ಪದೇ ಪದೇ ಬೆವರುವುದರಿಂದ ಅಸಹ್ಯವಾಗುತ್ತಿದೆಯೇ? ಇವನ್ನು ಅವೈಯ್ಡ್ ಮಾಡಿ
ಬೆವರುವ ಆರ್ಮ್ ಪಿಟ್ಸ್ ನಾವೆಲ್ಲರೂ ಒಮ್ಮೆಯಾದರೂ ಅನುಭವಿಸಿರುತ್ತೇವೆ. ಆದರೆ ಪರಿಸ್ಥಿತಿ ಸಾಮಾನ್ಯದಿಂದ ಮುಜುಗರಕ್ಕೊಳಗಾದಾಗ ಏನು ಮಾಡಬೇಕು? ಬೆವರುವುದು ನಮ್ಮ ದೇಹದ ನೈಸರ್ಗಿಕ ಪ್ರಕ್ರಿಯೆಯ ಒಂದು ಭಾಗ. ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಬೆವರು ವಾಸನೆಯಿಲ್ಲದ ದ್ರವ ಎಂದು ನಿಮಗೆ ತಿಳಿದಿದೆಯೇ? ಚರ್ಮದ ಮೇಲೆ ಇರುವ ಬ್ಯಾಕ್ಟೀರಿಯಾದೊಂದಿಗೆ ಬೆರೆತಾಗ ವಾಸನೆ ಬೆಳೆಯುತ್ತದೆ.
ಬೆವರುವುದರಿಂದ ಉಂಟಾಗುವ ಕೆಟ್ಟ ಪರಿಣಾಮ ಎಂದರೆ , ಅದು ಬಟ್ಟೆ ಮೇಲೆ ಕಲೆ ಮೂಡಿಸುತ್ತದೆ. ಕೆಲವರು ಇತರರಿಗಿಂತ ಹೆಚ್ಚು ಬೆವರು ಹರಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ, ಅತಿಯಾದ ಬೆವರುವಿಕೆ ಆರೋಗ್ಯ ಸ್ಥಿತಿಯ ಪರಿಣಾಮವಾಗಿರಬಹುದು. ಅತಿಯಾದ ಬೆವರುವಿಕೆಯನ್ನು ಕಡಿಮೆ ಮಾಡಲು ಮತ್ತು ಅದನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುವ ಕೆಲವು ವಿಧಾನಗಳು ಇಲ್ಲಿವೆ.
ಶೇವ್ ಮಾಡಿ
ಅಂಡರ್ ಆರ್ಮ್ ಕೂದಲು ತೇವಾಂಶ ಉಳಿಸಿಕೊಳ್ಳುತ್ತದೆ - ಇದು ಅತಿ ಬೆವರುವಿಕೆಗೆ ಕಾರಣವಾಗಬಹುದು. ಶೇವಿಂಗ್ ಅತ್ಯಗತ್ಯ, ವಿಶೇಷವಾಗಿ ತೀವ್ರವಾಗಿ ಬೆವರುವವರಿಗೆ. ದೇಹದ ವಾಸನೆ ಹಾಗೂ ಬೆವರಿನೊಂದಿಗೆ ಆಗಾಗ್ಗೆ ಹೋರಾಡುತ್ತಿದ್ದರೆ, ಶೇವ್ ಅದನ್ನು ಕಡಿಮೆ ಮಾಡಲು ಅಥವಾ ನಿರ್ಮೂಲನೆ ಮಾಡಲು ಸಹಾಯ ಮಾಡುತ್ತದೆ.
ಆಂಟಿಪೆರ್ಸ್ಪಿರಂಟ್ಸ್ ಉತ್ತಮ ಸ್ನೇಹಿತ
ಬೆವರುವಾಗ ಡಿಯೋಡರೆಂಟ್ ಅನ್ನು ಬಳಸುತ್ತೀರಾ ಬೇಡ.ಇದು ಅಲ್ಯೂಮಿನಿಯಂ ಆಧಾರಿತ ವಸ್ತುವನ್ನು ಹೊಂದಿದ್ದು ಅದು ಚರ್ಮದ ಮೇಲಿನ ಬೆವರಿನ ನಾಳಗಳಲ್ಲಿ ಸಣ್ಣ ತಡೆಯನ್ನು ಸೃಷ್ಟಿಸುತ್ತದೆ, ಇದು ಬೆವರು ಹೊರಬರದಂತೆ ತಡೆಯುತ್ತದೆ.
ಆಂಟಿಪರ್ಸ್ಪಿರಂಟ್ ಅನ್ನು ರಾತ್ರಿಯಲ್ಲಿ ಹಚ್ಚಬೇಕು ಎಂದು ತಜ್ಞರು ಸಲಹೆ ನೀಡುತ್ತಾರೆ, ಇದರಿಂದಾಗಿ ರಂಧ್ರಗಳು ಬೆಳಗ್ಗೆ ಬೆವರುವಿಕೆಯನ್ನು ಹೀರಿಕೊಳ್ಳುತ್ತವೆ. ಆದಾಗ್ಯೂ, ಅಲರ್ಜಿಯಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು.
ಶವರ್ ಮತ್ತು ಡ್ರೆಸ್ಸಿಂಗ್ ನಡುವೆ ಅಂತರವಿರಲಿ
ಶವರ್‌ನಿಂದ ಹೊರಬಂದ ತಕ್ಷಣ ಬಟ್ಟೆ ಧರಿಸಬೇಡಿ. ಬಟ್ಟೆಗಳನ್ನು ಧರಿಸುವ ಮೊದಲು ಕಾಯುವುದರಿಂದ ದೇಹ ತಣ್ಣಗಾಗಲು ಮತ್ತು ಒಣಗಲು ಅನುವು ಮಾಡಿಕೊಡುತ್ತದೆ, ಇದರಿಂದಾಗಿ ಕಂಕುಳಲ್ಲಿ ಸಾಕಷ್ಟು ಬೆವರಾಗದಂತೆ ತಡೆಯುತ್ತದೆ. ಹೂಮಿಡ್ ಸ್ಥಳದಲ್ಲಿ ವಾಸಿಸುತ್ತಿದ್ದರೆ ನಿಯಮಿತವಾಗಿ ಬಿಸಿ ಸ್ನಾನ ಮಾಡಿ.
ವರ್ಕ್ಔಟ್ ಆದ ಕೂಡಲೇ ತೊಳೆಯಿರಿ
ಅತಿಯಾದ ಬೆವರು ಡರ್ಮಟೈಟಿಸ್‌ನಂಥ ಚರ್ಮದ ಸ್ಥಿತಿಯನ್ನು ಪ್ರಚೋದಿಸುತ್ತದೆ. ಕಂಕುಳನ್ನು ಸಾಧ್ಯವಾದಷ್ಟು ಸ್ವಚ್ಛವಾಗಿರಿಸುವುದರ ಮೂಲಕ ಅದನ್ನು ಎದುರಿಸಲು ಉತ್ತಮ ಮಾರ್ಗ.
ವರ್ಕೌಟ್ ಮಾಡಿದ ನಂತರ ಧರಿಸಿದ ಬಟ್ಟೆಯನ್ನು ತೊಳೆಯಿರಿ ಮತ್ತು ಒಣಗಿಸಿ. ಚರ್ಮದ ಕಿರಿಕಿರಿಯನ್ನು ಬೆಳೆಸುವ ಸಾಧ್ಯತೆಗಳನ್ನು ಕಡಿಮೆ ಮಾಡಲು ನಿಮ್ಮ ಕಂಕುಳಿಗೆ ಮಾಯಿಶ್ಚರೈಸರ್ ಅನ್ನು ಅನ್ವಯಿಸಿ.
ಬೇಕಿಂಗ್ ಸೋಡಾ ಬೇಡ
ಅನೇಕ ಜನರು ತಮ್ಮ ಕಂಕುಳನ್ನು ಬೆವರದಂತೆ ತಡೆಯಲು ಅಡುಗೆ ಸೋಡಾವನ್ನು ಬಳಸುತ್ತಾರೆ, ಆದರೆ ಇದು ಹಾನಿಕಾರಕ. ವಾಸ್ತವವಾಗಿ, ಚರ್ಮಕ್ಕೆ ಅಡಿಗೆ ಸೋಡಾವನ್ನು ಬಳಸುವುದರಿಂದ ಸುಡಬಹುದು ಮತ್ತು ಚರ್ಮದ ತಡೆಗೋಡೆ ಸಂಪೂರ್ಣವಾಗಿ ನಾಶವಾಗುತ್ತದೆ. ಅಡುಗೆ ಸೋಡಾ ಬಳಸುವುದು ಚರ್ಮದ ಹೆಚ್ಚಿನ ಸಮಸ್ಯೆಗಳಿಗೆ ಕಾರಣವಾಗಬಹುದು. ಇದನ್ನು ಚರ್ಮಕ್ಕೆ ಹಚ್ಚಲು ನಿರ್ಧರಿಸಿದರೆ ಅದನ್ನು ವೈದ್ಯರ ಮಾರ್ಗದರ್ಶನದಲ್ಲಿ ಮಾಡುತ್ತಿದ್ದೀರಿ ಎಂದು ಖಚಿತಪಡಿಸಿಕೊಳ್ಳಿ.
ಕೆಫೀನ್ ಬಿಟ್ಟುಬಿಡಿ
ಕೆಫೀನ್ ಬೆವರುವಿಕೆಯನ್ನು ಹೆಚ್ಚಿಸುತ್ತದೆ ಮತ್ತು ನರವೈಜ್ಞಾನಿಕ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತದೆ. ಇದು ರಕ್ತದೊತ್ತಡ ಹೆಚ್ಚಾಗಲು, ಹೃದಯ ಬಡಿತ ಹೆಚ್ಚಾಗಲು ಮತ್ತು ಬೆವರು ಗ್ರಂಥಿಗಳು ಅಧಿಕಾವಧಿ ಕೆಲಸ ಮಾಡಲು ಸಹ ಕಾರಣವಾಗುತ್ತದೆ.
ಬಿಸಿ ಪಾನೀಯಗಳು ದೇಹದ ಉಷ್ಣತೆಯನ್ನು ಹೆಚ್ಚಿಸುತ್ತದೆ ಮತ್ತು ಬೆವರುವಿಕೆಗೆ ಕಾರಣವಾಗುತ್ತವೆ. ಕೆಫೀನ್ ಅನ್ನು ಕಡಿಮೆ ಮಾಡಬೇಕು ಅಥವಾ ಸಂಪೂರ್ಣವಾಗಿ ತಪ್ಪಿಸಬೇಕು.