ಈರುಳ್ಳಿ ಎಲೆಯಲ್ಲ… ನೀವು ಬೆಳ್ಳುಳ್ಳಿ ಎಲೆ ತಿಂದು ನೋಡಿ, ಆರೋಗ್ಯದ ಮೇಲೆ ಹೇಗೆ ಪರಿಣಾಮ ಮಾಡುತ್ತೆ ಅಂತ?
ಚಳಿಗಾಲದಲ್ಲಿ ಕಂಡುಬರುವ ಹಸಿರು ಬೆಳ್ಳುಳ್ಳಿ ಅಥವಾ ಬೆಳ್ಳುಳ್ಳಿ ಎಲೆಗಳು ಆಹಾರವನ್ನು ರುಚಿಕರವಾಗಿಸೋದು ಮಾತ್ರವಲ್ಲ, ಅದನ್ನು ಸೇವಿಸೋದರಿಂದ ಅನೇಕ ಆರೋಗ್ಯ ಪ್ರಯೋಜನ ಸಹ ಹೊಂದಿದೆ. ಅದರಿಂದ ಯಾವ ರೀತಿಯ ಪ್ರಯೋಜನಗಳಿವೆ ಎಂದು ಇಲ್ಲಿ ತಿಳಿದುಕೊಳ್ಳೋಣ.
ಹಸಿರು ಬೆಳ್ಳುಳ್ಳಿಯನ್ನು ಸ್ಪ್ರಿಂಗ್ ಗಾರ್ಲಿಕ್ (Spring garlic) ಎಂದೂ ಕರೆಯಲಾಗುತ್ತೆ, ಇದು ಸಂಪೂರ್ಣವಾಗಿ ಬೆಳೆಯದ ಬೆಳ್ಳುಳ್ಳಿ. ಈ ಗ್ರೀನ್ ಬೆಳ್ಳುಳ್ಳಿಯನ್ನು ಸೂಪ್ ಗಳಲ್ಲಿ ರುಚಿ ಹೆಚ್ಚಿಸಲು, ಚೀಸ್ ಡಿಪ್ ಗಳಿಗೆ, ಫ್ರೈಸ್, ಸಲಾಡ್ ಗಳನ್ನು, ಮಾಂಸ ರೋಸ್ಟ್ ಗಳನ್ನು ತಯಾರಿಸಲು ಬಳಸಲಾಗುತ್ತೆ. ಇದನ್ನು ಸೇವಿಸೋದ್ರಿಂದ ಏನೆಲ್ಲಾ ಪ್ರಯೋಜನ ಆಗುತ್ತೆ ತಿಳಿಯೋಣ.
ಹಸಿರು ಬೆಳ್ಳುಳ್ಳಿಯಲ್ಲಿ ಅಲಿಸಿನ್ ಎಂದು ಕರೆಯಲ್ಪಡುವ ಉತ್ಕರ್ಷಣ ನಿರೋಧಕ ಸಮೃದ್ಧವಾಗಿವೆ. ಇದು ಕೊಲೆಸ್ಟ್ರಾಲ್ ಕಡಿಮೆ ಮಾಡುವಲ್ಲಿ ಅತ್ಯಂತ ಪರಿಣಾಮಕಾರಿಯಾಗಿದೆ, ದೇಹದಲ್ಲಿ ಉರಿಯೂತ ಕಡಿಮೆ ಮಾಡುತ್ತೆ, ಶೀತ, ಕೆಮ್ಮು(Cough) ಮತ್ತು ಜ್ವರದಿಂದ ರಕ್ಷಿಸುತ್ತೆ. ಇತರ ಪ್ರಯೋಜನಗಳನ್ನು ಇಲ್ಲಿ ತಿಳಿಯಿರಿ.
ಕೊಲೆಸ್ಟ್ರಾಲ್ ಲೆವೆಲ್(Cholestrol) ಮೇಂಟೈನ್ ಮಾಡುತ್ತೆ
ಬೆಳ್ಳುಳ್ಳಿ ಎಲೆಗಳು ಕೊಲೆಸ್ಟ್ರಾಲ್ ಮಟ್ಟ ಕಾಪಾಡಿಕೊಳ್ಳಲು ತುಂಬಾ ಪರಿಣಾಮಕಾರಿ. ಏಕೆಂದರೆ ಅವು ಅಲಿಸಿನ್ ಎಂಬ ಅಂಶವನ್ನು ಹೊಂದಿರುತ್ತವೆ. ಇದು ಕೆಟ್ಟ ಕೊಲೆಸ್ಟ್ರಾಲ್ ತೆಗೆದುಹಾಕುತ್ತೆ ಮತ್ತು ದೇಹದಲ್ಲಿ ಉತ್ತಮ ಕೊಲೆಸ್ಟ್ರಾಲ್ ಹೆಚ್ಚಿಸಲು ಸಹಾಯ ಮಾಡುತ್ತೆ. ಈ ಕಾರಣದಿಂದಾಗಿ ಹೃದಯ ಸಂಬಂಧಿತ ಸಮಸ್ಯೆಗಳ ಅಪಾಯವು ದೊಡ್ಡ ಪ್ರಮಾಣದಲ್ಲಿ ಕಡಿಮೆಯಾಗುತ್ತೆ.
ರಕ್ತ ಸರ್ಕ್ಯುಲೇಶನ್(Blood circulation) ಸುಧಾರಿಸುತ್ತೆ
ಹಸಿರು ಬೆಳ್ಳುಳ್ಳಿ ತಿನ್ನುವುದು ದೇಹದಲ್ಲಿ ಬ್ಲಡ್ ಸರ್ಕ್ಯುಲೇಶನ್ ಸುಧಾರಿಸುತ್ತೆ. ಇದರಲ್ಲಿರುವ ವಿಟಮಿನ್ ಸಿ ದೇಹದಲ್ಲಿ ಕಬ್ಬಿಣ ಹೀರಿಕೊಳ್ಳಲು ಸಹಾಯ ಮಾಡುತ್ತೆ. ಅಲ್ಲದೆ, ಇದರ ಸೇವನೆಯು ದೇಹದಲ್ಲಿನ ಕೆಂಪು ರಕ್ತ ಕಣಗಳ ಪ್ರಮಾಣವನ್ನು ಹೆಚ್ಚಿಸುತ್ತೆ.
ಜೀರ್ಣಕ್ರಿಯೆ(Digestion) ಆರೋಗ್ಯಕರವಾಗಿರುತ್ತೆ
ಬೆಳ್ಳುಳ್ಳಿ ಎಲೆಗಳು ಉರಿಯೂತ ಶಮನಕಾರಿ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಹೊಟ್ಟೆಯ ಸಮಸ್ಯೆಗಳನ್ನು ಕಡಿಮೆ ಮಾಡುವಲ್ಲಿ ಪರಿಣಾಮಕಾರಿಯಾಗಿದೆ. ಈ ಎಲೆಗಳನ್ನು ಸೇವಿಸುವ ಮೂಲಕ, ಜೀರ್ಣಕ್ರಿಯೆ ಆರೋಗ್ಯಕರವಾಗಿರುತ್ತೆ. ಗ್ಯಾಸ್, ಹೊಟ್ಟೆ ಉಬ್ಬರ, ಅಜೀರ್ಣದಂತಹ ಯಾವುದೇ ಸಮಸ್ಯೆಗಳಾಗೋಲ್ಲ.
ಮೆಟಬೋಲಿಸಂ(Metabolism) ಬೂಸ್ಟ್ ಮಾಡುತ್ತೆ
ಬೆಳ್ಳುಳ್ಳಿ ಎಲೆಗಳಲ್ಲಿರುವ ಆಂಟಿ-ಆಕ್ಸಿಡೆಂಟ್ ಮತ್ತು ಆಂಟಿ-ಬಯೋಟಿಕ್ ಗುಣಲಕ್ಷಣಗಳಿಂದಾಗಿ, ಜಠರದಲ್ಲಿ ಉತ್ತಮ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಕಾಯ್ದುಕೊಳ್ಳಲಾಗುತ್ತೆ. ಜೊತೆಗೆ, ಇದನ್ನು ತಿನ್ನುವುದು ಚಯಾಪಚಯ ಕ್ರಿಯೆಯನ್ನು ಸರಿಯಾಗಿರಿಸುತ್ತೆ.
ದೇಹವನ್ನು ಡಿಟಾಕ್ಸ್ (Detox) ಮಾಡುತ್ತೆ
ಬೆಳ್ಳುಳ್ಳಿ ಎಲೆಗಳು ದೇಹವನ್ನು ಡಿಟಾಕ್ಸ್ ಮಾಡುವಲ್ಲಿ ಬಹಳ ಪ್ರಮುಖ ಪಾತ್ರ ವಹಿಸುತ್ತವೆ. ಇದಕ್ಕಾಗಿ, ಬೆಳ್ಳುಳ್ಳಿ ಎಲೆಗಳನ್ನು ಕುದಿಸುವ ಮೂಲಕ ಅದರ ನೀರನ್ನು ಬಳಸಬಹುದು. ಎರಡನೇ ಆಯ್ಕೆಯೆಂದ್ರೆ ಎಲೆಗಳನ್ನು ಸಲಾಡ್ ಮತ್ತು ಸೂಪ್ ರೂಪದಲ್ಲಿ ಸೇವಿಸೋದು.