ತುಂಬಾ ಚಳಿಯಾದಾಗ, ಭಯವಾದರೆ ರೋಮ ನಿಲ್ಲೋದ್ಯಾಕೆ?
ಕೆಲವೊಮ್ಮೆ ನೆಲದ ಮೇಲೆ ಗೀಚಿದ ಶಬ್ಧವಾದಾಗ, ತುಂಬಾ ಚಳಿಯಾದಾಗ ಅಥವಾ ತುಂಬಾನೆ ಇಮೋಶನಲ್ ಆದಾಗ ನಿಮಗೆ ಹಠಾತ್ ಗೂಸ್ ಬಂಪ್ಸ್ ಅಥವಾ ರೋಮಾಂಚನ ಆಗುತ್ತೆ. ಕೆಲವು ಸಂದರ್ಭಗಳಲ್ಲಿ ಯಾಕೆ ಗೂಸ್ ಬಂಪ್ಸ್ ಬರುತ್ತೆ ಅನ್ನೋದು ಗೊತ್ತಾ ನಿಮಗೆ?
ರಾತ್ರಿ ಹೊತ್ತು ಯಾರದ್ರೂ ದೆವ್ವದ ಕಥೆಯನ್ನು ಹೇಳಿದ್ರೆ, ನಮ್ಮ ಕೈ ಕಾಲಿನ ರೋಮಗಳೆಲ್ಲಾ ಸೆಟೆದು ನಿಂತು ಗೂಸ್ ಬಂಪ್ (Goosebumps)ಬರುತ್ತವೆ ಅಲ್ವಾ? ಇದು ನಿಮಗೆ ಯಾವುದೋ ಒಂದು ಹಂತದಲ್ಲಿ ಸಂಭವಿಸಿರಬೇಕು. ಇದನ್ನ ಕನ್ನಡದಲ್ಲಿ ರೋಮಾಂಚನ ಅಂತಾನೂ ಕರಿಯುತ್ತಾರೆ. ಅಲ್ಲದೇ ಇದು ಇದ್ದಕ್ಕಿದ್ದಂತೆ ತುಂಬಾ ಚಳಿಯನ್ನು ಅನುಭವಿಸಿದ್ರೆ ಅಥವಾ ಭಾವನಾತ್ಮಕ ವಿಷಯ ಕೇಳಿದಾಗ ಸಹ ರೋಮಾಂಚನ ಆಗುತ್ತೆ ಅಲ್ವಾ?
ಕೆಲವೊಂದು ವಿಷ್ಯಗಳನ್ನು ಕೇಳಿದಾಗ ರೋಮಗಳು ಎದ್ದು ನಿಂತು ರೋಮಾಂಚನವಾಗಲು ಏನು ಕಾರಣ ಗೊತ್ತಾ? ಇದು ಏಕೆ ಸಂಭವಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ದೂರದಿಂದ ಬರುವ ಗೀಚುವಿಕೆಯ ಶಬ್ದವು ನಿಮ್ಮ ದೇಹದ ರೋಮಗಳನ್ನು ಎದ್ದು ನಿಲ್ಲೋದು ಯಾಕೆ? ಎಲ್ಲಾದಕ್ಕೂ ಇಲ್ಲಿದೆ ಉತ್ತರ…
ಗೂಸ್ ಬಂಪ್ಸ್ ಎಂದರೇನು?
ದೇಹದ ಮೇಲಿನ ಕೂದಲು ಹಠಾತ್ ಎದ್ದು ನಿಲ್ಲೋದನ್ನು ಪೈಲೆರೆಕ್ಷನ್ ಎಂದು ಕರೆಯಲಾಗುತ್ತದೆ. ಇದನ್ನೇ ನೀವು ಸಾಮಾನ್ಯ ಭಾಷೆಯಲ್ಲಿ ಗೂಸ್ ಬಂಪ್ಸ್ ಎಂದು ಕರೆಯುತ್ತೀರಿ. ಪೈಲೆಹಿರೆಕ್ಟರ್ ಸ್ನಾಯುಗಳು ಸಂಕುಚಿತಗೊಂಡಾಗ ಸಂಭವಿಸುತ್ತದೆ. ಈ ಸಣ್ಣ ಸ್ನಾಯುಗಳು ದೇಹದ ಕಿರುಚೀಲಗಳಿಗೆ ಜೋಡಿಸಲ್ಪಟ್ಟಿವೆ. ಇದು ಸಿಂಪಥೆಟಿಕ್ ನರಮಂಡಲದ ಒಂದು ರೀತಿಯ ಸ್ವಯಂಪ್ರೇರಿತ ಪ್ರತಿಕ್ರಿಯೆ. ಇದು ಶೀತ ಅಥವಾ ಇನ್ನಾವುದೇ ಕಾರಣದಿಂದ ದೇಹದಲ್ಲಿ ಸ್ನಾಯುಗಳು ಪ್ರಚೋದಿಸಲ್ಪಟ್ಟರೆ ಇದು ಉಂಟಾಗುತ್ತೆ.
ಗೂಸ್ ಬಂಪ್ಸ್ ಸಂಗೀತ ಮತ್ತು ಭಾವನೆಗಳಿಗೆ ಸಂಬಂಧಿಸಿವೆಯೇ?
ತುಂಬಾ ಭಾವನಾತ್ಮಕ (Emotional) ಮತ್ತು ಸೆಂಟಿಮೆಂಟಲ್ ಹಾಡನ್ನು (Sentimental Song) ಕೇಳಿದ ನಂತರ ನಿಮಗೆ ಎಂದಾದರೂ ರೋಮಾಂಚನ ಆಗಿದೆಯೇ? ಅಥವಾ ಯಾವುದೋ ಚಲನಚಿತ್ರವನ್ನು ನೋಡಿದ ನಂತರ ನಿಮಗೆ ಈ ರೀತಿ ಫೀಲ್ ಆಗಿದ್ಯಾ??
2011 ರಲ್ಲಿ, ಜರ್ನಲ್ ಆಫ್ ಬಯಾಲಜಿ ಸೈಕಾಲಜಿ ಒಂದು ಅಧ್ಯಯನವನ್ನು ಪ್ರಕಟಿಸಿತು, ಇದರಲ್ಲಿ ತಜ್ಞರು ಚಲನಚಿತ್ರ ಮತ್ತು ಸಂಗೀತದ ಮೂಲಕ ಒಂದು ಗ್ರೂಪ್ ನಲ್ಲಿರುವ ಜನರು ಯಾವ ರೀತಿ ಗೂಸ್ ಬಂಪ್ಸ್ ಅನುಭವಿಸುತ್ತಾರೆ ಅನ್ನೋದನ್ನು ಪತ್ತೆ ಹಚ್ಚುತ್ತಾರೆ. ಟೈಟಾನಿಕ್ ಚಿತ್ರದ (Titanic movie) ಸೂಪರ್ ಹಿಟ್ ಹಾಡು 'ಮೈ ಹಾರ್ಟ್ ವಿಲ್ ಗೋ ಆನ್' ಹಾಡು ಕೇಳಿದಾಗ ಹೆಚ್ಚಿನ ಜನರಿಗೆ ರೋಮಾಂಚನ ಉಂಟಾಗಿದೆ.
ಅದೇ ಸಮಯದಲ್ಲಿ, ಇದೇ ರೀತಿಯ ಮತ್ತೊಂದು ಅಧ್ಯಯನದಲ್ಲಿ, ನಾವು ಭಾವನಾತ್ಮಕ ಮತ್ತು ಆಲೋಚನೆಯ ಎರಡು ವಿಭಿನ್ನ ಮಿದುಳುಗಳನ್ನು ಹೊಂದಿದ್ದೇವೆ ಎಂದು ಹೇಳಲಾಯಿತು, ಅದು ವಿಭಿನ್ನ ಸಂದರ್ಭಗಳಲ್ಲಿ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ನಮ್ಮ ಭಾವನಾತ್ಮಕ ಮೆದುಳು ಭಾವನಾತ್ಮಕ ಸಂದರ್ಭಗಳಲ್ಲಿ ಸ್ವಯಂಚಾಲಿತ ಮಾನಸಿಕ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ, ಇದರಿಂದಾಗಿ ರೋಮಾಂಚನ ಉಂಟಾಗುತ್ತೆ. ಅಂತೆಯೇ, ನೀವು ಭಾವನಾತ್ಮಕ ಹಾಡುಗಳನ್ನು ಕೇಳಿದಾಗ, ಸಹ ರೋಮಾಂಚನಗೊಳ್ಳುತ್ತೀತಿ.
ನೀವು ವಿಪರೀತ ಇಮೋಶನಲ್ ಆದಾಗ, ದೇಹವು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತದೆ. ಅದೇ ಸಮಯದಲ್ಲಿ, ಚರ್ಮದ ಕೆಳಗಿನ ಸ್ನಾಯುಗಳಲ್ಲಿ ಹೆಚ್ಚಿದ ವಿದ್ಯುತ್ ಸಂಚಾರ ಆದ ಅನುಭವ ಉಂಟಾದರೆ ಮತ್ತು ಹೆಚ್ಚಿದ ಉಸಿರಾಟ ಉಂಟಾದಾಗ ರೋಮಾಂಚನವಾಗುತ್ತೆ.
ನೀವು ಭಯಭೀತರಾದರೆ ಅಥವಾ ದುಃಖಿತರಾದರೂ ಗೂಸ್ ಬಂಪ್ಸ್ ಬರುತ್ತೆ. ಅದೇ ಸಮಯದಲ್ಲಿ, ನಾವು ಒಳ್ಳೆಯದನ್ನು ಅನುಭವಿಸಿದಾಗ ಅಥವಾ ಸಂತೋಷವಾಗಿದ್ದಾಗ, ಡೋಪಮೈನ್ ಬಿಡುಗಡೆಯಾಗುತ್ತೆ. ಇದು ಉತ್ತಮ ರೀತಿಯ ಹಾರ್ಮೋನ್ ಆಗಿದೆ, ಇದರಿಂದಾಗಿಯೂ ಗೂಸ್ ಬಂಪ್ಸ್ ಅನುಭವಿಸುತ್ತೇವೆ.
ಅಂದಹಾಗೆ, ಗೂಸ್ ಬಂಪ್ಸ್ ಯಾವುದೇ ನಿರ್ದಿಷ್ಟ ಸ್ಥಿತಿಯನ್ನು ಸೂಚಿಸುವುದಿಲ್ಲ. ಇದು ಭಾವನಾತ್ಮಕ ಪ್ರಚೋದನೆಯಿಂದ ಉಂಟಾಗುತ್ತದೆ. ಆದಾಗ್ಯೂ, ನೀವು ಆಗಾಗ್ಗೆ ಗೂಸ್ ಬಂಪ್ಸ್ ಅನುಭವಿಸುತ್ತಿದ್ದರೆ, ಅದು ವೈದ್ಯಕೀಯ ಸ್ಥಿತಿಯಿಂದಾಗಿರಬಹುದು - ಕೆರಾಟೋಸಿಸ್ ಪಿಲಾರಿಸ್, ಇದು ಚರ್ಮದ ಮೇಲೆ ದೀರ್ಘಕಾಲದ ಗೂಸ್ ಬಂಪ್ಸ್ ಉಂಟುಮಾಡುವ ಸ್ಥಿತಿ. ಕೆಲವೊಮ್ಮೆ ಇದು ನರಮಂಡಲದ ಮೇಲೆ ಪರಿಣಾಮ ಬೀರುವ ಕೆಲವು ರೀತಿಯ ಗಾಯದಿಂದ ಉಂಟಾಗಬಹುದು. ಇದಲ್ಲದೆ, ಅತಿಯಾದ ಶೀತ ಅಥವಾ ಇನ್ಫ್ಲುಯೆನ್ಸದಿಂದ (Influenza) ಉಂಟಾಗುವ ಜ್ವರದಲ್ಲಿ ರೋಗಿಯು ಗೂಸ್ ಬಂಪ್ಸ್ ಅನುಭವಿಸಬಹುದು.