ಹೊಳೆಯುವ ಚರ್ಮಕ್ಕೆ ಮಾತ್ರವಲ್ಲ ತೂಕ ಇಳಿಕೆಗೂ ಕೊಡುಗೆ ನೀಡುತ್ತೆ ಅರಿಶಿಣ
ಚರ್ಮದ ಹೊಳಪಿಗೆ ಕೊಡುಗೆ ನೀಡುವ ಅರಶಿಣ ತೂಕ ಇಳಿಕೆಗೂ ಸಹಾಯ ಮಾಡುತ್ತದೆ ಎಂಬ ವಿಚಾರ ನಿಮಗೆ ಗೊತ್ತಾ?
ನಾವೆಲ್ಲಾ ಅಡುಗೆಯಲ್ಲಿ ಅರಿಶಿಣವನ್ನು ದಿನವೂ ಬಳಸುತ್ತೇವೆ. ಅಲರ್ಜಿ ನಿವಾರಣೆ ಮಾಡುವ ಅರಿಶಿಣದಲ್ಲಿ ದೇಹದ ಒಳಗಿನ ಹಾಗೂ ಹೊರಗಿನ ಕೊಳೆ ತೆಗೆಯುವ ಹಲವು ಅಂಶಗಳಿವೆ. ಆದ್ರೆ ಅರಿಶಿನ ತೂಕ ಇಳ್ಸೋದ್ರಲ್ಲಿ ಸಹಾಯ ಮಾಡುತ್ತೆ ಅಂತ ನಿಮಗೆ ಗೊತ್ತಾ? ಹೌದು, ಅರಿಶಿನವನ್ನು ಕ್ರಮ ಬದ್ಧವಾಗಿ ಸೇವನೆ ಮಾಡುವುದರಿಂದ ದೇಹದ ತೂಕ ಇಳಿಸಬಹುದು.
ದೇಹದ ಊತ ಕಡಿಮೆ ಮಾಡುತ್ತೆ
ದೇಹದಲ್ಲಿ ಊತ ಇದ್ರೆ ಬೊಜ್ಜು, ಹೃದ್ರೋಗ, ಕ್ಯಾನ್ಸರ್ ತರಹದ್ದ ದೀರ್ಘಕಾಲಿನ ರೋಗಗಳು ಬರಬಹುದು. ಅರಿಶಿನದಲ್ಲಿರೋ ಕರ್ಕ್ಯುಮಿನ್ ಊತ ಕಡಿಮೆ ಮಾಡುತ್ತೆ. ತೂಕ ಜಾಸ್ತಿ ಇದ್ರೆ ಅರಿಶಿನ ತೂಕ ಇಳ್ಸೋದ್ರಲ್ಲಿ ಸಹಾಯ ಮಾಡುತ್ತೆ.
ಜೀರ್ಣಕ್ರಿಯೆಗೆ ಒಳ್ಳೆಯದು
ಜೀರ್ಣಕ್ರಿಯೆ ಸುಧಾರಿಸೋದ್ರಲ್ಲಿ ಅರಿಶಿನ ಮುಖ್ಯ ಪಾತ್ರ ವಹಿಸ್ತದೆ. ತೂಕ ಇಳ್ಸೋದಕ್ಕೆ ಜೀರ್ಣಕ್ರಿಯೆ ಚೆನ್ನಾಗಿರಬೇಕು. ಅರಿಶಿನ ಚಯಾಪಚಯ ಕ್ರಿಯೆನ ಸುಧಾರಿಸುತ್ತೆ. ಹೀಗಾಗಿ ತೂಕ ಕಡಿಮೆ ಆಗುತ್ತೆ.
3. ಚಯಾಪಚಯ ಕ್ರಿಯೆ ಹೆಚ್ಚಿಸುತ್ತೆ
ಅರಿಶಿನ ಚಯಾಪಚಯ ಕ್ರಿಯೆನ ಹೆಚ್ಚಿಸುತ್ತೆ. ಚಯಾಪಚಯ ಕ್ರಿಯೆ ಅಂದ್ರೆ ದೇಹ ಆಹಾರನ ಶಕ್ತಿಯಾಗಿ ಪರಿವರ್ತಿಸೋ ಕ್ರಿಯೆ. ಇದು ದೇಹದಲ್ಲಿರುವ ಕ್ಯಾಲೋರಿಗಳನ್ನ ಬೇಗ ಸುಡುತ್ತೆ.
4. ಇನ್ಸುಲಿನ್ ನಿಯಂತ್ರಿಸುತ್ತೆ, ಹಸಿವು ಕಡಿಮೆ ಮಾಡುತ್ತೆ
ಸಮತೋಲಿತ ಇನ್ಸುಲಿನ್ ಮಟ್ಟ ಇದ್ರೆ ಜಾಸ್ತಿ ತಿನ್ನುವುದು ಹಾಗೂ, ಹಸಿವು ಎರಡು ಕಡಿಮೆ ಆಗುತ್ತೆ. ಅರಿಶಿನ ಇನ್ಸುಲಿನ್ ನಿಯಂತ್ರಿಸಿ ಹಸಿವನ್ನು ಕಡಿಮೆ ಮಾಡುತ್ತೆ. ಬಿಸಿ ನೀರಿನಲ್ಲಿ ಒಂದು ಚಿಟಿಕೆ ಅರಿಶಿಣ ಹಾಕಿ ಕುಡಿಯುವುದರಿಂದ ದೇಹದ ಕರುಳಿನ ಭಾಗ ಸ್ವಚ್ಛವಾಗುತ್ತದೆ.
ಇಲ್ಲಿ ನೀಡಿರುವ ಮಾಹಿತಿ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನು ಆಧರಿಸಿದ್ದಾಗಿದ್ದು, ಇದನ್ನು ಏಷ್ಯಾನೆಟ್ ಸುವರ್ಣನ್ಯೂಸ್ ದೃಢಿಕರಿಸುವುದಿಲ್ಲ, ಹೀಗಾಗಿ ಯಾವುದೇ ಆರೋಗ್ಯ ಪ್ರಯೋಗ ಮಾಡುವ ಮೊದಲು ವೈದ್ಯರನ್ನು ಸಂಪರ್ಕಿಸಿ.