MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Life
  • Health
  • ರಾತ್ರಿಗಿಂತ ಬೆಳಗ್ಗೆ ನಮ್ಮ ಹೈಟ್ 1 ಇಂಚು ಜಾಸ್ತಿ ಇರುತ್ತಂತೆ !

ರಾತ್ರಿಗಿಂತ ಬೆಳಗ್ಗೆ ನಮ್ಮ ಹೈಟ್ 1 ಇಂಚು ಜಾಸ್ತಿ ಇರುತ್ತಂತೆ !

ನಿಮ್ಮ ದೇಹದ ಬಗ್ಗೆ ನಿಮಗೆ ಗೊತ್ತಿರದೇ ಇರೋವಂತ ಒಂದು ಇಂಟ್ರೆಸ್ಟಿಂಗ್ ವಿಷ್ಯವನ್ನು ನಾವು ಇವತ್ತು ಹೇಳ್ತೀವಿ ಕೇಳಿ. ಅದೇನಪ್ಪಾ ಅಂದ್ರೆ ನಾವು ರಾತ್ರಿ ಇರುವುದಕ್ಕಿಂತ ಬೆಳಿಗ್ಗೆ ಸ್ವಲ್ಪ ಜಾಸ್ತಿ ಎತ್ತರವಾಗಿರುತ್ತೇವೆ ಅಂದೆ, ವೈಜ್ಞಾನಿಕವಾಗಿಯೂ ಇದು ಸಾಬೀತಾಗಿದೆ. ಶಾಕ್ ಆಯ್ತಾಲ್ವಾ ಕೇಳಿ… ಬನ್ನಿ ಇದರ ಬಗ್ಗೆ ತಿಳಿಯೋಣ. 

2 Min read
Suvarna News
Published : Mar 08 2023, 06:19 PM IST
Share this Photo Gallery
  • FB
  • TW
  • Linkdin
  • Whatsapp
17

ನಮ್ಮ ದೇಹದ ಬಗ್ಗೆ ನಮಗೆ ತಿಳಿಯದೇ ಇರೋ ತುಂಬಾ ವಿಷ್ಯ ಇವೆ. ನಮ್ಮ ಹೈಟ್ ರಾತ್ರಿಗಿಂತ ಬೆಳಗ್ಗೆ ಒಂದು ಇಂಚು ಹೆಚ್ಚಾಗಿರುತ್ತಂತೆ (height increases in morning). ಇದನ್ನು ನಾವು ಹೇಳ್ತಿಲ್ಲಾ… ವಿಜ್ಞಾನವೇ ಇದನ್ನು ತಿಳಿಸಿದೆ. ಇದಕ್ಕೆ ಕಾರಣವನ್ನೂ ತಿಳಿಸಿದೆ. ಅದರ ಬಗ್ಗೆ ತಿಳಿದುಕೊಳ್ಳುವ ಕುತೂಹಲವಿದ್ದರೆ, ನೀವು ಮುಂದೆ ಓದಿ.

27

ನಮ್ಮ ಬೆನ್ನು ಮೂಳೆಯಲ್ಲಿ ಮತ್ತು ನಮ್ಮ ದೇಹದ ಇತರ ಭಾಗಗಳಲ್ಲಿ ಗುರುತ್ವಾಕರ್ಷಣೆಯ ಸಂಕುಚಿತ ಕಾರ್ಟಿಲೆಜ್ ನಿಂದಾಗಿ ಎತ್ತರ ಹೆಚ್ಚಾಗುತ್ತೆ ಎನ್ನುತ್ತಾರೆ ತಜ್ಞರು. ಉದಾಹರಣೆಗೆ ನಾವು ದಿನವಿಡೀ ಎದ್ದು ನಿಂತಾಗ ಅಥವಾ ಕುಳಿತುಕೊಳ್ಳುವಾಗ ನಮ್ಮ ಮೊಣಕಾಲುಗಳು ಹರಡಿಕೊಳ್ಳುತ್ತವೆ ಮತ್ತು ನಾವು ವಿಶ್ರಾಂತಿ ಭಂಗಿಯಲ್ಲಿ ಮಲಗಿರುವಾಗ, ಬೆನ್ನುಮೂಳೆಯು ಕುಗ್ಗುತ್ತದೆ. ಮಲಗಿದಾಗ ಬೆನ್ನು ಮೂಳೆ ಕುಗ್ಗೋದರಿಂದ ನಮ್ಮ ಹೈಟ್ ಕೊಂಚ ಸಣ್ಣದಾಗುತ್ತೆ, ಅದೇ ನಾವು ಬೆಳಿಗ್ಗೆ ಎಚ್ಚರವಾದಾಗ ನಮ್ಮ ಹೈಟ್ ಹೆಚ್ಚಾಗುತ್ತೆ ಅಷ್ಟೇ. 

37

ಬಾಹ್ಯಾಕಾಶದಿಂದ ಹಿಂದಿರುಗುವ ಗಗನಯಾತ್ರಿಗಳು ಭೂಮಿಯ ವಾತಾವರಣದಿಂದ ದೂರದಲ್ಲಿರುವ ಅವರ ಬೆನ್ನುಮೂಳೆಗಳ ಮೇಲೆ ಗುರುತ್ವಾಕರ್ಷಣೆಯ ಬಲದ ಕೊರತೆಯಿಂದಾಗಿ ಭೂಮಿಯ ಮೇಲಿನ ತಮ್ಮ ಸಾಮಾನ್ಯ ಎತ್ತರಕ್ಕಿಂತ ಕೆಲವು ಇಂಚುಗಳಷ್ಟು ಎತ್ತರವಾಗಿರುತ್ತಾರೆ ಅವರು ಮತ್ತೆ ಭೂಮಿಯ ಮೇಲೆ ಬಂದಾಗ, ಗುರುತ್ವಾಕರ್ಷಣೆಯು (gravity) ಕ್ರಮೇಣ ಅವುಗಳನ್ನು ತಮ್ಮ ಸಾಮಾನ್ಯ ಎತ್ತರಕ್ಕೆ ಮರಳಿಸುತ್ತದೆ.

47

ಹೈಟ್ ಬಗ್ಗೆ ಮತ್ತೊಂದಿಷ್ಟು ಮಾಹಿತಿ ತಿಳಿದುಕೊಳ್ಳೋಣ : 
ಆಗಷ್ಟೇ ಹುಟ್ಟಿದ ಮಕ್ಕಳಿಗೆ ಬಟ್ಟೆ ತಿಂಗಳು ತಿಂಗಳು ತರಬೇಕಾಗುತ್ತೆ, ಯಾಕಂದ್ರೆ ಆ ಮಕ್ಕಳಿಗೆ ಬಟ್ಟೆ ತಿಂಗಳೊಳಗೆ ಸಣ್ಣದಾಗುತ್ತೆ ಎಂದು ತಾಯಂದಿರು ಹೇಳೋದನ್ನು ಕೇಳಿರುತ್ತೀರಿ ಅಲ್ವಾ? ಹೌದು, ಮಕ್ಕಳು ಹುಟ್ಟಿದಾಗಿನಿಂದ ಒಂದು ವರ್ಷದವರೆಗೆ ವಿಪರೀತ ವೇಗವಾಗಿ ಬೆಳೆಯುತ್ತಾರಂತೆ. ಅಂದ್ರೆ ಒಂದು ವರ್ಷ ಆಗೋದ್ರೊಳಗೆ ಅವರು 10 ಇಂಚು (10 inches) ಎತ್ತರವಾಗಿರ್ತಾರೆ. 

57

ಮತ್ತೊಂದು ಶಾಕಿಂಗ್ ವಿಷ್ಯ ಗೊತ್ತಾ? ಹೈಟ್ ಜಾಸ್ತಿ ಆದ್ರೆ ಕ್ಯಾನ್ಸರ್ ರಿಸ್ಕ್ (cancer risk)ಕೂಡ ಜಾಸ್ತಿ ಇರುತ್ತೆ. ಲ್ಯಾನ್ಸೆಟ್ ಆಂಕೊಲಾಜಿ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ನೀವು ಎತ್ತರವಾಗಿದ್ದಷ್ಟೂ ಕ್ಯಾನ್ಸರ್ ಅಪಾಯ ಹೆಚ್ಚಾಗುತ್ತದೆ. 5 ಅಡಿ 1 ಇಂಚುಗಿಂತ ಕಡಿಮೆಯಿಂದ 5 ಅಡಿ 8 ಇಂಚುಗಳಷ್ಟು ಎತ್ತರವಿರುವ ಒಂದು ದಶಲಕ್ಷಕ್ಕೂ ಹೆಚ್ಚು ಬ್ರಿಟಿಷ್ ಮಹಿಳೆಯರ ವೈದ್ಯಕೀಯ ದಾಖಲೆಗಳನ್ನು ಪರಿಶೀಲಿಸಿದ ನಂತರ, ಅತಿ ಎತ್ತರದ ಮಹಿಳೆಯರಿಗೆ ಕ್ಯಾನ್ಸರ್ ಬರುವ ಅಪಾಯವು ಶೇಕಡಾ 37 ರಷ್ಟು ಹೆಚ್ಚಾಗಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

67

ಆದರೆ ಮತ್ತೊಂದೆಡೆ, ಕುಳ್ಳಗಿರುವುದು ಹೃದ್ರೋಗದ ಹೆಚ್ಚಿನ ಅಪಾಯ (heart problem) ಉಂಟು ಮಾಡಬಹುದು ಎಂದು ಯುರೋಪಿಯನ್ ಹಾರ್ಟ್ ಜರ್ನಲ್ನ ಅಧ್ಯಯನ ತಿಳಿಸಿದೆ. ಅತಿ ಕುಳ್ಳಗಿನ ವಯಸ್ಕರು (5 ಅಡಿ 3 ಇಂಚುಗಳಿಗಿಂತ ಕಡಿಮೆ) ಎತ್ತರದ ಜನರಿಗಿಂತ ಹೃದಯರಕ್ತನಾಳದ ಕಾಯಿಲೆಯನ್ನು ಹೊಂದುವ ಮತ್ತು ಸಾಯುವ ಹೆಚ್ಚಿನ ಅಪಾಯವನ್ನು ಹೊಂದಿದ್ದಾರೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

77

ಇನ್ನೊಂದು ಸ್ಟಡಿ ಹೇಳುತ್ತೆ, ಕಡಿಮೆ ಹೈಟ್ ಇರೋ ವ್ಯಕ್ತಿಗಿಂತ, ಹೆಚ್ಚು ಹೈಟ್ ಇರೋ ವ್ಯಕ್ತಿ, ಉತ್ತಮ ಉದ್ಯೋಗವನ್ನು ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ ಅಂತೆ, ಜೊತೆಗೆ ಅವರಿಗೆ ಹೆಚ್ಚು ಸ್ಯಾಲರಿ ಪಡೆದುಕೊಳ್ಳುವ ಅವಕಾಶವು (more money job) ಹೆಚ್ಚಾಗಿರುತ್ತೆ ಅಂತೆ. ಹೌದಾ? ನಮಗಂತೂ ಗೊತ್ತಿಲ್ಲ. 

About the Author

SN
Suvarna News
ಜೀವನಶೈಲಿ
ಕ್ಯಾನ್ಸರ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved