ಮಕ್ಕಳು ಊಟ ಮಾಡುತ್ತಿಲ್ಲವೇ? ಹಾಗಿದ್ರೆ ಈ ಆಹಾರ ಟ್ರೈ ಮಾಡಿ ನೋಡಿ
ಮಕ್ಕಳು ಬೆಳೆಯಬೇಕಾದರೆ ಪೌಷ್ಟಿಕ ಆಹಾರ ಅವಶ್ಯಕ. ಓಡುತ್ತಿರುವ ಜೀವನದಲ್ಲಿ ಅನೇಕ ಬಾರಿ ಮಕ್ಕಳ ಕಡೆಗೆ ಗಮನ ಕೊಡಲು ಅಸಾಧ್ಯವಾದಾಗ ತಾಯಂದಿರು ರೆಡಿ ಫುಡ್‌ಗಳನ್ನು ಕೊಡುತ್ತಾರೆ. ಇಂತಹ ರೆಡಿ ಫುಡ್‌ಗಳು ಮಕ್ಕಳ ಹೊಟ್ಟೆ ತುಂಬುತ್ತದೆ ಹೊರತು ಆರೋಗ್ಯ ಕಾಪಾಡೋಲ್ಲ. ಈಗಿನ ಮಕ್ಕಳು ಬಿಸ್ಕೆಟ್, ಚಾಕೊಲೇಟ್, ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಊಟ ಮಾಡಲು ಹಿಂಜರಿಯುತ್ತಾರೆ. ಅಲ್ಲದೇ ಕೆಲವು ಮಕ್ಕಳಿಗೆ ತಿನ್ನು ತಿನ್ನು ಎಂದು ಒತ್ತಾಯಿಸುತ್ತಿರಬೇಕು. ಹಾಗಾಗಿ ಬೆಳೆಯುವ ಮಕ್ಕಳಲ್ಲಿ ಅನೇಕ ಕೊರತೆಗಳು ಕಾಣಬಹುದು.
ಕ್ಯಾಲ್ಸಿಯಂ ಕೊರತೆ, ಹಿಮೋಗ್ಲೋಬಿನ್ ಕಡಿಮೆ ಆಗಿರುವುದು ಹೀಗೆ ಅನೇಕ ತೊಂದರೆಗಳು ಕಾಣುತ್ತದೆ. ಮಕ್ಕಳ ಬೆಳವಣಿಗೆಗೆ ಬೇಕಾಗಿಯುವ ಪ್ರೊಟೀನ್ ವಿಟಮಿನ್ ಮಿನರಲ್ಸ್ ಗಳಾದ ಐರನ್, ಜಿಂಕ್, ವಿಟಮಿನ್ ಸಿ, ವಿಟಮಿನ್ ಬಿ೧೨ ಹಾಗು ಒಮೇಗಾ 3 ಫ್ಯಾಟಿ ಆಸಿಡ್ ಇವುಗಳು ಹೆಚ್ಚಾಗಿ ಮೀನು ಮಾಂಸ, ಮೊಟ್ಟೆ, ಧಾನ್ಯಗಳು, ಪನೀರ್, ಚೀಸ್, ಮತ್ತು ಕಡಲೆ ಕಾಯಿ, ಇವು ದೇಹದ ಬೆಳವಣಿಗೆ ಜೊತೆ ಸ್ನಾಯುಗಳ ಬೆಳವಣಿಗೆಗೂ ಒಳ್ಳೆದು.
ಮಕ್ಕಳ ಬೆಳವಣಿಗೆಗೆ ಆಹಾರದ ಜೊತೆ ಆಟವು ಮುಖ್ಯ. ಮಕ್ಕಳನ್ನು ಮನೆಯ ಒಳಗೆ ಆಟ ಆಡುವುದರ ಜೊತೆ ಹೊರಗೆ ಆಟ ಆಡಲು ಬಿಡಿ ಮಕ್ಕಳಲ್ಲಿ ಹಸಿವು ತಾನಾಗಿ ಬರುತ್ತದೆ. ಮಕ್ಕಳ ಇಷ್ಟದ ಆಹಾರ ಮಾಡಿ ಅದರ ಜೊತೆ ಹೊಸ ಅಡಿಗೆಮಾಡಿ ರುಚಿ ನೋಡಲು ಹೇಳಿ ಹೀಗೆ ತಿನ್ನಲು ಪ್ರೇರೇಪಿಸಿ ಇಲ್ಲವಾದಲ್ಲಿ ಬಿಡಿ.
ಮಕ್ಕಳಿಗೆ ತಿನ್ನಬೇಕು ಅನಿಸಿದಾಗ ಕೊಡಿ ಒತ್ತಾಯ ಒಳ್ಳೆಯದಲ್ಲ. ಮಕ್ಕಳ ಬೆಳವಣಿಗೆ ಕೆಲವೊಮ್ಮೆ ಜೆನೆಟಿಕ್ ಆಗಿರುತ್ತದೆ. ತಂದೆ ತಾಯಿ ಕುಳ್ಳಗಿದ್ದರೆ ಅದು ಮಕ್ಕಳಲ್ಲಿ ಬರುತ್ತದೆ. ಹಾಗಾಗಿ ಆಹಾರ ಒಂದೇ ಪರಿಹಾರ ಅಲ್ಲ. ಮಗು ತಿಂದು ಆರೋಗ್ಯವಾಗಿದ್ದರೆ ಸಾಕು.
ಇನ್ನು ಕೆಲವು ಆಹಾರಗಳು ಮಕ್ಕಳಲ್ಲಿ ಹಸಿವನ್ನು ಹೆಚ್ಚಿಸುತ್ತದೆ ಅಲ್ಲದೆ ಪೌಷ್ಟಿಕಯುತವಾಗಿದೆ.
ಕಡಲೆಕಾಯಿ ಮಕ್ಕಳಲ್ಲಿ ಮೆಟಬೋಲಿಸಮ್ ಹೆಚ್ಚಿಸುತ್ತದೆ. ಹಾಗು ಪೌಷ್ಟಿಕಯುತವಾಗಿದೆ. ಇದನ್ನು ಮಕ್ಕಳಿಗೆ ರೆಗ್ಯುಲರ್ ಆಗಿ ನೀಡಿದರೆ ಉತ್ತಮ,
ಮಕ್ಕಳಿಗೆ ವಿವಿಧ ಬಗೆಯ ಬೀಜಗಳನ್ನು ನೀಡಿದರೆ ಉತ್ತಮ. ಚೀನಿಕಾಯಿ ಬೀಜ, ಗೇರುಬೀಜ , ಬಾದಾಮಿ, ಸನ್ ಫ್ಲವರ್ ಬೀಜ, ಮೇಲೊನ್ ಬೀಜ ಹಾಗು ಬೆಣ್ಣೆ ಇವು ಬೆಳವಣಿಗೆಗೆ ಬಹಳ ಒಳ್ಳೆಯದು. ಜೊತೆಗೆ ಆರೋಗ್ಯವೂ ಉತ್ತಮವಾಗಿರುತ್ತದೆ.
ಮೊಸರು ಇದು ಜೀರ್ಣಕ್ರಿಯೆಗೆ ಒಳ್ಳೆಯದು ಅಲ್ಲದೆ ಹಸಿವನ್ನು ಹೆಚ್ಚಿಸುತ್ತದೆ.
ಗ್ರೀನ್ ಟಿ ಇದು ಚಿಕ್ಕ ಮಕ್ಕಳಿಗಿಂತ ದೊಡ್ಡ ಮಕ್ಕಳಿಗೆ ಒಳ್ಳೆಯದು ಇದು ಹಸಿವನ್ನು ಹೆಚ್ಚಿಸುತ್ತದೆ.
ಚಿಕನ್ ಇದು ಕೂಡ ಆಹಾರದಲ್ಲಿದ್ದರೆ ಬೆಳವಣಿಗೆಗೆ ಮುಖ್ಯವಾಗಿದೆ. ಇದರಲ್ಲಿ ಹೆಚ್ಚಿನ ಪ್ರೋಟೀನ್ ಅಂಶವಿದೆ. ಇದು ಮಕ್ಕಳ ಬೆಳವಣಿಗೆಗೆ ಮತ್ತು ಆರೋಗ್ಯಕ್ಕೆ ಉತ್ತಮ.
ಓಮ ಇದು ಮಕ್ಕಳಿಗೆ ಗ್ಯಾಸ್ಟ್ರಿಕ್ ಆಗದ ಹಾಗೆ ಮಾಡಿ ಹಸಿವನ್ನು ಹೆಚ್ಚಿಸುತ್ತದೆ. ಇದನ್ನು ಆಹಾರದಲ್ಲಿ ಸೇರಿಸಿ ಕೊಡಿ.
ಚ್ಯವನ ಪ್ರಾಶ ಇದು ಮಕ್ಕಳಿಂದ ಹಿಡಿದು ದೊಡ್ಡವರ ವರೆಗೂ ತೆಗೆದು ಕೊಂಡರೆ ರೋಗ ನೀರೋಧಕ ಶಕ್ತಿ ಹೆಚ್ಚಿಸುತ್ತದೆ.
ವಿಟಮಿನ್ ಸಿ ಇರುವ ಆಹಾರಗಳು ಮಕ್ಕಳ ಬೆಳವಣಿಗೆಯಲ್ಲಿ ಬಹಳ ಸಹಕಾರಿಯಾಗಿದೆ . ಇಷ್ಟೇ ಅಲ್ಲದೆ ಹಸಿರು ತರಕಾರಿಗಳು, ಹಣ್ಣು, ಸೇವನೆ ಅತೀಅವಶ್ಯಕ. ಇವೆಲ್ಲ ದೇಹದ ಬೆಳವಣಿಗಗೆ ಬಹಳ ಮುಖ್ಯ.