ಕಿವಿಯೊಳಗೆ ಹುಳ, ಇರುವೆ ಹೋದರೆ ಏನು ಮಾಡಬೇಕು?
ಮಲಗಿರುವಾಗ ಆಕಸ್ಮಿಕವಾಗಿ ಹುಳುಗಳು ಕಿವಿಯೊಳಗೆ ಹೋಗುವುದುಂಟು, ಒಳಗಡೆ ಹೋದ ಬಳಿಕ ಹುಳು ಹೊರಬರೋವರೆಗೆ ವಿಪರೀತ ಕಿರಿಕಿರಿ ಅನಿಸುತ್ತೆ. ಅನೇಕರು ತಕ್ಷಣ ಕಿವಿಯೊಳಗೆ ಕಿರುಬೆರಳು ತೂರಿಸಿ ತಡಕಾಡಿಬಿಡ್ತಾರೆ. ಕೆಲವರು ಎರಡು ಹನಿ ಬಿಸಿ ಕೊಬ್ಬರಿ ಎಣ್ಣೆ ಹಾಕಿಕೊಳ್ತಾರೆ. ನಿಮ್ಮ ಕಿವಿಯಲ್ಲಿ ಇರುವೆ, ಹುಳ ಬಿದ್ದರೆ ಏನು ಮಾಡಬೇಕು ಅಂತ ಈ ಪೋಸ್ಟ್ ನಲ್ಲಿ ಹೇಳಿದ್ದೀವಿ.

ಕಿವಿಯಲ್ಲಿ ಹುಳ ಬಿದ್ದಾಗ
ಕಿವಿಯಲ್ಲಿ ಇರುವೆ, ಹುಳ ಬಿದ್ದರೆ ತುಂಬಾ ಕಿರಿಕಿರಿ ಆಗುತ್ತೆ. ಅದು ಹೊರಗೆ ಬರೋವರೆಗೂ ನಮಗೆ ಸಮಾಧಾನ ಇರಲ್ಲ. ಖಂಡಿತ ಈ ಅನುಭವ ಎಲ್ಲರಿಗೂ ಒಮ್ಮೆಯಾದರೂ ಆಗಿರುತ್ತೆ. ಮಕ್ಕಳಿಗೆ ಆಗೋದು ಜಾಸ್ತಿ. ಕಿವಿಯೊಳಗೆ ಹೋದ ಹುಳ ಕಿವಿಯ ಪೊರೆ ಕಚ್ಚಿ ನೋವು ಮಾಡಬಹುದು. ಕಿವಿ ತುಂಬಾ ಸೂಕ್ಷ್ಮ ಅಂಗ, ಹಾಗಾಗಿ ಏನಾದ್ರೂ ತೊಂದರೆ ಆಗದ ಹಾಗೆ ನೋಡ್ಕೋಬೇಕು. ಕಿವಿಯಲ್ಲಿ ಹುಳ ಬಿದ್ದರೆ ಹೇಗೆ ತೆಗೆಯೋದು ಅಂತ ಈ ಪೋಸ್ಟ್ ನಲ್ಲಿ ತಿಳ್ಕೊಳ್ಳೋಣ.
ಕಿವಿಯಲ್ಲಿ ಹುಳ ಬಿದ್ದಾಗ
ಕತ್ತಲೆ ಕೋಣೆ:
ಕಿವಿಗೆ ಹುಳ ಬಿದ್ದರೆ ಮೊದಲು ಕತ್ತಲೆ ಕೋಣೆಗೆ ಹೋಗಿ ಟಾರ್ಚ್ ಅಥವಾ ಮೊಬೈಲ್ ಲೈಟ್ ಕಿವಿಗೆ ಹಾಕಿ. ಕೆಲವು ಹುಳಗಳು ಬೆಳಕು ಕಂಡ್ರೆ ಹೊರಗೆ ಬಂದುಬಿಡುತ್ತೆ.
ಆಲಿವ್ ಅಥವಾ ಬೇಬಿ ಆಯಿಲ್:
ನಿಮ್ಮ ಕಿವಿಗೆ ಇರುವೆ, ಹುಳ ಬಿದ್ದರೆ ಆಲಿವ್ ಅಥವಾ ಬೇಬಿ ಆಯಿಲ್ ಒಂದೆರಡು ತೊಟ್ಟು ಹಾಕಿ, ಹುಳ ಆಯಿಲ್ ಜೊತೆ ಹೊರಗೆ ಬಂದುಬಿಡುತ್ತೆ.
ಕಿವಿಯಲ್ಲಿ ಹುಳ ಬಿದ್ದಾಗ
ಉಪ್ಪು ನೀರು:
ಸ್ವಲ್ಪ ಬಿಸಿ ನೀರಿಗೆ ಉಪ್ಪು ಹಾಕಿ, ಒಂದೆರಡು ತೊಟ್ಟು ಕಿವಿಗೆ ಹಾಕಿ. ಉಪ್ಪು ನೀರು ಹುಳಗಳಿಗೆ ಇಷ್ಟ ಆಗಲ್ಲ, ಅದಕ್ಕೆ ಅವು ಹೊರಗೆ ಬಂದುಬಿಡುತ್ತೆ.
ಆಲ್ಕೋಹಾಲ್:
ಹತ್ತಿಯಲ್ಲಿ ಆಲ್ಕೋಹಾಲ್ ಹಾಕಿ ಕಿವಿಯ ಹೊರಗೆ ಇಡಿ. ಹುಳ ಹೊರಗೆ ಬಂದುಬಿಡುತ್ತೆ. ಒಂದು ವೇಳೆ ಹೀಗೆ ಮಾಡಿದ್ರೂ ಹೊರಗೆ ಬರದಿದ್ರೆ, ಸ್ವಲ್ಪ ಆಲ್ಕೋಹಾಲ್ ಕಿವಿಗೆ ಹಾಕಿ. ಹುಳ ಹೊರಗೆ ಬರುತ್ತೆ.
ಕಿವಿಯಲ್ಲಿ ಹುಳ ಬಿದ್ದಾಗ
ಗಮನಿಸಿ:
1. ಕಿವಿಗೆ ಹುಳ ಬಿದ್ದರೆ ಬಡ್ಸ್ ಅಥವಾ ಬೇರೆ ವಸ್ತುಗಳಿಂದ ತೆಗೆಯೋಕೆ ಹೋಗ್ಬೇಡಿ. ಹುಳ ಒಳಗೆ ಹೋಗಬಹುದು, ಕಿವಿಯ ಪೊರೆ ಹಾಳಾಗಬಹುದು.
2. ಕಿವಿಗೆ ಹುಳ ಬಿದ್ದರೆ ಬೆರಳು ಹಾಕ್ಬೇಡಿ, ನೋವು ಜಾಸ್ತಿ ಆಗುತ್ತೆ.
3. ಕೆಲವರು ಹುಳ ತೆಗೆಯೋಕೆ ಚಿಮಟಿಗೆ, ಕಡ್ಡಿಗಳನ್ನ ಬಳಸ್ತಾರೆ. ಅದು ತಪ್ಪು. ಕಿವಿಯ ನರಗಳು ಒಳಗೆ ಹೋಗಬಹುದು, ಕಿವಿ ಕೇಳೋದೇ ನಿಲ್ಲಬಹುದು.
4. ನೀರು, ಎಣ್ಣೆ ಹಾಕಿದ್ರೂ ಹುಳ ಹೊರಗೆ ಬರದಿದ್ರೆ, ಡಾಕ್ಟರ್ ಹತ್ರ ಹೋಗಿ. ಮಕ್ಕಳಿಗೆ ಈ ತೊಂದರೆ ಆದ್ರೆ, ತಕ್ಷಣ ಡಾಕ್ಟರ್ ಹತ್ರ ಕರ್ಕೊಂಡು ಹೋಗಿ.
5. ಹುಳಗಳು ಕಿವಿಗೆ ಹೋಗದ ಹಾಗೆ ಎಚ್ಚರ ವಹಿಸಿ. ಹೊರಗೆ ಹೋಗುವಾಗ ಕಿವಿ ಮುಚ್ಚಿಕೊಳ್ಳಿ.