಳ ಮುಖ್ಯ.
ಮಸಾಲೆಯುಕ್ತ ಆಹಾರ (Masala Food): ಹೆಚ್ಚಾಗಿ ಮದುವೆ ಅಥವಾ ಇತರ ಕಾರ್ಯಕ್ರಮಗಳಲ್ಲಿ ಮಸಾಲೆಯುಕ್ತ ಆಹಾರಗಳನ್ನು ಬಡಿಸುತ್ತಾರೆ. ಇದನ್ನು ನಾವು ಮತ್ತೆ ಮತ್ತೆ ತಿನ್ನಲು ಬಯಸುತ್ತೆ. ಆದರೆ ಅಂತಹ ಆಹಾರವು ಕಳಪೆಯಾಗಿರೋದರಿಂದ ಮತ್ತು ಹೆವಿಯಾಗಿರೋದ್ರಿಂದ ತಡವಾಗಿ ಜೀರ್ಣವಾಗುತ್ತೆ. ಆದುದರಿಂದ, ಅವುಗಳನ್ನು ರಾತ್ರಿಯಲ್ಲಿ ತಿನ್ನುವುದು ಸರಿಯಲ್ಲ. ಅಷ್ಟೇ ಅಲ್ಲ, ಮಸಾಲೆಯುಕ್ತ ಆಹಾರ ತಿನ್ನುವುದು ಎದೆಯ ಕಿರಿಕಿರಿ, ಅಸಿಡಿಟಿ ಮತ್ತು ಗ್ಯಾಸ್ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಕಾರಣದಿಂದಾಗಿ, ನಿದ್ರೆ ಸರಿಯಾಗಿ ಆಗೋದೆ ಇಲ್ಲ..
ಐಸ್ ಕ್ರೀಮ್ (Ice Cream): ಐಸ್ ಕ್ರೀಮ್ ಬಹುತೇಕ ಎಲ್ಲಾ ವಯಸ್ಸಿನ ಜನರು ಇಷ್ಟಪಡುವ ಆಹಾರ. ಆದರೆ ಇದು ಸಕ್ಕರೆ ಮತ್ತು ಸ್ಯಾಚುರೇಟೆಡ್ ಕೊಬ್ಬಿನಿಂದ ಸಮೃದ್ಧವಾಗಿದೆ. ಇದರ ಸೇವನೆಯು ಮಧುಮೇಹ ಮತ್ತು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸುವುದಲ್ಲದೆ, ಇದು ನಿದ್ರೆಗೆ ಭಂಗ ತರುತ್ತೆ. ಆದ್ದರಿಂದ ರಾತ್ರಿಯಲ್ಲಿ ಇದನ್ನು ತಪ್ಪಿಸಿ.
ಧೂಮಪಾನ(Smoke) ಮತ್ತು ಮದ್ಯಪಾನ: ರಾತ್ರಿಯಲ್ಲಿ ಧೂಮಪಾನ ಮತ್ತು ಮದ್ಯಪಾನ ಮಾಡುವ ಅಭ್ಯಾಸ ಹೊಂದಿರುವ ಅನೇಕ ಜನರಿದ್ದಾರೆ. ಆದರೆ ಅವುಗಳಲ್ಲಿರುವ ರಾಸಾಯನಿಕಗಳು ನಿದ್ರೆಗೆ ಅಡ್ಡಿಯಾಗಬಹುದು ಎಂದು ನಿಮಗೆ ತಿಳಿದಿದ್ಯಾ? ಈ ಎರಡು ಕೆಟ್ಟ ಅಭ್ಯಾಸಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಆದ್ದರಿಂದ ಅಂತಹ ವಿಷಯಗಳಿಂದ ದೂರವಿರೋದು ಒಳ್ಳೆಯದು.
ಡಾರ್ಕ್ ಚಾಕೊಲೇಟ್ (Dark chocolate): ಡಾರ್ಕ್ ಚಾಕಲೇಟ್ ತುಂಬಾ ಟೇಸ್ಟಿಯಾಗಿರುತ್ತೆ, ಆದರೆ ನಿದ್ರೆಯ ವಿಷಯಕ್ಕೆ ಬಂದಾಗ,ಇದನ್ನು ತಿನ್ನೋದನ್ನು ತಪ್ಪಿಸೋದು ಮುಖ್ಯ. ಯಾಕಂದ್ರೆ, ಚಾಕೊಲೇಟ್ ನಲ್ಲಿರುವ ಕೆಫೀನ್ ನಿದ್ರೆಯ ಚಕ್ರದ ಮೇಲೆ ಪರಿಣಾಮ ಬೀರಬಹುದು. ಇದರಿಂದ ಸರಿಯಾಗಿ ನಿದ್ರೆ ಮಾಡಲು ಸಾಢ್ಯವಾಗೋದಿಲ್ಲ.
ಟೊಮಾಟೋ (Tomatoes): ರಾತ್ರಿಯಲ್ಲಿ ಅಸಿಡಿಟಿ ಅಥವಾ ಎದೆಯುರಿ ಸಮಸ್ಯೆ ಹೊಂದಿದ್ದರೆ, ಮಲಗುವ ಮೊದಲು ಟೊಮೆಟೊ ಸೇವಿಸೋದು ಒಳ್ಳೆಯದಲ್ಲ ಎಂದು ಅರ್ಥಮಾಡಿಕೊಳ್ಳಬೇಕು. ಟೊಮೇಟೊಗಳು ಮಲಗಿದ ನಂತರ ಫುಡ್ ಪೈಪ್ನಲ್ಲಿ ಆಮ್ಲೀಯತೆಯನ್ನು ಹೆಚ್ಚಿಸೋದರಿಂದ, ರಾತ್ರಿಯಲ್ಲಿ ಎದೆಯುರಿ ಮತ್ತು ಚಡಪಡಿಕೆ ಇತ್ಯಾದಿಗಳ ಸಮಸ್ಯೆ ಹೊಂದಬಹುದು.
ಬ್ರೊಕೋಲಿ ಅಥವಾ ಎಲೆಕೋಸಿನಂತಹ ಹಸಿರು ತರಕಾರಿ(Green Vegetables): ಬ್ರೊಕೋಲಿ ಅಥವಾ ಎಲೆಕೋಸಿನಂತಹ ಹಸಿರು ತರಕಾರಿಗಳನ್ನು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು, ಆದರೆ ಅವುಗಳನ್ನು ರಾತ್ರಿ ಊಟಕ್ಕೆ ತೆಗೆದುಕೊಳ್ಳಬೇಡಿ. ಇದು ಗ್ಯಾಸ್ಟ್ರಿಕ್ ಸಮಸ್ಯೆ ಸೃಷ್ಟಿಸುತ್ತೆ. ಇದನ್ನು ತಿಂದು ಮಲಗುವ ಮೂಲಕ, ಈ ಪ್ರಕ್ರಿಯೆ ನಿಧಾನವಾಗುತ್ತೆ, ಇದರಿಂದಾಗಿ ಇದು ಜೀರ್ಣಕ್ರಿಯೆಗೆ ಸಂಬಂಧಿಸಿದ ಗ್ಯಾಸ್ ಅಥವಾ ಇತರ ಸಮಸ್ಯೆ ಉಂಟುಮಾಡಲು ಪ್ರಾರಂಭಿಸುತ್ತೆ.
ರೆಡ್ ಮೀಟ್ (Red Meat): ಕೆಂಪು ಮಾಂಸವು ಪ್ರೋಟೀನ್ ಮತ್ತು ಕಬ್ಬಿಣದಿಂದ ತುಂಬಿದೆ, ಆದರೆ ಇದು ಊಟಕ್ಕೆ ಉತ್ತಮ ಆಯ್ಕೆಯಲ್ಲ. ಯಾಕಂದ್ರೆ ಇದನ್ನು ತಿಂದ ನಂತರ ಆರಾಮವಾಗಿ ಮಲಗಲು ಸಾಧ್ಯವಾಗೋದಿಲ್ಲ ಮತ್ತು ಇದು ನಿಮ್ಮ ನಿದ್ರೆಯನ್ನು ಹಾಳುಮಾಡಬಹುದು. ಆದ್ದರಿಂದ ಉತ್ತಮ ಆಹಾರ ಸೇವಿಸಿ ಒಳ್ಳೆಯ ನಿದ್ದೆ ನಿಮ್ಮದಾಗುತ್ತೆ.