ಕೈ ತೊಳೆಯೋದು ಭಾರತೀಯರಿಗೆ ಹೊಸದಲ್ಲ, ಕರೋನಾ ತಡೆಯುವ ಸ್ಯಾನಿಟೈಸರ್ ಹೇಗಿರಬೇಕು?
ಭಯಾನಕವಾದ ಕೊರೋನಾ ವೈರಸ್ ಇಡೀ ವಿಶ್ವವನ್ನೇ ನಡಗುವಂತೆ ಮಾಡಿದೆ. ಇದೀಗ ದುಬೈನಿಂದ ಬಂದ ಓರ್ವ ಟೆಕ್ಕಿಯಿಂದ ಕೊರೋನಾ ವೈರಸ್ ಕರ್ನಾಟಕದೊಂದಿಗೆ ಲಿಂಕ್ ಪಡೆದುಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಕೊರೋನಾ ಬಂದ ತಕ್ಷಣ ಏನೂ ಸಾಯೋಲ್ಲ. ಜನರು ಯಾವುದೇ ಆತಂಕಪಡುವ ಅಗತ್ಯವಿಲ್ಲ. ಯಾವುದೇ ರೋಗ ಬರದಂತೆ ನಮ್ಮ ಹುಷಾರಿನಲ್ಲಿ ನಾವಿದ್ದರೆ ಒಳಿತು. ಇಷ್ಟು ಮಾಡಿದರೆ ಈ ವೈರಸ್ ಹರಡದಂತೆ ಎಚ್ಚರವಹಿಸಬಹುದು...
ಹಲವು ದೇಶಗಳಿಗೆ ಹರಡಿರುವ ಚೀನಾ ಮೂಲದ ಮಾರಣಾಂತಿಕ ಕೊರೋನಾ ವೈರಸ್ ಒಂದು ಅಂಟು ರೋಗ. ಭಯ ಬೇಡ ಕರೋನಾ ಬಂದ ತಕ್ಷಣ ಸಾಯೋಲ್ಲ ಆದರೆ ಬರದಂತೆ ನೋಡಿಕೊಳೋಣ.
ತೀವ್ರ ಶೀತ , ನ್ಯುಮೋನಿಯಾ ಹಾಗೂ ಶ್ವಾಸಕೋಶದ ಸಮಸ್ಯೆ ಇದರ ಮುಖ್ಯ ಲಕ್ಷಣ.
ತಲೆನೋವು, ಹೊಟ್ಟೆ ನೋವು ಕೂಡಾ ಕೊರೋನಾದಿಂದ ಬರುತ್ತದೆ. ಅನಾರೋಗ್ಯದ ಜನರಿಂದ ಸಾಧ್ಯವಾದಷ್ಟು ದೂರವಿರಿ. ಸಂಪರ್ಕ ಬೇಡ.
ಎಲ್ಲ ಜ್ವರವೂ ಕೊರೋನಾ ಲಕ್ಷಣವಲ್ಲ. ಭಯ ಬೇಡ. ರಕ್ತ ಮತ್ತು ಉಸಿರಾಟದ ಪರೀಕ್ಷೆ ಮಾಡಿಸಿಕೊಳ್ಳಿ. ಅನಾರೋಗ್ಯವಿದ್ದರೆ ಮನೆಯಲ್ಲೇ ಉಳಿಯಿರಿ.
ಶೀನು ಮತ್ತು ಕೆಮ್ಮಿನ ಗಾಳಿಯಿಂದ ಹರಡುತ್ತೆ. ಸ್ಪರ್ಶ ಹಸ್ತಲಾಘವ ಬೇಡ. ಕೈಗಳ ಸ್ವಚ್ಛತೆಯ ಬಗ್ಗೆ ನಿಗಾ ಇರಲಿ.
ವೈರಸ್ ಇರುವ ವಸ್ತುವನ್ನು ಮುಟ್ಟುವುದು. ಇದರ ಬಳಿಕ ಬಾಯಿ, ಮೂಗು ಅಥವಾ ಕಣ್ಣುಗಳನ್ನು ಕೈ ತೊಳೆಯದೆ ಮುಟ್ಟಿದ್ರೂ ವೈರಸ್ ತಗಲುವ ಸಾಧ್ಯತೆ ಹೆಚ್ಚು.
ಕೊರೋನಾ ವೈರಸ್ ಕೆಮ್ಮು, ಸೀನಿನಿಂದ ಕೂಡ ಇತರರಿಗೆ ಹರಡುತ್ತದೆ. ಹಾಗಾಗಿ ಕೆಮ್ಮು, ಸೀನು ಬಂದಾಗ ಟಿಶ್ಶೂ ಬಳಸಿ ಎಸೆಯಿರಿ, ಮರು ಬಳಕೆ ಬೇಡ. ಕೈಗಳನ್ನು ತೊಳೆಯಿರಿ.
ಸ್ವಚ್ಛ ನೀರಿನಲ್ಲಿ ಸೋಪು ಬಳಸಿ ಕನಿಷ್ಠ 20 ಸೆಕೆಂಡ್ ಕೈಗಳನ್ನು ಸ್ವಚ್ಛಗೊಳಿಸಿ. ಪದೇಪದೇ ಹೀಗೆ ಮಾಡುವುದರಿಂದ ಸೋಂಕನ್ನು ತಡೆಗಟ್ಟಬಹುದು.
60%-95% ಆಲ್ಕೋಹಾಲ್ ಅಂಶ ಇರುವ ಸ್ಯಾನಿಟೈಜರ್ ಬಳಸಿ. ಸ್ಯಾನಿಟೈಜರ್ ಇಲ್ಲದೆ ಇದರೂ ಆತಂಕ ಬೇಡ. ಸ್ವಚ್ಛ ನೀರು ಸಾಕು ವೈರಸ್ನ್ನು ದೂರ ಇಡಲು.
ತೊಳೆಯದೆ ಮುಖ, ಮೂಗು ಅಥವಾ ಬಾಯಿಯನ್ನು ಮುಟ್ಟಲು ಹೋಗಬೇಡಿ. ಫೋನ್, ಟ್ಯಾಬ್ಲೆಟ್ಸ್ ಅಥವಾ ಪದೇ ಪದೇ ಬಳಸುವ ವಸ್ತುಗಳನ್ನು ಸ್ವಚ್ಛವಾಗಿಟ್ಟು ವೈರಸ್ ಹರಡದಂತೆ ಕೇರ್ ತೆಗೆದುಕೊಳ್ಳಿ.