ಹೊಟ್ಟೆಗೆ ಹೋಗುತ್ತಿದ್ದಂತೆ ವಿಷವಾಗುತ್ತಂತೆ ಹಾಲಿನಿಂದ ಮಾಡಿದ ಚಹಾ!
ಚಹಾ ಭಾರತದಲ್ಲಿ ಹೆಚ್ಚಿನ ಜನರು ಸೇವಿಸುವ ಪಾನೀಯವಾಗಿದೆ ಮತ್ತು ಹೆಚ್ಚಿನ ಜನರು ಹಾಲಿನ ಚಹಾವನ್ನು ಕುಡಿಯಲು ಇಷ್ಟಪಡುತ್ತಾರೆ, ಆದರೆ ಆಯುರ್ವೇದ ತಜ್ಞರು ಚಹಾಕ್ಕೆ ಹಾಲನ್ನು ಸೇರಿಸುವುದರಿಂದ ಅದು ವಿಷಕಾರಿಯಾಗುತ್ತದೆ ಎನ್ನುತ್ತಾರೆ. ಇದು ನಿಜವೇ? ಅನ್ನೋದನ್ನು ತಿಳಿಯೋಣ.

ನೀವು ಆಯುರ್ವೇದದಲ್ಲಿ ಸ್ವಲ್ಪ ಆಸಕ್ತಿ ಹೊಂದಿದ್ದರೆ, ಖಂಡಿತವಾಗಿಯೂ ನೀವು ಸೋಶಿಯಲ್ ಮೀಡಿಯಾದಲ್ಲಿ ಆಚಾರ್ಯ ಮನೀಶ್ (Acharya Manish) ಅವರ ವಿಡೀಯೋಗಳನ್ನು ನೋಡಿರಬಹುದು. ಅವರು ಆಯುರ್ವೇದ ಮತ್ತು ಧ್ಯಾನ ತಜ್ಞರು. ಅವರ ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುತ್ತೆ, ಇದರಲ್ಲಿ ಅವರು ಹೆಚ್ಚಾಗಿ ರೋಗಗಳನ್ನು ತಡೆಗಟ್ಟಲು ಮತ್ತು ಚಿಕಿತ್ಸೆ ನೀಡಲು ಆಯುರ್ವೇದ ಪರಿಹಾರಗಳನ್ನು ಹೇಳುವುದನ್ನು ಕಾಣಬಹುದು.
ಇತ್ತೀಚೆಗೆ, ಅವರು ಹಾಲಿನ ಚಹಾ ವಿಷ (Milk Tea) ಎಂದು ಹೇಳುವ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಹಾಲಿನಲ್ಲಿ ಕೇಸೀನ್ ಮತ್ತು ಚಹಾದಲ್ಲಿರುವ ಫ್ಲೇವನಾಯ್ಡ್ ಅಂಶಗಳೇ ಹಾಲಿನ ಚಹಾವನ್ನು ವಿಷಕರವಾಗಿಸುತ್ತೆ ಎಂದು ಅವರು ತಿಳಿಸಿದ್ದರು. ಇವೆರಡೂ ಸೇರಿದಾಗ, ರಾಸಾಯನಿಕ ಕ್ರಿಯೆ ಉಂಟಾಗಿ, ಹಾಲಿನ ಚಹಾವು ವಿಷವಾಗುತ್ತದೆ ಎಂದು ಅವರು ಹೇಳಿದ್ದರು. .
ಹಾಲಿನ ಚಹಾ ನಿಜವಾಗಿಯೂ ವಿಷವೇ? ಖ್ಯಾತ ಆಹಾರ ತಜ್ಞ (Food expert) ಭವೇಶ್ ಗುಪ್ತಾ ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ತಮ್ಮ ಅಭಿಪ್ರಾಯವನ್ನು ನೀಡಿದ್ದಾರೆ ಮತ್ತು ಚಹಾಕ್ಕೆ ಹಾಲು ಸೇರಿಸುವ ಮೂಲಕ ವಿಷಕಾರಿಯಾಗುತ್ತದೆಯೇ ಇಲ್ಲವೇ ಅನ್ನೋದನ್ನು ಸಹ ಹೇಳಿದ್ದಾರೆ. ಅವರು ಏನು ಹೇಳಿದ್ದಾರೆ ಅನ್ನೋದನ್ನು ತಿಳಿಯಲು ಮುಂದೆ ಓದಿ.
ಹಾಲಿನ ಚಹಾವು ವಾತವನ್ನು ಹೆಚ್ಚಿಸುತ್ತದೆಯೇ?
ಆಚಾರ್ಯ ಮನೀಶ್ ಅವರು ತಮ್ಮ ವೀಡಿಯೊದಲ್ಲಿ ಹಾಲಿನ ಚಹಾ ವಾತವನ್ನು ಹೆಚ್ಚಿಸುತ್ತದೆ ಎಂದಿದ್ದಾರೆ. ಆದರೆ ಆಹಾರ ತಜ್ಞ ಭವೇಶ್ ಈ ಆರೋಪವನ್ನು ನಿರಾಕರಿಸಿದ್ದಾರೆ. ನಿಮಗೆ ಹಾಲಿನ ಸಮಸ್ಯೆ ಇಲ್ಲದಿದ್ದರೆ, ಚಹಾ ಕುಡಿಯುವುದರಿಂದ ಗ್ಯಾಸ್ ಮತ್ತು ಉಬ್ಬರದಂತಹ ಸಮಸ್ಯೆಗಳು (gastric problem) ಉಂಟಾಗುವುದಿಲ್ಲ, ನೀವು ಭಯವಿಲ್ಲದೆ ಹಾಲಿನ ಚಹಾವನ್ನು ಕುಡಿಯಬಹುದು ಅದರಿಂದ ಸಮಸ್ಯೆ ಏನಿಲ್ಲ ಎಂದಿದ್ದಾರೆ.
ಭವೇಶ್ ಹೇಳಿದ್ದೇನು?
ಹಾಲಿನಲ್ಲಿ ಕೇಸಿನ್ ಪ್ರೋಟೀನ್ ಇದೆ. ಇದು ಚಹಾದಲ್ಲಿನ ಕೆಲವು ಫ್ಲೇವನಾಯ್ಡ್ಗಳನ್ನು ಒದಗಿಸುತ್ತದೆ ಮತ್ತು ಹಾಲಿನ ಚಹಾದಲ್ಲಿನ ಕೆಲವು ಫ್ಲೇವನಾಯ್ಡ್ಗಳನ್ನು (flavonoids) ಕಡಿಮೆ ಮಾಡುತ್ತದೆ, ಆದರೆ ಚಹಾಕ್ಕೆ ಹಾಲು ಸೇರಿಸುವುದರಿಂದ ಅದು ವಿಷಕಾರಿಯಾಗುತ್ತದೆ ಎಂದು ಇದರ ಅರ್ಥವಲ್ಲ. ಹಾಲಿನ ಚಹಾವನ್ನು ಅಂಜಿಕೆ ಇಲ್ಲದೆ ಕುಡಿಯಬಹುದು ಎಂದಿದ್ದಾರೆ.
ಹಾಲಿನ ಚಹಾ ಏಕೆ ವಿಷಕಾರಿ?
ಆಚಾರ್ಯ ಮನೀಶ್ ಅವರು ಚಹಾ ಹಾಲು ವಿಷದಂತೆ ಮತ್ತು ಹಾಲಿನಲ್ಲಿ ಕೇಸೀನ್ ಮತ್ತು ಚಹಾದಲ್ಲಿ ಫ್ಲೇವನಾಯ್ಡ್ ಗಳು ಇರುವುದೇ ಇದಕ್ಕೆ ಕಾರಣ ಎಂದು ಹೇಳಿದ್ದಾರೆ. ಈ ಎರಡು ಅಂಶಗಳನ್ನು ಸಂಯೋಜಿಸಿದಾಗ, ರಾಸಾಯನಿಕ ಕ್ರಿಯೆ ಸಂಭವಿಸುತ್ತದೆ. ಅದೇ ಕಾರಣದಿಂದಾಗಿ ಚಹಾವು ವಿಷಕಾರಿಯಾಗುತ್ತದೆ ಎಂದಿದ್ದಾರೆ ಆಚಾರ್ಯ ಮನೀಷ್.
ಭಾರತದ ಹೆಚ್ಚಿನ ಜನ ಸೇವಿಸೋ ಪಾನೀಯ ಹಾನಿಯ ಚಹಾ!
ಚಹಾವು ಭಾರತದಲ್ಲಿ ಹೆಚ್ಚು ಜನರು ಸೇವಿಸುವ ಪಾನೀಯವಾಗಿದೆ. ಚಹಾ (tea) ಭಾರತೀಯರ ಜೀವನ ಎಂದು ಹೇಳಿದರೆ ತಪ್ಪಾಗಲಾರದು. ಪ್ರತಿಯೊಂದು ಸಂದರ್ಭದಲ್ಲೂ ಅವರಿಗೆ ಚಹಾ ಬೇಕೇ ಬೇಕು. ಚಹಾವನ್ನು ಅನೇಕ ರೀತಿಯಲ್ಲಿ ತಯಾರಿಸಲಾಗುತ್ತದೆ. ಇಲ್ಲಿನ ಹೆಚ್ಚಿನ ಜನರು ಹಾಲಿನ ಚಹಾವನ್ನು ಕುಡಿಯುತ್ತಾರೆ. ಚಹಾ ಕುಡಿದವರು ಹೆಚ್ಚು ಸಮಯ ಬದುಕ್ಕಿದ್ದು ಇದೆ. ಆಹಾರ ತಜ್ಞರು ಹಾಗೂ ಆಯುರ್ವೇದ ತಜ್ಞರು ಇಬ್ಬರ ಅಭಿಪ್ರಾಯವನ್ನು ನಾವಿಲ್ಲಿ ನಿಮಗಿವತ್ತು ಹೇಳಿದ್ದೇವೆ. ಇಬ್ಬರಲ್ಲಿ ಯಾರ ಅಭಿಪ್ರಾಯವನ್ನು ಪಾಲಿಸಬೇಕು ಅನ್ನೋದು ನಿಮಗೆ ಬಿಟ್ಟಿದ್ದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.