ಈರುಳ್ಳಿ ಬೆಲ್ಲಿ ಫ್ಯಾಟ್ ಕೂಡ ಕರಗಿಸುತ್ತೆ ಗೊತ್ತಾ? !
ಅಂದಹಾಗೆ, ತೂಕ ನಷ್ಟಕ್ಕೆ ನೀವು ಅನುಸರಿಸದ ಕ್ರಮಗಳು ಯಾವುವು? ಪುಸ್ತಕ, ಟಿವಿ, ಫ್ರೆಂಡ್ಸ್ ಹೇಳಿದ ಎಲ್ಲಾ ವಿಧಾನಗಳನ್ನು ಟ್ರೈ ಮಾಡಿ ಆಗಿ, ಪ್ರಯೋಜನ ಸಿಕ್ಕಿಲ್ವಾ? ಆದರೆ ನೀವು ಎಂದಾದರೂ ಈರುಳ್ಳಿಯ ಸಹಾಯದಿಂದ ತೂಕ ಇಳಿಸುವ ಬಗ್ಗೆ ಯೋಚಿಸಿದ್ದೀರಾ? ಹೌದು, ಈರುಳ್ಳಿಯ ಸಹಾಯದಿಂದ ನಿಮ್ಮ ಹೆಚ್ಚುತ್ತಿರುವ ತೂಕ ಹೇಗೆ ನಿವಾರಿಸಬಹುದು ಎಂದು ಇಲ್ಲಿದೆ ನೋಡಿ.
ನಮ್ಮ ಅಡುಗೆಮನೆಯಲ್ಲಿ ಸುಲಭವಾಗಿ ಲಭ್ಯವಿರುವ ಈರುಳ್ಳಿಯಲ್ಲಿ(Onion) ಕ್ವೆರ್ಸೆಟಿನ್ ಎಂಬ ಫ್ಲೇವನಾಯ್ಡ್ ಕಂಡುಬರುತ್ತೆ, ಇದರ ಸಹಾಯದಿಂದ ದೇಹದಲ್ಲಿ ಸಂಗ್ರಹವಾದ ಕೊಬ್ಬನ್ನು ಕಡಿಮೆ ಮಾಡಬಹುದು. ಇದರಿಂದ ನೀವು ಸುಲಭವಾಗಿ ತೂಕ ಇಳಿಕೆ ಮಾಡಬಹುದು. ಅದು ಹೇಗೆ ಅನ್ನೋದನ್ನು ನೋಡೋಣ.
ಈರುಳ್ಳಿ ನಿಮ್ಮ ಚಯಾಪಚಯ ಕ್ರಿಯೆಯ ಪ್ರಕ್ರಿಯೆಯನ್ನು ಸರಿಪಡಿಸುತ್ತೆ. ಈರುಳ್ಳಿ ಪ್ರೋಬಯಾಟಿಕ್ ಗುಣಲಕ್ಷಣ ಹೊಂದಿದೆ ಮತ್ತು ಕ್ಯಾಲೋರಿ(Calorie) ಅಂಶ ಸಾಕಷ್ಟು ಕಡಿಮೆ ಇರುತ್ತೆ, ಇದು ದೇಹದ ಮೇಲೆ ಅಂಟಿ ಒಬೆಸಿಟಿ ಪರಿಣಾಮ ಹೊರತುಪಡಿಸಿ ಅನೇಕ ಪ್ರಯೋಜನ ನೀಡುತ್ತೆ. ಈರುಳ್ಳಿ ಬಳಸಿ ನಿಮ್ಮ ಹೆಚ್ಚುತ್ತಿರುವ ತೂಕ ನೀವು ಹೇಗೆ ನಿಯಂತ್ರಣಕ್ಕೆ ತರಬಹುದು ಎಂದು ತಿಳಿಯಲು ಮುಂದೆ ಓದಿ.
ಸಲಾಡ್ ನಂತೆ(Salad) ಸೇವಿಸಿ
ತೂಕವನ್ನು ನಿಯಂತ್ರಣಕ್ಕೆ ತರಲು ನೀವು ಹಸಿ ಈರುಳ್ಳಿಯನ್ನು ಸಲಾಡ್ ಆಗಿ ತಿನ್ನಬಹುದು. ನೀವು ಅದಕ್ಕೆ ನಿಂಬೆ ಮತ್ತು ಉಪ್ಪನ್ನು ಸೇರಿಸಿ ತಿನ್ನಬಹುದು. ಇದನ್ನು ಪ್ರತಿದಿನ ಮಾಡೋದ್ರಿಂದ ತೂಕ ಇಳಿಕೆಗೆ ತುಂಬಾನೆ ಸಹಾಯ ಮಾಡುತ್ತೆ.
ಈರುಳ್ಳಿ ಜ್ಯೂಸ್ (Onion juice)ಸೇವಿಸಿ
ಎರಡು ಈರುಳ್ಳಿಯನ್ನು ಕುದಿಸಿ, ಅವುಗಳನ್ನು ತಣ್ಣಗಾಗಿಸಿ ಮತ್ತು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಈಗ ಅದನ್ನು ಫಿಲ್ಟರ್ ಮಾಡಿ ಮತ್ತು ಅದರ ರಸಕ್ಕೆ ಉಪ್ಪು ಮತ್ತು ನಿಂಬೆ ಸೇರಿಸಿ ಮತ್ತು ಅದನ್ನು ಸೇವಿಸಿ. ಇದು ನಿಮ್ಮ ತೂಕ ನಿಯಂತ್ರಣದಲ್ಲಿಡುತ್ತೆ .
ಸೂಪ್ (Soup)ಕೂಡ ಅತ್ಯುತ್ತಮ ಆಯ್ಕೆ
ನೀವು ಇತರ ತರಕಾರಿಗಳನ್ನು ಈರುಳ್ಳಿಯೊಂದಿಗೆ ಬೆರೆಸಿ ಅದರ ಸೂಪ್ ಮಾಡಿ ಸೇವಿಸಬಹುದು. ಇದು ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲ, ತೂಕ ನಿಯಂತ್ರಿಸಲು ಸಹ ಸಹಾಯ ಮಾಡುತ್ತೆ. ಮತ್ಯಾಕೆ ತಡ ಸುಲಭವಾಗಿ ತೂಕ ಇಳಿಸಲು ಈರುಳ್ಳಿಯನ್ನು ಹೀಗೆ ಸೇವಿಸಿ ನೋಡಿ.
ಈರುಳ್ಳಿಯ ಪ್ರಮುಖ ಪ್ರಯೋಜನಗಳು :
1. ಕ್ಯಾಲೋರಿ ಕಡಿಮೆ
ಈರುಳ್ಳಿಯಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ. 1 ಕಪ್ (160 ಗ್ರಾಂ) ಕತ್ತರಿಸಿದ ಈರುಳ್ಳಿಯು 64 ಕಿಲೋ ಕ್ಯಾಲೋರಿ ಶಕ್ತಿ ಒದಗಿಸುತ್ತದೆ. ಹೆಚ್ಚಿದ ಹಣ್ಣು ಮತ್ತು ತರಕಾರಿ(Vegatable) ಸೇವನೆಯೊಂದಿಗೆ ಕಡಿಮೆ ಕ್ಯಾಲೋರಿಯ ಆಹಾರವು ತೂಕ ಇಳಿಕೆಗೆ ಸಹಾಯ ಮಾಡುವಲ್ಲಿ ಪರಿಣಾಮಕಾರಿಯಾಗಿದೆ.
2. ಫೈಬರ್(Fibre) ಹೆಚ್ಚಿದೆ
1 ಕಪ್ ಈರುಳ್ಳಿಯಲ್ಲಿ 3 ಗ್ರಾಂ ಫೈಬರ್ ಇದೆ. ಹೀಗಾಗಿ, ಇದು ಶೀಘ್ರವಾಗಿ ತೂಕ ಇಳಿಸಲು ಸಹಾಯ ಮಾಡುತ್ತೆ. ಈರುಳ್ಳಿಯಲ್ಲಿ ಕಂಡುಬರುವ ಕರಗುವ ಸ್ನಿಗ್ಧ ನಾರು ಹೊಟ್ಟೆ ತುಂಬಿದ ಅನುಭವ ನೀಡುತ್ತೆ ಮತ್ತು ಹೆಚ್ಚುವರಿ ಕ್ಯಾಲೋರಿ ಸೇವನೆಯನ್ನು ತಪ್ಪಿಸಲು ನಿಮಗೆ ಸಹಾಯ ಮಾಡುತ್ತದೆ.
3. ಕ್ವೆರ್ಸೆಟಿನ್ ನ ಬೊಜ್ಜು-ವಿರೋಧಿ ಪರಿಣಾಮ
ಈರುಳ್ಳಿ ಕ್ವೆರ್ಸೆಟಿನ್ ಎಂಬ ಸಸ್ಯ ಸಂಯುಕ್ತದಲ್ಲಿ ಸಮೃದ್ಧವಾಗಿದೆ. ಈ ಫ್ಲೇವನಾಯ್ಡ್ ಸ್ಥೂಲಕಾಯ-ವಿರೋಧಿ ಗುಣವನ್ನು ಹೊಂದಿದೆ. ಸೋ ನೀವಿದನ್ನು ತಿಂದಷ್ಟು ಬೊಜ್ಜು(Obesity) ಕಡಿಮೆಯಾಗುತ್ತಾ ಹೋಗುತ್ತದೆ.