ಅತಿಯಾದ ಕೆಮ್ಮು: ಒಬ್ಬರೇ ಇದ್ದಾಗ ನಿಮ್ಮನ್ನು ನೀವು ಹೀಗೆ ಕೇರ್ ಮಾಡ್ಕೊಳಿ
ಕೆಮ್ಮು ವೃದ್ಧರಿಗೆ ಮಾತ್ರವಲ್ಲ, ಇಂದಿನ ದಿನಗಳಲ್ಲಿ ಎಲ್ಲ ವಯಸ್ಸಿನವರಿಗೂ ಕಾಡುವ ಸಮಸ್ಯೆ. ಅತೀಯಾದ ಕೆಮ್ಮ ಅತೀವ ನೋವು ಕೊಡುತ್ತದೆ. ನೀವೊಬ್ಬರೇ ಇದ್ದಾಗ ಜೋರಾಗಿ ಕೆಮ್ಮು ಬಂದರೆ ನಿಮ್ಮ ಕೇರ್ ತಗೊಳೋಕೆ ಇಲ್ಲಿವೆ ಟಿಪ್ಸ್
ಗಾಳಿಯಲ್ಲಿ ತೇವಾಂಶ ಹೆಚ್ಚಾಗುವುದರಿಂದ ಕೆಮ್ಮು ನಿವಾರಣೆಯಾಗುತ್ತದೆ. ಆರ್ದ್ರತೆಯನ್ನು ಹೆಚ್ಚಿಸಲು ಬಿಸಿ ನೀಡಿನ ಶವರ್ ಸಹಕಾರಿ.
ತೆಳುವಾದ ಸ್ರವಿಸುವಿಕೆಯಿಂದ ಕೆಮ್ಮು ಕಡಿಮೆಯಾಗುತ್ತದೆ. ಇದಕ್ಕಾಗಿ ಹದ ಬಿಸಿ ನೀರನ್ನೇ ಕುಡಿಯಿರಿ
ಶೀತ, ಉಸಿರುಗಟ್ಟುವಂತಹ, ಮೂಗು ಸೋರುತ್ತಿರುವುದು ಕೆಮ್ಮಿನ ಜೊತೆ ಇನ್ನಷ್ಟು ಕಿರಿಕಿರಯಾಗಬಹುದು. ಗಂಟಲಿನ ಹಿಂಭಾಗದಲ್ಲಿ ಲೋಳೆಯ ಹನಿಗಳು ಉಂಟಾಗುತ್ತವೆ. ಮೂಗಿನ ಬ್ಲಾಕ್ ತೆಗೆಯಲು ಸರಾಗವಾಗಿ ಉಸಿರಾಡಲು ಡಿಕೊಂಗಸ್ಟೆಂಟ್ ಸಹಕಾರಿ.
6 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಕೆಮ್ಮಿದ್ದರೂ ವೈದ್ಯರ ಸಲಹೆ ಇಲ್ಲದೆ ಡಿಕೊಂಗಸ್ಟೆಂಟ್ ನೀಡುವ ಹಾಗಿಲ್ಲ. 2 ವರ್ಷಕ್ಕಿಂತ ಚಿಕ್ಕ ಮಕ್ಕಳಿಗೆ ಕೆಮ್ಮಿಗೆ ಏನು ನೀಡುವುದಾದರೂ ವೈದ್ಯರ ಸಲಹೆ ಪಡೆಯಲೇ ಬೇಕು.
ಇನ್ನು ರಕ್ತದೊತ್ತಡ ಇದ್ದವರೂ ಡಿಕೊಂಗಸ್ಟೆಂಟ್ ತೆಗೆದುಕೊಳ್ಳುವ ಮುನ್ನ ವೈದ್ಯರ ಸಲಹೆ ಪಡೆಯಿರಿ
ದೀರ್ಘಕಾಲದ ಕೆಮ್ಮು ಸೈನಸ್ ಸೋಂಕು ಅಥವಾ ಅಲರ್ಜಿಯಿಂದ ಉಂಟಾಗುತ್ತದೆ.
ಅಲರ್ಜಿ ಕಾರಣವಾಗಿದ್ದರೆ, ಅಲರ್ಜಿಯನ್ನು ಉಂಟುಮಾಡುವ ಪ್ರಚೋದಕವನ್ನು (ಅಲರ್ಜಿನ್) ತಪ್ಪಿಸಬಹುದು.
ಒಣ ಕೆಮ್ಮು ಇದ್ದಾಗ ಗಟ್ಟಿಯಾದ ಕ್ಯಾಂಡಿ, ಚಾಕಲೇಟ್ ಸೇವಿಸಬಹುದು. ಇದು ಮಕ್ಕಳಿಗೆ ನೀಡುವಂತಿಲ್ಲ
ಕೆಮ್ಮು ಇದ್ದಾಗ, ಸಿಗರೇಟ್ ಸೇದುವವರ ಅಕ್ಕಪಕ್ಕದಲ್ಲಿ ನಿಲ್ಲಲೇಬೇಡಿ.
ಉಸಿರಾಟದ ಸಮಸ್ಯೆ ಕಂಡರೆ ಆಗಾಗ ಕೈ ತೊಳೆಯುತ್ತಲೇ ಇರಿ.
ನ್ಯುಮೋನಿಯಾ, ಅಸ್ತಮಾಗೆ ಆಂಟಿ ಬಯೋಟಿಕ್ಸ್ ಕೊಡಬಹುದು.