ನಿದ್ರೆಯೇ ಬರುತ್ತಿಲ್ವಾ? ಹೀಗ್ ಮಾಡಿ ನೋಡಿ, ನೆಮ್ಮದಿಯಿಂದ ನಿದ್ರಿಸಿ
First Published Nov 27, 2020, 2:39 PM IST
ನಿದ್ದೆ ರಹಿತ ರಾತ್ರಿಗಳು ನಿಮ್ಮನ್ನು ಕಂಗೆಡಿಸಿವೆಯೇ? ಕನಸುಗಳು ಏನೆಂಬುದನ್ನೇ ನೀವು ಮರೆತು ಹೋಗಿದ್ದೀರಾ? ಈ ನಿದ್ರಾಹೀನತೆಯ ಸಮಸ್ಯೆ ಈಗ ಹಲವಾರು ಮಹಿಳೆಯರನ್ನು ಬಾಧಿಸುತ್ತಿದೆ. ಈ ಪೈಕಿ ಬಹುತೇಕ ಮಹಿಳೆಯರಿಗೆ ನೆಮ್ಮದಿಯಿಂದ 6 ರಿಂದ 8ಗಂಟೆಗಳ ಕಾಲ ನಿದ್ರೆ ಮಾಡಲೂ ಸಾಧ್ಯವಾಗುತ್ತಿಲ್ಲ. ಇದು ತಜ್ಞರು ಬಿಚ್ಚಿಟ್ಟಿರುವ ಒಂದು ಕಟು ವಾಸ್ತವ. ಈ ಸಮಸ್ಯೆಯಿದ್ದವರಿಗೆ ಇಡೀ ದಿನ ಕೆಲಸ ಮಾಡುವಷ್ಟು ಶಕ್ತಿ ಇರುವುದಿಲ್ಲ ಮತ್ತು ಅವರು ಕ್ರಮೇಣ ಇತರ ಕಾಯಿಲೆಗಳಿಗೆ ತುತ್ತಾಗುತ್ತಾರೆ.

ನಿದ್ರಾ ಹೀನತೆಗೆ ಕಾರಣ ಏನು?
ಒತ್ತಡ, ಖಿನ್ನತೆ, ವಯಸ್ಸಾಗುವಿಕೆ ಮತ್ತು ದಿನ ನಿತ್ಯದ ಆಗುಹೋಗುಗಳು ಮುಂತಾದ ಜೀವನ ಶೈಲಿಗೆ ಸಂಬಂಧಿಸಿದ ಅಂಶಗಳು ನಿದ್ರಾಹೀನತೆಯ ಸಮಸ್ಯೆಯನ್ನು ಉಂಟು ಮಾಡುತ್ತದೆ.

ಋತುಬಂಧ ಮತ್ತು ಗರ್ಭಧಾರಣೆ ಮುಂತಾದ ಜೈವಿಕ ಮತ್ತು ಹಾರ್ಮೋನ್‌ಗೆ ಸಂಬಂಧಪಟ್ಟ ಅಂಶಗಳೂ ನಿದ್ರಾಹೀನತೆಗೆ ಕಾರಣವಾಗುತ್ತಿವೆ. ಈ ಸಮಸ್ಯೆಗೆ ಕೆಲವು ವೈದ್ಯಕೀಯ ಕಾರಣಗಳೂ ಇವೆ. ಅವು ಯಾವುವೆಂದರೆ ಇನ್ಸೊಮ್ನಿಯ, ಗೊರಕೆ, ದುಃಸ್ವಪ್ನಗಳು ಮತ್ತು ಉಸಿರುಗಟ್ಟುವಿಕೆ.
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?