ದೇಹ , ಮನಸ್ಸನ್ನು ಫಿಟ್ ಆಗಿರಿಸಿಕೊಳ್ಳಲು ಈ 6 ಅಭ್ಯಾಸಗಳಿರಲಿ
ನಮ್ಮ ಇಡೀ ದಿನ ಹೇಗೆ ಹೋಗುತ್ತದೆ ಎಂಬುದು ನಮ್ಮ ಬೆಳಗಿನ ದಿನಚರಿಯ ಮೇಲೆ ಹೆಚ್ಚಿನ ಪ್ರಮಾಣದಲ್ಲಿ ಅವಲಂಬಿತವಾಗಿರುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಕೆಲವು ಬೆಳಗಿನ ಅಭ್ಯಾಸಗಳು (Healthy Morning Routine) ಒತ್ತಡವನ್ನು ನಿವಾರಿಸುತ್ತವೆ, ಚಯಾಪಚಯ ಕ್ರಿಯೆಯನ್ನು ಸುಧಾರಿಸುತ್ತವೆ, ರಾತ್ರಿ ಚೆನ್ನಾಗಿ ನಿದ್ರೆ ಬರುವಂತೆ ಮಾಡುತ್ತದೆ ಮತ್ತು ದೇಹವನ್ನು ಒಳಗಿನಿಂದ ಆರೋಗ್ಯಕರವಾಗಿಸುತ್ತದೆ.

ಬೆಳಗ್ಗೆ ಎದ್ದು ಯಾವ ಕೆಲಸ ಮಾಡಿದರೆ ದೇಹ -ಮನಸ್ಸು ಫಿಟ್ ಆಗಿರಲು ಸಾಧ್ಯ ?
ಸಾಕಷ್ಟು ನೀರು ಕುಡಿಯಿರಿ (Drink lot of water)
ದೇಹವು ಎಲ್ಲಾ ಸಮಯದಲ್ಲೂ ಕೆಲಸ ಮಾಡುತ್ತದೆ. ಮಲಗುವಾಗಲೂ. ಬೆಳಗ್ಗೆ ಎದ್ದ ನಂತರ, ದೇಹಕ್ಕೆ ಶಕ್ತಿಯ ಕೊರತೆ ಇರುತ್ತದೆ. ಅದನ್ನು ರೀಚಾರ್ಜ್ ಮಾಡಬೇಕಾಗುತ್ತದೆ. ಇದಕ್ಕಾಗಿ, ಮುಂಜಾನೆ ನಿಮ್ಮನ್ನು ನೀವು ಡೀಹೈಡ್ರೇಟ್ ಮಾಡಿಕೊಳ್ಳಿ. ಎದ್ದ ನಂತರ ಉಗುರುಬೆಚ್ಚಗಿನ ನೀರು ಕುಡಿಯುವುದನ್ನು ಅಭ್ಯಾಸ ವಾಗಿಸಿ.
ಬೆಳಗ್ಗೆ ಎದ್ದ ತಕ್ಷಣ ನೀರು ಕುಡಿಯುವುದರಿಂದ ದೇಹದಿಂದ ವಿಷಕಾರಿ ವಸ್ತುಗಳನ್ನು ತೆಗೆದುಹಾಕುವ ಮೂಲಕ ಕೆಲಸ ಮಾಡುತ್ತದೆ. ಇದು ಹೊಟ್ಟೆಯ ಸಮಸ್ಯೆ, ನಿರ್ಜಲೀಕರಣ ಕಾಯಿಲೆಗಳನ್ನು ಉಂಟುಮಾಡುವುದಿಲ್ಲ ಮತ್ತು ದೇಹವನ್ನು ಒಳಗಿನಿಂದ ಆರೋಗ್ಯಕರವಾಗಿರಿಸುತ್ತದೆ.
ನಿಂಬೆ-ಶುಂಠಿ ಗ್ರೀನ್ ಟೀ(drink lemon -ginger green tea)
ದೇಹವು ನೀರನ್ನು ಇಂಧನವಾಗಿ ಪಡೆದ ನಂತರ ಸಕ್ರಿಯವಾಗಿರಲು ಮತ್ತು ತೂಕ ಇಳಿಸಲು ಕೆಲಸ ಮಾಡಿ. ನಿಂಬೆ ಮತ್ತು ಶುಂಠಿಯೊಂದಿಗೆ ಗ್ರೀನ್ ಟೀ ಪ್ರಬಲ ಉತ್ಕರ್ಷಣ ನಿರೋಧಕವಾಗಿದ್ದು, ಇದು ಚಯಾಪಚಯವನ್ನು ಸುಧಾರಿಸುತ್ತದೆ ಮತ್ತು ಕೊಬ್ಬನ್ನು ವೇಗವಾಗಿ ಕಡಿಮೆ ಮಾಡುತ್ತದೆ.
ಶುಂಠಿ ಅಜೀರ್ಣ ಮತ್ತು ಗ್ಯಾಸ್ ಸಮಸ್ಯೆಯನ್ನು ನಿವಾರಿಸುತ್ತದೆ. ಅದರ ಜೊತೆಗೆ ನಿಂಬೆಯು ದೇಹಕ್ಕೆ ವಿಟಮಿನ್ ಸಿ ನೀಡುತ್ತದೆ. ಸತತ ಮೂರು ದಿನಗಳ ಕಾಲ ಈ ಗ್ರೀನ್ ಚಹಾವನ್ನು ಕುಡಿಯುವುದರಿಂದ ನಿಮ್ಮೊಳಗೆ ಉತ್ತಮ ಬದಲಾವಣೆಯನ್ನು ಅನುಭವಿಸುವಂತೆ ಮಾಡುತ್ತದೆ
ಬೆಳಗಿನ ಉಪಾಹಾರದ ಬಗ್ಗೆ ಗಮನ ಕೊಡಿ (Do not miss your brrakfast): ನ್ಯೂಟ್ರಿಷನಿಸ್ಟ್ ಪ್ರಕಾರ, ನೀವು ಆರೋಗ್ಯಕರ ಉಪಾಹಾರದೊಂದಿಗೆ ದಿನವನ್ನು ಪ್ರಾರಂಭಿಸಬೇಕು. ಆದರೆ, ಕಚೇರಿ ಗಡಿಬಿಡಿಯಲ್ಲಿ ಬೆಳಗಿನ ಉಪಾಹಾರದ ಬಗ್ಗೆ ಸರಿಯಾದ ಗಮನ ನೀಡಲು ಹೆಚ್ಚಿನ ಜನರಿಗೆ ಸಾಧ್ಯವಾಗುತ್ತಿಲ್ಲ. ಕೆಲವರು ಬೆಳಗ್ಗೆ ಚಹಾದೊಂದಿಗೆ ಕೆಲಸ ಮಾಡುತ್ತಾರೆ ಇದು ಹಾನಿಕಾರಕ.
ಉಪಾಹಾರವನ್ನು ಸರಿಯಾಗಿ ಸೇವಿಸದಿರುವುದು ಅಥವಾ ಉಪಾಹಾರವನ್ನು ಮಿಸ್ ಮಾಡಿಕೊಳ್ಳುವುದು ಚಯಾಪಚಯ ಕ್ರಿಯೆಯನ್ನು ಹಾಳುಮಾಡುತ್ತದೆ ಮತ್ತು ದೇಹದ ಕಾರ್ಯವನ್ನು ತಡೆಯುತ್ತದೆ. ಉಪಾಹಾರವನ್ನು ಮುಂಚಿತವಾಗಿ ಯೋಜಿಸಿ ಮತ್ತು ನೀವು ಆರೋಗ್ಯವಾಗಿರಲು ಸಹಾಯಕವಾಗಿರುವ ಆಹಾರಗಳನ್ನು ಸೇವಿಸಿ.
ಬೇಗನೆ ಆಕ್ಟಿವ್ ಆಗಿ (Be active): ಎದ್ದ ತಕ್ಷಣ ಜಿಮ್ ಅಥವಾ ಓಟಕ್ಕೆ ನಿಮ್ಮನ್ನು ನೀವು ಸಿದ್ಧಗೊಳಿಸುವುದು ಕಷ್ಟದ ಕೆಲಸ, ಆದರೆ ತಜ್ಞರ ಪ್ರಕಾರ, ದೈಹಿಕ ಚಟುವಟಿಕೆಯೊಂದಿಗೆ ದಿನವನ್ನು ಪ್ರಾರಂಭಿಸುವುದು ಯಾವಾಗಲೂ ಒಳ್ಳೆಯದು. ಇದು ಎಂಡಾರ್ಫಿನ್ ಹಾರ್ಮೋನ್ ಅನ್ನು ಉತ್ಪಾದಿಸುತ್ತದೆ, ಇದನ್ನು ಹ್ಯಾಪಿ ಹಾರ್ಮೋನ್ ಎಂದೂ ಕರೆಯಲಾಗುತ್ತದೆ. ಇದು ಮನಸ್ಥಿತಿಯನ್ನು ಉತ್ತಮವಾಗಿರಿಸುತ್ತದೆ ಮತ್ತು ದಿನವು ಅತ್ಯುತ್ತಮ ರೀತಿಯಲ್ಲಿ ಪ್ರಾರಂಭವಾಗುತ್ತದೆ.
ಪುಸ್ತಕ ಓದಿ (Read books): ಮುಂಜಾನೆ ಪತ್ರಿಕೆಗಳು ಅಥವಾ ಯಾವುದೇ ನಿಯತಕಾಲಿಕೆಗಳನ್ನು ಓದಲು ಪ್ರಯತ್ನಿಸಿ. ಇದರಿಂದ ಮನಸ್ಸು ಹಗುರವಾಗಿ ಮನಸ್ಸನ್ನು ಕೇಂದ್ರೀಕರಿಸುತ್ತದೆ. ನಿಮ್ಮ ಆಲೋಚನೆಗಳನ್ನು ಬರೆಯಲು ಸಹ ಪ್ರಯತ್ನಿಸಬಹುದು. ಇದು ಗುರಿಗಳು ಮತ್ತು ಆದ್ಯತೆಗಳಿಗೆ ಸ್ಪಷ್ಟತೆಯನ್ನು ನೀಡುತ್ತದೆ. ಈ ಅಭ್ಯಾಸವು ಒಂದು ರೀತಿಯಲ್ಲಿ ಚಿಕಿತ್ಸೆಯಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಸ್ಮರಣೆಯನ್ನು ಹೆಚ್ಚಿಸುತ್ತದೆ.
ಹಿಂದಿನ ರಾತ್ರಿಯೇ ಅಗತ್ಯ ನಿರ್ಧಾರ ತೆಗೆದುಕೊಳ್ಳಿ (Take decission one day before)
ಆರೋಗ್ಯ ತಜ್ಞರು ಹೇಳುವಂತೆ ಬೆಳಗ್ಗಿನ ಅಗತ್ಯ ವಸ್ತುಗಳನ್ನು ಹಿಂದಿನ ರಾತ್ರಿಯೇ ನಿರ್ಧರಿಸಬೇಕು. ಯಾವುದೇ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳಲು ಬೆಳಿಗ್ಗೆಯನ್ನು ಉತ್ತಮವೆಂದು ಪರಿಗಣಿಸಲಾಗುವುದಿಲ್ಲ. ಇದರಿಂದ ಮೆದುಳಿನ ಮೇಲೆ ಸಹ ಒತ್ತಡ ಬೀರುತ್ತದೆ ಜೊತೆಗೆ ಸಮಯವೂ ವ್ಯರ್ಥ.
ಬೆಳಿಗ್ಗೆ ಯಾವುದಾದರೂ ವಿಷಯದ ಮೇಲೆ ಹೆಚ್ಚು ಮೆದುಳನ್ನು ಖರ್ಚು ಮಾಡುವುದರಿಂದ ಒತ್ತಡ ಹೆಚ್ಚುತ್ತದೆ ಮತ್ತು ರಕ್ತದೊತ್ತಡ ಹೆಚ್ಚಾಗುತ್ತದೆ. ಇದು ಕೆಲಸ ಮಾಡುವ ಸಾಮರ್ಥ್ಯವನ್ನು ನಿಧಾನಗೊಳಿಸುತ್ತದೆ. ರಾತ್ರಿ ಯಲ್ಲಿ ಅಗತ್ಯ ನಿರ್ಧಾರಗಳನ್ನು ತೆಗೆದುಕೊಳ್ಳುವುದರಿಂದ ನಿದ್ರೆ ಸುಧಾರಿಸುತ್ತದೆ ಮತ್ತು ಬೆಳಿಗ್ಗೆ ನೀವು ನಿರಾಳವಾಗಿರುತ್ತೀರಿ.