ಸೋರೆಕಾಯಿ ಜ್ಯೂಸ್ ಸೇವನೆ ಹೃದಯದ ಸಮಸ್ಯೆಗೆ ಪರಿಹಾರ

First Published Apr 16, 2021, 4:49 PM IST

ಸೋರೆಕಾಯಿ ತರಕಾರಿಯನ್ನು ಅನೇಕರು ಇಷ್ಟಪಡುವುದಿಲ್ಲ. ಈ ತರಕಾರಿ ಉದ್ದವಾಗಿದ್ದು, ಸಾಕಷ್ಟು ನೀರು ಹೊಂದಿರುತ್ತದೆ. ಇದು ಬೇಸಿಗೆ ಕಾಲದಲ್ಲಿ ಅತ್ಯಂತ ಪ್ರಯೋಜನಕಾರಿ. ಸೋರೆಕಾಯಿಯನ್ನು ಸಲಾಡ್ ಗಳು, ರೈತಾಗಳು, ಸೂಪ್ಗಳು, ಸಾರು ಅಥವಾ ರಸಗಳ ರೂಪದಲ್ಲಿಯೂ ಸೇವಿಸಬಹುದು. ಕಬ್ಬಿಣದ ಅಂಶವು ಸೋರೆಕಾಯಿಯಲ್ಲಿ ಹೇರಳವಾಗಿ ಕಂಡುಬರುತ್ತದೆ. ಕಡಿಮೆ ಹಿಮೋಗ್ಲೋಬಿನ್ ಹೊಂದಿರುವ ಜನರು ಸೋರೆಕಾಯಿ ಸೇವಿಸಿದರೆ ಹಿಮೋಗ್ಲೋಬಿನ್ ಅನ್ನು ಕಾಪಾಡಿಕೊಳ್ಳಬಹುದು. ಇದು ಫೈಬರ್ ಅನ್ನು ಸಹ ಒಳಗೊಂಡಿದೆ.