MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ಈ ಯೋಗಾಸನ ಮಹಿಳೆಯರಿಗೆ ಬೆಸ್ಟ್, ಆದ್ರೆ ಮಾಡುವಾಗ ತುಸು ಎಚ್ಚರ

ಈ ಯೋಗಾಸನ ಮಹಿಳೆಯರಿಗೆ ಬೆಸ್ಟ್, ಆದ್ರೆ ಮಾಡುವಾಗ ತುಸು ಎಚ್ಚರ

ಮಹಿಳೆಯರು ವೃದ್ಧಾಪ್ಯದಲ್ಲಿ ಯಂಗ್ ಮತ್ತು ಆರೋಗ್ಯವಾಗಿರಲು ಬಯಸೋದಾದ್ರೆ, ತಮ್ಮ ದೈನಂದಿನ ದಿನಚರಿಯಲ್ಲಿ ಕೆಲವು ವಿಶೇಷ ಯೋಗಾಸನಗಳನ್ನು ಸೇರಿಸಬೇಕು. ಅವುಗಳ ಬಗ್ಗೆ ಮತ್ತು ಅವುಗಳ ಪ್ರಯೋಜನಗಳ ಬಗ್ಗೆ ತಿಳಿದುಕೊಳ್ಳೋಣ. 

2 Min read
Suvarna News
Published : Jun 20 2023, 08:30 AM IST
Share this Photo Gallery
  • FB
  • TW
  • Linkdin
  • Whatsapp
17

ಆರೋಗ್ಯವಾಗಿರೋದು ಎಲ್ಲರಿಗೂ ಮುಖ್ಯ, ಆದರೆ ಮಹಿಳೆಯರಿಗೆ(Women), ಅದರ ಆದ್ಯತೆ ಇನ್ನೂ ಹೆಚ್ಚಾಗುತ್ತೆ, ಏಕೆಂದರೆ ಅವರಿಗೆ ಮನೆ, ಕುಟುಂಬ ಮತ್ತು ಕೆಲವೊಮ್ಮೆ ಕಚೇರಿಯ ಜವಾಬ್ದಾರಿಯೂ ಇರುತ್ತೆ. ಆರೋಗ್ಯದ ಬಗ್ಗೆ ಗಮನ ಹರಿಸದ ಕಾರಣ, ವೃದ್ಧಾಪ್ಯದಲ್ಲಿ ಅನೇಕ ರೋಗಗಳು ನಿಮ್ಮನ್ನು ಕಾಡಬಹುದು. ದೇಹದಲ್ಲಿ ಅನೇಕ ಬದಲಾವಣೆಗಲಾಗುತ್ತವೆ, ಈ ಕಾರಣದಿಂದಾಗಿ ಮೂಡ್ ಸ್ವಿಂಗ್, ನಿದ್ರಾಹೀನತೆ, ದಿನವಿಡೀ ದಣಿವಿನಂತಹ ಇತರ ಸಮಸ್ಯೆಗಳು ಸಹ ಉಂಟಾಗುತ್ತೆ, ಆದ್ದರಿಂದ ಈ ಎಲ್ಲಾ ಸಮಸ್ಯೆಗಳನ್ನು ಎದುರಿಸಲು ಮತ್ತು ದೀರ್ಘಕಾಲದವರೆಗೆ ಆರೋಗ್ಯಕರವಾಗಿ ಮತ್ತು ಯೌವನದಿಂದ ಇರಲು, ನಿಮ್ಮ ದಿನಚರಿಯಲ್ಲಿ  ಕೆಲವು ವಿಶೇಷ ಯೋಗ ಆಸನಗಳನ್ನು ಸೇರಿಸಬೇಕು.

27

ಸ್ವಲ್ಪ ಸಮಯದವರೆಗೆ ಈ ಯೋಗಾಸನಗಳ(Yogasan) ಅಭ್ಯಾಸ ಮಾಡೋದರಿಂದ ನೀವು ದೀರ್ಘಕಾಲದವರೆಗೆ ಆರೋಗ್ಯವಾಗಿ ಮತ್ತು ಸಂತೋಷವಾಗಿರುತ್ತೀರಿ. ಅದಕ್ಕಾಗಿ ನೀವು ಯಾವೆಲ್ಲಾ ಯೋಗಗಳನ್ನು ಮಾಡಬೇಕು ಅನ್ನೋದನ್ನು ನೋಡೋಣ. ಇಲ್ಲಿದೆ ಆ ಯೋಗಾಸನಗಳ ಬಗ್ಗೆ ಮಾಹಿತಿ.

37

 ಶಲಭಾಸನ (Shalabhasana)
ಶಾಲ್ಭಾಸನ ಮಾಡುವಾಗ ದೇಹವು ಮಿಡತೆಯಂತೆ ಕಾಣುತ್ತೆ. ಈ ಆಸನದ ಸಣ್ಣ ಅಭ್ಯಾಸವು ನಿಮಗೆ ಸಾಕಷ್ಟು ಪ್ರಯೋಜನಗಳನ್ನು ನೀಡುತ್ತದೆ.

ಪ್ರಯೋಜನಗಳು ಯಾವುವು?
- ದೇಹದ ಸ್ನಾಯುಗಳನ್ನು ಬಲಪಡಿಸುತ್ತೆ.
- ಕೈ, ತೊಡೆ, ಕಾಲುಗಳನ್ನು ಬಲಪಡಿಸುತ್ತೆ. ಇದರೊಂದಿಗೆ, ಇದು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತೆ.
- ಬೆನ್ನುಹುರಿ ಕೂಡ ಬಲವಾಗಿರುತ್ತೆ.

ಯಾವಾಗ ಮಾಡಬಾರದು?
ಸೊಂಟದಲ್ಲಿ ಗಾಯವಾಗಿದ್ದರೆ ಅಥವಾ ಕಿಬ್ಬೊಟ್ಟೆಯ ಶಸ್ತ್ರಚಿಕಿತ್ಸೆ ಆಗಿದ್ದರೆ ಈ ಆಸನವನ್ನು ಮಾಡಬೇಡಿ.

47

ಅರ್ಧಚಂದ್ರಾಸನ(Sarvangasana)
ಈ ಆಸನವನ್ನು ಅಭ್ಯಾಸ ಮಾಡುವ ಮೂಲಕ, ದೇಹವನ್ನು ಮೇಲಿನಿಂದ ಕೆಳಭಾಗದವರೆಗೆ ಏಕಕಾಲದಲ್ಲಿ ಸ್ಟ್ರೆಚಿಂಗ್ ಉಂಟಾಗುತ್ತೆ. ಇದನ್ನು ಬೆಳಿಗ್ಗೆ ಅಭ್ಯಾಸ ಮಾಡುವುದು ಪ್ರಯೋಜನಕಾರಿ.

ಪ್ರಯೋಜನಗಳು ಯಾವುವು?
- ಈ ಆಸನವು ಕಾಲುಗಳನ್ನು ಬಲಪಡಿಸುತ್ತೆ.
- ಇದು ಪಾದ ಮತ್ತು ತೊಡೆಗಳನ್ನು ಬಲಪಡಿಸುತ್ತೆ .
- ಇದು ಸೊಂಟ, ಎದೆ ಮತ್ತು ಭುಜದ ಬಲವನ್ನು ಹೆಚ್ಚಿಸುತ್ತೆ.

ಯಾವಾಗ ಮಾಡಬಾರದು?
- ಅತಿಸಾರ ಮತ್ತು ಅಸ್ತಮಾ (Asthma) ಸಮಸ್ಯೆ ಇದ್ದರೆ ಈ ಆಸನವನ್ನು ಮಾಡಬೇಡಿ.
- ಮೊಣಕಾಲು ನೋವು ಮತ್ತು ಸಂಧಿವಾತ ಇದ್ದರೆ ಇದನ್ನು ಮಾಡಬೇಡಿ.
- ನಿಮಗೆ ರಕ್ತದೊತ್ತಡವಿದ್ದಾಗ ಇದನ್ನು ಮಾಡಬೇಡಿ.

57

ಸರ್ವಾಂಗಾಸನ
ಈ ಆಸನವನ್ನು ಮಾಡೋದರಿಂದ, ಎಲ್ಲಾ ಅಂಗಗಳು ವ್ಯಾಯಾಮಗೊಳ್ಳುತ್ತವೆ, ಆದ್ದರಿಂದ ಇದನ್ನು ಸರ್ವಾಂಗಾಸನ ಎಂದು ಕರೆಯಲಾಗುತ್ತೆ.

ಇದರ ಪ್ರಯೋಜನವೇನು?
ಈ ಆಸನವನ್ನು ಮಾಡೋದರಿಂದ ರಕ್ತ ಪರಿಚಲನೆ ನಿಯಂತ್ರಣದಲ್ಲಿರುತ್ತೆ.
- ಥೈರಾಯ್ಡ್ ಗ್ರಂಥಿಗಳು ಆರೋಗ್ಯಕರವಾಗಿರುತ್ತವೆ ಮತ್ತು ಮಲಬದ್ಧತೆಗೆ ಚಿಕಿತ್ಸೆ ಸಿಗುತ್ತದೆ.
- ಕೂದಲು ಉದುರುವುದನ್ನು ತಡೆಯುತ್ತೆ.
- ಒತ್ತಡವನ್ನು ಕಡಿಮೆ ಮಾಡುತ್ತೆ. ನಿದ್ರೆಗೆ ಒಳ್ಳೆಯದು.
- ತೂಕವನ್ನು ನಿಯಂತ್ರಣದಲ್ಲಿಡುತ್ತೆ.
- ನಿಮ್ಮನ್ನು ದೀರ್ಘಕಾಲದವರೆಗೆ ಯಂಗ್ ಆಗಿರಿಸುತ್ತೆ.

ಅದನ್ನು ಯಾವಾಗ ಮಾಡಬಾರದು?
- ಸಂಧಿವಾತ ಇದ್ದಾಗ ಸರ್ವಾಂಗಾಸನ ಮಾಡಬಾರದು.
- ಕುತ್ತಿಗೆಯಲ್ಲಿ ನೋವು ಇದ್ದರೆ, ಅದನ್ನು ಮಾಡಬೇಡಿ.

67

ಉಸ್ಟ್ರಾಸನ
ಉಸ್ಟ್ರಾಸನವನ್ನು ನಿಯಮಿತವಾಗಿ ಅಭ್ಯಾಸ ಮಾಡಿದರೆ, ಅದು ಎಲ್ಲಾ ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಿವಾರಿಸುತ್ತೆ.

ಇದರ ಪ್ರಯೋಜನವೇನು?
- ಅಸ್ತಮಾ, ಬ್ರಾಂಕೈಟಿಸ್, ಮಧುಮೇಹ, ಥೈರಾಯ್ಡ್ ಮತ್ತು ಪ್ಯಾರಾಥೈರಾಯ್ಡ್, ಸ್ಪಾಂಡಿಲೈಟಿಸ್ ಮತ್ತು ಧ್ವನಿ ಅಸ್ವಸ್ಥತೆಗಳನ್ನು ಉಸ್ಟ್ರಾಸನ ಮಾಡೋದರಿಂದ ಗುಣಪಡಿಸಬಹುದು. 
- ಈ ಆಸನವು ಜೀರ್ಣಕ್ರಿಯೆಯನ್ನು(Digestion) ಸುಧಾರಿಸುತ್ತೆ.
- ಉಸ್ಟ್ರಾಸನದ ಅಭ್ಯಾಸವು ಕಿಬ್ಬೊಟ್ಟೆಯ ಕೊಬ್ಬನ್ನು ಕಡಿಮೆ ಮಾಡುತ್ತೆ.
- ಈ ಆಸನವನ್ನು ಪ್ರತಿದಿನ ಮಾಡೋದರಿಂದ ಬೆನ್ನಿನ ಫ್ಲೆಕ್ಸಿಬಿಲಿಟಿ ಹೆಚ್ಚಾಗುತ್ತೆ.

ಯಾವಾಗ ಮಾಡಬಾರದು
ಕುತ್ತಿಗೆ ಮತ್ತು ಸೊಂಟದ ನೋವು ಇದ್ದಾಗ ಈ ಆಸನವನ್ನು ಮಾಡಬಾರದು

77

ಭುಜಂಗಾಸನ
ಈ ಆಸನವನ್ನು ಮಾಡುವಾಗ, ದೇಹವು ಹಾವಿನಂತೆ ಆಗುತ್ತೆ, ಆದ್ದರಿಂದ ಇದನ್ನು ಭುಜಂಗಾಸನ ಎಂದು ಕರೆಯಲಾಗುತ್ತೆ.

ಪ್ರಯೋಜನಗಳು ಯಾವುವು
- ಇದು ಸ್ನಾಯುಗಳನ್ನು ಬಲಪಡಿಸುತ್ತೆ.
- ಭುಜ ಮತ್ತು ತೋಳುಗಳನ್ನು ಬಲಪಡಿಸುತ್ತೆ.
- ದೇಹದ  ಫ್ಲೆಕ್ಸಿಬಿಲಿಟಿಯನ್ನು(Flexibility) ಹೆಚ್ಚಿಸುತ್ತೆ.
- ಒತ್ತಡ ಮತ್ತು ಆಯಾಸವನ್ನು ನಿವಾರಿಸುತ್ತೆ.
- ಸೊಂಟ ಅಥವಾ ಬೆನ್ನು ನೋವಿನಿಂದ ಬಳಲುತ್ತಿರುವ ಜನರಿಗೆ ಈ ಆಸನದ ಅಭ್ಯಾಸವು ಪ್ರಯೋಜನಕಾರಿ.

- ದೇಹದಲ್ಲಿ ರಕ್ತ ಪರಿಚಲನೆ ಉತ್ತಮವಾಗಿರುತ್ತೆ ಮತ್ತು ದೊಡ್ಡ ಪ್ರಯೋಜನವೆಂದರೆ ಉತ್ತಮ ಮಾನಸಿಕ ಆರೋಗ್ಯ.
- ಮಾನಸಿಕ ಆರೋಗ್ಯವು ಉತ್ತಮವಾಗಿದ್ದಾಗ ಉತ್ತಮ ಹಾರ್ಮೋನುಗಳು ಬಿಡುಗಡೆಯಾಗುತ್ತವೆ. ದೇಹದ ಸಮಸ್ಯೆಗಳು ದೂರವಾಗುತ್ತವೆ. ಮನಸ್ಸು ಸಂತೋಷವಾಗಿರುತ್ತೆ.

ಯಾವಾಗ ಮಾಡಬಾರದು?
ಸೊಂಟ ಅಥವಾ ಬೆನ್ನಿಗೆ ಗಾಯ, ಗರ್ಭಧಾರಣೆ ಅಥವಾ ಹರ್ನಿಯಾ ಕಾಯಿಲೆಯ ಸಂದರ್ಭದಲ್ಲಿ ಇದನ್ನು ಮಾಡಬೇಡಿ.

About the Author

SN
Suvarna News
ಯೋಗ
ಆರೋಗ್ಯ
ಮಹಿಳೆಯರು
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved