ಸಿಕ್ಕಾಪಟ್ಟೆ ಬಿಸಿ ನೀರು, ಟೀ ಕುಡಿತೀರಾ? ಆರೋಗ್ಯಕ್ಕೆ ಒಳ್ಳೇದಲ್ಲ ಈ ಅಭ್ಯಾಸ!
ಗಂಟಲಿನ ತೊಂದರೆಯಿಂದ ಬಳಲುತ್ತಿದ್ದೀರಾ? ಅದನ್ನು ನಿವಾರಿಸಲು ಬಿಸಿ ನೀರು ಕುಡಿಯುತ್ತೀರಾ? ನಾವು ಸೇವಿಸುವ ಅತ್ಯಂತ ಬಿಸಿಯಾದ ಆಹಾರಗಳು ನಮಗೆ ಎಷ್ಟು ಡೇಂಜರಸ್ ಅನ್ನೋದನ್ನು ನೀವು ಎಂದಾದರೂ ಯೋಚಿಸಿದ್ದೀರಾ? ಬನ್ನಿ ಅದರ ಅಡ್ಡಪರಿಣಾಮಗಳ ಬಗ್ಗೆ ತಿಳಿಯಿರಿ.
ಮುಂಜಾನೆಯನ್ನು ಬಿಸಿ ನೀರು (hot water) ಕುಡಿಯುವ ಮೂಲಕ ಆರಂಭಿಸಬೇಕು ಎಂದು ಹಿರಿಯರು ಹೇಳಿರೋದನ್ನು ನಾವು ಕೇಳಿದ್ದೇವೆ. ವಿಶೇಷವಾಗಿ ಚಳಿಗಾಲದಲ್ಲಿ, ನಾವು ಆಗಾಗ್ಗೆ ಬಿಸಿ ಬಿಸಿಯಾಗಿ ಕುಡಿಯಲು ಇಷ್ಟಪಡ್ತೇವೆ, ಕೆಲವೊಮ್ಮೆ ಬಿಸಿ ಚಹಾ, ಕೆಲವೊಮ್ಮೆ ಕಾಫಿ ಅಥವಾ ಬಿಸಿ ಸೂಪ್ ಇತ್ಯಾದಿ. ಇನ್ನೂ ಗಂಟಲು ನೋವು, ಕಿರಿಕಿರಿ ನಿವಾರಿಸಲು ಸಹ ತುಂಬಾ ಬಿಸಿಯಾದ ಆಹಾರ, ಪಾನೀಯ ಸೇವಿಸುತ್ತೇವೆ. ಆದರೆ ಹೀಗೆ ತುಂಬಾ ಬಿಸಿಯಾದ ನೀರು ಕುಡಿಯೋದು ಎಷ್ಟು ಹಾನಿಕಾರಕ ಎಂದು ನೀವು ಎಂದಾದರೂ ಯೋಚಿಸಿದ್ದೀರಾ?
ಸಾಮಾನ್ಯ ತಾಪಮಾನದಲ್ಲಿ ಪಾನೀಯವನ್ನು ಸೇವಿಸುವುದು ಅದನ್ನು ಬಿಸಿಯಾಗಿ ಕುಡಿಯುವಷ್ಟು ಕೆಟ್ಟದ್ದಲ್ಲ. ಇದು ನಿಮ್ಮ ಅನೇಕ ರೋಗಗಳ ಅಪಾಯವನ್ನು ಹೆಚ್ಚಿಸುತ್ತದೆ. ವಾಸ್ತವವಾಗಿ, ಅನೇಕ ಅಧ್ಯಯನಗಳು ತುಂಬಾ ಬಿಸಿ ಪಾನೀಯಗಳನ್ನು ಸೇವಿಸುವುದರಿಂದ ಕ್ಯಾನ್ಸರ್ (cancer) ಅಪಾಯ ಹೆಚ್ಚಿಸುತ್ತದೆ ಎಂದು ಸಹ ತಿಳಿಸಿದೆ.
ಹೆಚ್ಚು ಬಿಸಿ ಪಾನೀಯಗಳನ್ನು ಕುಡಿಯುವುದರಿಂದ ಕ್ಯಾನ್ಸರ್ ಉಂಟಾಗುತ್ತಾ?
ಹೆಚ್ಚು ಬಿಸಿ ನೀರು ಅಥವಾ ಇತರ ಪಾನೀಯ ಸೇವಿಸುವುದರಿಂದ ನಮ್ಮ ದೇಹಕ್ಕೆ ಅನೇಕ ಸಮಸ್ಯೆಗಳು ಉಂಟಾಗಬಹುದು. ಇವುಗಳಲ್ಲಿ ಒಂದು ಅನ್ನನಾಳದ ಕ್ಯಾನ್ಸರ್ (ಅನ್ನನಾಳವು ಒಂದು ಉದ್ದವಾದ ಕೊಳವೆಯಾಗಿದ್ದು, ಇದರ ಮೂಲಕ ಸೇವಿಸಿದ ಆಹಾರಗಳು ಮತ್ತು ದ್ರವಗಳು ಹೊಟ್ಟೆಯನ್ನು ತಲುಪುತ್ತವೆ).
ಅನ್ನನಾಳದ ಕ್ಯಾನ್ಸರ್ ಅತ್ಯಂತ ಬಿಸಿ ಚಹಾ ಅಥವಾ ಇತರ ಪಾನೀಯಗಳ ಸೇವನೆಗೆ ಸಂಬಂಧಿಸಿದೆ. ಬಿಸಿ ಪಾನೀಯಗಳನ್ನು ಕುಡಿಯುವುದು ಅಥವಾ ತುಂಬಾ ಬಿಸಿಯಾದ ಆಹಾರವನ್ನು ಮತ್ತೆ ಮತ್ತೆ ತಿನ್ನುವುದು ನಮ್ಮ ಗಂಟಲು ಮತ್ತು ಅನ್ನನಾಳವನ್ನು (throat and Oesophagus) ನೋಯಿಸುತ್ತದೆ, ಇದು ಉರಿಯೂತ ಮತ್ತು ಕ್ಯಾನ್ಸರ್ ಕೋಶಗಳ ರಚನೆಗೆ ಕಾರಣವಾಗುತ್ತದೆ.
ತುಂಬಾ ಬಿಸಿಯಾದ ಪಾನೀಯಗಳ (too hot drinks) ಸೇವನೆಯಿಂದ ಉಂಟಾಗುವ ಇತರ ಸಮಸ್ಯೆಗಳು ಯಾವುವು ನೋಡೋಣ :
ಹೆಚ್ಚು ಬಿಸಿ ಪಾನೀಯಗಳನ್ನು ಸೇವಿಸುವುದರಿಂದ ನಿಮ್ಮ ರುಚಿಯ ಗ್ರಂಥಿಗಳ ಮೇಲೂ ಪರಿಣಾಮ ಬೀರಬಹುದು ಏಕೆಂದರೆ ಅವು ನಾಲಿಗೆಯ ಸುತ್ತಲಿನ ಅತ್ಯಂತ ಸೂಕ್ಷ್ಮ ಭಾಗಗಳಾಗಿವೆ. ಬಿಸಿ ಪಾನೀಯ ಕುಡಿದಾಗ ಅವು ಇತರ ಜೀವಕೋಶಗಳಂತೆ ಹಾನಿಗೊಳಗಾಗಬಹುದು.
ತುಂಬಾ ಬಿಸಿಯಾದ ಆಹಾರ, ಪಾನೀಯ ನಿಯಮಿತವಾಗಿ ಕುಡಿಯುವುದು ಮತ್ತು ತಿನ್ನುವುದು ನಾಲಿಗೆಯನ್ನು ಮತ್ತೆ ಮತ್ತೆ ತೀವ್ರವಾಗಿ ಸುಡುತ್ತದೆ, ಇದು ನಿಮ್ಮ ಟೇಸ್ಟ್ ಬಡ್ ನ್ನು (taste buds) ಹಾನಿಗೊಳಿಸುತ್ತದೆ. ಇದಲ್ಲದೆ, ಇದು ತುಟಿಗಳನ್ನು ಹಾನಿಗೊಳಿಸುತ್ತದೆ ಮತ್ತು ಅನೇಕ ಸಂದರ್ಭಗಳಲ್ಲಿ ತುಟಿಗಳು ಉರಿಯುತ್ತವೆ ಅಥವಾ ಕಪ್ಪು ಬಣ್ಣಕ್ಕೆ ತಿರುಗುತ್ತವೆ. ಜೊತೆಗೆ ತುಂಬಾ ಬಿಸಿ ಪಾನೀಯಗಳನ್ನು ಆಗಾಗ್ಗೆ ಸೇವಿಸುವುದು ಎದೆಯುರಿಗೆ ಸಹ ಕಾರಣವಾಗಬಹುದು.
ಬಿಸಿ ಪಾನೀಯಗಳನ್ನು ಕುಡಿಯುವುದನ್ನು ಯಾರು ತಪ್ಪಿಸಬೇಕು?
ಹುಣ್ಣು ಹೊಂದಿರುವ ಜನರು ಜೀವಕೋಶಗಳಿಗೆ ಗಾಯವನ್ನು ಉಂಟುಮಾಡುವ ಬಿಸಿ ಪಾನೀಯಗಳಿಂದ ದೂರವಿರಬೇಕು. ಬಿಸಿ ಪಾನೀಯಗಳನ್ನು ನಿಯಮಿತವಾಗಿ ಕುಡಿಯುವುದರಿಂದ ನಿಮ್ಮ ಹೊಟ್ಟೆಯ ಒಳಪದರವನ್ನು ಹಾನಿಗೊಳಿಸಬಹುದು. ಹೆಚ್ಚು ಬಿಸಿ ಚಹಾ ಅಥವಾ ಕಾಫಿ ಕುಡಿಯುವುದರಿಂದ ಗ್ಯಾಸ್ಟ್ರಿಕ್ ರಸವನ್ನು ದುರ್ಬಲಗೊಳಿಸುತ್ತದೆ ಮತ್ತು ನಮ್ಮ ಜೀರ್ಣಕ್ರಿಯೆಗೆ ಅಡ್ಡಿಯಾಗಲು (problem in digestion) ಪ್ರಾರಂಭಿಸುತ್ತದೆ.
ಎಷ್ಟು ಬಿಸಿಯಾಗಿರೋ ಪಾನೀಯ ಕುಡಿಯೋದು ಬೆಸ್ಟ್?
60 ಡಿಗ್ರಿ ಸೆಲ್ಸಿಯಸ್ ಗಿಂತ ಹೆಚ್ಚು ಬಿಸಿಯಾಗಿರುವ ಯಾವುದೇ ಪಾನೀಯವನ್ನು ತುಂಬಾ ಬಿಸಿ ಎಂದು ಹೇಳಲಾಗುತ್ತೆ. ನೀವು ಹೆಚ್ಚು ಬಿಸಿ ಪದಾರ್ಥವನ್ನು ಸೇವಿಸಿದಾಗ, ಅದು ನಿಮ್ಮ ಜೀವಕೋಶಗಳನ್ನು ಸುಡುವ ಮೂಲಕ ಮತ್ತು ಉರಿಯೂತವನ್ನು ಉಂಟುಮಾಡುವ ಮೂಲಕ ಹಾನಿಗೊಳಿಸುತ್ತದೆ. ಆದರೂ, ವಸ್ತುವನ್ನು ಎಷ್ಟು ಬಾರಿ ಮತ್ತು ಎಷ್ಟು ಬಿಸಿಯಾಗಿ ಸೇವಿಸಲಾಗುತ್ತಿದೆ ಎಂಬುದು ಸ್ಥಿತಿ ಗಂಭೀರವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.
ನೀವು ಬಿಸಿ ಪಾನೀಯಗಳು ಮತ್ತು ಆಹಾರವನ್ನು ಸೇವಿಸಿದಾಗ ಈ ಬಗ್ಗೆ ಗಮನ ಹರಿಸಬೇಕು. ಉದಾಹರಣೆಗೆ, ಜನರು ಬಿಸಿ ಊಟವನ್ನು ತಿನ್ನುವುದು ತುಂಬಾನೆ ಮುಖ್ಯ. ಅಲ್ಲದೆ, ದೇಹದಲ್ಲಿ ಶಾಖವನ್ನು ಕಾಪಾಡಿಕೊಳ್ಳಲು, ಬಿಸಿ ಪಾನೀಯಗಳನ್ನು ಕುಡಿಯುವುದು ಮತ್ತು ಚಳಿಗಾಲದಲ್ಲಿ ಬಿಸಿಯಾಗಿ ತಿನ್ನುವುದು ಸಹ ಮುಖ್ಯವಾಗಿದೆ. ಆದರೆ ಬಿಸಿಯ ಪ್ರಮಾಣ ಕಡಿಮೆಯಾಗಿರಬೇಕು.
ಪ್ರತಿಬಾರಿ ನೀವು ಬಿಸಿಯಾದ ಪಾನೀಯ, ಆಹಾರ ಸೇವಿಸುವ ಮುನ್ನ, ನೀವು ಹೆಚ್ಚು ಬಿಸಿ ಪಾನೀಯಗಳನ್ನು ಕುಡಿಯುತ್ತಿಲ್ಲ ಎಂದು ಖಚಿತಪಡಿಸಿಕೊಳ್ಳಿ ಏಕೆಂದರೆ ಇದು ಕೆಲವು ಗಂಭೀರ ಪರಿಣಾಮಗಳಿಗೆ (dangerous health problem) ಕಾರಣವಾಗಬಹುದು. ಸಮಸ್ಯೆಗಳನ್ನು ತಪ್ಪಿಸಲು ಪಾನೀಯಗಳು ಮತ್ತು ಆಹಾರವನ್ನು ಸಾಮಾನ್ಯ ತಾಪಮಾನದಲ್ಲಿ ಕುಡಿಯುವುದು ಉತ್ತಮ. ಇದಲ್ಲದೆ, ನೀವು ಈಗಾಗಲೇ ಯಾವುದೇ ಸಮಸ್ಯೆಗಳನ್ನು ಹೊಂದಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.