ತಲೆ ಇದ್ದವರಿಗೆಲ್ಲಾ ಬರುತ್ತೆ ನೋವು, ಹೋಗಿಸಲು ಈ ಎಣ್ಣೆ ಬೆಸ್ಟ್
ತಲೆನೋವಿನಿಂದ ಬಳಲುತ್ತಿದ್ದೀರಾ? ಪ್ರತಿಯೊಬ್ಬರೂ ತಮ್ಮ ಜೀವನದ ಒಂದು ಹಂತದಲ್ಲಿ ತಲೆನೋವಿನಿಂದ ಬಳಲುತ್ತಿರುತ್ತಾರೆ, ಆದರೆ ಕೆಲವರು ಇತರರಿಗಿಂತ ಸ್ವಲ್ಪ ಹೆಚ್ಚು. ಅದು ಜಗತ್ತಿನಾದ್ಯಂತ ಲಕ್ಷಾಂತರ ಜನರ ಮೇಲೆ ಪರಿಣಾಮ ಬೀರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದು. ಒತ್ತಡ, ಹಾರ್ಮೋನುಗಳು, ಮೈಗ್ರೇನ್, ಅಧಿಕ ರಕ್ತದೊತ್ತಡ ಮತ್ತು ಇತರೆ ಹಲವು ಅಂಶಗಳು ತಲೆನೋವಿಗೆ ಕಾರಣವಾಗಬಹುದು. ಆದರೆ ತಲೆಯಲ್ಲಿರುವ ನೋವಿನ ಸಂವೇದನೆಯನ್ನು ತೊಡೆದುಹಾಕಲು ಬಯಸಿದರೆ, ಸಹಾಯ ಮಾಡುವ ಕೆಲವು ತೈಲಗಳು ಇಲ್ಲಿವೆ.
ಪುದೀನಾ ಎಣ್ಣೆ: ಶತಮಾನಗಳಿಂದ ಔಷಧೀಯ ಉದ್ದೇಶಗಳಿಗಾಗಿ ಬಳಸುವ ಪ್ರಾಚೀನ ಮನೆ ಮದ್ದು. ಈ ಬಹು ಉಪಯೋಗಿ ತೈಲವು ತಲೆನೋವು, ನೋವುತ್ತಿರುವ ಸ್ನಾಯುಗಳು, ತುರಿಕೆ, ಬಿಸಿಲು ಮತ್ತು ಹಲ್ಲಿನ ಸಮಸ್ಯೆಗಳನ್ನು ಒಳಗೊಂಡಂತೆ ಅನೇಕ ನೋವಿಗೆ ಪರಿಹಾರ. ಇದು ಮೆಂಥಾಲ್ ಅನ್ನು ಹೊಂದಿರುತ್ತದೆ, ಇದು ಸ್ನಾಯುಗಳ ವಿಶ್ರಾಂತಿಗೆ ನೀಡಿ, ನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಡೈಲ್ಯೂಟ್ ಪುದೀನಾ ಎಣ್ಣೆಯನ್ನು ತಲೆಗೆ ಹಚ್ಚುವುದರಿಂದ ಒತ್ತಡದ ತಲೆನೋವು ಮತ್ತು ಮೈಗ್ರೇನ್ ದಾಳಿಯಿಂದ ಆದ ನೋವು ನಿವಾರಣೆಯಾಗುತ್ತದೆ. ಇದನ್ನು ತೆಂಗಿನ ಎಣ್ಣೆಯೊಂದಿಗೆ ಸೇರಿಸಿ ಹಚ್ಚಿ. ಫಟಾಫಟ್ ಆಗಿ ತಲೆನೋವು ದೂರವಾಗುತ್ತದೆ.
ಲ್ಯಾವೆಂಡರ್ ಆಯಿಲ್: ಈ ತೈಲವು ಚರ್ಮಕ್ಕೆ ಒಳ್ಳೆಯದು ಮಾತ್ರವಲ್ಲ, ತಲೆ ನೋವಿನಂತಹ ಸಮಸ್ಯೆಗಳಿಗೆ ಬಂದಾಗ ಇದು ಅದ್ಭುತಗಳನ್ನು ಮಾಡುತ್ತದೆ. ಲ್ಯಾವೆಂಡರ್ ಎಸೆನ್ಷಿಯಲ್ ತೈಲದ ಪರಿಮಳವನ್ನು ಹೊಮ್ಮೆಸುತ್ತದೆ. ಮೈಗ್ರೇನ್ ದಾಳಿಯ ತೀವ್ರ ನಿರ್ವಹಣೆಗೆ ಸಹಾಯ ಮಾಡುತ್ತದೆ.
ತಲೆನೋವು ದೂರ ಮಾಡಲು ಚರ್ಮಕ್ಕೆ ದುರ್ಬಲಗೊಳಿಸಿದ ಲ್ಯಾವೆಂಡರ್ ಎಣ್ಣೆ ಹಚ್ಚುಬೇಕು. ಇದನ್ನು ಆಯಿಲ್ ಡಿಫ್ಯೂಸರ್ ಆಗಿ ಬಳಸಬಹುದು, ಅಥವಾ ದುರ್ಬಲಗೊಳಿಸಿದ ಎಣ್ಣೆಯನ್ನು ಬೆಚ್ಚಗಿನ ಸ್ನಾನಕ್ಕೆ ಸೇರಿಸಿ ಅದರ ಪ್ರಯೋಜನಗಳನ್ನು ಪಡೆಯಬಹುದು.
ನೀಲಗಿರಿ: ಆಗಾಗ್ಗೆ ತಲೆನೋವಿನಿಂದ ಬಳಲುತ್ತಿದ್ದರೆ ಇದು ಅತ್ಯುತ್ತಮ. ಸೈನಸ್ ತಲೆನೋವಿನಿಂದ ಬಳಲುತ್ತಿದ್ದರೆ ಅದು ಉತ್ತಮ ಪರಿಹಾರವಾಗಿದೆ. ಇದು ಮೂಗಿನ ಹಾದಿಗಳನ್ನು ತೆರೆಯಲು ಮತ್ತು ಸೈನಸ್ ತೆರವುಗೊಳಿಸಲು ಸಹಾಯ ಮಾಡುತ್ತದೆ.
ಕ್ಯಾರಿಯರ್ ಎಣ್ಣೆಗೆ ನೀಲಗಿರಿ ಎಣ್ಣೆಯ ಒಂದು ಹನಿ ಸೇರಿಸಿ ಮತ್ತು ಅದನ್ನು ಎದೆಗೆ ಹಕ್ಕ್ಕಿ. ಇದು ಸೈನಸ್ ತೆರವುಗೊಳಿಸಲು ಸಹಕರಿಸುತ್ತದೆ. ಬಿಸಿನೀರಿಗೆ ಕೆಲವು ಹನಿ ಎಣ್ಣೆ ಸೇರಿಸಿ, ಆವಿಯಲ್ಲಿ ಉಸಿರಾಡಬಹುದು.
ರೋಸ್ಮರಿ ಎಣ್ಣೆ: ಜಾನಪದ ಔಷಧಿಗಳಲ್ಲಿ ನೂರಾರು ವರ್ಷಗಳಿಂದ ಬಳಸಲಾಗುವ ರೋಸ್ಮರಿ ಎಣ್ಣೆಯಲ್ಲಿ ಉರಿಯೂತ ಮತ್ತು ನೋವು ನಿವಾರಕ ಗುಣಗಳಿವೆ. ಅದು ಒತ್ತಡ, ನೋವು ನಿವಾರಣೆ ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ.
ಇದು ತಲೆನೋವಿಗೆ ಬೆಸ್ಟ್ ಮದ್ದು. ತೆಂಗಿನ ಎಣ್ಣೆಯಂತಹ ವಾಹಕ ಎಣ್ಣೆಯೊಂದಿಗೆ ರೋಸ್ಮರಿ ಎಣ್ಣೆಯ ಕೆಲವು ಹನಿ ಸೇರಿಸಿ. ನೋವು ನಿವಾರಿಸಲು ಆ ಪ್ರದೇಶದಲ್ಲಿ ಮಸಾಜ್ ಮಾಡಿ.
ಕ್ಯಾಮೊಮೈಲ್ ಆಯಿಲ್: ಪುರಾತನ, ಗಿಡಮೂಲಿಕೆಗಳ ಪರಿಹಾರವು ಅನೇಕ ಪ್ರಯೋಜನಗಳಿಗೆ ಹೆಸರುವಾಸಿ. ಈ ಸಾರಭೂತ ತೈಲವನ್ನು ಬಳಸುವುದರಿಂದ ದೇಹಕ್ಕೆ ವಿಶ್ರಾಂತಿ ಸಿಗುತ್ತದೆ. ಸ್ನಾಯು ನೋವಿಗೆ ಬೆಸ್ಟ್ ಮದ್ದು. ತಲೆನೋವು ಚಿಕಿತ್ಸೆಗೆ ಸಹಕಾರಿ.
ತಲೆನೋವಿಗೆ ಕಾರಣವಾಗುವ ಆತಂಕ ಮತ್ತು ನಿದ್ರಾಹೀನತೆಗೆ ಚಿಕಿತ್ಸೆ ನೀಡುತ್ತದೆ. ತೆಂಗಿನ ಎಣ್ಣೆಯಲ್ಲಿ ದುರ್ಬಲಗೊಳಿಸಿದ ಕೆಲವು ಹನಿ ಕ್ಯಾಮೊಮೈಲ್ ಎಸೆನ್ಷಿಯಲ್ ತೈಲವನ್ನು ಸ್ನಾನ ಅಥವಾ ಬಿಸಿ ನೀರಿಗೆ ಸೇರಿಸಿ ಮತ್ತು ಉಗಿಯಲ್ಲಿ ಉಸಿರಾಡಿ.