ಊಟ ಮಾಡಿದ ನಂತರ ನಡೆಯುವುದೇಕೆ? ಆರೋಗ್ಯಕ್ಕಿದು ಮದ್ದು
ರಾತ್ರಿ ಸರಿಯಾದ ಸಮಯಕ್ಕೆ ಊಟ ಮಾಡುವ ಅಭ್ಯಾಸ ಯಾರಿಗೂ ಇಲ್ಲ. ತಮ್ಮೆಲ್ಲಾ ಕೆಲಸಗಳನ್ನು ಮಾಡಿ ಊಟ ಮಾಡುತ್ತಾರೆ. ಊಟ ಮಾಡುವಾಗ ಕೆಲವೊಮ್ಮೆ ತುಂಬಾ ರಾತ್ರಿಯೂ ಆಗಿರಬಹುದು. ಆದರೆ ಊಟ ಮಾಡಿದ ಕೂಡಲೇ ನಿದ್ರಿಸಬಾರದು. ರಾತ್ರಿ ಊಟ ಮಾಡಿದ ನಂತರ ನಿದ್ರಿಸಿದರೆ, ಈ ಅಭ್ಯಾಸವನ್ನು ಸುಧಾರಿಸಿ. ಆಹಾರ ಸೇವಿಸಿದ ನಂತರ ನೀವು ನಡೆಯಬೇಕು.

<
ನೀವು ತೂಕ ಇಳಿಸಿಕೊಳ್ಳಲು ಬಯಸಿದರೆ, ರಾತ್ರಿ ಊಟದ ನಂತರ ನಡೆಯಿರಿ. ಇದರಿಂದ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಆಯುರ್ವೇದ ವೈದ್ಯರ ಪ್ರಕಾರ, ಊಟದ ನಂತರ ವಾಕ್ ಮಾಡಿದರೆ, ದೇಹದ ಪ್ರತಿಯೊಂದೂ ಭಾಗ ಮತ್ತು ಸ್ನಾಯುಗಳು ಸರಿಯಾಗಿ ಕೆಲಸ ಮಾಡುತ್ತವೆ.
ರಾತ್ರಿ ಹೊತ್ತು ಊಟ ಮಾಡಿದ ಬಳಿಕ ವಾಕ್ ಮಾಡುವ ಕಾರಣದಿಂದಾಗಿ ರಕ್ತ ಪರಿಚಲನೆ ಸರಿಯಾಗಿ ಕೆಲಸ ಮಾಡುತ್ತದೆ. ಟೈಪ್ 2 ಡಯಾಬಿಟಿಸ್ ಇರುವ ರೋಗಿಗಳಿಗೆ ಊಟ ಮಾಡಿದ ನಂತರ ಸ್ವಲ್ಪ ವಾಕ್ ಮಾಡೋದು ಬೆಸ್ಟ್ ಮದ್ದು. ಇದು ರಕ್ತದ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.
ಎಷ್ಟು ಹೊತ್ತು ನಡೆಯಬೇಕು?
ಆಹಾರ ಸೇವಿಸಿದ ನಂತರ, ಪ್ರತಿದಿನ ಕನಿಷ್ಠ 15-20 ನಿಮಿಷಗಳ ಕಾಲ ನಡೆಯಬೇಕು. ನಿಮಗೆ ಹೆಚ್ಚು ಸಮಯವಿದ್ದರೆ ನೀವು ಅದನ್ನು ಹೆಚ್ಚಿಸಬಹುದು, ಆದರೆ ನೀವು ಊಟ ಮಾಡಿದ ಒಂದು ಗಂಟೆಯೊಳಗೆ ನಡೆಯಬೇಕು ಎಂಬುದನ್ನು ನೆನಪಿನಲ್ಲಿಡಿ. ಜೊತೆಗೆ ಊಟ ಮಾಡಿದ ಕೂಡಲೆ ನಿದ್ರೆ ಮಾಡೋದನ್ನು ತಪ್ಪಿಸಿ.
ತಿಂದ ನಂತರ ನಡೆಯುವುದರ ಪ್ರಯೋಜನಗಳು
ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ
ಊಟದ ನಂತರ ವಾಕ್ ಮಾಡುವುದು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ. ಇದು ಉಬ್ಬಸ ಅಥವಾ ಅಸ್ತಮಾ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ, ಮಲಬದ್ಧತೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ ಮತ್ತು ಯಾವುದೇ ಇತರ ಹೊಟ್ಟೆ ಸಂಬಂಧಿತ ಸಮಸ್ಯೆಯಿಂದ ಪರಿಹಾರವನ್ನು ನೀಡುತ್ತದೆ.
ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ
ಆಹಾರ ಸೇವಿಸಿದ ನಂತರ ನೀವು 15 ರಿಂದ 20 ನಿಮಿಷಗಳ ಕಾಲ ನಡೆದರೆ, ನೀವು ಸ್ಥೂಲಕಾಯಕ್ಕೆ ಬಲಿಯಾಗಲು ಸಾಧ್ಯವಿಲ್ಲ. ಏಕೆಂದರೆ ವಾಕಿಂಗ್ ಚಯಾಪಚಯವನ್ನು ಹೆಚ್ಚಿಸುತ್ತದೆ. ತೂಕ ನಷ್ಟಕ್ಕೆ ನಿಮ್ಮ ಚಯಾಪಚಯವು ಸರಿಯಾಗಿರಬೇಕು ಎಂದು ತಿಳಿದುಕೊಳ್ಳಿ.
ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ
ಊಟದ ನಂತರ ವಾಕಿಂಗ್ ಮಾಡುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು, ಏಕೆಂದರೆ ಇದು ರೋಗ ನಿರೋಧಕ ವ್ಯವಸ್ಥೆಯಿಂದ ವಿಷವನ್ನು ಹೊರಹಾಕುತ್ತದೆ. ವಾಕಿಂಗ್ ನಮ್ಮ ಆಂತರಿಕ ಅಂಗಗಳಿಗೆ ಉತ್ತಮವಾಗಿ ಕೆಲಸ ಮಾಡುತ್ತದೆ.
ರಕ್ತದಲ್ಲಿನ ಸಕ್ಕರೆ ಮಟ್ಟ ನಿಯಂತ್ರಿಸುತ್ತದೆ
ಆಹಾರ ಸೇವಿಸಿದ ಸ್ವಲ್ಪ ಸಮಯದ ನಂತರ, ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಲು ಆರಂಭವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಊಟದ ನಂತರ ವಾಕ್ ಮಾಡಲು ಹೋದಾಗ, ಇದು ರಕ್ತದ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರಿಸುತ್ತದೆ, ಇದರಿಂದಾಗಿ ಹೈಪರ್ಗ್ಲೈಸೀಮಿಯಾ ಅಪಾಯವನ್ನು ನಿವಾರಿಸುತ್ತದೆ.
ಖಿನ್ನತೆಗೆ ಸಹಾಯ ಮಾಡುತ್ತದೆ
ಊಟದ ನಂತರ ವಾಕ್ ಮಾಡುವುದು ದೇಹದಲ್ಲಿ ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದರಿಂದ ಖಿನ್ನತೆಗೆ ಸಂಭಂಧಿಸಿದ ಸಮಸ್ಯೆಗಳನ್ನು ನಿವಾರಣೆ ಮಾಡಬಹುದು. ಮನಸ್ಸು ಆನಂದದಿಂದ ಇರಲು ಇದು ಸಹಾಯ ಮಾಡುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.