ರೊಟ್ಟಿ ಅಥವಾ ಅನ್ನ ತೂಕ ಇಳಿಸಲು ಯಾವುದು ಉತ್ತಮ?
Food desk : ರೊಟ್ಟಿ ಮತ್ತು ಅನ್ನ ಭಾರತೀಯರ ಊಟದ ಪ್ರಮುಖ ಭಾಗ. ಯಾವುದೇ ಊಟ ರೊಟ್ಟಿ ಅಥವಾ ಅನ್ನ ಇಲ್ಲದೆ ಪೂರ್ಣವಾಗುವುದಿಲ್ಲ. ಆದರೆ ತೂಕ ಇಳಿಸಿಕೊಳ್ಳಲು ಬಯಸುವವರು ರೊಟ್ಟಿ ಮತ್ತು ಅನ್ನ ತಿನ್ನುವುದನ್ನು ಬಿಟ್ಟುಬಿಡುತ್ತಾರೆ. ರೊಟ್ಟಿ ಅಥವಾ ಅನ್ನದಲ್ಲಿ ಯಾವುದು ತೂಕ ಹೆಚ್ಚಿಸುತ್ತದೆ ಎಂದು ತಿಳಿಯೋಣ...
ತೂಕ ಇಳಿಸಿಕೊಳ್ಳಲು ಜನರು ಅನ್ನ ತಿನ್ನುವುದನ್ನು ತಪ್ಪಿಸುತ್ತಾರೆ. ಅನ್ನದಲ್ಲಿ ಪಿಷ್ಟ ಹೆಚ್ಚಿದ್ದು, ತೂಕ ಹೆಚ್ಚಿಸುತ್ತದೆ ಎಂಬ ನಂಬಿಕೆ ಇದೆ. ರೊಟ್ಟಿಗೆ ಹೋಲಿಸಿದರೆ ಅನ್ನದಲ್ಲಿ ಪಿಷ್ಟ ಹೆಚ್ಚು, ನಾರಿನಂಶ ಕಡಿಮೆ.
ಅನ್ನ-ರೊಟ್ಟಿ ಆರೋಗ್ಯ
ತೂಕ ಇಳಿಸಿಕೊಳ್ಳಲು ಜನರು ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತಾರೆ. ರೊಟ್ಟಿ ಮತ್ತು ಅನ್ನದಲ್ಲಿ ಸಮಾನ ಕ್ಯಾಲೊರಿಗಳಿವೆ. ಆದರೆ ಅನ್ನ ಸೇವನೆಗಿಂತ ರೊಟ್ಟಿ ಉತ್ತಮ ಎನ್ನುತ್ತಾರೆ ಆರೋಗ್ಯ ಪರಿಣತರು.
ಅನ್ನದಲ್ಲಿ ಕಾರ್ಬೋಹೈಡ್ರೇಟ್ ಹೆಚ್ಚು. ಕಾರ್ಬ್ಸ್ ನಮ್ಮ ದೇಹಕ್ಕೆ ಅಗತ್ಯ. ಇದು ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ರೊಟ್ಟಿಯಲ್ಲಿ ಕಾರ್ಬೋಹೈಡ್ರೇಟ್ ಕಡಿಮೆಯಿದೆ.
ರೊಟ್ಟಿಯಲ್ಲಿ ಪ್ರೋಟೀನ್ ಹೆಚ್ಚು. ಅನ್ನದಲ್ಲಿ ಪ್ರೋಟೀನ್ ಕಡಿಮೆ, ಆದರೆ ಅಮೈನೋ ಆಸಿಡ್ ಲೈಸಿನ್ ಹೆಚ್ಚು. ದಾಲ್ ಜೊತೆ ತಿಂದರೆ ಹೆಚ್ಚು ಪ್ರೋಟೀನ್ ಸಿಗುತ್ತದೆ. ತೂಕ ನಷ್ಟಕ್ಕೆ ಅನ್ನದ ಬದಲು ಜೋಳದ ರೊಟ್ಟಿ ಸೇವನೆ ಉತ್ತಮವಾಗಿದೆ.
ಅನ್ನ ಗ್ಲುಟನ್ ಮುಕ್ತ. ಗೋಧಿ ಹಿಟ್ಟಿನಲ್ಲಿ ಗ್ಲುಟನ್ ಇರುತ್ತದೆ. ಗ್ಲುಟನ್ ಹಾನಿಕಾರಕವಲ್ಲ. ತೂಕ ಇಳಿಸಿಕೊಳ್ಳಲು ಬಯಸುವವರು ಗ್ಲುಟನ್ ಮುಕ್ತ ಆಹಾರ ಸೇವಿಸುತ್ತಾರೆ..
ತೂಕ ಇಳಿಸಿಕೊಳ್ಳಲು ರೊಟ್ಟಿ ಉತ್ತಮ. ಇದರಲ್ಲಿ ನಾರಿನಂಶ, ಪ್ರೋಟೀನ್, ವಿಟಮಿನ್‌ಗಳಿವೆ. ಅನ್ನಕ್ಕೆ ಹೋಲಿಸಿದರೆ ರೊಟ್ಟಿಯಲ್ಲಿ ನಾರಿನಂಶ, ಪ್ರೋಟೀನ್ ಮತ್ತು ಕೊಬ್ಬು ಕಡಿಮೆಯಿದೆ ಹೀಗಾಗಿ ತೂಕ ಇಳಿಸಿಕೊಳ್ಳಲು ಬಯಸಿದರೆ ಅನ್ನಕ್ಕಿಂತ ರೊಟ್ಟಿ ಸೇವನೆ ಉತ್ತಮ ಎಂದು ಆರೋಗ್ಯ ಪರಿಣತರು ಹೇಳುತ್ತಾರೆ.
ಗಮನಿಸಿ: ಈ ಲೇಖನದ ವಿಷಯ ಪ್ರಾಥಮಿಕ ಮಾಹಿತಿಯಾಗಿದೆ. ತೂಕ ಇಳಿಸಿಕೊಳ್ಳಲು ಸೂಕ್ತ ವೈದ್ಯರ ಸಲಹೆ ಪಡೆಯಿರಿ