ಗರ್ಭಿಣಿಯರಿಗೆ ಕೇಸರಿ ಸೇವನೆಯ ಅದ್ಭುತ ಪ್ರಯೋಜನಗಳು!!
ಒಂಬತ್ತು ತಿಂಗಳ ಗರ್ಭಧಾರಣೆಯ ಅವಧಿಯಲ್ಲಿ ಹಲವು ಸಮಸ್ಯೆಗಳ ಜೊತೆಗೆ, ತಾಯ್ತನದ ಆನಂದವನ್ನು ಸಹ ನೀಡುತ್ತೆ. ಈ ಸಮಯದಲ್ಲಿ ಗರ್ಭಿಣಿ ಮಹಿಳೆಗೆ ಆಹಾರದ ಬಯಕೆಗಳು, ಬೆನ್ನು ನೋವು, ವಾಕರಿಕೆಯಿಂದ ಹಿಡಿದು, ಕುಟುಂಬದಲ್ಲಿ ಹೊಸ ಸದಸ್ಯರನ್ನು ಸ್ವಾಗತಿಸುವ ಉತ್ಸಾಹದವರೆಗೆ, ಗರ್ಭಿಣಿ ಮಹಿಳೆಯ ಜೀವನದಲ್ಲಿ ಅತ್ಯಂತ ಉಲ್ಲಾಸದ ಸಮಯವಾಗಿದೆ. ಇದು ಪದಗಳಲ್ಲಿ ವಿವರಿಸಲಾಗದ ಭಾವನೆ.
ತಾಯಿಯಾಗುವುದು ಜೀವನವನ್ನು ಬದಲಾಯಿಸುವ ಅನುಭವವಾಗಿದ್ದು, ಅದು ಟನ್ ಗಟ್ಟಲೆ ಜವಾಬ್ದಾರಿಗಳೊಂದಿಗೆ ಬರುತ್ತದೆ. ಗರ್ಭಿಣಿಯಾಗಿದ್ದಾಗ ಒಟ್ಟಾರೆ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಬಗ್ಗೆ ಮೊದಲಿಗೆ ಜನರು ಯೋಚನೆ ಮಾಡುತ್ತಾರೆ. ಏಕೆಂದರೆ ತಾಯಿಯೊಂದಿಗೆ ಪುಟ್ಟ ಮಗುವಿನ ಆರೋಗ್ಯಕರ ಬೆಳವಣಿಗೆಗೆ ಉತ್ತಮ ಆರೋಗ್ಯ ಮುಖ್ಯ. ಆದುದರಿಂದ ಆಹಾರ, ಆರೋಗ್ಯದ ವಿಷಯದಲ್ಲಿ ಹೆಚ್ಚಿನ ಜಾಗೃತೆ ವಹಿಸಿಕೊಳ್ಳಬೇಕು.
ಸಮತೋಲಿತ ಆಹಾರ, ಉತ್ತಮ ಅಭ್ಯಾಸಗಳು ಮತ್ತು ಸಂತೋಷವಾಗಿ ಇರುವುದು ಗರ್ಭಾವಸ್ಥೆಯಲ್ಲಿ ಆರೋಗ್ಯಕರವಾಗಿರಲು ಪ್ರಮುಖ ಅಂಶಗಳಾಗಿವೆ. ಆರೋಗ್ಯಕರ ಆಹಾರದ ಬಗ್ಗೆ ಮಾತನಾಡುವಾಗ, ಕೇಸರಿಯು ಗರ್ಭಧಾರಣೆಯ ಒಂಬತ್ತು ತಿಂಗಳಲ್ಲಿ ಹೆಚ್ಚು ಶಿಫಾರಸು ಮಾಡಲಾದ ಒಂದು ಆಹಾರ ಪದಾರ್ಥ. ಇದು ಒಂದು ಮಸಾಲೆ, ಇದು ಹಲವಾರು ಆಯುರ್ವೇದ ಪಾಕ ವಿಧಾನಗಳ ಭಾಗ ಮತ್ತು ವಿವಿಧ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಗರ್ಭಾವಸ್ಥೆಯಲ್ಲಿ ಕೇಸರಿ ಸೇವಿಸುವುದು ಹೇಗೆ ಸಹಾಯ ಮಾಡುತ್ತದೆ ಎಂಬುದು ಇಲ್ಲಿದೆ.
ಮನಸ್ಥಿತಿಯ ಬದಲಾವಣೆಗಳನ್ನು ನಿಭಾಯಿಸುತ್ತದೆ
ಮನಸ್ಥಿತಿಯ ಬದಲಾವಣೆಗಳು ಮತ್ತು ಗರ್ಭಧಾರಣೆ ಎರಡು ಬೇರ್ಪಡಿಸಲಾಗದ ವಿಷಯಗಳು. ತ್ವರಿತ ಹಾರ್ಮೋನ್ ಬದಲಾವಣೆಗಳು ಮತ್ತು ಗರ್ಭಧಾರಣೆಯ ದೈಹಿಕ ಅಸ್ವಸ್ಥತೆಗಳು ಸೇರಿ ವಿವಿಧ ಅಂಶಗಳು ಈ ಮನಸ್ಥಿತಿಯ ಬದಲಾವಣೆಗಳ ಹಿಂದಿನ ಕಾರಣಗಳಾಗಿವೆ. ಮನಸ್ಥಿತಿಯ ಬದಲಾವಣೆಗಳು ಒಬ್ಬನನ್ನು ಅಲ್ಪ-ಕೋಪ ಮತ್ತು ಕಿರಿಕಿರಿಗೊಳಿಸಬಹುದು.
ಕೇಸರಿಯು ಸೆರೊಟೋನಿನ್ ಅನ್ನು ಉತ್ಪಾದಿಸುವುದರಿಂದ ಅದ್ಭುತಗಳನ್ನು ಮಾಡುತ್ತದೆ, ಇದು ದೇಹದಲ್ಲಿ ರಕ್ತದ ಹರಿವನ್ನು ವರ್ಧಿಸುವ ಮೂಲಕ ಮನಸ್ಥಿತಿಯನ್ನು ಮಾಡ್ಯುಲೇಟ್ ಮಾಡುತ್ತದೆ. ಇದು ಭಾವನಾತ್ಮಕ ಏರಿಳಿತಗಳನ್ನು ನಿಭಾಯಿಸುತ್ತದೆ. ಉತ್ಸಾಹದಿಂದ ವು ಉನ್ನತವಾಗಿರಲು ಅವಕಾಶ ನೀಡುತ್ತದೆ. ಇದರಿಂದ ಗರ್ಭಿಣಿ ಸಂತೋಷವಾಗಿರುತ್ತಾಳೆ.
ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ
ಗರ್ಭಧಾರಣೆಯ ಸಮಯದಲ್ಲಿ ದೈಹಿಕ ಅಸ್ವಸ್ಥತೆಯು ನಿದ್ರೆಯ ಮೇಲೆ ಪ್ರತಿಕೂಲ ಪರಿಣಾಮಗಳನ್ನು ಬೀರಬಹುದು. ರಾತ್ರಿ ಇಡೀ ತಿರುಗಲು ಸಾಕಷ್ಟು ಸಮಯವನ್ನು ವ್ಯರ್ಥ ಮಾಡಬಹುದು. ಕೇಸರಿಯೊಂದಿಗೆ ಒಂದು ಲೋಟ ಬೆಚ್ಚಗಿನ ಹಾಲು ಸೇವಿಸಬಹುದು. ಇದು ಆತಂಕವನ್ನು ಶಮನಗೊಳಿಸುತ್ತದೆ, ಮನಸ್ಥಿತಿಯನ್ನು ಹೆಚ್ಚಿಸುತ್ತದೆ ಮತ್ತು ಚೆನ್ನಾಗಿ ನಿದ್ರಿಸಲು ಸಹಕರಿಸುತ್ತದೆ.
ಸೆಳೆತವನ್ನು ನಿವಾರಿಸುತ್ತದೆ
ಹಾರ್ಮೋನ್ ಬದಲಾವಣೆಗಳಿಂದಾಗಿ, ಗರ್ಭಾವಸ್ಥೆಯಲ್ಲಿ ಸೆಳೆತಗಳು ಹೆಚ್ಚಾಗಿ ಸಂಭವಿಸುತ್ತವೆ. ಸೆಳೆತ ಸೌಮ್ಯ ಆಗಿರಬಹುದು ಮತ್ತು ಕೆಲವೊಮ್ಮೆ ತೀವ್ರ ಮತ್ತು ಅಸಹನೀಯವಾಗಬಹುದು. ಕೇಸರಿಯನ್ನು ಸೇವಿಸುವ ಮೂಲಕ ಈ ಸೆಳೆತ ಸುಲಭವಾಗಿ ತಡೆಗಟ್ಟಬಹುದು. ಏಕೆಂದರೆ ಕೇಸರಿಯು ನೋವು ನಿವಾರಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ದೇಹದ ಸ್ನಾಯು ನೋವನ್ನು ಶಮನಗೊಳಿಸುತ್ತದೆ. ಇದು ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ, ಇದು ಸಾಮಾನ್ಯವಾಗಿ ಗರ್ಭಾವಸ್ಥೆಯಲ್ಲಿ ಹೆಚ್ಚಾಗಿರುತ್ತದೆ.
ಹೃದಯದ ಕಾರ್ಯ ಹೆಚ್ಚಿಸುತ್ತದೆ
ಗರ್ಭಾವಸ್ಥೆಯಲ್ಲಿ ಎಲ್ಲಾ ವಿಲಕ್ಷಣ ಬಯಕೆಗಳು ಖಂಡಿತವಾಗಿಯೂ ಹೆಚ್ಚು ಕ್ಯಾಲರಿ ಸೇವಿಸುವಂತೆ ಮಾಡುತ್ತದೆ, ಇದು ಕೊಲೆಸ್ಟ್ರಾಲ್ ಮಟ್ಟವನ್ನು ಹೆಚ್ಚಿಸಬಹುದು ಮತ್ತು ಹೃದಯದ ಆರೋಗ್ಯದ ಮೇಲೆ ಪರಿಣಾಮ ಬೀರಬಹುದು. ಕೇಸರಿಯು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಕೇಸರಿಯಲ್ಲಿರುವ ಸಂಯುಕ್ತಗಳು ಅಪಧಮನಿಗಳು ಮುಚ್ಚುವುದನ್ನು ತಡೆಯುತ್ತವೆ ಮತ್ತು ದೇಹದಲ್ಲಿ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತವೆ.
ಅಲರ್ಜಿಗಳನ್ನು ತಡೆಯುತ್ತದೆ
ಗರ್ಭಿಣಿಯಾಗಿದ್ದಾಗ ಅಲರ್ಜಿಗಳು ಉಂಟಾಗುತ್ತವೆ. ಸೀಸನಲ್ ಅಲರ್ಜಿಗಳು, ಎದೆ ದಟ್ಟಣೆ ಮತ್ತು ಉಸಿರಾಟದ ಸಮಸ್ಯೆ ವಿರುದ್ಧ ಹೋರಾಡಲು ಕೇಸರಿ ಸಹಾಯ ಮಾಡುತ್ತದೆ. ಸ್ವಲ್ಪ ಪ್ರಮಾಣದ ಕೇಸರಿಯನ್ನು ಸೇವಿಸುವುದು ಸುರಕ್ಷಿತ ಮತ್ತು ಒಟ್ಟಾರೆ ಆರೋಗ್ಯಕ್ಕೆ ಪ್ರಯೋಜನಕಾರಿ. ಎಲ್ಲಿಯವರೆಗೆ ಅತಿರೇಕಕ್ಕೆ ಹೋಗುವುದಿಲ್ಲವೋ, ಅಲ್ಲಿಯವರೆಗೆ ಇದು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿರುವುದಿಲ್ಲ.