- Home
- Life
- Health
- 30ರ ನಂತರವೂ ಚರ್ಮದ ಕಾಂತಿ ಹೆಚ್ಚಿಸಲು ಸರಳ ಸಲಹೆಗಳು, ರಾತ್ರಿ ಮಲಗುವ ಮುನ್ನ ತಪ್ಪದೆ ಈ ಸ್ಟೆಪ್ ಪಾಲಿಸಿ
30ರ ನಂತರವೂ ಚರ್ಮದ ಕಾಂತಿ ಹೆಚ್ಚಿಸಲು ಸರಳ ಸಲಹೆಗಳು, ರಾತ್ರಿ ಮಲಗುವ ಮುನ್ನ ತಪ್ಪದೆ ಈ ಸ್ಟೆಪ್ ಪಾಲಿಸಿ
ಆಧುನಿಕ ಜೀವನಶೈಲಿಯಿಂದಾಗಿ 30 ವರ್ಷ ವಯಸ್ಸಿನ ನಂತರ ಚರ್ಮದ ಕಾಂತಿ ಕಡಿಮೆಯಾಗುವುದು ಸಾಮಾನ್ಯ. ಆದರೆ, ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳುವ ಮೂಲಕ ಚರ್ಮದ ಕಾಂತಿಯನ್ನು ಕಾಪಾಡಿಕೊಳ್ಳಬಹುದು. ರಾತ್ರಿಯ ಚರ್ಮದ ಆರೈಕೆಗಾಗಿ ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಆಧುನಿಕ ಜೀವನಶೈಲಿಯಿಂದಾಗಿ 30 ವರ್ಷ ಆದರೆ ಸಾಕು ಮುಖ ಕಲೆ ರಹಿತವಾಗಿ ಬದಲಾಗುತ್ತಿದೆ. ಸುಕ್ಕುಗಟ್ಟಿದ ಚರ್ಮ ಆರಂಭವಾಗಿ ಸೌಂದರ್ಯ ಕುಂದುತ್ತಾ ಹೋಗುತ್ತಿದೆ. ದೀರ್ಘಕಾಲದವರೆಗೆ ಸುಂದರವಾಗಿರಲು ಕಾಣಲು ನೀವು ಕೆಲವು ಅಭ್ಯಾಸಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಜ್ಞರು ಹೇಳುತ್ತಾರೆ. ಇದಕ್ಕಾಗಿ ರಾತ್ರಿಯ ಚರ್ಮದ ಆರೈಕೆ ಮುಖಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಅದಕ್ಕೆ ಏನು ಮಾಡಬೇಕು? ಇಲ್ಲಿ ಹಂತ ಹಂತವಾಗಿ ಯಾವ ಸಲಹೆಗಳನ್ನು ಅನುಸರಿಸಬೇಕೆಂದು ಮಾಹಿತಿ ನೀಡಲಾಗಿದೆ
ಚರ್ಮದ ಆರೈಕೆಗೆ
ರಾತ್ರಿ ಮಲಗುವ ಮುನ್ನ ಮುಖವನ್ನು ಚೆನ್ನಾಗಿ ತೊಳೆಯಬೇಕು. ಇದು ಮುಖದಿಂದ ಧೂಳು, ಕೊಳಕು ಮತ್ತು ಕಲ್ಮಶಗಳನ್ನು ತೆಗೆದು ಹಾಕುತ್ತದೆ. ಚರ್ಮದ ರಂಧ್ರಗಳಲ್ಲಿ ಸಂಗ್ರಹವಾಗಿರುವ ಹೆಚ್ಚುವರಿ ಜಿಡ್ಡಿನ ಅಂಶವನ್ನು ತೆಗೆದು ಹಾಕುತ್ತದೆ. ನಿಮ್ಮ ಮುಖವನ್ನು ಸ್ವಚ್ಛಗೊಳಿಸಲು ನಿಮ್ಮ ಚರ್ಮದ ಪ್ರಕಾರಕ್ಕೆ ಸೂಕ್ತವಾದ ಕ್ಲೆನ್ಸರ್ ಬಳಸಿ. ತಜ್ಞರೊಂದಿಗೆ ಸಮಾಲೋಚಿಸಿದ ನಂತರ ಕ್ಲೆನ್ಸರ್ ಆಯ್ಕೆ ಮಾಡುವುದು ಉತ್ತಮ.
ಹೊತ್ತೊತ್ತು ಚೆನ್ನಾಗಿ ತಿಂದ್ರು ಸುಸ್ತಾಗ್ತಿದ್ಯಾ?: ದೇಹದ ದಣಿವನ್ನು ನಿವಾರಿಸೋದು ಹೇಗೆ?
ಹೊಳೆಯುವ ಚರ್ಮಕ್ಕೆ
ನಿಮ್ಮ ಮುಖವನ್ನು ಕಾಂತಿಯುತವಾಗಿಡಲು, ನೀವು ಎಕ್ಸ್‌ಫೋಲಿಯೇಟ್ ಮಾಡಬೇಕಾಗುತ್ತದೆ. ಇದು ನಿಮ್ಮ ಮುಖದಿಂದ ಡ್ರೈ ಸ್ಕಿನ್ ತೆಗೆದು ಹಾಕಲು ಸಹಾಯ ಮಾಡುತ್ತದೆ. ನೀವು ಎಫ್ಫೋಲಿಯೇಟ್ ಮಾಡಿದಾಗ ನಿಮ್ಮ ಚರ್ಮವು ಹೊಳೆಯುತ್ತದೆ. ವಾರಕ್ಕೆ ಎರಡು ಬಾರಿ ಎಕ್ಸ್‌ಫೋಲಿಯೇಟ್ ಮಾಡುವುದರಿಂದ ನಿಮ್ಮ ಚರ್ಮ ಸುಂದರವಾಗಿರುತ್ತದೆ.
ಟೋನರ್‌ಗಳ ಬಳಕೆ
ಸ್ವಚ್ಛಗೊಳಿಸುವ ಮತ್ತು ಸ್ಕಿನ್ ತೆಗೆದ ನಂತರ ಟೋನರ್ ಬಳಸುವುದು ಬಹಳ ಮುಖ್ಯ. ಟೋನರ್ ನಿಮ್ಮ ಚರ್ಮದ ನೈಸರ್ಗಿಕ pH ಮಟ್ಟವನ್ನು ಕಾಪಾಡುತ್ತದೆ. ಟೋನರ್ ಚರ್ಮದ ಆರೋಗ್ಯವನ್ನು ಸುಧಾರಿಸುತ್ತದೆ.
ಸೀರಮ್ ಬಳಕೆ
ಚರ್ಮದ ಸಮಸ್ಯೆಗಳನ್ನು ತಡೆಗಟ್ಟಲು ಸೀರಮ್ ಬಳಸಬೇಕು. ಈ ಸೀರಮ್ ಸೂಕ್ಷ್ಮ ರೇಖೆಗಳು, ಸುಕ್ಕುಗಳು ಮತ್ತು ಅಸಮರ್ಪಕ ಚರ್ಮದ ಟೋನ್ ಸಮಸ್ಯೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ರೆಟಿನಾಲ್ ಅಥವಾ ವಿಟಮಿನ್ ಸಿ ನಂತಹ ಶಕ್ತಿಶಾಲಿ ಸೀರಮ್ ಬಳಸುವುದು ಉತ್ತಮ.
ಮಾಯಿಶ್ಚರೈಸರ್
ಚರ್ಮ ಒಣಗದಂತೆ ತಡೆಯಲು ಮತ್ತು ತಾಜಾವಾಗಿ ಕಾಣುವಂತೆ ಮಾಡಲು ಮಾಯಿಶ್ಚರೈಸರ್ ಬಳಸಬೇಕು. ಮಾಯಿಶ್ಚರೈಸರ್ ಹಚ್ಚುವುದರಿಂದ ಮುಖದಲ್ಲಿನ ಗೆರೆಗಳು ಮತ್ತು ಸುಕ್ಕುಗಳು ಕಡಿಮೆಯಾಗುತ್ತವೆ. ನೈಸರ್ಗಿಕ ಎಣ್ಣೆಗಳನ್ನು ಹೊಂದಿರುವ ಮಾಯಿಶ್ಚರೈಸರ್ ಬಳಸುವುದು ಚರ್ಮದ ಆರೋಗ್ಯಕ್ಕೆ ಒಳ್ಳೆಯದು.
ಗಮನಿಸಿ: ಈ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಏಷ್ಯಾನೆಟ್ ಸುವರ್ಣ ನ್ಯೂಸ್ ಇದನ್ನು ದೃಢೀಕರಿಸುತ್ತಿಲ್ಲ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.