ಮೊಸರನ್ನಕ್ಕೆ ಈರುಳ್ಳಿ ಹಾಕ್ತೀರಾ? ಇವೆರಡನ್ನು ತಿಂದ್ರೆ ಏನಾಗುತ್ತೆ?
ಆಯುರ್ವೇದದ ಪ್ರಕಾರ ಈರುಳ್ಳಿ, ಮೊಸರು ಎರಡರಲ್ಲೂ ಬೇರೆ ಬೇರೆ ಗುಣಗಳಿವೆ. ಈ ಎರಡೂ ಜೊತೆಯಾಗಿ ಸೇವಿಸಿದ್ರೆ ಆರೋಗ್ಯದ ಮೇಲಾಗುವ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳಿ.
ಆಯುರ್ವೇದದಲ್ಲ ನಾವು ಆರೋಗ್ಯವಾಗಿರಲು ಆಹಾರಕ್ಕೆ ಸಂಬಂಧಿಸಿದ ಅನೇಕ ನಿಯಮಗಳಿವೆ. ಇವುಗಳನ್ನು ಪಾಲಿಸದಿದ್ದರೆ ನೀವು ಅನೇಕ ಅನಾರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಈ ರೀತಿಯ ನಿಯಮದಲ್ಲಿ ಮೊಸರು, ಈರುಳ್ಳಿ ಸೇರಿವೆ.
ಮಜ್ಜಿಗೆ
ನಮ್ಮಲ್ಲಿ ಅನೇಕರು ಮೊಸರು, ಈರುಳ್ಳಿ ಕಾಂಬಿನೇಷನ್ ಅನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಆದರೆ ಆಯುರ್ವೇದದ ಪ್ರಕಾರ ಈರುಳ್ಳಿ, ಮೊಸರನ್ನು ಒಟ್ಟಿಗೆ ಸೇವಿಸಬಾರದು. ಏಕೆಂದರೆ ಹಾಗೆ ಮಾಡುವುದರಿಂದ ನೀವು ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ವಿಶೇಷವಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆಯುರ್ವೇದದ ಪ್ರಕಾರ, ಈರುಳ್ಳಿ, ಮೊಸರು ಎರಡೂ ವಿಭಿನ್ನ ಪರಿಣಾಮವನ್ನು ಬೀರುತ್ತವೆ. ಅಂದರೆ ಈರುಳ್ಳಿ ಬಿಸಿ ಮಾಡುವ ಪರಿಣಾಮವನ್ನು ಬೀರುತ್ತದೆ. ಅದೇ ಮೊಸರು ತಂಪು ಮಾಡುವ ಪರಿಣಾಮವನ್ನು ಬೀರುತ್ತದೆ. ಅಷ್ಟೇ ಅಲ್ಲದೆ ಈರುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳಿವೆ.
ಇವು ಮೊಸರಿನಲ್ಲಿರುವ ಕ್ಯಾಲ್ಸಿಯಂನಂತಹ ಪೋಷಕಾಂಶಗಳನ್ನು ನಮ್ಮ ದೇಹವು ಹೀರಿಕೊಳ್ಳುವುದನ್ನು ತಡೆಯುತ್ತದೆ. ವಾಸ್ತವವಾಗಿ ಮೊಸರು ಮತ್ತು ಈರುಳ್ಳಿಯನ್ನು ಒಟ್ಟಿಗೆ ತಿಂದರೆ ಏನಾಗುತ್ತದೆ ಎಂದು ಈಗ ತಿಳಿಯೋಣ ಬನ್ನಿ.
ಗ್ಯಾಸ್ಟ್ರಿಕ್ ಸಮಸ್ಯೆಗಳು
ಈರುಳ್ಳಿಯಲ್ಲಿರುವ ಸಂಯುಕ್ತಗಳು ನಮಗೆ ಗ್ಯಾಸ್ಟ್ರಿಕ್, ಆಮ್ಲೀಯತೆ ಮುಂತಾದ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಇನ್ನು ಮೊಸರಿನಲ್ಲಿರುವ ಸಂಯುಕ್ತಗಳು ಸಹ ಇದೇ ರೀತಿಯ ಪರಿಣಾಮವನ್ನು ಬೀರುತ್ತವೆ. ಈ ರೀತಿಯ ಸಂದರ್ಭದಲ್ಲಿ ನೀವು ಈ ಎರಡನ್ನೂ ಒಟ್ಟಿಗೆ ಸೇವಿಸಿದರೆ ಹೊಟ್ಟೆ ಉಬ್ಬರ, ಗ್ಯಾಸ್ಟ್ರಿಕ್ ಜೊತೆಗೆ ಅಜೀರ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ದೇಹದ ಸಹಜ ಉಷ್ಣತೆ ಹೆಚ್ಚಾಗುತ್ತದೆ
ಮೊಸರು ತಂಪು ಮಾಡುವ ಗುಣಗಳನ್ನು ಹೊಂದಿದೆ. ಇನ್ನು ಈರುಳ್ಳಿ ಸಲ್ಫರ್ ಅಂಶದಿಂದಾಗಿ ಬಿಸಿ ಸ್ವಭಾವವನ್ನು ಹೊಂದಿದೆ. ನೀವು ಮೊಸರು ಮತ್ತು ಈರುಳ್ಳಿಯನ್ನು ಒಟ್ಟಿಗೆ ಸೇವಿಸುವುದರಿಂದ ದೇಹದಲ್ಲಿ ಹೆಚ್ಚಿನ ಶಾಖ ಉತ್ಪತ್ತಿಯಾಗುತ್ತದೆ. ಇದು ವಿಷಕಾರಿ ಅಂಶಗಳ ಮಟ್ಟವನ್ನು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಚರ್ಮದ ಮೇಲೆ ಗುಳ್ಳೆಗಳು, ಎಸ್ಜಿಮಾ, ಸೋರಿಯಾಸಿಸ್ ಜೊತೆಗೆ ಇತರ ಚರ್ಮದ ಅಲರ್ಜಿಗಳು ಬರುತ್ತವೆ.
ಜೀರ್ಣಕ್ರಿಯೆಯ ಸಮಸ್ಯೆಗಳು
ಮೊಸರು ಮತ್ತು ಈರುಳ್ಳಿಯನ್ನು ಒಟ್ಟಿಗೆ ಸೇವಿಸಿದರೆ ಜೀರ್ಣಕ್ರಿಯೆಯ ಸಮಸ್ಯೆಗಳು ಖಂಡಿತವಾಗಿಯೂ ಬರುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಏಕೆಂದರೆ ಮೊಸರಿನಲ್ಲಿ ಪ್ರೋಬಯಾಟಿಕ್‌ಗಳಿವೆ. ಈರುಳ್ಳಿಯಲ್ಲಿ ಸಲ್ಫರ್ ಸಂಯುಕ್ತಗಳಿವೆ. ಈ ಎರಡನ್ನೂ ಒಟ್ಟಿಗೆ ಸೇವಿಸುವುದರಿಂದ ಜೀರ್ಣಕ್ರಿಯೆಯ ಸಮಸ್ಯೆಗಳು ಬರುತ್ತವೆ.
ಚರ್ಮದ ಅಲರ್ಜಿಗಳು
ಮೊಸರಿನಲ್ಲಿ ಈರುಳ್ಳಿಯನ್ನು ಬೆರೆಸಿ ತಿಂದರೆ ಹಾರ್ಮೋನುಗಳ ಅಸಮತೋಲನ ಉಂಟಾಗಿ ನಿಮ್ಮ ದೇಹದಲ್ಲಿ ಹೆಚ್ಚುವರಿ ಶಾಖ ಉತ್ಪತ್ತಿಯಾಗುತ್ತದೆ. ಇದು ನಿಮ್ಮ ದೇಹದಲ್ಲಿ ವಿಷಕಾರಿ ಅಂಶಗಳ ಮಟ್ಟವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ನಂಬುತ್ತಾರೆ. ಇದು ಎಸ್ಜಿಮಾ, ಗುಳ್ಳೆಗಳ ಜೊತೆಗೆ ಕೆಲವೊಮ್ಮೆ ಸೋರಿಯಾಸಿಸ್ ನಂತಹ ಚರ್ಮದ ಅಲರ್ಜಿಗಳಿಗೂ ಕಾರಣವಾಗುತ್ತದೆ. ಇದರ ಪರಿಣಾಮ ಹೆಚ್ಚಿದ್ದರೆ ಆಹಾರ ವಿಷವನ್ನು ಸಹ ಉಂಟುಮಾಡಬಹುದು.
ಮೊಸರು
ಮೊಸರು, ಈರುಳ್ಳಿಯನ್ನು ಹೇಗೆ ಬೆರೆಸುವುದು?
ಈರುಳ್ಳಿಯನ್ನು ಹುರಿದರೆ ಅದರಲ್ಲಿರುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಆದ್ದರಿಂದ ನೀವು ಈರುಳ್ಳಿಯನ್ನು ಹುರಿದು ಮೊಸರಿನಲ್ಲಿ ಬೆರೆಸಿ ತಿನ್ನಬಹುದು. ಹೀಗೆ ಮಾಡುವುದರಿಂದ ನಿಮಗೆ ಯಾವುದೇ ರೀತಿಯ ಆರೋಗ್ಯ ಸಮಸ್ಯೆಗಳು ಬರುವುದಿಲ್ಲ. ಅಷ್ಟೇ ಅಲ್ಲದೆ ಮೊಸರು, ಈರುಳ್ಳಿ ತಿನ್ನಬೇಕೆಂಬ ನಿಮ್ಮ ಆಸೆಯೂ ಈಡೇರುತ್ತದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.