ಬೆಳಗ್ಗೆ ಎದ್ದ ಕೂಡಲೇ ಸಿಗರೇಟ್ ಸೇದ್ತಿರಾ? ಮುಗೀತು ಕಥೆ!
ಸ್ಮೋಕ್ ಮಾಡೋದೆ ಆರೋಗ್ಯಕ್ಕೆ ಹಾನಿಕಾರಕವಾಗಿದೆ, ಅದರಲ್ಲೂ ಬೆಳಗ್ಗೆ ಎದ್ದ ಹಾಗೆ ಸ್ಮೋಕ್ ಮಾಡೊದ್ರಿಂದ ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯೋಣ.
ಸಿಗರೇಟ್ ಅಥವಾ ಧೂಮಪಾನ (smoking) ಆರೋಗ್ಯಕ್ಕೆ ಹಾನಿಕಾರಕ ಎಂದು ನಮಗೆಲ್ಲರಿಗೂ ತಿಳಿದಿದ್ದರೂ, ಧೂಮಪಾನ ಮಾಡಲು ಆಯ್ಕೆ ಮಾಡುವ ದಿನದ ಸಮಯ ಸಹ ಆರೋಗ್ಯವನ್ನು ಇನ್ನಷ್ಟು ಹದಗೆಡಿಸುತ್ತದೆ. ಬೆಳಿಗ್ಗೆ ಧೂಮಪಾನ ಮಾಡುವುದರಿಂದ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ (lungs cancer) ಬರುವ ಸಾಧ್ಯ ಹೆಚ್ಚಾಗಿರುತ್ತಂತೆ. ಈ ಬಗ್ಗೆ ತಿಳಿಯೋಣ.
ಬೆಳಿಗ್ಗೆ ಧೂಮಪಾನ ಮಾಡುವುದು ಸಹ ತೀವ್ರ ವ್ಯಸನದ ಸಂಕೇತ. ಅನೇಕ ಜನರು ಎಚ್ಚರವಾದ ತಕ್ಷಣ ಅಥವಾ ಉಪಾಹಾರವನ್ನು (breakfast) ಸೇವಿಸುವಾಗ ಅಥವಾ ತಮ್ಮ ಕಚೇರಿ ಕೆಲಸವನ್ನು ಪ್ರಾರಂಭಿಸುವ ಮೊದಲು ಸ್ಮೋಕ್ ಮಾಡುತ್ತಾರೆ. ಈ ಅಭ್ಯಾಸವು ಮಾರಣಾಂತಿಕ ಮತ್ತು ಹೆಚ್ಚು ಅಪಾಯಕಾರಿ, ಅದರಲ್ಲೂ ಯುವ ಜನತೆಗೆ ಇದು ತುಂಬಾನೆ ಡೇಂಜರಸ್ ಆಗಿದೆ.
ಬೆಳಗ್ಗೆ ಸಿಗರೇಟ್ ಸೇದುವುದರಿಂದ ಏನೆಲ್ಲಾ ಸಮಸ್ಯೆ ಕಾಡುತ್ತೆ?
ಎಚ್ಚರವಾದ 30 ನಿಮಿಷಗಳಲ್ಲಿ ಧೂಮಪಾನ (smoking in the morning) ಮಾಡುವುದರಿಂದ ಬಾಯಿ ಮತ್ತು ಶ್ವಾಸಕೋಶದ ಕ್ಯಾನ್ಸರ್ ಬರುವ ಸಾಧ್ಯತೆ ಹೆಚ್ಚು ಎಂದು ಸಂಶೋಧಕರು ಕಂಡುಹಿಡಿದಿದ್ದಾರೆ. ಎದ್ದ ತಕ್ಷಣ ಸಿಗರೇಟುಗಳನ್ನು ಸೇವಿಸುವ ಧೂಮಪಾನಿಗಳು ದಿನಕ್ಕೆ ಎಷ್ಟು ಸಿಗರೇಟುಗಳನ್ನು ಸೇದುತ್ತಾರೆ ಎಂಬುದನ್ನು ಲೆಕ್ಕಿಸದೆ ಸ್ಮೋಕ್ ಮಾಡ್ತಾರೆ. ಮಧ್ಯಾಹ್ನ ಸಂಜೆ ಸ್ಮೋಕ್ ಮಾಡುವ ಜನರಿಗೆ ಹೋಲಿಕೆ ಮಾಡಿದ್ರೆ ಮಾರ್ನಿಂಗ್ ಸ್ಮೋಕ್ ಮಾಡುವ ಜನರಲ್ಲಿ ಕ್ಯಾನ್ಸರ್ ಸಾಧ್ಯತೆ ಹೆಚ್ಚು ಎಂದು ತಿಳಿದು ಬಂದಿದೆ.
ಪ್ರಚೋದನೆ ನೀಡೋದೇನು?
ಹೆಚ್ಚು ವ್ಯಸನಿಯಾಗಿರುವ ಬಹಳಷ್ಟು ಧೂಮಪಾನಿಗಳು ರಾತ್ರೋರಾತ್ರಿ ಸಹ ಸ್ಮೋಕ್ ಮಾಡ್ತಾರೆ.. ಅವರು ಬೆಳಿಗ್ಗೆ ಎದ್ದಾಗ, ಅವರ ರಕ್ತದ ನಿಕೋಟಿನ್ ಮಟ್ಟವು ಗಣನೀಯವಾಗಿ ಕುಸಿದಿರುತ್ತೆ. ಅವರ ನ್ಯೂರೋರಿಸೆಪ್ಟರ್ ಗಳು ಆ ಸಿಗರೇಟನ್ನು (cigaratte) "ಹಂಬಲಿಸಲು" ಮತ್ತು ಸ್ಮೋಕ್ ಮಾಡಲು ಅವರನ್ನು ಪ್ರೇರೇಪಿಸುತ್ತವೆ.
ನಿಮಗೊಂದು ಕಿವಿಮಾತು ಏನೆಂದರೆ ಧೂಮಪಾನವನ್ನು ಸಂಪೂರ್ಣವಾಗಿ ತ್ಯಜಿಸಲು ಪ್ರಯತ್ನಿಸಿ, ಏಕೆಂದರೆ ಇದರಿಂದ ಪ್ರಯೋಜನಗಳೇನು ಇಲ್ಲ. ಕೇವಲ ಅಪಾಯ ಮಾತ್ರ ಇರುತ್ತೆ. ನೀವು ಬೆಳಿಗ್ಗೆ ಧೂಮಪಾನ ಮಾಡಿದರೆ, ಈ ಅಭ್ಯಾಸವನ್ನು ಬಿಡಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ:
ಸಿಗರೇಟನ್ನು ಇಟ್ಟು ಕೊಳ್ಳಲೇ ಬೇಡಿ
ನೀವು ಮನೆಯಲ್ಲಿ ಧೂಮಪಾನ ಮಾಡುವುದಿಲ್ಲ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಕೋಣೆ ಅಥವಾ ಮನೆಯಿಂದ ಸಿಗರೇಟುಗಳನ್ನು ತೆಗೆಯಿರಿ. ಮುಂದೆ ನೀವು ಕೆಲಸಕ್ಕೆ ಹೋಗಲು ಹೊರಟಾಗ, ನಿಮ್ಮ ಕಾರು, ಪಾಕೆಟ್ ಅಥವಾ ಚೀಲದಲ್ಲಿ ಯಾವುದೇ ಸಿಗರೇಟು ಅಥವಾ ಲೈಟರ್ ಗಳು ಇಲ್ಲ ಎಂದು ಖಚಿತಪಡಿಸಿಕೊಳ್ಳಿ.
ನಿಮಗೆ ತಿಳಿದಿರುವ ಯಾರೊಂದಿಗಾದರೂ ಪ್ರಯಾಣಿಸಲು ಪ್ರಯತ್ನಿಸಿ. ಇದರಿಂದ ನಿಮ್ಮ ಕ್ರಿಯೆಗಳ ಮೇಲೆ ನಿಗಾ ಇಡಲು ಮತ್ತು ಸಿಗರೇಟ್ ಖರೀದಿಸಲು ಮತ್ತು ಸ್ಮೋಕ್ ಮಾಡೋದನ್ನು ತಡೆಯಲು ನಿಮಗೆ ಸಹಾಯ ಮಾಡಬಹುದು. ನೀವು ಬೆಳಿಗ್ಗೆ ಸ್ಮೋಕ್ ಮಾಡುವ ವ್ಯಕ್ತಿಯ ಸಹವಾಸ ಹೊಂದಿದ್ದರೆ, ಅವರೊಂದಿಗೆ ಪ್ರಯಾಣಿಸುವುದನ್ನು ತಪ್ಪಿಸಿ ಏಕೆಂದರೆ ಪ್ರಲೋಭನೆ ಮತ್ತು ಸಹವಾಸವು ನಿಮಗೆ ಸಿಗರೇಟ್ ನಿಂದ ದೂರವಿರಲು ಸಾಧ್ಯವಾಗದಂತೆ ಮಾಡಬಹುದು.
ಒಂದು ಲೋಟ ನೀರು ಕುಡಿಯಿರಿ
ಬೆಳಗ್ಗೆ ಎದ್ದ ಹಾಗೆ ಸಿಗರೇಟ್ ಹುಡುಕುವುದು ನಿಮ್ಮ ಮೊದಲ ಅಭ್ಯಾಸವಾಗಿದ್ದರೆ, ಅದನ್ನು ಒಂದು ಲೋಟ ನೀರಿನೊಂದಿಗೆ ಬದಲಾಯಿಸಿ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಮಾಡುತ್ತದೆ ಮತ್ತು ಹೊಸ ಅಭ್ಯಾಸವು ಅಂತಿಮವಾಗಿ ಹಿಂದಿನ ಅನಾರೋಗ್ಯಕರ ಅಭ್ಯಾಸವನ್ನು (healthy habbits) ತೊಡೆದುಹಾಕಲು ಸಹಾಯ ಮಾಡುತ್ತದೆ.