ವಿಶ್ವದ 2ನೇ ಶ್ರೀಮಂತ ವ್ಯಕ್ತಿ ಜೆಫ್ ಬೆಜೋಸ್ ಈ ವಿಚಾರದಲ್ಲಿ ರಾಕ್ಷಸ ಎಂದ ಗರ್ಲ್‌ಫ್ರೆಂಡ್ ಲಾರೆನ್ ಸ್ಯಾಂಚೆಜ್!
ಅಮೆಜಾನ್‌ನ ಮಾಜಿ ಸಿಇಒ ಜೆಫ್ ಬೆಜೋಸ್ ಗರ್ಲ್‌ಫ್ರೆಂಡ್ ಲಾರೆನ್ ಸ್ಯಾಂಚೆಜ್ ಒಟ್ಟಿಗೆ ಬಹಳಷ್ಟು ಕೆಲಸಗಳನ್ನು ಮಾಡುವುದನ್ನು ಆನಂದಿಸುತ್ತಾರೆ. ಆದರೆ, ಜಿಮ್ ವಿಚಾರದಲ್ಲಿ ಇಬ್ಬರೂ ವಿಭಿನ್ನ ಎಂದಿದ್ದಾರೆ.
ವಿಶ್ವದ ಎರಡನೇ ಶ್ರೀಮಂತ ವ್ಯಕ್ತಿ ಮತ್ತು ಅಮೆಜಾನ್‌ನ ಮಾಜಿ ಸಿಇಒ ಜೆಫ್ ಬೆಜೋಸ್ ಮತ್ತು ಅವರ ಗರ್ಲ್‌ಫ್ರೆಂಡ್ ಹಾಗೂ ಫಿಯಾನ್ಸಿ ಲಾರೆನ್ ಸ್ಯಾಂಚೆಜ್ ಒಟ್ಟಿಗೆ ಬಹಳಷ್ಟು ಕೆಲಸಗಳನ್ನು ಮಾಡುವುದನ್ನು ಆನಂದಿಸುತ್ತಾರೆ.
ಆದರೆ, ಜೆಫ್ ಬೆಜೋಸ್ ಜತೆಗೆ ಈ ವಿಷಯವನ್ನು ಮಾತ್ರ ಜತೆಗೆ ಹಂಚಿಕೊಳ್ಳಲ್ಲ ಎಂದು ಲಾರೆನ್ ಸ್ಯಾಂಚೆಜ್ ಹೇಳಿದ್ದಾರೆ. ಅfಯಾವ ವಿಷಯ ಅಂತೀರಾ.. ಮುಂದೆ ಓದಿ..
ಇವರಿಬ್ಬರೂ ಆಗಾಗ್ಗೆ ಒಟ್ಟಿಗೆ ವರ್ಕೌಟ್ ಮಾಡುತ್ತಾರೆ. ಆದರೆ, ಅವರು ತಮ್ಮದೇ ಆದ ದಿನಚರಿಯನ್ನು ಹೊಂದಿದ್ದಾರೆ ಮತ್ತು ಅದನ್ನು ಖಾಸಗಿಯಾಗಿಡಲು ಅವರು ಆದ್ಯತೆ ನೀಡುತ್ತಾರೆ ಎಂದು ಲಾರೆನ್ ಸ್ಯಾಂಚೆಜ್ ವೋಗ್‌ಗೆ ತಿಳಿಸಿದ್ದಾರೆ.
ಅಲ್ಲದೆ, ನಾವಿಬ್ಬರೂ ಒಂದೇ ವ್ಯಾಯಾಮಗಳನ್ನು ಮಾಡಲು ಸಾಧ್ಯವಿಲ್ಲ. ಅವರು ನನಗಿಂತ ಸಂಪೂರ್ಣವಾಗಿ ವಿಭಿನ್ನ ಮಟ್ಟದಲ್ಲಿದ್ದಾರೆ. ಅವರು ಜಿಮ್‌ನಲ್ಲಿ ರಾಕ್ಷಸ ಎಂದು ಜೆಫ್ ಬೆಜೋಸ್‌ಗೆ ಲಾರೆನ್ ಸ್ಯಾಂಚೆಜ್ ಹೇಳಿದ್ದಾರೆ.
ಇನ್ನು, ಫಿಟ್‌ನೆಸ್‌ಗಾಗಿ ಜೆಫ್ ಬೆಜೋಸ್ ಬದ್ಧತೆಯನ್ನು ಲಾರೆನ್ ಸ್ಯಾಂಚೆಜ್ ಈ ಹಿಂದೆಯೇ ಹೊಗಳಿದ್ದರು. ಬೇಸಿಗೆಯಲ್ಲಿ, ಶರ್ಟ್ ಇಲ್ಲದೆ ಜೆಫ್ ಬೆಜೋಸ್‌ರ ಹಾಲಿಡೇ ಫೋಟೋಗಳನ್ನು ಅವರು ಶೇರ್ ಮಾಡಿಕೊಂಡಿದ್ದರು.
ಬಳಿಕ, ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ದೇಹದ ಕೊಬ್ಬಿನ ಶೇಕಡಾವಾರು ಪ್ರಮಾಣವು 12 ಮತ್ತು 14% ನಡುವೆ ಇದೆ ಎಂದು ಊಹಿಸಲಾಗಿತ್ತು.
ಜೆಫ್ ಬೆಜೋಸ್ ವೈಯಕ್ತಿಕ ತರಬೇತುದಾರ, ವೆಸ್ ಓಕರ್ಸನ್ ಅವರು ಈ ಹಿಂದೆ ಟಾಮ್ ಕ್ರೂಸ್ ಅವರೊಂದಿಗೆ ಕೆಲಸ ಮಾಡಿದ್ದರು ಮತ್ತು ಅವರ ಶಕ್ತಿ ಮತ್ತು ಸಹಿಷ್ಣುತೆಯನ್ನು ಹೆಚ್ಚಿಸಲು ಸಹಾಯ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಜೆಫ್ ಬೆಜೋಸ್ ವ್ಯಾಯಾಮದ ದಿನಚರಿ:
ಜೆಫ್ ಬೆಜೋಸ್ ತೂಕವನ್ನು ಎತ್ತುವುದು ಮತ್ತು ರೋಯಿಂಗ್‌ನಂತಹ ಹೆಚ್ಚಿನ ರೆಸಿಸ್ಟೆನ್ಸ್, ಕಡಿಮೆ-ಪ್ರಭಾವದ ಕ್ರೀಡೆಗಳ ಶ್ರೇಣಿಯೊಂದಿಗೆ ವರ್ಕೌಟ್ ಮಾಡುತ್ತಾರೆ. ಅಲ್ಲದೆ, ಜಿಮ್ ಅಲ್ಲದೆ ಹೊರಗೆ ಸಹ ವರ್ಕೌಟ್ ಮಾಡುತ್ತಾರೆ, ಅಂದರೆ ಬೆಟ್ಟಗಳಲ್ಲಿ ಟ್ರೆಕ್ಕಿಂಗ್, ಕಯಾಕಿಂಗ್ ಅಥವಾ ಪ್ಯಾಡಲ್ ಬೋರ್ಡಿಂಗ್ ಮಾಡುತ್ತಾರೆ.
ಜೆಫ್ ಬೆಜೋಸ್ ಆಹಾರಕ್ರಮ:
ಜೆಫ್ ಬೆಜೋಸ್ ತನ್ನ ಆಹಾರಕ್ರಮದ ಬಗ್ಗೆಯೂ ಗಮನ ಹರಿಸುತ್ತಾರೆ, ಕೊಬ್ಬು ಮತ್ತು ಪ್ರೋಟೀನ್‌ನಲ್ಲಿ ಪ್ರಬಲವಾಗಿರುವ ಮತ್ತು ಮೆಡಿಟರೇನಿಯನ್ ಪರ್ಯಾಯಗಳನ್ನು ಒಳಗೊಂಡಿರುವ ಆಹಾರವನ್ನು ಸೇವಿಸುತ್ತಾರೆ.
ಆದರೆ, ಸ್ಟಿರಾಯ್ಡ್ ಅಥವಾ ಮಾನವ ಬೆಳವಣಿಗೆಯ ಹಾರ್ಮೋನ್‌ಗಳನ್ನು ಬಳಸುತ್ತಾರೆ ಎಂಬ ಹೇಳಿಕೆಗಳನ್ನು ಜೆಫ್ ಬೆಜೋಸ್ ನಿರಾಕರಿಸಿದ್ದಾರೆ. ಬದಲಾಗಿ, ತನ್ನ ಯಶಸ್ಸಿಗೆ ತನ್ನ ಆಹಾರಕ್ರಮ, ವ್ಯಾಯಾಮದ ಕಟ್ಟುಪಾಡು ಮತ್ತು ಮುಖ್ಯವಾಗಿ - ಪ್ರತಿ ರಾತ್ರಿ 8 ಗಂಟೆಗಳ ನಿದ್ರೆ ಕಾರಣವಾಗಿದೆ ಎಂಬ ಗುಟ್ಟು ಬಿಟ್ಟು ಕೊಟ್ಟಿದ್ದಾರೆ.