ಮಳೆಗಾಲದಲ್ಲಿ ಹೆಸರುಬೇಳೆ ಸೂಪ್ ಸೇವಿಸಿದ್ರೆ ಆರೋಗ್ಯ ಸಮಸ್ಯೆಗೆ ಹೇಳಿ ಗುಡ್ ಬೈ
ಮಳೆಗಾಲದಲ್ಲಿ ರೋಗನಿರೋಧಕ ಶಕ್ತಿಯನ್ನು (Immunity Power) ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಏಕೆಂದರೆ ಈ ಋತುವಿನಲ್ಲಿ ಸೋಂಕಿನ (Infection) ಅಪಾಯ ತುಂಬಾ ಹೆಚ್ಚಾಗುತ್ತೆ. ಈ ಸಂದರ್ಭದಲ್ಲಿ ಹೆಸರು ಬೇಳೆ ಸೂಪ್ ಆರೋಗ್ಯಕ್ಕೆ ತುಂಬಾ ಪ್ರಯೋಜನ ನೀಡುತ್ತೆ. ಹೆಸರು ಬೇಳೆ ಸೂಪಿನಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳಿವೆ ನೋಡೋಣ.
ಹೆಸರು ಬೇಳೆ (moong dal) ಅತ್ಯಂತ ಜನಪ್ರಿಯ ಸಸ್ಯಾಹಾರಿ ಸೂಪರ್ ಫುಡ್‌ಗಳಲ್ಲೊಂದು. ಇದರ ಉತ್ತಮ ಗುಣಮಟ್ಟದ ಪ್ರೋಟೀನ್ ಮತ್ತು ಇತರೆ ಪೌಷ್ಠಿಕಾಂಶದ ಅಂಶದಿಂದ, ಹೆಸರು ಬೇಳೆಯನ್ನು ನಿಯಮಿತವಾಗಿ ಆಹಾರದಲ್ಲಿ ಸೇವಿಸಲು ಸಲಹೆ ನೀಡಲಾಗುತ್ತದೆ. ಇದರಲ್ಲಿರುವ ಪ್ರೋಟೀನ್ ಪದಾರ್ಥಗಳು ಅಂಗಾಂಶ, ಸ್ನಾಯುಗಳು, ಮೂಳೆ, ರಕ್ತ ಮತ್ತು ಚರ್ಮದ ರಚನೆ (Skin Formation) ಮತ್ತು ದುರಸ್ತಿಗೆ ಸಹಾಯ ಮಾಡುತ್ತದೆ. ಈ ಲೇಖನದಲ್ಲಿ, ಹೆಸರುಬೇಳೆಯನ್ನು ಆಹಾರದಲ್ಲಿ ಹೇಗೆ ಸೇರಿಸುವುದು ಮತ್ತು ಅದರ ಪ್ರಯೋಜನಗಳು ಯಾವುವು ಎಂಬುದನ್ನು ತಿಳಿಯೋಣ.
ಹೆಸರು ಬೇಳೆಯ ಪ್ರಯೋಜನಗಳು ಯಾವುವು?
ಆರೋಗ್ಯವಾಗಿರಲು, ಹೆಸರುಬೇಳೆಯನ್ನು ನಿಯಮಿತವಾಗಿ ಆಹಾರದಲ್ಲಿ ಸೇರಿಸಲು ಉತ್ತಮ ಮಾರ್ಗವೆಂದರೆ ಅದರ ಸೂಪ್ ತಯಾರಿಸುವುದು. ಆರೋಗ್ಯಕ್ಕೆ ಹೆಸರು ಬೇಳೆಯ ಪ್ರಯೋಜನಗಳನ್ನು (benefits of moong dal soup)ತಿಳಿದುಕೊಳ್ಳೋಣ.
ತೂಕ ನಷ್ಟಕ್ಕೆ ಪ್ರಯೋಜನಕಾರಿ
ಹೆಸರು ಬೇಳೆ ಕೋಲಿಸಿಸ್ಟೊಕಿನಿನ್ ಹಾರ್ಮೋನ್ ನ ಕಾರ್ಯನಿರ್ವಹಣೆಯನ್ನು ಹೆಚ್ಚಿಸುತ್ತದೆ. ಇದು ತಿಂದ ನಂತರ ಹೊಟ್ಟೆ ತುಂಬಿದ ಅನುಭವ ನೀಡುತ್ತದೆ. ಚಯಾಪಚಯ ಕ್ರಿಯೆನ್ನು ಉತ್ತಮಗೊಳಿಸುತ್ತದೆ. ಈ ರೀತಿಯಾಗಿ, ಅತಿಯಾಗಿ ತಿನ್ನುವ ಅಭ್ಯಾಸವನ್ನು ತಡೆಯುವ ಮೂಲಕ ತೂಕ ನಿಯಂತ್ರಿಸಲು ಇದು ಸಹಾಯ ಮಾಡುತ್ತದೆ.
ಹೃದಯದ ಆರೋಗ್ಯವನ್ನು ಸುಧಾರಿಸುತ್ತೆ
ಈ ಹಳದಿ ಬೇಳೆಯಲ್ಲಿ ಪೊಟ್ಯಾಷಿಯಮ್ ಮತ್ತು ಕಬ್ಬಿಣ ಸಮೃದ್ಧವಾಗಿದೆ. ಇದಲ್ಲದೆ, ಇದು ರಕ್ತದೊತ್ತಡವನ್ನು (blood pressure) ಕಡಿಮೆ ಮಾಡುತ್ತದೆ. ಸ್ನಾಯು ಸೆಳೆತವನ್ನು ತಡೆಯುತ್ತದೆ. ಇದು ಅನಿಯಮಿತ ಹೃದಯ ಬಡಿತವನ್ನೂ ನಿಯಂತ್ರಿಸುತ್ತದೆ. ಹೆಸರು ಬೇಳೆ ತುಂಬಾನೆ ಲೈಟ್ ಆಗಿರುತ್ತೆ ಮತ್ತು ಬೇಗನೆ ಜೀರ್ಣವಾಗುತ್ತೆ. ಅಧಿಕ ರಕ್ತದೊತ್ತಡ ಅಥವಾ ಹೃದ್ರೋಗದಿಂದ ಬಳಲುತ್ತಿರುವ ಜನರಿಗೆ ಇದು ಉತ್ತಮ ಆಹಾರವಾಗಿದೆ.
ಪೌಷ್ಠಿಕಾಂಶದ ಪದಾರ್ಥಗಳಿಂದ ಸಮೃದ್ಧ
ಹೆಸರು ಬೇಳೆಯಲ್ಲಿ ಪೋಷಕಾಂಶಗಳು ಸಮೃದ್ಧವಾಗಿವೆ. ಇದು ಪೊಟ್ಯಾಸಿಯಮ್, ಮೆಗ್ನೀಸಿಯಮ್, ಕಬ್ಬಿಣ ಮತ್ತು ತಾಮ್ರದಂತಹ ಖನಿಜಗಳಿಂದ ಸಮೃದ್ಧವಾಗಿದೆ. ಇದಲ್ಲದೆ, ಇದು ಫೋಲೇಟ್, ಫೈಬರ್ ಮತ್ತು ವಿಟಮಿನ್ ಬಿ6 ಅನ್ನು ಸಹ ಹೊಂದಿದೆ. ಬಿ-ಕಾಂಪ್ಲೆಕ್ಸ್ ಜೀವಸತ್ವಗಳಿಂದ ಸಮೃದ್ಧವಾಗಿರುವ ಈ ಹಳದಿ ಬೇಳೆ ಕಾರ್ಬೋಹೈಡ್ರೇಟ್‌ಗಳನ್ನು ಗ್ಲೂಕೋಸ್ ಆಗಿ ವಿಭಜಿಸಲು ಮತ್ತು ದೇಹಕ್ಕೆ ಉಪಯುಕ್ತ ಶಕ್ತಿಯನ್ನು ಉತ್ಪಾದಿಸಲು ಸಹಾಯ ಮಾಡುತ್ತದೆ. ಇದರಲ್ಲಿರುವ ಫೋಲಿಕ್ ಆಮ್ಲ ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಡಿಎನ್ಎ ರಚನೆಗೆ ಸಹಾಯ ಮಾಡುತ್ತದೆ.
ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿ
ಹೆಸರು ಬೇಳೆ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕವನ್ನು ಹೊಂದಿದೆ. ಪರಿಣಾಮವಾಗಿ, ಇದು ದೇಹದ ಇನ್ಸುಲಿನ್ (body insulin), ರಕ್ತದಲ್ಲಿನ ಗ್ಲೂಕೋಸ್ ಮತ್ತು ಕೊಬ್ಬಿನ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಮತ್ತು ಮಧುಮೇಹದ ಅಪಾಯ ಕಡಿಮೆ ಮಾಡುತ್ತದೆ.
ಜೀರ್ಣಕ್ರಿಯೆ ಸುಧಾರಿಸುತ್ತೆ
ಹಳದಿ ಬೇಳೆ-ಕಾಳುಗಳಲ್ಲಿ ಬ್ಯೂಟಿರೇಟ್ ಸಮೃದ್ಧವಾಗಿದೆ, ಇದು ಕರುಳಿನ ಗೋಡೆಗಳ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಉರಿಯೂತದ ಗುಣಲಕ್ಷಣಗಳನ್ನು ಹೊಂದಿದೆ, ಜೊತೆಗೆ ಯಾಸ್ ಸಂಗ್ರಹವಾಗುವುದನ್ನು ತಡೆಯುತ್ತದೆ. ಈ ಹಳದಿ ಬೇಳೆ ಜೀರ್ಣಿಸಿಕೊಳ್ಳಲು (easy digestion) ಸುಲಭ, ಇದು ದೇಹವನ್ನು ಆರೋಗ್ಯವಾಗಿಡಲು ಪ್ರಯೋಜನಕಾರಿ.
ಹೆಸರು ಬೇಳೆ ಸೂಪ್ ತಯಾರಿಸುವುದು ಹೇಗೆ?
ಬೇಕಾಗುವ ಸಾಮಾಗ್ರಿಗಳು
ಹೆಸರುಬೇಳೆ - 100 ಗ್ರಾಂ
ಈರುಳ್ಳಿ - 60 ಗ್ರಾಂ
ಎಣ್ಣೆ - 1 ಚಮಚ
ಉಪ್ಪು - 1 ಟೀ ಚಮಚ
ಹೆಸರು ಬೇಳೆ ಸೂಪ್ ತಯಾರಿಸುವುದು ಹೇಗೆ?
ಹೆಸರುಕಾಳುಗಳನ್ನು ಕುಕ್ಕರ್ ನಲ್ಲಿ ಕಡಿಮೆ ಉರಿಯಲ್ಲಿ ಕುದಿಸಿ.
ಬೇಳೆಕಾಳುಗಳನ್ನು ಬೇಯಿಸಲು ನೀವು 500 ಮಿಲಿ ನೀರನ್ನು ಸೇರಿಸಬೇಕಾಗಬಹುದು.
ಎಣ್ಣೆಯನ್ನು ಬಿಸಿ ಮಾಡಿ ಮತ್ತು ಕತ್ತರಿಸಿದ ಈರುಳ್ಳಿ, ಸಾಸಿವೆ ಮತ್ತು ಮೆಣಸಿನಕಾಯಿಯನ್ನು ಸೇರಿಸಿ
ಕೆಲವು ನಿಮಿಷಗಳ ನಂತರ, ಬೇಯಿಸಿದ ಬೇಳೆಕಾಳುಗಳು ಮತ್ತು ಉಪ್ಪನ್ನು ಸೇರಿಸಿ
ಕೆಲವು ನಿಮಿಷಗಳ ಕಾಲ ಕುದಿಯಲು ಬಿಡಿ, ನಂತರ ಬಡಿಸಿ.