ಪುರುಷರ ಬಂಜೆತನ…. ಲಕ್ಷಣ ತಿಳಿದುಕೊಂಡ್ರೆ, ಪರಿಹಾರ ಸುಲಭ
ಬಂಜೆತನ ಅಥವಾ ಇನ್ ಫರ್ಟಿಲಿಟಿ ಸಮಸ್ಯೆ ಪುರುಷರು ಮತ್ತು ಮಹಿಳೆಯರ ಮೇಲೆ ಪರಿಣಾಮ ಬೀರುವ ಸಮಸ್ಯೆ. ದಂಪತಿಗಳು ಪೋಷಕರಾಗುವ ಹಾದಿಯಲ್ಲಿ ಇದು ದೊಡ್ಡ ಅಡಚಣೆ. ಈ ಸಮಸ್ಯೆಗಳ ಬಗ್ಗೆ ತಜ್ಞರು ಏನು ಹೇಳುತ್ತಾರೆ. ಪುರುಷರ ಬಂಜೆತನದ ಲಕ್ಷಣಗಳೇನು ಎನ್ನುವ ಬಗ್ಗೆ ತಿಳಿಯೋಣ.
ಬಂಜೆತನವು (Infertility) ಸಂತಾನೋತ್ಪತ್ತಿ ವ್ಯವಸ್ಥೆಯ ಒಂದು ಸಮಸ್ಯೆ. ಇದು ಮಹಿಳೆಯನ್ನು ಗರ್ಭಿಣಿಯಾಗದಂತೆ ತಡೆಯುತ್ತದೆ. ಇಂದು, ಏಳು ದಂಪತಿಗಳಲ್ಲಿ ಒಬ್ಬರು ಬಂಜೆತನದ ಸಮಸ್ಯೆಗಳನ್ನು ಹೊಂದಿದ್ದಾರೆ. ಅಂದರೆ ಅವರು ಕಳೆದ 6 ತಿಂಗಳು ಅಥವಾ ಒಂದು ವರ್ಷದಲ್ಲಿ ಗರ್ಭಧರಿಸಲು ಪ್ರಯತ್ನಿಸುವಲ್ಲಿ ಯಶಸ್ವಿಯಾಗಿಲ್ಲ. ಈ ಪ್ರಕರಣಗಳಲ್ಲಿ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಪುರುಷ ಬಂಜೆತನವು ಪ್ರಮುಖ ಪಾತ್ರ ವಹಿಸುತ್ತದೆ. ತಜ್ಞರು ಈ ಸಮಸ್ಯೆ ಬಗ್ಗೆ ಏನೆನ್ನುತ್ತಾರೆ ಅನ್ನೋದನ್ನು ತಿಳಿಯೋಣ.
ಪುರುಷ ಬಂಜೆತನದ(Male infertlity) ಲಕ್ಷಣಗಳು ಯಾವುವು?
ಬಂಜೆತನವು ಸ್ವತಃ ಒಂದು ಲಕ್ಷಣ. ಆದಾಗ್ಯೂ, ಗರ್ಭಧರಿಸಲು ಪ್ರಯತ್ನಿಸುವ ದಂಪತಿಗಳ ಮಾನಸಿಕ ಮತ್ತು ಭಾವನಾತ್ಮಕ ನಕಾರಾತ್ಮಕ ಪರಿಣಾಮಗಳನ್ನು ವಿವರಿಸುವುದು ಕಷ್ಟ. ಅನೇಕ ಬಾರಿ, ಮಗುವನ್ನು ಹೊಂದುವುದು ಅವರ ಜೀವನದ ಏಕೈಕ ಗುರಿಯಾಗಿರುತ್ತದೆ. ಅವರು ಇತರ ವಿಷಯಗಳ ಕಡೆಗೆ ಗಮನ ಹರಿಸೋದಿಲ್ಲ.
ಆದರೆ ನಿಮಗೆ ಗೊತ್ತಾ? ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಆರೋಗ್ಯದಿಂದ ಇದ್ದರೆ ಮಾತ್ರ ಗರ್ಭ ಧರಿಸಲು ಸಾಧ್ಯವಾಗುತ್ತದೆ. ಖಿನ್ನತೆ (Depression), ನಷ್ಟ, ದುಃಖ, ಅಸಮರ್ಥತೆ ಮತ್ತು ವೈಫಲ್ಯವು ಮಕ್ಕಳನ್ನು ಹೊಂದಲು ಬಯಸುವ ಪುರುಷರು ಮತ್ತು ಮಹಿಳೆಯರಲ್ಲಿ ಸಾಮಾನ್ಯವಾಗಿದೆ. ಇದು ಗರ್ಭಧಾರಣೆ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತೆ.
ಈ ಮೇಲೆ ತಿಳಿಸಿದ ಸಮಸ್ಯೆ ಅಥವಾ ಅಂತಹ ಯಾವುದೇ ಭಾವನೆಯನ್ನು ಅನುಭವಿಸುತ್ತಿರುವ ದಂಪತಿ ಚಿಕಿತ್ಸಕರು ಅಥವಾ ಮನೋವೈದ್ಯರಂತಹ ವೈದ್ಯರಿಂದ (Doctor) ಸಹಾಯ ಪಡೆಯಬೇಕು, ಇದರಿಂದ ಅವರು ಜೀವನದ ಈ ಕಠಿಣ ಹಂತವನ್ನು ಜಯಿಸಬಹುದು, ಉತ್ತಮ ಪರಿಹಾರವನ್ನು ಸಹ ಪಡೆದುಕೊಳ್ಳಬಹುದು.
ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ, ಆನುವಂಶಿಕ ಅಸ್ವಸ್ಥತೆ, ಹಾರ್ಮೋನುಗಳ ಅಸಮತೋಲನ, ವೃಷಣಗಳ ಸುತ್ತಲೂ ನರಗಳನ್ನು ಹರಡುವುದು, ಅಥವಾ ವೀರ್ಯಾಣುವಿನ (Sperm) ಚಲನೆಯನ್ನು ನಿಲ್ಲಿಸುವ ಸಮಸ್ಯೆಯಂತಹ ಮೊದಲೇ ಅಸ್ತಿತ್ವದಲ್ಲಿರುವ ಸಮಸ್ಯೆಯಿದ್ದರೆ, ಅದರ ಚಿಹ್ನೆಗಳು ಮತ್ತು ರೋಗಲಕ್ಷಣಗಳು ಈ ಕೆಳಗಿನಂತಿರಬಹುದು:
ಲೈಂಗಿಕ ಬಯಕೆ ಕಡಿಮೆಯಾಗುವುದು ಅಥವಾ ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಯನ್ನು ನಿರ್ವಹಿಸುವಲ್ಲಿ ಸಮಸ್ಯೆಗಳು, ಇದರಿಂದ ಸೆಕ್ಸ್ (Sex) ಮಾಡುವಲ್ಲಿ ಸಮಸ್ಯೆಗಳು ಉಂಟಾಗುತ್ತವೆ. ವೃಷಣಗಳಲ್ಲಿ ನೋವು, ಊತ ಅಥವಾ ಗಡ್ಡೆಗಳು ಕಾಣಿಸಿಕೊಂಡಿದ್ದರೂ ಸಹ ಬಂಜೆತನ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ನಿರಂತರ ಉಸಿರಾಟದ ಸೋಂಕುಗಳು (Breathing infection) ಕಾಣಿಸಿಕೊಳ್ಳುವುದು ಸಹ ಒಳ್ಳೆಯದಲ್ಲ
ಪರಿಮಳ ಬಾರದೇ ಇರುವುದು ಸಹ ಬಂಜೆತನ ಸಮಸ್ಯೆಯ ಲಕ್ಷಣ.
ದೇಹದ ಕೂದಲು ಅಥವಾ ಮುಖದ ಕೂದಲು ಉದುರುವಿಕೆ, ಹಾಗೆಯೇ ಕ್ರೋಮೋಸೋಮ್ ಅಥವಾ ಹಾರ್ಮೋನ್ ಅಸಹಜತೆಗಳು
ಸಾಮಾನ್ಯಕ್ಕಿಂತ ಕಡಿಮೆ ವೀರ್ಯಾಣುಗಳ ಸಂಖ್ಯೆ ಇರುವುದೂ ಸಹ ಬಂಜೆತನಕ್ಕೆ ಕಾರಣವಾಗುತ್ತದೆ.