MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಒಂದು ಕಾಲನ್ನು ಕಂಬಳಿಯಿಂದ ಹೊರಗಿಟ್ಟು ಮಲಗಿದ್ರೆ ಸೊಂಪಾಗಿ ನಿದ್ರೆ ಬರುತ್ತಾ?

ಒಂದು ಕಾಲನ್ನು ಕಂಬಳಿಯಿಂದ ಹೊರಗಿಟ್ಟು ಮಲಗಿದ್ರೆ ಸೊಂಪಾಗಿ ನಿದ್ರೆ ಬರುತ್ತಾ?

ಉತ್ತಮ ಆರೋಗ್ಯದ ವಿಷಯಕ್ಕೆ ಬಂದಾಗ ಕನಿಷ್ಠ ಎಂಟು ಗಂಟೆಗಳ ನಿದ್ರೆ ಮಾಡುವುದು ತುಂಬಾ ಒಳ್ಳೆಯದು. ಆದರೆ  ಪ್ರತಿಯೊಬ್ಬರೂ ಯಾವುದೇ ಕೆಲಸವನ್ನು ಮಾಡಲು ತಮ್ಮದೇ ಆದ ಮಾರ್ಗವನ್ನು ಹೊಂದಿರುವಂತೆಯೇ, ಮಲಗುವ ವಿಧಾನವೂ ಇತರರಿಗಿಂತ ಭಿನ್ನವಾಗಿದೆ. ಕೆಲವು ಜನರು ತಮ್ಮ ಕಾಲುಗಳ ನಡುವೆ ದಿಂಬುಗಳನ್ನಿಟ್ಟು ಮಲಗಿದರೆ, ಮತ್ತೆ ಕೆಲವರು ತಮ್ಮ ಕಂಬಳಿಯಿಂದ ಒಂದು ಕಾಲನ್ನು ಹೊರಗೆ ಇಟ್ಟುಕೊಂಡು ರಾತ್ರಿಯಲ್ಲಿ ಮಲಗಲು ಇಷ್ಟಪಡುತ್ತಾರೆ. ಇದು ಹೆಚ್ಚಿನ ಜನರಲ್ಲಿ ಕಂಡುಬರುವ ಅಭ್ಯಾಸವಾಗಿದೆ. ಈ ಅಭ್ಯಾಸದಿಂದಾಗಿ, ವ್ಯಕ್ತಿಯು ತುಂಬಾ ಬೇಗನೆ ಮತ್ತು ಹೆಚ್ಚು ಆರಾಮವಾಗಿ ಮಲಗುತ್ತಾನೆ. ಒಂದು ಕಾಲನ್ನು ಕಂಬಳಿಯಿಂದ ಹೊರಗಿಟ್ಟು ಮಲಗಿದಾಗ ಚೆನ್ನಾಗಿ ನಿದ್ರೆ ಬರಲು ಕಾರಣ ಏನು ಅನ್ನೋದನ್ನು ನೋಡೋಣ. 

2 Min read
Author : Suvarna News
Published : Aug 25 2022, 01:52 PM IST
Share this Photo Gallery
  • FB
  • TW
  • Linkdin
  • Whatsapp
110
ಒಂದು ಕಾಲನ್ನು ಹೊರಗಿಟ್ಟು ಮಲಗಿದ್ರೆ ಉತ್ತಮ ನಿದ್ರೆ ಯಾಕೆ ಬರುತ್ತೆ?

ಒಂದು ಕಾಲನ್ನು ಹೊರಗಿಟ್ಟು ಮಲಗಿದ್ರೆ ಉತ್ತಮ ನಿದ್ರೆ ಯಾಕೆ ಬರುತ್ತೆ?

ಕಂಬಳಿಯಿಂದ ಒಂದು ಕಾಲನ್ನು ಹೊರ ಹಾಕಿ ಮಲಗೋದ್ರಿಂದ ವ್ಯಕ್ತಿ ವೇಗವಾಗಿ ಮತ್ತು ಉತ್ತಮವಾಗಿ ನಿದ್ರೆ ಮಾಡಲು ಏಕೆ ಕಾರಣವಾಗುತ್ತದೆ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಪದೇ ಪದೇ ಹರಿದಾಡುತ್ತಿರಬಹುದು. ಅದರ ಹಿಂದೆ ಒಂದು ವಿಜ್ಞಾನವಿದೆ. ನಿಮಗೂ ಅದರ ಬಗ್ಗೆ ತಿಳಿಯಲು ಆಸಕ್ತಿ ಇದ್ರೆ ಇಲ್ಲಿದೆ ನೋಡಿ ಮಾಹಿತಿ.

210

ವಾಸ್ತವವಾಗಿ, ಪಾದಗಳು ದೇಹದ ತಾಪಮಾನವನ್ನು ಕಡಿಮೆ ಮಾಡುತ್ತವೆ. ಇದು ನರಗಳು (Nerves) ಮತ್ತು ಅಪಧಮನಿಗಳ ನಡುವಿನ ಕೊಂಡಿಯಂತೆ ಕಾರ್ಯನಿರ್ವಹಿಸುತ್ತದೆ, ಇದು ನಿಮ್ಮ ಪಾದಗಳು ಶಾಖಕ್ಕೆ ಒಡ್ಡಿಕೊಂಡಾಗ ಹಿಗ್ಗುತ್ತದೆ. ಈ ಕಾರಣದಿಂದಾಗಿ ಇದು ದೇಹದ ಇತರ ಎಲ್ಲಾ ಅಂಗಗಳಿಗಿಂತ ವೇಗವಾಗಿ ಪಾದಗಳನ್ನು ತಂಪಾಗಿಸುತ್ತದೆ. 

310

ಇದಕ್ಕೆ ಮತ್ತೊಂದು ಕಾರಣವೆಂದರೆ ನಿಮ್ಮ ಪಾದಗಳ ಕೆಳ ಭಾಗದಲ್ಲಿ ಕೂದಲು ಇರುವುದಿಲ್ಲ ಮತ್ತು ಕೂದಲಿನ ಕೊರತೆಯು ಶಾಖವು ವೇಗವಾಗಿ ಆವಿಯಾಗಲು ಕಾರಣವಾಗುತ್ತದೆ. ಇದರಿಂದ ದೇಹಕ್ಕೆ ಬೇಕಾದ ತಂಪು ಸಿಗುತ್ತದೆ. ಇದರಿಂದ ಬೇಗನೆ ನಿದ್ರೆ ಮಾಡಲು ಸಹಾಯವಾಗುತ್ತೆ.

410

ನಿಮ್ಮ ಪಾದಗಳು ತಂಪಾದ ವಾತಾವರಣಕ್ಕೆ (cold temperature) ಒಡ್ಡಿಕೊಂಡಾಗ ಅದು ದೇಹದ ಇತರ ಭಾಗಗಳನ್ನು ಅಷ್ಟೇ ಬೇಗ ತಣ್ಣಗಾಗಲು ಸಹಾಯ ಮಾಡುತ್ತದೆ, ಆದ್ದರಿಂದ ನಿಮಗೆ ಚೆನ್ನಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ. 

510

ಕೇವಲ ಒಂದು ಕಾಲನ್ನು ಹೊರ ಹಾಕುವ ತಂತ್ರವು ಹೇಗೆ ಕೆಲಸ ಮಾಡುತ್ತೆ ಎಂಬ ಪ್ರಶ್ನೆ ಈಗ ಉದ್ಭವಿಸುತ್ತದೆ. ನೀವು ಒಂದು ಕಾಲನ್ನು ಹೊರ ತೆಗೆದಾಗ, ತಂಪಾಗಿಸುವ ಪ್ರಕ್ರಿಯೆ ನಿಧಾನವಾಗುತ್ತದೆ, ಇದರಿಂದ ನೀವು ರಾತ್ರಿಯಲ್ಲಿ ಶೀತವನ್ನು ಅನುಭವಿಸುವುದಿಲ್ಲ ಮತ್ತು ನೀವು ಆರಾಮವಾಗಿ ಮಲಗಬಹುದು. ಆದ್ದರಿಂದ, ನೀವು ಒಂದು ಕಾಲನ್ನು ಹೊರಗೆ ಇರಿಸಿ ಮಲಗುವುದು ಒಳ್ಳೆಯದು.

610
ಒಂದು ಪಾದದ ಟ್ರಿಕ್ ಪೂರ್ಣ ಪ್ರಯೋಜನ ಪಡೆಯುವುದು ಹೇಗೆ?

ಒಂದು ಪಾದದ ಟ್ರಿಕ್ ಪೂರ್ಣ ಪ್ರಯೋಜನ ಪಡೆಯುವುದು ಹೇಗೆ?

ನೀವು ಒಂದು ಪಾದದ ಟ್ರಿಕ್‌ನ ಪೂರ್ಣ ಪ್ರಯೋಜನ ಪಡೆಯಲು ಬಯಸಿದರೆ, ನೀವು ಕೆಲವು ಸಣ್ಣ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅವು ಯಾವುವು? ಅದರಿಂದ ಏನು ಪ್ರಯೋಜನಗಳಿವೆ ಅನ್ನೋದನ್ನು ನೋಡೋಣ.

710

ನಿಮ್ಮ ಸುತ್ತಲಿನ ತಾಪಮಾನದ (temperature) ಬಗ್ಗೆ ಗಮನ ಹರಿಸೋದು ಮುಖ್ಯ. ಈ ತಂತ್ರ ಮುಖ್ಯವಾಗಿ ಬೇಸಿಗೆಯ ದಿನಗಳಲ್ಲಿ ಸಹಾಯಕ್ಕೆ ಬರುತ್ತದೆ. ಚಳಿಗಾಲದಲ್ಲಿ ನೀವು ನಿಮ್ಮ ಪಾದಗಳನ್ನು ನಿಮ್ಮ ಕಂಬಳಿಯಿಂದ ಹೊರತೆಗೆದರೆ ಅದು ನಿಮಗೆ ಶೀತವನ್ನು ಉಂಟುಮಾಡಬಹುದು. ಇದು ನಿಮ್ಮ ನಿದ್ರೆಗೆ ಭಂಗ ತರಬಹುದು. ಆವಾಗ, ನೀವು ಪಾದಗಳನ್ನು ಮತ್ತೆ ನಿಮ್ಮ ಕಂಬಳಿಯೊಳಗೆ ತರಬೇಕಾಗಬಹುದು.

810

ಯಾವಾಗಲೂ ಸರಿಯಾದ ಫ್ಯಾಬ್ರಿಕ್ ಬೆಡ್ ಶೀಟ್ ಮತ್ತು ಬ್ಲಾಂಕೆಟ್ ಬಳಸಿ. ಬೇಸಿಗೆಯಲ್ಲಿ ಫ್ಲಾನೆಲ್ ಬೆಡ್ ಶೀಟ್ ಸೂಕ್ತವಲ್ಲ. ಅಂತೆಯೇ, ಶೀತ ಹವಾಮಾನಕ್ಕೆ ಕತ್ತರಿ ಕಂಬಳಿಗಳನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಆದುದರಿಂದ ಸಮಯಕ್ಕೆ ಸರಿಯಾದ ಬೆಡ್ ಶೀಟ್ ಗಳನ್ನು ಬಳಕೆ ಮಾಡೋದು ಉತ್ತಮ.

910

ನಿಮ್ಮ ದೇಹದ ತಾಪಮಾನವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಿ. ರಾತ್ರಿಯಾದಾಗ, ನಿಮ್ಮ ದೇಹದ ತಾಪಮಾನವೂ ಕಡಿಮೆಯಾಗಲು ಪ್ರಾರಂಭಿಸುತ್ತದೆ. ಆದುದರಿಂದ ರಾತ್ರಿ ಗ್ಯಾಜೆಟ್ ಬಳಕೆಯನ್ನು (using gadget) ಕಡಿಮೆ ಮಾಡಿ, ಏಕೆಂದರೆ ಅವುಗಳಿಂದ ಹೊರಸೂಸುವ ಬೆಳಕು ನಿಮ್ಮ ನಿದ್ರೆಯನ್ನು ಹಾಳು ಮಾಡಬಹುದು. 

1010

ಮಲಗಿರುವಾಗ ನಿಮ್ಮ ದೇಹ ಮತ್ತು ಮನಸ್ಸನ್ನು ಸಾಧ್ಯವಾದಷ್ಟು ವಿಶ್ರಾಂತಿಗೊಳಿಸಲು ಪ್ರಯತ್ನಿಸಿ. ನೀವು ವಿಶ್ರಾಂತಿ ಪಡೆಯುವಾಗ, ಒಂದು ಕಾಲನ್ನು ಹೊರಗಿಟ್ಟು ಮಲಗಿ, ಇದರಿಂದ ನಿಮಗೆ ಚೆನ್ನಾಗಿ ನಿದ್ರೆ ಬರಲು ಸಹಾಯ ಮಾಡುತ್ತೆ. ಪ್ರತಿದಿನ ಹೀಗೆ ಮಲಗಿ ಉತ್ತಮ ನಿದ್ರೆ ನಿಮ್ಮದಾಗಿಸಿಕೊಳ್ಳಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಗ್ಯಾಜೆಟ್‌ಗಳು

Latest Videos
Recommended Stories
Recommended image1
Rare Diseases: ಅಪರೂಪದ ಕಾಯಿಲೆಗಳೆಲ್ಲಾ ಅನುವಂಶಿಕವೇ? ಸತ್ಯ-ಮಿಥ್ಯೆಗಳೇನು? ನಿಮ್ಮ ಫ್ಯಾಮಿಲಿ ಬಗ್ಗೆ ತಿಳ್ಕೊಳ್ಳಿ
Recommended image2
ಶ್ವಾನ ಪ್ರಿಯರೇ ಎಚ್ಚರ: ನಾಯಿ ನೆಕ್ಕಿದ್ದರಿಂದ ಕೈಕಾಲು ಕಳೆದುಕೊಂಡ ಮಹಿಳೆ- 11.3 ದಶಲಕ್ಷ ಪ್ರಕರಣ ದಾಖಲು!
Recommended image3
Weight Loss: ತೂಕ ಇಳಿಸೋಕೆ ಟ್ರೈ ಮಾಡ್ತಿದ್ದೀರಾ? ಹೆಚ್ಚು ಪ್ರೋಟೀನ್ ಇರುವ ಈ 6 ಸ್ನ್ಯಾಕ್ಸ್ ತಿನ್ನಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved