ಪುರುಷರ ಸೆಕ್ಸ್ ಪವರ್ ಹೆಚ್ಚಿಸೋದು ಮಾತ್ರವಲ್ಲ…. ಈ ಔಷಧಿಯಿಂದ ತುಂಬಾ ಪ್ರಯೋಜನ ಇದೆ
ಶಿಲಾಜಿತ್ ಎಂದ ಕೂಡಲೇ ನೆನಪಾಗೋದು ಪುರುಷರ ಶಕ್ತಿ ವೃದ್ಧಿಸುವ ಒಂದು ಔಷಧ ಎಂದು. ಆದರೆ ನಿಮಗೆ ಗೊತ್ತೇ? ಶಿಲಾಜಿತ್ ಕೇವಲ ಪುರುಷರಿಗೆ ಮಾತ್ರವಲ್ಲ, ಇದರಿಂದ ಹಲವಾರು ಆರೋಗ್ಯ ಸಮಸ್ಯೆಗಳು ಸಹ ನಿವಾರಣೆಯಾಗುತ್ತವೆ. ಅವುಗಳ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು.
ಮನುಷ್ಯರ ಆರೋಗ್ಯದ ಮೇಲೆ ರಾಮಬಾಣದಂತೆ ಕೆಲಸ ಮಾಡುವ ಅನೇಕ ಔಷಧಿಗಳು ಭಾರತೀಯ ಖಜಾನೆಯಲ್ಲಿ ಕಂಡುಬರುತ್ತವೆ. ಹಿಮಾಲಯ ಮತ್ತು ಟಿಬೆಟ್ ನಂತಹ ಪರ್ವತ ಪ್ರದೇಶಗಳಲ್ಲಿ, ಶಿಲಾಜಿತ್ (shilajit) ಎಂಬ ಶಿಲೆಯಂತರ ವಸ್ತುಗಳು ಕಾಣ ಸಿಗುತ್ತದೆ. ಶಿಲಾಜಿತ್ ಅನ್ನು ಪುರುಷರು ಶಕ್ತಿಯನ್ನು ಹೆಚ್ಚಿಸಲು ಬಳಸುತ್ತಾರೆ, ಆದರೆ ಈ ಸಣ್ಣ ಅಂಟು ಪದಾರ್ಥವು ಪುರುಷರ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಇನ್ನೂ ಅನೇಕ ಪ್ರಯೋಜನಗಳನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಇಂದು ನಾವು ನಿಮಗೆ ಶಿಲಾಜಿತ್ ನ ಇತರ ಪ್ರಯೋಜನಗಳ ಬಗ್ಗೆ ಹೇಳೋಣ…
ಮನಸ್ಸನ್ನು ತೀಕ್ಷ್ಣಗೊಳಿಸುತ್ತೆ (sharp brain)
ಶಿಲಾಜಿತ್ ನಲ್ಲಿ 85 ಖನಿಜಗಳಿವೆ, ಇದು ಮಾನವನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ. ಇಷ್ಟೇ ಅಲ್ಲ, ಶಿಲಾಜಿತ್ ತಿನ್ನುವುದು ಮೆದುಳನ್ನು ತೀಕ್ಷ್ಣಗೊಳಿಸುತ್ತದೆ, ಏಕೆಂದರೆ ಇದು ಫುಲ್ವಿಕ್ ಆಸಿಡ್ ಹೊಂದಿರುತ್ತದೆ, ಇದು ಮೆದುಳನ್ನು ತೀಕ್ಷ್ಣಗೊಳಿಸಲು ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸಲು ಕೆಲಸ ಮಾಡುತ್ತದೆ.
ಕ್ಯಾನ್ಸರ್ ಅಪಾಯ ಕಡಿಮೆ ಮಾಡುತ್ತೆ
ಹೌದು, ಶಿಲಾಜಿತ್ ಕ್ಯಾನ್ಸರ್ ಕೋಶಗಳನ್ನು (cancer cell) ಕಡಿಮೆ ಮಾಡಲು ಕೆಲಸ ಮಾಡುವ ಅಂಶಗಳನ್ನು ಹೊಂದಿದೆ. ನಿಯಮಿತವಾಗಿ ಶಿಲಾಜಿತ್ ಬಳಸುವ ಜನರಿಗೆ ಪ್ರಾಸ್ಟೇಟ್ ಕ್ಯಾನ್ಸರ್ ಬರುವ ಸಾಧ್ಯತೆ ಕಡಿಮೆ. ಹಾಗಾಗಿ ಇದನ್ನು ವೈದ್ಯರ ಸಲಹೆಯ ಮೇರೆಗೆ ನೀವು ಸಹ ಬಳಸಬಹುದು.
ಮಧುಮೇಹಕ್ಕೆ ರಾಮಬಾಣ
ಇಂದಿನ ಯುಗದಲ್ಲಿ, ಬಹುತೇಕ ಪ್ರತಿಯೊಬ್ಬ ವ್ಯಕ್ತಿಯು ಮಧುಮೇಹದಿಂದ ಬಳಲುತ್ತಿದ್ದಾನೆ. ಅದಕ್ಕಾಗಿ ವಿವಿಧ ಔಷಧಿಗಳನ್ನು ಜನರು ಸೇವಿಸುತ್ತಾರೆ. ಆದರೆ ಈ ಪುಟ್ಟ ಶಿಲಾಜಿತ್ ನಿಮ್ಮ ಮಧುಮೇಹವನ್ನು ನಿಯಂತ್ರಿಸುವಲ್ಲಿ (diabetes control) ಪ್ರಯೋಜನಕಾರಿ. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವ ಮಧುಮೇಹ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ.
ಮುಟ್ಟಿನ ನೋವನ್ನು ಕಡಿಮೆ ಮಾಡುತ್ತೆ
ಶಿಲಾಜಿತ್ ಪುರುಷರ ಶಕ್ತಿಯನ್ನು ಹೆಚ್ಚಿಸಲು ಮಾತ್ರವಲ್ಲದೆ, ಮಹಿಳೆಯರಿಗೆ ತುಂಬಾ ಪ್ರಯೋಜನಕಾರಿ. ಸಾಮಾನ್ಯವಾಗಿ ಮಹಿಳೆಯರು ಋತುಸ್ರಾವದಲ್ಲಿ ಅನಿಯಮಿತ ಮತ್ತು ಅಸಹನೀಯ ನೋವನ್ನು (periods cramp) ಹೊಂದಿರುತ್ತಾರೆ. ಅಂತಹ ಪರಿಸ್ಥಿತಿಯಲ್ಲಿ, ಶಿಲಾಜಿತ್ ಬಳಸುವ ಮೂಲಕ ನೋವು ಮತ್ತು ಸೆಳೆತವನ್ನು ನಿವಾರಿಸಬಹುದು.
ತೂಕ ಇಳಿಕೆಯಲ್ಲಿ ಪ್ರಯೋಜನಕಾರಿ
ತೂಕ ಇಳಿಸಿಕೊಳ್ಳಲು (weight loss) ಅಗತ್ಯ ನೈಸರ್ಗಿಕ ಗುಣಲಕ್ಷಣಗಳನ್ನು ಶಿಲಾಜಿತ್ ಹೊಂದಿದೆ ಎಂದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಇದನ್ನು ಸೇವಿಸುವುದರಿಂದ, ಹೊಟ್ಟೆಯು ದೀರ್ಘಕಾಲದವರೆಗೆ ತುಂಬಿದ ಅನುಭವ ನೀಡುತ್ತದೆ ಮತ್ತು ಇದು ಕೊಬ್ಬನ್ನು ಕರಗಿಸಲು ಸಹ ಸಹಾಯ ಮಾಡುತ್ತದೆ.
ಕೂದಲಿನ ಬೆಳವಣಿಗೆಗೆ ರಾಮಬಾಣ
ಶಿಲಾಜಿತ್ ನಲ್ಲಿ ಸತು, ಗಂಧಕ, ಮೆಗ್ನೀಷಿಯಮ್ ಮತ್ತು ಫುಲ್ವಿಕ್ ಆಮ್ಲದಂತಹ ಅಂಶಗಳು ಕಂಡು ಬರುತ್ತವೆ, ಇದು ಕೂದಲನ್ನು ಬಲವಾಗಿಸುತ್ತದೆ ಜೊತೆ, ಹೊಳೆಯುವ, ಉದ್ದ ಮತ್ತು ದಟ್ಟವಾದ ಕೂದಲು ಪಡೆಯಲು (hair growth) ಸಹಾಯ ಮಾಡುತ್ತದೆ.
ಅಲ್ಝೈಮರ್ ನಲ್ಲಿ ಪ್ರಯೋಜನಕಾರಿ
ಅಲ್ಝೈಮರ್ ರೋಗವು (alzheimer) ಒಂದು ಮರೆವಿನ ರೋಗವಾಗಿದ್ದು, ಇದರಲ್ಲಿ ಒಬ್ಬ ವ್ಯಕ್ತಿಯು ಕ್ರಮೇಣ ತನ್ನ ಜ್ಞಾಪಕ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ ಮತ್ತು ಕೋಪಗೊಳ್ಳುತ್ತಾನೆ. ಶಿಲಾಜಿತ್ ಸೇವನೆಯು ಅಲ್ಝೈಮರ್ ಕಾಯಿಲೆಯನ್ನು ದೊಡ್ಡ ಪ್ರಮಾಣದಲ್ಲಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.