ಬಾಲ್ಯದಲ್ಲೇ ಕನ್ನಡಕ ಬಂದಿದೆಯೇ? ಕಣ್ಣಿನ ಸಮಸ್ಯೆಗೆ ಮನೆಯಲ್ಲಿದೆ ಪರಿಹಾರ
First Published Mar 25, 2021, 3:39 PM IST
ನಮ್ಮ ಜೀವನಶೈಲಿ ಎಷ್ಟು ಕೆಟ್ಟದಾಗಿದೆ ಎಂದರೆ, ನಾವು ತಡವಾಗಿ ನಿದ್ದೆ ಮಾಡಿ, ನಂತರ ಬೆಳಿಗ್ಗೆ ತಡವಾಗಿ ಏಳುತ್ತೇವೆ. ಕಡಿಮೆ ನಿದ್ದೆಯ ಕೆಟ್ಟ ಪರಿಣಾಮ ನಮ್ಮ ಕಣ್ಣುಗಳ ಮೇಲಾಗುತ್ತದೆ. ಕಣ್ಣುಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ, ಅಂದರೆ, ದೀರ್ಘ ಕಾಲದ ಕಂಪ್ಯೂಟರ್ ಪರದೆಗಳು ಮತ್ತು ಮೊಬೈಲ್ ನೋಡುವುದು, ಕಡಿಮೆ ಬೆಳಕು, ದೀರ್ಘ ಚಾಲನೆ, ತಡ ರಾತ್ರಿವರೆಗೆ ಓದುವುದರಿಂದ ಕಣ್ಣುಗಳ ಮೇಲೆ ಪರಿಣಾಮ ಬೀರುತ್ತದೆ. ಕಣ್ಣುಗಳ ಮೇಲಿನ ಒತ್ತಡದಿಂದಾಗಿ, ಎಳೆಯ ಮಕ್ಕಳ ಕಣ್ಣುಗಳೂ ಇಂದು ದುರ್ಬಲವಾಗುತ್ತಿದೆ ಮತ್ತು ಇದರ ಪರಿಣಾಮವೇ ಅವರ ಕಣ್ಣುಗಳ ಮೇಲೆ ಕನ್ನಡಕ. ದೃಷ್ಟಿದೋಷದ ಸಮಸ್ಯೆ ಮನೆಯಲ್ಲಿಯೇ ನಿವಾರಿಸಿ.

ಮೊದಲೆಲ್ಲಾ ವಯಸ್ಸಾದ ಮೇಲೆ ಜನರ ಕಣ್ಣುಗಳು ದುರ್ಬಲವಾಗುತ್ತಿದ್ದವು, ಆದರೆ ಇಂದು ಚಿಕ್ಕ ಮಕ್ಕಳ ಕಣ್ಣಿಗೂ ಕನ್ನಡಕಬಂದಿದೆ. ಮಕ್ಕಳು ಕನ್ನಡಕದಿಂದ ತೀವ್ರ ತೊಂದರೆಗೊಳಗಾಗುತ್ತಾರೆ,ಆಡುವಾಗ ಗ್ಲಾಸ್ ಒಡೆಯುವುದರಿಂದ ಕಣ್ಣುಗಳಿಗೆ ಹಾನಿಯುಂಟಾಗುವ ಭೀತಿಯೂ ಇದೆ.

ಕೆಲವು ಔಷಧಿಗಳ ಸಹಾಯದಿಂದ ಕನ್ನಡಕವನ್ನು ತೆಗೆದುಹಾಕಬಹುದು ಎಂಬುದು ನಿಮಗೆ ತಿಳಿದಿದೆ. ಇಲ್ಲಿ ಕೆಲವು ಪರಿಣಾಮಕಾರಿ ಮನೆಮದ್ದುಗಳ ಮಾಹಿತಿ ಇದೆ. ಇದು ಕಣ್ಣುಗಳನ್ನು ಸುಧಾರಿಸುತ್ತದೆ ಮತ್ತು ಕನ್ನಡಕವನ್ನು ಹಾಕುವುದನ್ನು ಬಿಟ್ಟು ಬಿಡುತ್ತೀರಿ ಖಂಡಿತಾ...

ಕನ್ನಡಕ ತೆಗೆಯಲು ಕೆಲವು ಮನೆಮದ್ದುಗಳು: .
ಕಣ್ಣಿನ ದೃಷ್ಟಿಯನ್ನು ಹೆಚ್ಚಿಸಲು ಬಯಸಿದರೆ, ಮೊದಲು ನೀರು ಕುಡಿಯುವ ಕುಂಡವನ್ನು ಬದಲಿಸಿ. ಮಲಗುವ ಮುನ್ನ ತಾಮ್ರದ ಪಾತ್ರೆಯಲ್ಲಿ ನೀರು ಹಾಕಿ. ಮರುದಿನ ಬೆಳಿಗ್ಗೆ ಎದ್ದು ಈ ನೀರನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.

ಇತರೆ ಪಾತ್ರೆಗಳಿಗೆ ಹೋಲಿಸಿದರೆ ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದು ತುಂಬಾ ಸಹಕಾರಿ. ಆರೋಗ್ಯಕ್ಕೆ ಉತ್ತಮವೂ ಹೌದೂ. ತಾಮ್ರದ ಪಾತ್ರೆಯಲ್ಲಿರುವ ನೀರನ್ನು ದಿನದಲ್ಲಿ ಯಾವಾಗ ಬೇಕಾದರೂ ಕುಡಿಯಿರಿ. ಅದು ಕಣ್ಣುಗಳಿಗೆ ಪ್ರಯೋಜನಕಾರಿ.

ನೆಲ್ಲಿಕಾಯಿಯು ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿ. ನೆಲ್ಲಿಕಾಯಿಯನ್ನು ದಿನಕ್ಕೆ ಒಂದರಿಂದ ಎರಡು ಬಾರಿ ತಿಂದರೆ ಕಣ್ಣಿನ ದೃಷ್ಟಿಯೂ ಹೆಚ್ಚುತ್ತದೆ.

ಒಂದು ಚಮಚ ಮೆಂತೆ ಬೀಜ, ಎರಡು ಬಾದಾಮಿ ಮತ್ತು 1/2 ಚಮಚ ಕಲ್ಲು ಸಕ್ಕರೆಯನ್ನು ಒಟ್ಟಿಗೆ ರುಬ್ಬಿಕೊಳ್ಳಿ. ಈ ಮಿಶ್ರಣವನ್ನು ಪ್ರತಿ ದಿನ ರಾತ್ರಿ ಹಾಲಿನೊಂದಿಗೆ ಬೆರೆಸಿ ಕೊಂಡು ತಿನ್ನಿರಿ. ಹೀಗೆ ಮಾಡುವುದರಿಂದ ಕಣ್ಣುಗಳ ದೃಷ್ಟಿ ಹೆಚ್ಚುತ್ತದೆ.

ಜೀರಿಗೆ ಮತ್ತು ಕಲ್ಲುಸಕ್ಕರೆಯನ್ನು ಸಮ ಪ್ರಮಾಣದಲ್ಲಿ ಅರೆಯಿರಿ. ಇದನ್ನು ಪ್ರತಿದಿನ ಒಂದು ಚಮಚ ದೇಸಿ ತುಪ್ಪದೊಂದಿಗೆ ಸೇವಿಸಿ. ಹೀಗೆ ಮಾಡುವುದರಿಂದ ಕಣ್ಣಿನ ದೃಷ್ಟಿ ಹೆಚ್ಚುತ್ತದೆ.

ಹಸುವಿನ ತುಪ್ಪವನ್ನು ಕಿವಿಯ ಹಿಂಭಾಗಕ್ಕೆ ಹಚ್ಚಿ ಮೃದುವಾದ ಕೈಯಿಂದ ಮಸಾಜ್ ಮಾಡಿ. ಹೀಗೆ ಮಾಡುವುದರಿಂದ ಕಣ್ಣಿನ ದೃಷ್ಟಿ ಉದ್ದಮಗೊಳ್ಳುತ್ತದೆ.

100 ಗ್ರಾಂ ತ್ರಿಫಲಾ ಪುಡಿ ಮತ್ತು 100 ಗ್ರಾಂ ಕಲ್ಲುಸಕ್ಕರೆ ಮಿಶ್ರಣ ಮಾಡಿ ಸೇವಿಸಿದರೆ ಕಣ್ಣಿನ ಆರೋಗ್ಯಕ್ಕೆ ಒಳಿತು.

ಬಿಸಿ ಹಾಲಿನಲ್ಲಿ ಅಥವಾ ಜೇನುತುಪ್ಪದೊಂದಿಗೆ ತ್ರಿಫಲಾ - ಕಲ್ಲು ಸಕ್ಕರೆ ಮಿಶ್ರಣ ಸೇವಿಸಬಹುದು. ಪ್ರತಿದಿನ ಹೀಗೆ ಮಾಡುವುದರಿಂದ ಕ್ರಮೇಣ ಉತ್ತಮ ಪರಿಣಾಮಗಳನ್ನು ಪಡೆಯಬಹುದು.