ರಾತ್ರಿ ತಡವಾಗಿ ಊಟ ಮಾಡುತ್ತೀರಾ? ಹಾಗಾದ್ರೆ ಆರೋಗ್ಯ ಜೋಪಾನ
First Published Dec 26, 2020, 5:34 PM IST
ಆರೋಗ್ಯಕರ ಮತ್ತು ಸದೃಢ ದೇಹಕ್ಕೆ ನೀವು ಗಮನಿಸಬೇಕಾದ ಅತ್ಯಂತ ಪ್ರಮುಖ ವಿಷಯವೆಂದರೆ ಆಹಾರ ಸೇವನೆಗೆ ಸರಿಯಾದ ಸಮಯ. ಸರಿಯಾದ ಸಮಯದಲ್ಲಿ ಸರಿಯಾದ ಆಹಾರ ಸೇವಿಸಿದರೆ ಹಲವಾರು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗಬಹುದು. ಅದರಲ್ಲೂ ಬೆಳಗಿನ ಉಪಾಹಾರವು ಅತ್ಯಂತ ಪ್ರಮುಖವಾದುದು. ಬೆಳಿಗ್ಗೆಯ ಉಪಹಾರ ಇದು ಪೌಷ್ಟಿಕಾಂಶಯುಕ್ತವಾಗಿರಬೇಕು. ಆದರೆ ರಾತ್ರಿ ಊಟ ಹಗುರವಾಗಿರಬೇಕು, ಇದರಿಂದ ನಿಮ್ಮ ಜೀರ್ಣಕ್ರಿಯೆ ಸಕ್ರಿಯವಾಗಿರುತ್ತದೆ.

ಒಂದು ವೇಳೆ ನಿಮಗೆ ರಾತ್ರಿ ತಡವಾಗಿ ಊಟ ಮಾಡುವ ಅಭ್ಯಾಸ ಇದ್ದರೆ, ಈಗಲೇ ಬದಲಾಯಿಸಿ. ಯಾಕೆಂದರೆ ರಾತ್ರಿ ಊಟ ಮಾಡುವುದು ತಡವಾದಷ್ಟು ಆರೋಗ್ಯದ ಮೇಲೆ ಹೆಚ್ಚಿನ ಪರಿಣಾಮ ಬೀರುತ್ತದೆ. ಜೀರ್ಣಕ್ರಿಯೆ ಸಮತೋಲನ ತಪ್ಪುತ್ತದೆ. ಇದರಿಂದ ಏನೆಲ್ಲಾ ತೊಂದರೆಗಳಿವೆ ಗಮನಿಸೋಣ...

ಹೌದು, ಇಂಟರ್ ನ್ಯಾಷನಲ್ ಜರ್ನಲ್ ಆಫ್ ಕ್ಯಾನ್ಸರ್ ನಲ್ಲಿ ಪ್ರಕಟವಾದ ವರದಿಯ ಪ್ರಕಾರ, ತಡರಾತ್ರಿ ಊಟ ಮಾಡುವವರಲ್ಲಿ ಸ್ತನ ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನ ಅಪಾಯವು ಹೆಚ್ಚಾಗುತ್ತದೆ. ಈ ಸಂಶೋಧನೆಯಲ್ಲಿ, ಆಹಾರ ಮತ್ತು ಕುಡಿಯುವ ಅಭ್ಯಾಸಗಳ ಬಗ್ಗೆ, ಜನರು ನಿದ್ರೆ ಮತ್ತು ತಿನ್ನುವ ಸಮಯದ ಬಗ್ಗೆ ಪ್ರಶ್ನಿಸಲಾಗಿತ್ತು.