ಮತ್ತಿನಿಂದ ಮತ್ತು ಮಾತ್ರವಲ್ಲ... ಆರೋಗ್ಯಕ್ಕೂ ಬರುತ್ತೆ ತಾಕತ್ತು...
ಮುತ್ತಿನ ಮತ್ತೆ ಹಾಗೆ. ಮುತ್ತಿಗೆ ಜಗತ್ತನ್ನೇ ಮರೆಯುವ ಶಕ್ತಿ ಇದೆ ಎಂಬ ವಿಷಯ ನಿಮಗೆ ಗೊತ್ತೇ ಇದೆ. ತನ್ನ ಸಂಗಾತಿಗೆ ಕಿಸ್ ಮಾಡಿದ್ರೆ ಅಥವಾ ಆತನಿಂದ ಕಿಸ್ ಪಡೆದುಕೊಂಡರೆ ಮನಸಿನಲ್ಲಿರುವ ಎಲ್ಲಾ ದುಗುಡಗಳು ಒಮ್ಮೇಲೆ ದೂರವಾಗುತ್ತದೆ ಅಲ್ಲವೇ..? ಈ ಕಿಸ್‌ನಿಂದ ಪ್ರೇಮಿಗಳು ರೊಮ್ಯಾಂಟಿಕ್ ಮೂಡ್‌ಗೆ ಹೋಗೋದು ಮಾತ್ರವಲ್ಲ, ಅದರಿಂದ ಹಲವಾರು ಉಪಯೋಗಗಳು ಇವೆ. ಹೌದು ಜಗತ್ತನ್ನೆ ಮರೆಸುವ ಶಕ್ತಿ ಇರುವ ಸಂಗಾತಿಯ ಮುತ್ತಿನ ಮತ್ತಿನಲ್ಲಿ ಆರೋಗ್ಯಕರ ಲಾಭಗಳು ಸಹ ಇವೆ. ಯಾವುವು ಆ ಲಾಭಗಳು ಎಂದು ನೀವೇ ನೋಡಿ....
ಕಿಸ್ ಮಾಡುವುದರಿಂದ ನಿಮ್ಮ ಹೃದಯ ಬಡಿತವನ್ನು ಆರೋಗ್ಯಕರ ರೀತಿಯಲ್ಲಿ ಪುನರುಜ್ಜೀವನಗೊಳಿಸುತ್ತದೆ ಅದು ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ" ಎಂದು ವಿಜ್ಞಾನ ತಿಳಿಸಿದೆ. "ಇದು ನಿಮ್ಮ ರಕ್ತನಾಳಗಳನ್ನು ಹಿಗ್ಗಿಸುತ್ತದೆ - ರಕ್ತವು ಉತ್ತಮ, ಘನ ಶೈಲಿಯಲ್ಲಿ ಹರಿಯುತ್ತದೆ ಮತ್ತು ನಿಮ್ಮ ಎಲ್ಲಾ ಪ್ರಮುಖ ಅಂಗಗಳಿಗೆ ರಕ್ತ ಪರಿಚಲನೆಯಾಗುತ್ತದೆ.
ಸಂಗಾತಿಗಳು ಒಬ್ಬರಿಗೊಬ್ಬರು ಸದಾ ಮುತ್ತು ನೀಡುತ್ತಿದ್ದರೆ ಇಬ್ಬರ ನಡುವಿನ ಸಂಬಂಧ ಗಾಢವಾಗುತ್ತದೆ. ಸಂಗಾತಿಗಳು ಕಿಸ್ ಮಾಡಿದಾಗ ಲವ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಇದರಿಂದ ಇಬ್ಬರ ನಡುವಿನ ಭಾಂದವ್ಯ ಹೆಚ್ಚುತ್ತದೆ.
ಅನಾರೋಗ್ಯದ ವಿರುದ್ಧ ಹೋರಾಡಲು ಕಿಸ್ ಸಹಕಾರಿಯಾಗಿದೆ. ಅನಾರೋಗ್ಯ ಹೊಂದಿದ ಮಹಿಳೆ ತನ್ನ ಸಂಗಾತಿ ಜೊತೆ ಕಿಸ್ ಮಾಡುವುದರಿಂದ ಆಕೆಯ ಇಮ್ಯೂನಿಟಿ ಹೆಚ್ಚಾಗಿ ರೋಗದ ವಿರುದ್ಧ ಹೋರಾಡುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದರಿಂದ ಅರೋಗ್ಯ ಸುಧಾರಿಸುತ್ತದೆ. ಜೊತೆಗೆ ಎನರ್ಜಿ ಹೆಚ್ಚುತ್ತದೆ.
ಮದುವೆಯಾಗಿರುವ ಜೋಡಿಗಳ ಸಂಬಂಧ ದೀರ್ಘ ಕಾಲದವೆರೆಗೆ ಬಾಳಲು ಮುತ್ತು ಸಹಾಯ ಮಾಡುತ್ತದೆ. ಕಿಸ್ ನಿಂದ ಇಬ್ಬರ ನಡುವೆ ಪ್ರೀತಿ, ಅನ್ಯೋನ್ಯತೆ ಸದಾ ಕಾಲ ಬೆಳೆಯುತ್ತದೆ. ಇದರಿಂದ ಇಬ್ಬರ ನಡುವೆ ಉತ್ತಮ ಲೈಂಗಿಕ ಸಂಬಂಧ ಬೆಳೆಯಲು ಸಹಕಾರಿಯಾಗುತ್ತದೆ.
ಲಿಪ್ ಲಾಕ್ ನಿಂದ ಎಷ್ಟು ದೊಡ್ಡ ಲಾಭ ಇದೆ ಗೊತ್ತಾ? ಹೌದು ಮನಸ್ಸಿನ ಎಲ್ಲಾ ದುಃಖ, ದುಮ್ಮಾನಗಳು ದೂರವಾಗಿ ನೆಮ್ಮದಿ ಮೂಡಲು ಲಿಪ್ ಲಾಕ್ ರಾಮಬಾಣ. ಸಂಗಾತಿ ಜೊತೆ ಇದ್ದಾಗ ಮೂಡ್ ಆಫ್ ಆಗಿದ್ರೆ ಕಿಸ್ ಮಾಡಿ ಸಾಕು ಎಲ್ಲಾ ನೋವು ದೂರವಾಗುತ್ತೆ..
ದಿನನಿತ್ಯದ ಜಂಜಾಟದಲ್ಲಿ, ಕೆಲಸದ ಒತ್ತಡದಿಂದ ಬಳಲುತ್ತಿದ್ದರೆ ಸಂಗಾತಿಯ ಬಿಸಿ ಸ್ಪರ್ಶ ಹಾಗೂ ಗಾಢ ಚುಂಬನ ಎಲ್ಲಾ ಸ್ಟ್ರೆಸ್ ದೂರಗೊಳಿಸಿ ಹಿತ ಅನುಭವ ನೀಡುತ್ತದೆ. ಅದಕ್ಕೆ ಹೇಳೋದು ಜಾದೂ ಕೆ ಜಪ್ಪಿ... ಇದ್ರೆ ಎಲ್ಲಾ ಚಿಂತೆನೂ ಮಾರು ದೂರ ಹೋಗುತ್ತದೆ.
ನಮ್ಮ ದೇಹದಲ್ಲಿರುವ ಕ್ಯಾಲರಿಗಳನ್ನು ಕರಗಿಸುವಲ್ಲಿ ಸೆಕ್ಸ್ ಎಷ್ಟು ನೆರವಾಗುತ್ತದೆಯೋ ಅಂತೆಯೇ ಕಿಸ್ ಸಹ ಸಹಕಾರಿಯಾಗಿದೆ. ಪ್ರತಿ ಸ್ಮೂಚ್‌ಗೆ 8 ರಿಂದ 16 ಕ್ಯಾಲೊರಿಗಳನ್ನು ಬರ್ನ್ ಮಾಡುವ ಶಕ್ತಿ ಹೊಂದಿದೆ. "ನೀವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರೆ ಚುಂಬನ ತೀವ್ರವಾದ ವ್ಯಾಯಾಮವಾಗಬಹುದು" . ಭಾವೋದ್ರೇಕದಿಂದ ಕಿಸ್ ಮಾಡಿದರೆ ಹೆಚ್ಚಿನ ಕ್ಯಾಲರಿ ಬರ್ನ್ ಆಗುತ್ತದೆ.
ಕೇವಲ ಕ್ಯಾಲರಿ ಕಡಿಮೆಗೊಳಿಸಲು ಮಾತ್ರವಲ್ಲ ನಿಮ್ಮ ಮುಖದ ವರ್ಕ್‌ಔಟ್‌ಗೂ ಸಹ ಕಿಸ್ ಸಹಕಾರಿ. ಆಳವಾದ ಚುಂಬನವು ಕುತ್ತಿಗೆ ಮತ್ತು ದವಡೆಗಳನ್ನು ರೂಪಿಸುತ್ತದೆ, ನಿಮ್ಮ ಬಾಯಿಯಲ್ಲಿ ಹಲವಾರು ಮುಖದ ಸ್ನಾಯುಗಳಿವೆ. ಕಿಸ್ ಮಾಡಿದಾಗ ನೀವು ಅವುಗಳನ್ನು ಬಿಗಿಗೊಳಿಸಬಹುದು. ಇದರಿಂದ ಮುಖದ ಶೇಪ್ ಉತ್ತಮವಾಗುತ್ತದೆ.
ಕಿಸ್ ನಿಂದ ಲಾಭ ಹೆಚ್ಚು ಹೇಗೆ ಅಂದರೆ, ಬೆಳಗ್ಗೆ ಆಫೀಸ್ ಹೋಗುವ ವ್ಯಕ್ತಿ ಪತ್ನಿಯಿಂದ ಕಿಸ್ ಪಡೆದರೆ ಸಂತೋಷವಾಗಿರುತ್ತಾನೆ. ಅವನು ತನ್ನ ಮನೆಯನ್ನು ಸಂತೋಷದಿಂದ ತೊರೆದರೆ, ಅವನು ಕೆಲಸದಲ್ಲಿ ಹೆಚ್ಚು ಉತ್ಪಾದಕನಾಗಿರುತ್ತಾನೆ ಏಕೆಂದರೆ ಅವನು ಭಾವನಾತ್ಮಕವಾಗಿ ತೊಂದರೆಗೀಡಾಗುವುದಿಲ್ಲ, ಆದ್ದರಿಂದ ಅವನು ಹೆಚ್ಚು ಹಣವನ್ನು ಗಳಿಸಲಿದ್ದಾನೆ" ಎಂದು ಹೇಳಲಾಗಿದೆ.
ಇಬ್ಬರು ಏಕಾಂತದಲ್ಲಿದ್ದಾಗ ಕಿಸ್ ಮಾಡಿದರೆ ಇಬ್ಬರ ಬೋರ್ ಟೈಮ್ ಮಾಯವಾಗಿ ಮೋಜಿನ ಟೈಮ್ ನಿಮ್ಮದಾಗುತ್ತದೆ. ನಿಮ್ಮ ಜೀವನ ಮಧುರವಾಗಿರಬೇಕಾದರೆ ಸಂಗಾತಿಗೆ ಕಿಸ್ ಮಾಡಿ. ಇದರಿಂದ ಉತ್ತಮ ಭಾಂದವ್ಯ ವೃದ್ಧಿಯಾಗುತ್ತದೆ.