ದಿನಾಲೂ ತೊಗರಿ ಬೇಳೆ ತಿಂತೀರಾ? ಬೇಡ ಈ ಅಭ್ಯಾಸ ಆರೋಗ್ಯಕ್ಕೇನೂ ಅಷ್ಟು ಒಳ್ಳೇದಲ್ಲ
ದ್ವಿದಳ ಧಾನ್ಯಗಳು ಪ್ರೋಟೀನ್ ಗಳ ಉತ್ತಮ ಮೂಲವಾಗಿದೆ. ಸಸ್ಯಾಹಾರಿಗಳಿಗೆ ಉತ್ತಮ ಪೌಷ್ಠಿಕಾಂಶ ಕೊಡುವ ಆಹಾರವೂ ಹೌದು. ಕಡಲೆಕಾಯಿ, ಹೆಸರು ಬೇಳೆ, ಮಸೂರ್ ಮತ್ತು ತೊಗರಿ ಬೇಳೆ ಮುಂತಾದ ದ್ವಿದಳ ಧಾನ್ಯಗಳು ಭಾರತೀಯ ಆಹಾರದ ಪ್ರಮುಖ ಭಾಗವಾಗಿದೆ. ಆದರೆ ಪ್ರತಿನಿತ್ಯ ತೊಗರಿ ಬೇಳೆ ತಿಂದರೆ ಏನಾಗುತ್ತದೆ ಗೊತ್ತಾ?
ಬೇಳೆಕಾಳುಗಳು ಪ್ರೋಟೀನ್ ನ ಉತ್ತಮ ಮೂಲ. ಪ್ರತಿದಿನ ಅವುಗಳನ್ನು ತಿನ್ನುವುದು ಪ್ರೋಟೀನ್ (protiene) ಮಾತ್ರವಲ್ಲದೆ ಇತರ ಅನೇಕ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ ಅನ್ನೋದು ಸುಳ್ಳಲ್ಲ. ಹೆಸರು ಬೇಳೆ, ಮಸೂರ್, ಕಡಲೆಕಾಯಿ ಮುಂತಾದ ಅನೇಕ ದ್ವಿದಳ ಧಾನ್ಯಗಳು ನಮ್ಮ ಆಹಾರದ ರುಚಿಯನ್ನು ಹೆಚ್ಚಿಸುತ್ತವೆ. ಆದರೆ ಇವುಗಳಲ್ಲಿ, ತೊಗರಿ ಬೇಳೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು.
ತೊಗರಿ ಬೇಳೆಯಲ್ಲಿ ಕ್ಯಾಲ್ಸಿಯಂ (Calcium), ಕಬ್ಬಿಣ (Iron), ಮೆಗ್ನೀಸಿಯಮ್ (Megnisium), ರಂಜಕ, ಪೊಟ್ಯಾಸಿಯಮ್, ಸೋಡಿಯಂ (Sodium), ಸತು, ತಾಮ್ರ, ಸೆಲೆನಿಯಂ, ಮ್ಯಾಂಗನೀಸ್ ಮತ್ತು ಪ್ರೋಟೀನ್ ನಂತಹ ಹಲವು ಪೋಷಕಾಂಶಗಳಿವೆ. ಅವು ನಮ್ಮ ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳನ್ನು ಒದಗಿಸುತ್ತವೆ. ಬೇಳೆಕಾಳುಗಳನ್ನು ತಿನ್ನುವುದರಿಂದ ಆಗುವ ಆರೋಗ್ಯ ಪ್ರಯೋಜನಗಳು (Health Benefits) ಯಾವುವು ಅನ್ನೋದನ್ನು ತಿಳಿದುಕೊಳ್ಳೋಣ.
ತೊಗರಿ ಬೇಳೆಯಲ್ಲಿ ಉತ್ತಮ ಪ್ರಮಾಣದ ಪ್ರೋಟೀನ್ ಇದೆ. ಪ್ರೋಟೀನ್ ನಮ್ಮ ಒಟ್ಟಾರೆ ಆರೋಗ್ಯಕ್ಕೆ ಬಹಳ ಮುಖ್ಯವಾದ ಪೋಷಕಾಂಶವಾಗಿದೆ. ನೀವು ಸಸ್ಯಾಹಾರಿಗಳಾಗಿದ್ದರೆ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಪಡೆಯಲು ನಿಮ್ಮ ಆಹಾರದಲ್ಲಿ ತೊಗರಿ ಬೇಳೆಯನ್ನು (Toor Dal) ಸೇರಿಸಬೇಕು.
ತೊಗರಿ ಬೇಳೆಯಲ್ಲಿ ವಿವಿಧ ಖನಿಜಗಳಿವೆ. ಅವು ನಮ್ಮ ಮೂಳೆಗಳನ್ನು ಬಲಪಡಿಸಲು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು (digestion system) ಆರೋಗ್ಯಕರವಾಗಿಡಲು ಸಹಾಯ ಮಾಡುತ್ತವೆ. ಅವು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತೆ, ಇದರಿಂದ ನೀವು ದಿನವಿಡೀ ಎನರ್ಜಿಟಿಕ್ ಆಗಿರಬಹುದು.
ಪ್ರೋಟೀನ್ ಜೊತೆಗೆ, ತೊಗರಿ ಬೇಳೆಯಲ್ಲಿ ಸಾಕಷ್ಟು ಫೈಬರ್ ಅಂಶವೂ ಇದೆ. ಇದು ಹೊಟ್ಟೆಯನ್ನು ದೀರ್ಘಕಾಲದವರೆಗೆ ತುಂಬಿಸುತ್ತದೆ. ಜೊತೆಗೆ ಇದು ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ. ಹಾಗಾಗಿ ಇದು ತೂಕ ನಿಯಂತ್ರಿಸಲು ಸಹಾಯ ಮಾಡುತ್ತೆ.
ಗರ್ಭಾವಸ್ಥೆಯಲ್ಲಿ (pregnancy) ಮಹಿಳೆಯರು ಉತ್ತಮ ಪೌಷ್ಠಿಕಾಂಶವನ್ನು ತೆಗೆದುಕೊಳ್ಳದಿರುವುದು ಮಕ್ಕಳ ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಇಂತಹ ಸಂದರ್ಭದಲ್ಲಿ ಗರ್ಭಿಣಿಯರು ತೊಗರಿ ಬೇಳೆ ಸೇವಿಸಿದರೆ ಆರೋಗ್ಯ ಉತ್ತಮವಾಗಿರುತ್ತದೆ.
ತೊಗರಿ ಬೇಳೆ ಸುಲಭವಾಗಿ ಜೀರ್ಣವಾಗುತ್ತದೆ. ಇದು ಆರೋಗ್ಯಕ್ಕೂ ತುಂಬಾ ಉತ್ತಮ. ಫೋಲಿಕ್ ಆಮ್ಲದ (folic acid) ಜೊತೆಗೆ, ಬೇಳೆಕಾಳುಗಳು ಕಾರ್ಬೋಹೈಡ್ರೇಟ್ಗಳನ್ನು ಸಹ ಹೊಂದಿರುತ್ತವೆ. ಒಟ್ಟಲ್ಲಿ ಇದು ಗರ್ಭಾವಸ್ಥೆಯಲ್ಲಿ ಅವಶ್ಯಕ.