ಗಾಳಿ ನೀರು ಆಹಾರ ಇಲ್ಲದೆ ಮನುಷ್ಯ ಎಷ್ಟು ದಿನ ಬದುಕಬಹುದು? ರೂಲ್ ಆಫ್ 3 ಏನು ಹೇಳುತ್ತೆ?
ಬದುಕಲು ಆಹಾರ ಬೇಕೇ ಬೇಕು. ಉಪವಾಸ ಇದ್ದಾಗ 24 ಗಂಟೆ ಏನೂ ತಿನ್ನದಿದ್ದರೂ ಸುಸ್ತಾಗುತ್ತದೆ. ಕೆಲವರು ದಿನಗಟ್ಟಲೆ ಉಪವಾಸ ಮಾಡ್ತಾರೆ. ಆದ್ರೆ ಒಬ್ಬ ವ್ಯಕ್ತಿ ಎಷ್ಟು ದಿನ ತಿನ್ನದೆ ಬದುಕಬಹುದು ಅಂತ ಎಂದಾದ್ರೂ ಯೋಚಿಸಿದ್ದೀರಾ? ತಜ್ಞರು ಏನ್ ಹೇಳ್ತಾರೆ ನೋಡೋಣ.

ಬದುಕಲು ಗಾಳಿ, ನೀರು, ಆಹಾರ ಮುಖ್ಯ. ಒಂದು ಕಡಿಮೆಯಾದ್ರೂ ತೊಂದರೆ. ಶರೀರ ಲಕ್ಷಣಗಳಿಂದ ತಿಳಿಸುತ್ತದೆ. ಇವುಗಳಿಲ್ಲದೆ ಎಷ್ಟು ದಿನ ಬದುಕಬಹುದು? ಇದಕ್ಕೆ 'ರೂಲ್ ಆಫ್ 3' ಇದೆ.
3 ನಿಮಿಷ ಗಾಳಿಲ್ಲದೆ ಬದುಕಲು ಸಾಧ್ಯವಿಲ್ಲ. ಹೃದಯ ನಿಂತುಹೋಗುತ್ತದೆ. 3 ದಿನ ನೀರಿಲ್ಲದೆ ಬದುಕಲು ಆಗಲ್ಲ. 3 ವಾರ ಆಹಾರವಿಲ್ಲದೆ ಬದುಕಬಹುದು ಅಂತಾರೆ. ಆದ್ರೆ ವ್ಯಕ್ತಿಯ ಜೀವನಶೈಲಿ, ರೋಗನಿರೋಧಕ ಶಕ್ತಿ, ವಾತಾವರಣದ ಮೇಲೆ ಅವಲಂಬಿತವಾಗಿರುತ್ತದೆ.
ವೈದ್ಯರ ಪ್ರಕಾರ ೮ ವಾರ ಆಹಾರವಿಲ್ಲದೆ ಬದುಕಬಹುದು, ಆದ್ರೆ ನೀರು ಕುಡಿಯಬೇಕು. ಆಹಾರ ತಿನ್ನದಿದ್ದರೆ ಮೊದಲು ಕಾರ್ಬೋಹೈಡ್ರೇಟ್, ನಂತರ ಕೊಬ್ಬು, ಕೊನೆಗೆ ಪ್ರೋಟೀನ್ ಖರ್ಚಾಗುತ್ತದೆ. ಆಮೇಲೆ ತೊಂದರೆ ಶುರು.
ಶರೀರದಲ್ಲಿ 60-70% ನೀರು. ನೀರು ದಾಹ ತೀರಿಸುತ್ತದೆ, ಕೋಶಗಳನ್ನು ಜೀವಂತವಾಗಿರಿಸುತ್ತದೆ, ದೇಹದ ಉಷ್ಣತೆ ನಿಯಂತ್ರಿಸುತ್ತದೆ. ಸಾಮಾನ್ಯವಾಗಿ ಒಂದು ವಾರ ನೀರಿಲ್ಲದೆ ಬದುಕಬಹುದು. ಆದ್ರೆ ಹೆಚ್ಚು ಉಷ್ಣತೆಯಿದ್ದರೆ ಸಮಯ ಕಡಿಮೆ. 100 ಗಂಟೆ ನೀರಿಲ್ಲದೆ ಬದುಕಬಹುದು. ನೀರು ಕುಡಿಯದಿದ್ದರೆ ನಿರ್ಜಲೀಕರಣ, ಆಯಾಸ, ಅಂಗಾಂಗ ವೈಫಲ್ಯ, ಸಾವು ಸಂಭವಿಸಬಹುದು.