MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಕ್ಯಾಪ್ಸಿಕಂ ಮಾಡೋವಾಗ ಬೀಜ ಎಸೆಯುತ್ತೀರಾ? ಈ ತಪ್ಪು ಮಾಡ್ಬೇಡಿ…

ಕ್ಯಾಪ್ಸಿಕಂ ಮಾಡೋವಾಗ ಬೀಜ ಎಸೆಯುತ್ತೀರಾ? ಈ ತಪ್ಪು ಮಾಡ್ಬೇಡಿ…

ಹೆಚ್ಚಿನ ಎಲ್ಲಾ ಜನರಿಗೂ ಕ್ಯಾಪ್ಸಿಕಂ ಅಂದರೆ ಇಷ್ಟ ಆಗಿರುತ್ತೆ, ಇದನ್ನು ಬಳಸಿ ಹಲವಾರು ಪಾಕ ವಿಧಾನ ಮಾಡಬಹುದು. ಆದ್ರೆ ಅಡುಗೆ ಮಾಡುವಾಗ ನೀವು ಕ್ಯಾಪ್ಸಿಕಂ ಬೀಜಗಳನ್ನು ಸಹ ಎಸೆಯುತ್ತೀರಾ, ಅಂತಹ ತಪ್ಪನ್ನು ಮಾಡಬೇಡಿ, ಯಾಕೆಂದರೆ ಇದು ಅದ್ಭುತ ಪ್ರಯೋಜನಗಳನ್ನು ಹೊಂದಿದೆ. ಕ್ಯಾಪ್ಸಿಕಂ ಅನ್ನು ಆಹಾರದಲ್ಲಿ ಅನೇಕ ವಿಧಗಳಲ್ಲಿ ಬಳಸಲಾಗುತ್ತದೆ. ಸಲಾಡ್ ನಿಂದ ಹಿಡಿದು ಅದರ ಸಾರಿನವರೆಗೆ ಇದನ್ನು ಬಳಸಲಾಗುತ್ತೆ. ಆದರೆ, ಜನರು ಇದನ್ನು ಬಳಸುವಾಗ ಅದರ ಬೀಜಗಳನ್ನು ಎಸೆಯುವುದನ್ನು ಆಗಾಗ್ಗೆ ಕಾಣಬಹುದು. ಆದ್ದರಿಂದ ಅದರ ಪ್ರಯೋಜನಗಳನ್ನು ತಿಳಿಯೋಣ.

2 Min read
Author : Suvarna News
Published : Sep 25 2022, 12:25 PM IST
Share this Photo Gallery
  • FB
  • TW
  • Linkdin
  • Whatsapp
17

ಕೆಂಪು, ಹಳದಿ, ಹಸಿರು ಕ್ಯಾಪ್ಸಿಕಂ ನೋಡಲು ಎಷ್ಟು ಸುಂದರವಾಗಿ ಕಾಣುತ್ತದೆಯೋ ಅಷ್ಟೇ ಆರೋಗ್ಯಕರವೂ ಆಗಿರುತ್ತೆ, ಇದು ರುಚಿಯಲ್ಲಿ ಅದ್ಭುತವಾಗಿದೆ. ಇದನ್ನು ಸಲಾಡ್ ಗಳು,  ಸೂಪ್ ಮತ್ತು ಚೈನೀಸ್ ಡಿಶ್ ಗಳಲ್ಲಿ ಸಹ ಬಳಸಲಾಗುತ್ತದೆ. ಕ್ಯಾಪ್ಸಿಕಂ (capsicum) ಬಹುತೇಕ ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ. ಇದು ಎಲ್ಲರಿಗೂ ಇಷ್ಟವಾಗುವಂತಹ ಒಂದು ತರಕಾರಿಯಾಗಿದೆ.

27

ಕ್ಯಾಪ್ಸಿಕಂ ಬಳಸಿ ಏನಾದರೊಂದು ಅಡುಗೆ ತಯಾರಿಸಿದಾಗಲೆಲ್ಲಾ, ಅದರ ಬೀಜಗಳನ್ನು ತೆಗೆದು ಎಸೆಯುತ್ತೀರಿ ಅಲ್ವಾ?. ಆದರೆ ನೀವು ತ್ಯಾಜ್ಯವಾಗಿ ಎಸೆಯುವ ಬೀಜಗಳು, ಅಂದರೆ ಕ್ಯಾಪ್ಸಿಕಂನ ಈ ಬೀಜಗಳು ನಿಮ್ಮ ಆರೋಗ್ಯಕ್ಕೆ ರಾಮಬಾಣವಾಗಬಹುದು ಎಂದು ತಿಳಿದರೆ ಆಶ್ಚರ್ಯವಾಗಬಹುದು. ಬನ್ನಿ ಕ್ಯಾಪ್ಸಿಕಂ ಬೀಜಗಳ (capsicum seeds) ಪ್ರಯೋಜನಗಳ ಬಗ್ಗೆ ತಿಳಿಯೋಣ…. 

37

ಕ್ಯಾಪ್ಸಿಕಂ ಬೀಜಗಳು ಕ್ಯಾಲೋರಿಗಳು, ಪ್ರೋಟೀನ್, ಕಾರ್ಬೋಹೈಡ್ರೇಟ್ಗಳು ಮತ್ತು ಫೈಬರ್ನಂತಹ ಅನೇಕ ಪೋಷಕಾಂಶಗಳನ್ನು ಹೊಂದಿರುತ್ತವೆ. ಅಲ್ಲದೆ, ಅದರ ಮೇಲಿನ ಪದರಕ್ಕಿಂತ ಅದರ ಬೀಜಗಳಲ್ಲಿ ಹೆಚ್ಚಿನ ವಿಟಮಿನ್ ಸಿ ಕಂಡುಬರುತ್ತದೆ, ಇದು ನಮ್ಮ ಚರ್ಮ ಮತ್ತು ಕೂದಲಿಗೆ ತುಂಬಾ ಉತ್ತಮವಾಗಿದೆ, ಆದ್ದರಿಂದ ನೀವು ಕ್ಯಾಪ್ಸಿಕಂ ಬಳಸಿ ಯಾವುದೇ ಅಡುಗೆ ತಯಾರಿಸುವಾಗ ಅದರ ಬೀಜಗಳನ್ನು ಎಸೆಯುವ ಬದಲು ಅದನ್ನು ಬಳಸಿ.

47

ಕ್ಯಾಪ್ಸಿಕಂ ಬೀಜಗಳಲ್ಲಿ ನಾರಿನಂಶವು ಹೇರಳವಾಗಿ ಕಂಡುಬರುತ್ತದೆ. ಇದನ್ನು ಸೇವಿಸುವುದರಿಂದ ಹೊಟ್ಟೆ ನೋವು, ಮಲಬದ್ಧತೆ ಸಮಸ್ಯೆಗಳು ನಿವಾರಣೆಯಾಗುತ್ತೆ. ಅಲ್ಲದೇ ನಿಮ್ಮ ಜೀರ್ಣಾಂಗ ವ್ಯವಸ್ಥೆಯು (digestion system) ಸಹ ಉತ್ತಮವಾಗಿರುತ್ತೆ, ಅದಕ್ಕಾಗಿಯೇ ನೀವು ಅದರ ಬೀಜಗಳನ್ನು ಕ್ಯಾಪ್ಸಿಕಂನೊಂದಿಗೆ ಸೇವಿಸಬೇಕು.

57

ಕ್ಯಾಪ್ಸಿಕಂ ಬೀಜಗಳು ಬಹಳ ಕಡಿಮೆ ಪ್ರಮಾಣದ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಸಕ್ಕರೆ ಅಂಶವನ್ನು ಹೊಂದಿರುವುದಿಲ್ಲ. ಹಾಗಾಗಿ, ಮಧುಮೇಹ ರೋಗಿಗಳು ಕ್ಯಾಪ್ಸಿಕಂ ಬೀಜಗಳನ್ನು ಸೇವಿಸೋದು ತುಂಬಾನೆ ಒಳ್ಳೆಯದು. ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ.

67

ಕ್ಯಾಪ್ಸಿಕಂನ ಮಧ್ಯದಲ್ಲಿ ಸೈಟೋಕೆಮಿಕಲ್ ಮತ್ತು ಫ್ಲೇವಯ್ಡ್ಗಳು ಕಂಡುಬರುತ್ತೆ, ಇದು ನಮ್ಮ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಅಂದರೆ, ಇದನ್ನು ಸೇವಿಸೋದ್ರಿಂದ, ನೀವು ಹೃದಯದ ಸಮಸ್ಯೆಗಳನ್ನು ದೂರ ಮಾಡಬಹುದು. ಅಲ್ಲದೆ, ನಿಮ್ಮ ರಕ್ತದೊತ್ತಡವು ಸಹ ಸಮತೋಲನದಲ್ಲಿರುತ್ತೆ.

77

ಕ್ಯಾಪ್ಸಿಕಂನೊಂದಿಗೆ ಅದರ ಬೀಜಗಳನ್ನು ಸೇವಿಸಿದರೆ, ವೇಗವಾಗಿ ತೂಕ ಕಳೆದುಕೊಳ್ಳಲು (weight loss) ಸಹಾಯ ಮಾಡುತ್ತದೆ, ಏಕೆಂದರೆ ಇದರಲ್ಲಿ ಕಡಿಮೆ ಕ್ಯಾಲರಿ ಇರುತ್ತೆ ಮತ್ತು ಸಾಕಷ್ಟು ನೀರನ್ನು ಹೊಂದಿರುತ್ತದೆ, ಇದು ನಿಮ್ಮನ್ನು ಹೈಡ್ರೇಟ್ ಆಗಿರಿಸುತ್ತದೆ ಮತ್ತು ದೇಹವನ್ನು ನಿರ್ವಿಷಗೊಳಿಸುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News

Latest Videos
Recommended Stories
Recommended image1
ಕರಿದ ಎಣ್ಣೆ ಮರಳಿ ಬಳಸದಂತೆ ಏಮ್ಸ್ ವೈದ್ಯೆ ಎಚ್ಚರಿಕೆ, ಫಾಸ್ಟ್ ಫುಡ್ ಮಳಿಗೆಗಳಲ್ಲಿನ ಪರೀಕ್ಷೆಯ ಶಾಕಿಂಗ್ ಸತ್ಯ!
Recommended image2
52 ವಯಸ್ಸಲ್ಲೂ ನಿಂತಿಲ್ಲ ಉತ್ಸಾಹ: ಪ್ರತಿ ಬೆಳಿಗ್ಗೆ ಈ ಡ್ರಿಂಕ್ಸ್​ ಕುಡಿದು ಫಿಟ್​ ಆಗಿರಿ ಎಂದ Maliaka Arora!
Recommended image3
ಪಾದಗಳ ಅತಿಯಾದ ಉರಿಯಿಂದ ಬಳಲುತ್ತಿದ್ದೀರಾ? ಇಲ್ಲಿವೆ ನೋಡಿ ಹಳ್ಳಿ ಶೈಲಿಯ ಸೂಪರ್ ಮನೆಮದ್ದುಗಳು!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved