ಪ್ರತಿದಿನ 10-12 ಗಂಟೆ ಕುರ್ಚಿ ಮೇಲೆ ಕುಳಿತು ಕೆಲಸ ಮಾಡುತ್ತೀರ? ಎಚ್ಚರ, ಈ ಅಂಗಗಳಿಗೆ ಹಾನಿ ತಪ್ಪಿದ್ದಲ್ಲ!
Health tips: ನೀವು ಯಾವುದಾದರೂ ಕಂಪನಿಯಲ್ಲಿ ಉದ್ಯೋಗಿಯಾಗಿರಬಹುದು ಅಥವಾ ನಿಮ್ಮದೇ ಸ್ವಂತ ವ್ಯಾಪಾರ ಮಾಡುತ್ತಿರಬಹುದು. ದೀರ್ಘಕಾಲದವರೆಗೆ ಕುರ್ಚಿಯ ಮೇಲೆ ಕುಳಿತು ಕೆಲಸ ಮಾಡುತ್ತಿದ್ದರೆ ಜಾಗರೂಕರಾಗಿರಿ, ಕುಳಿತುಕೊಂಡು ಕೆಲಸ ಮಾಡುತ್ತಿದ್ದಾರೆ ಈ ಅಂಗಗಳಿಗೆ ಹಾನಿ ಮಾಡುತ್ತದೆ.
ಪ್ರತಿದಿನ 8 ರಿಂದ 10 ಅಥವಾ ಕೆಲವೊಮ್ಮೆ 12 ಗಂಟೆಗಳ ಕಾಲ ಕುರ್ಚಿಯ ಮೇಲೆ ಕುಳಿತು ಕೆಲಸ ಮಾಡುವ ಅನೇಕ ಜನರಿದ್ದಾರೆ, ಆದರೆ ನೀವು ಸರಿಯಾದ ಕುರ್ಚಿಯ ಮೇಲೆ ಸರಿಯಾದ ರೀತಿಯಲ್ಲಿ ಕುಳಿತುಕೊಳ್ಳದಿದ್ದರೆ, ನೀವು ಹಲವಾರು ಗಂಭೀರ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂದು ನಿಮಗೆ ತಿಳಿದಿದೆಯೇ?
ಹೌದು, ನೀವು ಒಂದೇ ಭಂಗಿಯಲ್ಲಿ ಕುರ್ಚಿಯ ಮೇಲೆ ದೀರ್ಘಕಾಲ ಯಾವುದೇ ಚಲನೆ ಇಲ್ಲದೆ ಕುಳಿತಲ್ಲೇ ಕುಳಿತಿದ್ದರೆ ನಿಮ್ಮ ದೇಹದಲ್ಲಿ ಬೊಜ್ಜು ಬೆಳೆಯಲು ಪ್ರಾರಂಭವಾಗುತ್ತದೆ. ನೀವು ಸರಿಯಾದ ರೀತಿಯಲ್ಲಿ ಕುರ್ಚಿಯ ಮೇಲೆ ಕೂರದೆ ಗಂಟೆಗಟ್ಟಲೆ ಕೆಲಸ ಮಾಡುವಾಗ, ಅದು ನಿಮ್ಮ ಏಕಾಗ್ರತೆಯನ್ನು ಕಡಿಮೆ ಮಾಡುತ್ತದೆ, ಕುಳಿತಲ್ಲೇ ಕುಳಿತುಕೊಳ್ಳುವುದರಿಂದ ಕಾಲಿಗೆ ರಕ್ತಸಂಚಾರಕ್ಕೆ ಅಡಚಣೆಯಾಗುತ್ತದೆ.
ಕುರ್ಚಿಯ ಮೇಲೆ ಕುಳಿತುಕೊಂಡು ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರಿಗೆ ಮತ್ತು ಕೀಬೋರ್ಡ್‌ನಲ್ಲಿ ನಿರಂತರವಾಗಿ ಬೆರಳುಗಳನ್ನು ಚಲಿಸುವವರಿಗೆ ಕೈ ಮತ್ತು ಭುಜಗಳಲ್ಲಿ ನೋವು ಕಾಣಿಸಿಕೊಳ್ಳುತ್ತದೆ.
ಗಂಟೆಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ರಕ್ತ ಸಂಚಾರದ ಮೇಲೂ ಪರಿಣಾಮ ಬೀರುತ್ತದೆ. ವಿಶೇಷವಾಗಿ ಕುರ್ಚಿಯ ಮೇಲೆ ಕುಳಿತು ಕೆಲಸ ಮಾಡುವಾಗ, ಭುಜಗಳು, ಹೊಟ್ಟೆ ಮತ್ತು ಸೊಂಟದಲ್ಲಿ ರಕ್ತದ ಹರಿವು ಸರಿಯಾಗಿ ಆಗುವುದಿಲ್ಲ, ಇದರಿಂದಾಗಿ ದೇಹದಲ್ಲಿ ಜುಮ್ಮೆನಿಸುವಿಕೆ ಅಥವಾ ಮರಗಟ್ಟುವಿಕೆ ಮುಂತಾದ ಸಾಮಾನ್ಯ ಸಮಸ್ಯೆಗಳು ಉಂಟಾಗುತ್ತವೆ.
ಕುಳಿತುಕೊಂಡಿರುವ ಕುರ್ಚಿ ಹಿಂಬದಿ ಬೆನ್ನಿಗೆ ನಿಮಗೆ ಸಪೋರ್ಟ್ ನೀಡದಿದ್ದರೆ ಮತ್ತು ನೀವು ಹಿಂಬದಿ ಸಪೋರ್ಟ್ ಇಲ್ಲದ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಿದ್ದರೆ, ಅದು ನಿಮ್ಮ ಸೊಂಟದಲ್ಲಿ ನೋವನ್ನು ಉಂಟುಮಾಡುತ್ತದೆ ಮತ್ತು ಈ ನೋವು ಕುತ್ತಿಗೆಯಿಂದ ಪ್ರಾರಂಭವಾಗಿ ಬೆನ್ನು ಮೂಳೆಯವರೆಗೆ ಹೋಗುತ್ತದೆ.