Hair Growth Myth: ದಟ್ಟ ಕೂದಲಿನ ಆಸೆಗೆ ತಲೆ ಶೇವ್ ಮಾಡಿಸಿಕೊಳ್ಳೋದು ಎಷ್ಟು ಸರಿ?
Hair growth : ದಟ್ಟ, ಕಪ್ಪನೆ ಕೂದಲು ಬಹುತೇಕರಿಗೆ ಈಗ ಕನಸು. ತಲೆ ಮೇಲೆ ನಾಲ್ಕೈದು ಕೂದಲಿದ್ರೆ ಸಾಕಪ್ಪ ಅನ್ನೋರೇ ಹೆಚ್ಚು. ತಲೆ ಕೂದಲನ್ನು ಸಂಪೂರ್ಣ ತೆಗೆದು, ಬೋಳು ತಲೆ ಮಾಡ್ಕೊಂಡ್ರೆ ಕೂದಲು ದಟ್ಟವಾಗಿ ಬೆಳೆಯುತ್ತೆ ಎನ್ನುವ ನಂಬಿಕೆ ಇದೆ. ಅದೆಷ್ಟು ಸರಿ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲಿದೆ.

ತಲೆ ಶೇವ್ ಮಾಡಿದ್ರೆ ಕೂದಲು ಬೆಳೆಯುತ್ತಾ?
ಕೂದಲು ಹೆಚ್ಚು ಉದುರ್ತಿದೆ ಅಂದಾಗ ಬಹುತೇಕರು ಕೂದಲು ಕತ್ತರಿಸಲು ಮುಂದಾಗ್ತಾರೆ. ತಲೆ ಕೂದಲನ್ನು ಶೇವ್ ಮಾಡಿದ್ರೆ ಹೆಚ್ಚು ಕೂದಲು ದಟ್ಟವಾಗಿ ಬೆಳೆಯುತ್ತೆ ಅಂತ ಈಗ್ಲೂ ಅನೇಕರು ನಂಬ್ತಾರೆ. ಆದ್ರೆ ವಿಜ್ಞಾನ ಇದಕ್ಕೆ ಒಪ್ಪೋದಿಲ್ಲ. ಇದೊಂದು ನಂಬಿಕೆ ಮಾತ್ರ. ಕೂದಲಿನ ಕ್ಷೌರ ಹಾಗೂ ಕೂದಲಿನ ಬೆಳವಣಿಗೆಗೆ ಯಾವುದೇ ಸಂಬಂಧ ಇಲ್ಲ.
ದಟ್ಟವಾಗಿ ಕಾಣಲು ಕಾರಣ ಏನು?
ಮೇಯೊ ಕ್ಲಿನಿಕ್ ಪ್ರಕಾರ, ಹೇರ್ಕಟ್ ಅಥವಾ ಶೇವ್ ಮಾಡಿದ ಕೆಲ ದಿನಗಳ ನಂತ್ರ ಕೂದಲು ಮತ್ತೆ ಬೆಳೆಯಲು ಶುರುವಾಗುತ್ತದೆ. ಈ ಟೈಂನಲ್ಲಿ ಕೂದಲು ದಪ್ಪ, ಗಾಢವಾಗಿ ಕಾಣಿಸುತ್ತದೆ. ಇದಕ್ಕೆ ಸರಳ ಕಾರಣವಿದೆ. ರೇಜರ್ನಿಂದ ಕೂದಲನ್ನು ಶೇವ್ ಮಾಡಿದಾಗ ಇಲ್ಲ ಕೂದಲಿನ ತುದಿಯನ್ನು ಕತ್ತರಿಸಿದ ನಂತ್ರ ಬರುವ ಕೂದಲು ಮೊದಲಿಗಿಂತ ಸ್ವಲ್ಪ ದಪ್ಪವಾಗಿ ಕಾಣುತ್ತದೆ. ಮುಟ್ಟಲು ದಪ್ಪ ಮತ್ತು ಒರಟಾಗಿರುತ್ತವೆ. ಹಾಗಾಗಿಯೇ ಜನರು ಕೂದಲು ಕತ್ತರಿಸಿದ್ರೆ ದಟ್ಟ ಕೂದಲು ಬರುತ್ತೆ ಅಂತ ನಂಬ್ತಾರೆ.
ಕೂದಲಿನ ಬೆಳವಣಿಗೆ
ಕ್ಲೀವ್ಲ್ಯಾಂಡ್ ಕ್ಲಿನಿಕ್ ಹೇಳುವಂತೆ ಕೂದಲಿನ ಬೆಳವಣಿಗೆ ಚರ್ಮದೊಳಗಿನ ಆಳವಾದ ಕೂದಲು ಕಿರುಚೀಲಗಳಿಂದ ಹುಟ್ಟುತ್ತದೆ. ನೆತ್ತಿಯಿಂದ ಅಲ್ಲ. ಶೇವಿಂಗ್ ಚರ್ಮದ ಮೇಲಿರುವ ಕೂದಲನ್ನು ಮಾತ್ರ ತೆಗೆದುಹಾಕುತ್ತದೆ. ರೇಜರ್ ಕೂದಲು ಬೆಳೆಯುವ ಚರ್ಮದೊಳಗಿನ ಆಳವಾದ ಕಿರುಚೀಲಗಳನ್ನು ತಲುಪಲು ಸಾಧ್ಯವಿಲ್ಲ. ಆದ್ದರಿಂದ, ಶೇವಿಂಗ್ ಕೂದಲಿನ ದಪ್ಪ ಅಥವಾ ಅದರ ಬೆಳವಣಿಗೆಯನ್ನು ಬದಲಿಸುವುದಿಲ್ಲ. ಕೂದಲಿನ ನಿಜವಾದ ಬೆಳವಣಿಗೆ ತಳಿಶಾಸ್ತ್ರ, ಆಹಾರ ಪದ್ಧತಿ, ಒತ್ತಡದ ಮಟ್ಟ ಮತ್ತು ಹಾರ್ಮೋನಿನ ಮೇಲೆ ಅವಲಂಭಿಸಿದೆ.
ತಜ್ಞರು ಹೇಳೋದೇನು?
ನಿಜವಾಗ್ಲೂ ನಿಮ್ಮ ಕೂದಲು ಕಪ್ಪಗೆ, ದಟ್ಟವಾಗಿ ಬೆಳೆಯಬೇಕು ಅಂದ್ರೆ ಶೇವಿಂಗ್ ಮಾಡಬೇಡಿ. ಶೇವಿಂಗ್ ನಿಂದ ಕಿರಿಕಿರಿ, ಕೂದಲು ಉದುರುವ ಸಮಸ್ಯೆ ಹೆಚ್ಚಾಗಬಹುದು. ನೀವು ಪ್ರೋಟಿನ್ ಇರುವ ಆಹಾರವನ್ನು ಹೆಚ್ಚಾಗಿ ಸೇವನೆ ಮಾಡಿ. ಒತ್ತಡ ಕಡಿಮೆ ಮಾಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

