ಮದುವೆ ಆದ್ಮೇಲೆ ಹುಡುಗೀರು ಯಾಕೆ ದಪ್ಪ ಆಗ್ತಾರೆ? ಹಾರ್ಮೋನ್ ಮಾತ್ರವಲ್ಲ!
ಪ್ರತಿಯೊಬ್ಬರ ಜೀವನದಲ್ಲೂ ಮದುವೆಗೆ ಇರುವ ಮಹತ್ವವನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಜೀವನದ ಎರಡನೇ ಇನ್ನಿಂಗ್ಸ್ ಎಂದು ಹೇಳಲಾಗುವ ಮದುವೆಯ ವಿಷಯದಲ್ಲಿ ಮಹಿಳೆಯರ ಜೊತೆಗೆ ಪುರುಷರಲ್ಲೂ ಭಯಗಳಿರುತ್ತವೆ. ಮದುವೆ ನಂತರ ವ್ಯಕ್ತಿಯ ಜೀವನದಲ್ಲಿ ಸಂಪೂರ್ಣ ಬದಲಾವಣೆಗಳಾಗುತ್ತವೆ. ಮುಖ್ಯವಾಗಿ ಮಹಿಳೆಯರಲ್ಲಿ ಈ ಬದಲಾವಣೆಗಳು ಹೆಚ್ಚಾಗಿ ಕಂಡುಬರುತ್ತವೆ. ಅಂತಹ ಬದಲಾವಣೆಗಳಲ್ಲಿ ತೂಕ ಹೆಚ್ಚುವುದು ಒಂದು.
ಮದುವೆ ಜೀವನದ ಮಹತ್ವದ ಘಟ್ಟ. ಮದುವೆ ಅಂದ್ರೆ ಹೆಣ್ಣು-ಗಂಡು ಇಬ್ಬರಲ್ಲೂ ಒಂದು ರೀತಿಯ ಭಯ, ಆತಂಕ ಶುರುವಾಗುತ್ತೆ. ಮುಖ್ಯವಾಗಿ ಹೆಣ್ಣು ಮಕ್ಕಳಲ್ಲಿ ಇದು ಹೆಚ್ಚು. ತಮಗೆ ಗೊತ್ತಿಲ್ಲದವರ ಜೀವನಕ್ಕೆ ಹೋಗ್ತೀವಿ ಅನ್ನೋ ಯೋಚನೆ ಗೊಂದಲ ಮೂಡಿಸುತ್ತೆ. ಈ ಸಂದರ್ಭದಲ್ಲಿ ಅವರಲ್ಲಿ ದೈಹಿಕವಾಗಿ ಮತ್ತು ಮಾನಸಿಕವಾಗಿ ಬದಲಾವಣೆಗಳಾಗುತ್ತವೆ. ಮುಖ್ಯವಾಗಿ ಮದುವೆ ಆದ್ಮೇಲೆ ಹೆಣ್ಣುಮಕ್ಕಳು ದಪ್ಪ ಆಗೋದು ನೋಡಿರ್ತೀವಿ. ಇದಕ್ಕೆ ನಿಜವಾದ ಕಾರಣ ಏನು? ತಜ್ಞರು ಏನ್ ಹೇಳ್ತಾರೆ ನೋಡೋಣ.
ಮದುವೆ ಆದ ತಕ್ಷಣ ಮಹಿಳೆಯರ ಜೀವನಶೈಲಿಯಲ್ಲಿ ಬದಲಾಗೋದು ಅವರ ಆಹಾರ ಪದ್ಧತಿ. ಹೊಸ ಆಹಾರ ಅಭ್ಯಾಸಗಳು ಹೆಚ್ಚಾಗುತ್ತವೆ. ಮುಖ್ಯವಾಗಿ ಮದುವೆ ಆದ ಹೊಸದರಲ್ಲಿ ಹಿಟ್ಟಿನ ತಿಂಡಿ, ಊಟ ಜಾಸ್ತಿ ಮಾಡ್ತಾರೆ. ಬಂಧುಗಳ ಮನೆಗೆ ಹೋಗ್ತಾರೆ. ಈ ಕಾರಣದಿಂದ ಗೊತ್ತಿಲ್ಲದೇನೆ ಜಾಸ್ತಿ ತಿಂತಾರೆ. ಇದರಿಂದ ಮಹಿಳೆಯರು ದಪ್ಪ ಆಗ್ತಾರೆ ಅಂತ ತಜ್ಞರು ಹೇಳ್ತಾರೆ.
ಒಂದೇ ಕಡೆ ಕೂರೋದು
ಮದುವೆಗೂ ಮುಂಚೆ ಹೆಣ್ಣುಮಕ್ಕಳು ಸ್ವಲ್ಪ ಮಟ್ಟಿಗೆ ಸ್ವತಂತ್ರವಾಗಿರ್ತಾರೆ. ಹೊರಗೆ ಹೋಗ್ತಾರೆ. ವ್ಯಾಯಾಮ, ವಾಕಿಂಗ್ ಮಾಡ್ತಾರೆ. ಆದ್ರೆ ಮದುವೆ ಆದ್ಮೇಲೆ ಇದಕ್ಕೆಲ್ಲಾ ಫುಲ್ ಸ್ಟಾಪ್. ದೈಹಿಕ ಚಟುವಟಿಕೆ ಕಡಿಮೆಯಾಗುತ್ತೆ. ಒಂದೇ ಕಡೆ ಕೂತು ಮಾಡೋ ಕೆಲಸ ಜಾಸ್ತಿ ಮಾಡ್ತಾರೆ. ಇದರಿಂದಲೂ ಮದುವೆ ಆದ ಹೊಸದರಲ್ಲಿ ಹೆಣ್ಣುಮಕ್ಕಳು ದಪ್ಪ ಆಗ್ತಾರೆ ಅಂತಾರೆ.
ಒತ್ತಡ
ಮೊದಲು ಗೊತ್ತಿಲ್ಲದವರ ಜೊತೆ ಇರೋದು, ಅವರ ಆಚಾರ-ವಿಚಾರ ಪಾಲಿಸೋದು ಹೆಣ್ಣುಮಕ್ಕಳಿಗೆ ಒತ್ತಡ ತರುತ್ತೆ. ಮುಖ್ಯವಾಗಿ ಭಾವನೆಗಳಲ್ಲಿ ಆಗುವ ಬದಲಾವಣೆಯಿಂದ ಹಾರ್ಮೋನ್‌ಗಳಲ್ಲೂ ಬದಲಾವಣೆ ಆಗುತ್ತೆ. ಇದರಿಂದ ಗೊತ್ತಿಲ್ಲದೇನೆ ಜಾಸ್ತಿ ತಿಂತಾರೆ. ಇದೂ ಕೂಡ ಮದುವೆ ಆದ ಹೊಸದರಲ್ಲಿ ದಪ್ಪ ಆಗೋದಕ್ಕೆ ಒಂದು ಕಾರಣ ಅಂತಾರೆ.
ಅದೇ ಕಾರಣ ಅಲ್ಲ
ಮದುವೆ ಆದ್ಮೇಲೆ ಗಂಡ-ಹೆಂಡತಿಯ ನಡುವೆ ದೈಹಿಕ ಸಂಬಂಧ ಇರುತ್ತೆ. ಈ ಸಮಯದಲ್ಲಿ ಈಸ್ಟ್ರೋಜನ್ ಹಾರ್ಮೋನ್ ಜಾಸ್ತಿ ಉತ್ಪತ್ತಿ ಆಗುತ್ತೆ. ಈ ಹಾರ್ಮೋನ್‌ನಿಂದ ದೇಹದಲ್ಲಿ ಬದಲಾವಣೆಗಳಾಗಿ ದಪ್ಪ ಆಗ್ತಾರೆ ಅನ್ನೋದು ಒಂದು ವಾದ. ಆದ್ರೆ ಇದರಲ್ಲಿ ಸತ್ಯ ಇಲ್ಲ ಅಂತ ತಜ್ಞರು ಹೇಳ್ತಾರೆ. ಭಾವನಾತ್ಮಕ ಬದಲಾವಣೆಗಳೇ ತೂಕ ಹೆಚ್ಚೋದಕ್ಕೆ ಕಾರಣ ಅಂತಾರೆ.
ಗಮನಿಸಿ: ಮೇಲಿನ ಮಾಹಿತಿ ಇಂಟರ್ನೆಟ್‌ನಿಂದ ತೆಗೆದದ್ದು. ಇದರಲ್ಲಿ ಎಷ್ಟು ವೈಜ್ಞಾನಿಕ ಸತ್ಯ ಇದೆ ಅನ್ನೋದು ಗೊತ್ತಿಲ್ಲ.