MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Toxic OTT Release Date
ICC Test Rankings
Mekedatu Project
Nepal-tibet Floods
New Financial Rules September
Bengaluru Airport Gold Smuggling
Bengaluru Development Authority
Mangaluru Railway station
CJ Roy Death Case
Hosapete to Arasikere Train
  • Home
  • Life
  • Health
  • ನೋಡಿ… ಇದೇ ಕಾರಣಕ್ಕೆ ಕೂದಲು ಬಿಳಿಯಾಗುತ್ತೆ! ಮತ್ತೆ ಕಪ್ಪಾಗಲು ಇದಿಷ್ಟು ಮಾಡಿ

ನೋಡಿ… ಇದೇ ಕಾರಣಕ್ಕೆ ಕೂದಲು ಬಿಳಿಯಾಗುತ್ತೆ! ಮತ್ತೆ ಕಪ್ಪಾಗಲು ಇದಿಷ್ಟು ಮಾಡಿ

ವೃದ್ಧಾಪ್ಯ ಬರೋದಕ್ಕೂ ಮುನ್ನ ನಿಮ್ಮ ಕೂದಲು ಬಿಳಿಯಾಗಿತ್ತಿದ್ಯಾ? ಇದಕ್ಕೆ ಕಾರಣ ಏನು ಗೊತ್ತಾ? ವಿಟಮಿನ್ ಗಳ ಕೊರತೆ. ಹಾಗಿದ್ರೆ ಬನ್ನಿ ಯಾವ ವಿಟಮಿನ್ ಕೊರತೆಯಿಂದ ಕೂದಲು ಬಿಳಿಯಾಗುತ್ತೆ ನೋಡೋಣ.  

2 Min read
Author : Pavna Das
| Updated : Feb 04 2025, 10:26 AM IST
Share this Photo Gallery
  • FB
  • TW
  • Linkdin
  • Whatsapp
17

ಕೂದಲು ಬಿಳಿಯಾಗುವುದು (gray hair)ವಯಸ್ಸಾಗುವಿಕೆಗೆ ಸಂಬಂಧಿಸಿದ ಸಾಮಾನ್ಯ ಪ್ರಕ್ರಿಯೆ. ಆದರೆ ಇತ್ತೀಚಿನ ದಿನಗಳಲ್ಲಿ ಕಡಿಮೆ ವಯಸ್ಸಿನಲ್ಲಿ ಕೂಡ ಕೂದಲು ಬಿಳಿಯಾಗೋದು ತುಂಬಾನೆ ಸಾಮಾನ್ಯ ಆಗಿಬಿಟ್ಟಿದೆ. 30ನೇ ವಯಸ್ಸಿಗೆ ಮುನ್ನವೇ ಜನರಿಗೆ ಬಿಳಿ ಕೂದಲಿನ ಸಮಸ್ಯೆ ಉಂಟಾಗುತ್ತಿದೆ. ಇದಕ್ಕೆ ಹಲವಾರು ಕಾರಣಗಳಿರಬಹುದು, ಅವುಗಳಲ್ಲಿ ಒಂದು ಶರೀರದಲ್ಲಿ ಕೆಲವು ವಿಶೇಷ ವಿಟಮಿನ್ಸ್ ಕೊರತೆಯಾಗೋದು. ಬಿಳಿ ಕೂದಲು ಉಂಟಾಗಲು ಕಾರಣವಾದ ಆ ವಿಟಮಿನ್ಸ್  (vitamin) ಯಾವುವು ಮತ್ತು ಇದನ್ನು ಹೇಗೆ ನಿವಾರಿಸಬಹುದು ಅನ್ನೋದನ್ನು ನೋಡೋಣ.
 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27

ಯಾವ ವಿಟಾಮಿನ್‌ಗಳ ಕೊರತೆಯಿಂದ ಬಿಳಿ ಕೂದಲಿನ ಸಮಸ್ಯೆ ಕಾಡುತ್ತೆ ನೋಡಿ

ವಿಟಮಿನ್ ಬಿ12 (Vitamin B12)
ವಿಟಾಮಿನ್ ಬಿ12 ಶರೀರದಲ್ಲಿ ರಕ್ತಕೋಶಗಳ ನಿರ್ಮಾಣ ಮತ್ತು ಅದರ ಸರಿಯಾದ ಸಂಚಾರಕ್ಕೆ ಅಗತ್ಯವಿರುವ ಪ್ರಮುಖ ವಿಟಮಿನ್ ಆಗಿದೆ. ಇದರ ಕೊರತೆಯಿಂದ ಅನಿಮಿಯಾ ಉಂಟಾಗಬಹುದು, ಇದರ ಕೊರತೆ ಕೂದಲು ಬಿಳಿಯಾಗಲು ಸಹ ಕಾರಣವಾಗುತ್ತದೆ. ಈ ಸಮಸ್ಯೆ ಇದ್ದಲ್ಲಿ ರಕ್ತವು ಸಾಕಷ್ಟು ಪ್ರಮಾಣದಲ್ಲಿ ತಲೆಗೆ ತಲುಪುವುದಿಲ್ಲ, ಇದರಿಂದ ಕೂದಲು ಬಿಳಿಯಾಗುತ್ತೆ. ವಿಟಮಿನ್ ಬಿ12 ಕೊರತೆಯನ್ನು ನಿವಾರಿಸಲು ಮಾಂಸ, ಮೀನು, ಮೊಟ್ಟೆ ಮತ್ತು ಹಾಲಿನ ಉತ್ಪನ್ನಗಳನ್ನು ಹೆಚ್ಚಾಗಿ ಸೇವಿಸಬೇಕು.
 

37

ವಿಟಮಿನ್ ಡಿ (Vitamin D)
ವಿಟಮಿನ್ ಡಿ ನಮ್ಮ ಶರೀರಕ್ಕೆ ಬಹಳ ಅಗತ್ಯವಾಗಿರೋ ಅಂಶ. ಇದು ಮೂಳೆಗಳನ್ನು ಬಲಿಷ್ಠಗೊಳಿಸುವುದರೊಂದಿಗೆ ಕೂದಲಿನ ಆರೋಗ್ಯಕ್ಕೂ ಸಹ ಅಗತ್ಯವಾಗಿದೆ. ವಿಟಮಿನ್ ಡಿ ಕೊರತೆಯಿಂದ ಕೂದಲು ಉದುರುವುದು ಮತ್ತು ಬಿಳಿಯಾಗುತ್ತೆ. ಶರೀರದಲ್ಲಿ ವಿಟಮಿನ್ ಡಿ ಕೊರತೆಯನ್ನು ಪೂರೈಸಲು ಸೂರ್ಯನ ಬೆಳಕಿನಲ್ಲಿ ಕುಳಿತುಕೊಳ್ಳಬೇಕು ಮತ್ತು ಹಾಲು ಹಾಗೂ ಹಾಲಿನ ಉತ್ಪನ್ನಗಳನ್ನು ಸೇವಿಸಬೇಕು.

47

ವಿಟಮಿನ್ ಇ (Vitamin E)
ವಿಟಮಿನ್ ಇ ಒಂದು ಆಂಟಿ ಆಕ್ಸಿಡೆಂಟ್ ಆಗಿದ್ದು, ಕೂದಲನ್ನು ಹಾನಿಯಿಂದ ರಕ್ಷಿಸುತ್ತದೆ. ಇದರ ಕೊರತೆಯಿಂದ ಕೂದಲು ದುರ್ಬಲವಾಗಿ ಮುರಿಯಲು ಆರಂಭಿಸುತ್ತವೆ ಮತ್ತು ಬಿಳಿಯಾಗುತ್ತವೆ. ವಿಟಮಿನ್ ಇ ಯ ಕೊರತೆಯನ್ನು ನಿವಾರಿಸಲು ಬಾದಾಮಿ, ಅಖರೋಟ್ ಮತ್ತು ಸೂರ್ಯಕಾಂತಿಯ ಎಣ್ಣೆ ಬಳಸಬೇಕು.

57

ವಿಟಮಿನ್ ಎ (Vitamin A)
ವಿಟಮಿನ್ ಎ ಕೂದಲಿನ ಬೆಳವಣಿಗೆಗೆ ಅಗತ್ಯವಾಗಿದೆ. ಇದರ ಕೊರತೆಯಿಂದ ಕೂದಲು ಉದುರೋದಕ್ಕೆ ಮತ್ತು ಬಿಳಿಯಾಗಲು ಆರಂಭಿಸುತ್ತವೆ. ವಿಟಮಿನ್ ಎ ಯ ಕೊರತೆಯನ್ನು ನಿವಾರಿಸಲು ಕ್ಯಾರೆಟ್, ಪಾಲಕ್ ಮತ್ತು ಗೆಣಸು ಸೇವಿಸಬೇಕು.

67

ನಿಮ್ಮ ಶರೀರದಲ್ಲಿ ಈ ಎಲ್ಲಾ ವಿಟಮಿನ್ಸ್‌ಗಳ ಪ್ರಮಾಣ ಸಮೃದ್ಧವಾಗಿದ್ದರೆ, ನೀವು ಬಿಳಿ ಕೂದಲಿನೊಂದಿಗೆ ಇತರ ಸಮಸ್ಯೆಗಳಿಂದಲೂ ಕೂಡ ಮುಕ್ತಿ ಪಡೆಯಬಹುದು. ಇದರಿಂದ ನಿಮ್ಮ ಕೂದಲು ಕಪ್ಪಾಗುತ್ತೆ, ಕೂದಲು ದಟ್ಟವಾಗಿ ಬೆಳೆಯುತ್ತೆ, ಹೊಳೆಯುವ ಕೂದಲು ನಿಮ್ಮದಾಗುತ್ತೆ, ಜೊತೆಗೆ ಕೂದಲು ಉದ್ದವಾಗಿಯೂ ಬೆಳೆಯುತ್ತೆ. 

77

ಕೂದಲು ಬಿಳಿಯಾಗೋದರಿಂದ ರಕ್ಷಿಸಿಕೊಳ್ಳಲು ಬೇರೆ ಏನೇನು ಮಾಡಬಹುದು? 

ಸಮತೋಲಿತ ಆಹಾರ ತೆಗೆದುಕೊಳ್ಳಿ (Balanced food): ನಿಮ್ಮ ಆಹಾರದಲ್ಲಿ ಎಲ್ಲಾ ಅಗತ್ಯವಾದ ವಿಟಮಿನ್ಸ್ ಮತ್ತು ಖನಿಜಗಳನ್ನು ಸೇರಿಸಿ.
ಟೆನ್ಶನ್ ಕಡಿಮೆ ಮಾಡಿ: ಟೆನ್ಶನ್, ಆತಂಕ, ಆಲೋಚನೆಗಳಿಂದ ಕೂದಲು ಹೆಚ್ಚು ಬಿಳಿಯಾಗುತ್ತದೆ.  ಹಾಗಾಗಿ ನಿಮ್ಮ ಆತಂಕವನ್ನು ನಿವಾರಣೆ ಮಾಡಲು ಧ್ಯಾನ ಮಾಡಿ. 
ಧೂಮಪಾನ ಮಾಡಬೇಡಿ (quit smoking): ಧೂಮಪಾನ ಕೂದಲಿನ ಆರೋಗ್ಯಕ್ಕೆ ಹಾನಿಕಾರಕವಾಗಿದೆ.
ಚೆನ್ನಾಗಿ ನಿದ್ರೆ ಮಾಡಿ : ಪ್ರತಿದಿನವೂ 7-8 ಗಂಟೆಗಳ ನಿದ್ರೆಯನ್ನು ಪಡೆಯಿರಿ.
ಕೂದಲಿನ ಆರೈಕೆ ಮಾಡಿ (hair care): ಕೂದಲನ್ನು ನಿಯಮಿತವಾಗಿ ತೊಳೆಯಿರಿ ಮತ್ತು ಕಂಡೀಷನರ್ ಹಚ್ಚೋದನ್ನು ಮರಿಬೇಡಿ. 
 

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.

Latest Videos
Recommended Stories
Recommended image1
ರೆಬೀಸ್‌ನ ಲಾಸ್ಟ್ ಸ್ಟೇಜ್‌ ಗೆದ್ದು ಮನೆಗೆ ಬಂದ ಬಾಲಕ.. ಇದು ಹೇಗೆ ಸಾಧ್ಯ? ವೈದ್ಯರಿಂದ ಅಚ್ಚರಿ ಉತ್ತರ
Recommended image2
ಅಮಿತಾಬ್ ಬಚ್ಚನ್ ಅನ್ನ ತಿನ್ನೋದನ್ನೇ ಬಿಟ್ಟರು.. ವಯಸ್ಸಾದ ಮೇಲೆ ಅನ್ನ ಬಿಡೋದು ಒಳ್ಳೇದಾ? ತಜ್ಞರ ಉತ್ತರ ಇಲ್ಲಿದೆ
Recommended image3
Gardening Tips: ಮನೆಯಲ್ಲೇ ಅಲೋವೆರಾ ಬೆಳೆಸಿ, ಈ 5 ಅದ್ಭುತ ಪ್ರಯೋಜನಗಳನ್ನು ಪಡೆಯಿರಿ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved