ಮಾಂಸ ಪ್ರಿಯರಿಗೊಂದು ಬ್ಯಾಡ್ ನ್ಯೂಸ್, ತಿಂದ್ರೆ ಬರುತ್ತೆ ಕ್ಯಾನ್ಸರ್!
ಕ್ಯಾನ್ಸರ್‌ನಿಂದ ಹೊರಬರುವುದು ತುಂಬಾ ಕಷ್ಟ, ಏಕೆಂದರೆ ಇದು ರೋಗದ ವಿರುದ್ಧ ಹೋರಾಡುವ ಶಕ್ತಿಯನ್ನು ನಾಶಪಡಿಸುತ್ತದೆ. ಆದರೆ ಅದನ್ನು ತಡೆಗಟ್ಟುವುದು ಸುಲಭ, ಇದಕ್ಕಾಗಿ, ಚಿಕ್ಕ ವಯಸ್ಸಿನಲ್ಲಿಯೇ ಕ್ಯಾನ್ಸರ್‌ಗೆ ಕಾರಣವಾಗುವ ಆಹಾರಗಳಿಂದ ನೀವು ತಕ್ಷಣ ದೂರವಿರಬೇಕು.
ಕ್ಯಾನ್ಸರ್ (cancer) ಒಂದು ಅಪಾಯಕಾರಿ ಕಾಯಿಲೆಯಾಗಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಕಾಯಿಲೆಗೆ ಬಲಿಯಾಗುತ್ತಿರೋದನ್ನು ನಾವು ಕಾಣಬಹುದು. ಈ ಕಾಯಿಲೆ ಉಂಟಾದಲ್ಲಿ ದೇಹದ ಜೀವಕೋಶಗಳು ಬಹಳ ವೇಗವಾಗಿ ಬೆಳೆಯಲು ಪ್ರಾರಂಭಿಸುತ್ತವೆ. ಈ ರೋಗದ ಅಪಾಯವು ವಯಸ್ಸಿನೊಂದಿಗೆ ಹೆಚ್ಚಾಗುತ್ತದೆ, ಆದರೆ 2020 ರ ವರದಿಯು ಕ್ಯಾನ್ಸರ್ 40 ವರ್ಷದ ಜನರನ್ನು ಸಹ ಕ್ಯಾನ್ಸರ್ ತನ್ನ ಬಿಗಿ ಮುಷ್ಟಿಯಲ್ಲಿ ಬಂಧಿಸುತ್ತೆ ಎನ್ನುವ ಸುದ್ದಿ ಬಂದಿತ್ತು. ಈ ವಿಚಾರ ಜನರ ನಿದ್ದೆ ಕೆಡಿಸಿದೆ.
ಅಮೆರಿಕನ್ ಕ್ಯಾನ್ಸರ್ ಸೊಸೈಟಿ (American Cancer Society) ಪ್ರಕಾರ, 20 ರಿಂದ 39 ವರ್ಷ ವಯಸ್ಸಿನ ಜನರು ಸ್ತನ ಕ್ಯಾನ್ಸರ್, ಲಿಂಫೋಮಾ, ಮೆಲನೋಮಾ, ಥೈರಾಯ್ಡ್ ಕ್ಯಾನ್ಸರ್, ಕೊಲೊರೆಕ್ಟಲ್ ಕ್ಯಾನ್ಸರ್ ಮತ್ತು ಮೆದುಳಿನ ಕ್ಯಾನ್ಸರ್ನ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ. ಕ್ಯಾನ್ಸರ್ ಗೆ ಅನೇಕ ಕಾರಣಗಳಿರಬಹುದು, ಅವುಗಳಲ್ಲಿ ಪ್ರಮುಖವಾದುದು ತಪ್ಪು ಆಹಾರ ಪದ್ಧತಿ. ಈ ಲೇಖನದಲ್ಲಿ, ಅದರ ಅಪಾಯವನ್ನು ಹೆಚ್ಚಿಸುವ 5 ಆಹಾರಗಳ ಬಗ್ಗೆ ತಿಳಿದುಕೊಳ್ಳೋಣ.
ಮಾಂಸ
ಮಾಂಸ ಪ್ರಿಯರಿಗೆ ಇದು ಕೆಟ್ಟ ಸುದ್ದಿಯಾಗಿದ್ದು, ಇದನ್ನು ತಿನ್ನುವುದರಿಂದ ಕ್ಯಾನ್ಸರ್ ಅಪಾಯ ಹೆಚ್ಚುತ್ತೆ ಎಂದು ಸಂಶೋಧನೆ ತಿಳಿಸಿದೆ. ಒಂದು ವಾರದಲ್ಲಿ ಹೆಚ್ಚು ಸಂಸ್ಕರಿಸಿದ ಮಾಂಸ ಅಥವಾ ತಾಜಾ ಮಾಂಸವನ್ನು ತಿನ್ನುವುದು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು Cancer.net ತಿಳಿಸಿದೆ.
ಆಲ್ಕೋಹಾಲ್
ಆಲ್ಕೋಹಾಲ್ ನಲ್ಲಿ (Alcohol) ಅನೇಕ ರಾಸಾಯನಿಕಗಳಿವೆ, ಅವು ದೇಹಕ್ಕೆ ಹೋದ ಕೂಡಲೇ ಜೀವಕೋಶಗಳ ಕೆಲಸವನ್ನು ಹಾಳುಮಾಡುತ್ತವೆ. ಈ ಕಾರಣದಿಂದಾಗಿ, ಜೀವಕೋಶಗಳು ತಮ್ಮನ್ನು ತಾವು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ ಮತ್ತು ಗೆಡ್ಡೆಗಳ ರೂಪವನ್ನು ತೆಗೆದುಕೊಳ್ಳಬಹುದು.
ಕರಿದ ಆಹಾರ
ನೀವು ಪಿಷ್ಟಯುಕ್ತ ಆಹಾರವನ್ನು ಅತಿ ಹೆಚ್ಚಿನ ತಾಪಮಾನದಲ್ಲಿ ಹುರಿಯುವಾಗ, ಅದರಲ್ಲಿ ಕ್ಯಾನ್ಸರ್ ಉಂಟುಮಾಡುವ ಸಂಯುಕ್ತವು ರೂಪುಗೊಳ್ಳುತ್ತದೆ. ಸಮೋಸಾ, ಫ್ರೆಂಚ್ ಫ್ರೈಸ್, ಆಲೂಗಡ್ಡೆ ಚಿಪ್ಸ್ ಮೊದಲಾದ ಆಹಾರವನ್ನು (fried food) ಸೇವಿಸುವುದರಿಂದ ಕ್ಯಾನ್ಸರ್ ಉಂಟಾಗಬಹುದು.
ಸಕ್ಕರೆ (Sugar) ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ (Processed Corbohydrates)
ಸಕ್ಕರೆ ಮತ್ತು ಸಂಸ್ಕರಿಸಿದ ಕಾರ್ಬೋಹೈಡ್ರೇಟ್ ಗಳು ದೇಹದಲ್ಲಿ ಕ್ಯಾನ್ಸರ್ ಗೆ ಕಾರಣವಾಗಬಹುದು. ಆದ್ದರಿಂದ, ಹೆಚ್ಚು ಸಿಹಿ ಪಾನೀಯಗಳು, ಬಿಳಿ ಪಾಸ್ತಾ, ಬಿಳಿ ಬ್ರೆಡ್, ಬಿಳಿ ಅಕ್ಕಿ ಮುಂತಾದ ವಸ್ತುಗಳನ್ನು ತಿನ್ನಬಾರದು.
ಡೈರಿ ಉತ್ಪನ್ನಗಳು (Dairy Products)
ಹಾಲು, ಚೀಸ್, ಮೊಸರಿನಂತಹ ಡೈರಿ ಉತ್ಪನ್ನಗಳನ್ನು ಹೆಚ್ಚು ಸೇವಿಸುವುದರಿಂದ ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಕೆಲವು ಸಂಶೋಧನೆಗಳು ತಿಳಿಸಿವೆ. ಆದ್ದರಿಂದ ನಿಮ್ಮ ಕುಟುಂಬದಲ್ಲಿ ಯಾರಾದರೂ ಈ ಹಿಂದೆ ಈ ಕಾಯಿಲೆಯನ್ನು ಹೊಂದಿದ್ದರೆ, ಏನನ್ನಾದರೂ ತಿನ್ನುವ ಮೊದಲು ವೈದ್ಯರಿಂದ ಸಂಪೂರ್ಣ ಮಾಹಿತಿ ತೆಗೆದುಕೊಳ್ಳಿ.