ಈ ನ್ಯಾಚುರಲ್ ಬ್ಲಡ್ ಥಿನ್ನರ್ ಹೃದಯಾಘಾತ ಅಪಾಯ ಕಡಿಮೆ ಮಾಡುತ್ತೆ
ನೈಸರ್ಗಿಕ ಬ್ಲಡ್ ಥಿನ್ನರ್‌ಗಳು ರಕ್ತ ಹೆಪ್ಪುಗಟ್ಟುವಿಕೆಯನ್ನು ಉಂಟು ಮಾಡುವ ರಕ್ತದ ಸಾಮರ್ಥ್ಯವನ್ನು ಕಡಿಮೆ ಮಾಡುವ ಪದಾರ್ಥಗಳಾಗಿವೆ. ಬಿದ್ದಾಗ, ಗಾಯವಾದಾಗ ಹೆಚ್ಚಿನ ರಕ್ತಸ್ರಾವ ಉಂಟಾಗುತ್ತೆ. ಈ ಸಮಯದಲ್ಲಿ ರಕ್ತಹೆಪ್ಪುಗಟ್ಟುವಿಕೆ ಅತ್ಯಗತ್ಯ. ಆದರೆ ಕೆಲವೊಮ್ಮೆ ರಕ್ತ ಹೆಪ್ಪುಗಟ್ಟುವಿಕೆಯು ಹೆಚ್ಚು ಸಂಗ್ರಹವಾಗಬಹುದು, ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದುದರಿಂದ ನೀವು ನಿಮ್ಮ ಡಯಟ್ ನಲ್ಲಿ ಈ ಆಹಾರಗಳನ್ನು ಸೇರಿಸುವ ಮೂಲಕ ನೀವು ಹೃದಯಾಘಾತ-ಪಾರ್ಶ್ವವಾಯುವಿನಿಂದ ನಿಮ್ಮನ್ನು ನೀವು ರಕ್ಷಿಸಬೇಕು.

ಜನ್ಮಜಾತ ಹೃದಯ ಸಮಸ್ಯೆಗಳು (heart problem), ಹೃದಯಾಘಾತಗಳು, ಅಥವಾ ಪಾರ್ಶ್ವವಾಯುವಿನಂತಹ ಕೆಲವು ವೈದ್ಯಕೀಯ ಸಮಸ್ಯೆ ಇದ್ದಲ್ಲಿ, ಅದನ್ನು ಕಡಿಮೆ ಮಾಡಲು ರಕ್ತ-ತೆಳು ಮಾಡುವಂತಹ ಔಷಧಿಗಳನ್ನು ಸೇವಿಸಬೇಕು. ಇದನ್ನು ಬ್ಲಡ್ ಥಿನ್ನರ್ ಎಂದೂ ಕರೆಯಲಾಗುತ್ತದೆ. ರಕ್ತವು ತೆಳ್ಳಗಿನ ಆಂಟಿಪ್ಲೇಟ್ಲೆಟ್ ಗಳು ಹೆಪ್ಪುಗಟ್ಟುವಿಕೆಯನ್ನು ತಡೆಗಟ್ಟಲು ರಕ್ತ ಕಣಗಳು ಒಂದಕ್ಕೊಂದು ಅಂಟಿಕೊಳ್ಳುವುದನ್ನು ತಡೆಯುತ್ತವೆ.
ರಕ್ತವು ದಪ್ಪವಾಗುವುದರ ಚಿಹ್ನೆಗಳು ಯಾವುವು?
ದೇಹದಲ್ಲಿ ರಕ್ತವು ದಪ್ಪಗಾಗಲು ಪ್ರಾರಂಭಿಸಿದಾಗ, ನಿಮ್ಮ ದೇಹವು ಅದರ ಚಿಹ್ನೆಗಳನ್ನು ಅನೇಕ ರೀತಿಯಲ್ಲಿ ನೀಡಲು ಪ್ರಾರಂಭಿಸುತ್ತದೆ. ಇದರಲ್ಲಿ ತಲೆತಿರುಗುವಿಕೆ, ಮುಟ್ಟಿನ ಸಮಯದಲ್ಲಿ ಅಧಿಕ ರಕ್ತದ ಹರಿವು, ತಲೆನೋವು, ಅಧಿಕ ರಕ್ತದೊತ್ತಡ, ಚರ್ಮದಲ್ಲಿ ತುರಿಕೆ, ದೃಷ್ಟಿ ಮಸುಕಾಗುವಿಕೆ, ಸಂಧಿವಾತ ಮೊದಲಾದ ಸಮಸ್ಯೆಗಳು ಸೇರಿವೆ.
ದೇಹದಲ್ಲಿ ರಕ್ತ ದಪ್ಪವಾಗೋದನ್ನು ಮತ್ತು ರಕ್ತ ಹೆಪ್ಪುಗಟ್ಟುವಿಕೆ ಉಂಟಾಗುವುದನ್ನು ತಡೆಯಲು ನೀವು ವಿವಿಧ ನೈಸರ್ಗಿಕ ವಸ್ತುಗಳನ್ನು ಸಹ ಬಳಸಬಹುದು. ಆದರೆ, ಅವುಗಳನ್ನು ಬಳಸುವ ಮೊದಲು ನಿಮ್ಮ ವೈದ್ಯರನ್ನು ಒಮ್ಮೆ ಸಂಪರ್ಕಿಸುವುದು ಮುಖ್ಯ. ಇದರಿಂದ ಯಾವುದೇ ರೀತಿಯ ಸೈಡ್ ಎಫೆಕ್ಟ್ ಉಂಟಾಗೋದನ್ನು ತಡೆಯಬಹುದು.
ಬೆಳ್ಳುಳ್ಳಿ ತಿನ್ನೋದ್ರಿಂದ ರಕ್ತ ದುರ್ಬಲಗೊಳ್ಳುತ್ತದೆಯೇ?
ರುಚಿಗಾಗಿ ಆಹಾರಕ್ಕೆ ಸೇರಿಸಲಾಗುವ ಬೆಳ್ಳುಳ್ಳಿಯು ನ್ಯಾಚುರಲ್ ಆಂಟಿ ಬಯೋಟಿಕ್ (natural anti biotech) ಮತ್ತು ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಸಹ ಹೊಂದಿದೆ. ಆಂಟಿಥ್ರೊಂಬೊಟಿಕ್ ಏಜೆಂಟ್ ಎಂಬುದು ರಕ್ತದಲ್ಲಿ ಹೆಪ್ಪುಗಟ್ಟುವುದನ್ನು ತಡೆಯುವ ಒಂದು ವಸ್ತು. ಇದು ಬೆಳ್ಳುಳ್ಳಿಯಲ್ಲಿ ಹೆಚ್ಚಾಗಿದೆ ಎಂದು ತಿಳಿದು ಬಂದಿದೆ.
ವಿಟಮಿನ್ ಇ- ಪಾಲಕ್ ಸೊಪ್ಪು, ಬಾದಾಮಿ, ಸೂರ್ಯಕಾಂತಿ
ವಿಟಮಿನ್ ಇ ರಕ್ತದಲ್ಲಿ ಹೆಪ್ಪುಗಟ್ಟುವ ಗುಣವನ್ನು ಕಡಿಮೆ ಮಾಡುತ್ತದೆ. ಈ ಪರಿಣಾಮಗಳು ಒಬ್ಬ ವ್ಯಕ್ತಿಯು ತೆಗೆದುಕೊಳ್ಳುವ ವಿಟಮಿನ್ ಇ ಪ್ರಮಾಣವನ್ನು ಸಹ ಅವಲಂಬಿಸಿರುತ್ತದೆ. ಬ್ಲಡ್ ಥಿನ್ನರ್ ಔಷಧಿಗಳನ್ನು ತೆಗೆದುಕೊಳ್ಳುವ ಜನರು ವಿಟಮಿನ್ ಇ ಸಪ್ಲಿಮೆಂಟ್ಸ್ ತೆಗೆದುಕೊಳ್ಳೋದನ್ನು ತಪ್ಪಿಸಬೇಕು ಎಂದು ತಜ್ಞರು ತಿಳಿಸಿದ್ದಾರೆ.
ರಕ್ತವನ್ನು ದುರ್ಬಲಗೊಳಿಸಲು ಅರಿಶಿನ ಸೇವಿಸಿ
ಜನರು ದೀರ್ಘ ಕಾಲದಿಂದ ಅರಿಶಿನವನ್ನು ಔಷಧೀಯ ರೂಪದಲ್ಲಿ ಬಳಸುತ್ತಿದ್ದಾರೆ. ಅರಿಶಿನದಲ್ಲಿರುವ ಕರ್ಕ್ಯುಮಿನ್ ಉರಿಯೂತ ಶಮನಕಾರಿ ಮತ್ತು ರಕ್ತ-ತೆಳುವಾಗುವಿಕೆ (blood thinner) ಅಥವಾ ಆಂಟಿಕೊಯಾಗುಲಂಟ್ ಗುಣಲಕ್ಷಣಗಳನ್ನು ಹೊಂದಿದೆ. ದೇಹದಲ್ಲಿ ರಕ್ತ ಹೆಪ್ಪುಗಟ್ಟುವಿಕೆಗಳು ರೂಪುಗೊಳ್ಳದಂತೆ ತಡೆಯಲು ಇದು ಕೆಲಸ ಮಾಡುತ್ತದೆ.
ಇಪಿಎಂಎ ಜರ್ನಲ್‌ನಲ್ಲಿ 2019 ರ ವರದಿಅರಿಶಿನವು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯಲು ಸಹಾಯ ಮಾಡುತ್ತದೆ. ಆದ್ದರಿಂದ, ಅರಿಶಿನವನ್ನು ರಕ್ತವನ್ನು ತೆಳುಗೊಳಿಸುವ ಔಷಧಿಗಳೊಂದಿಗೆ ತೆಗೆದುಕೊಳ್ಳಲು ಶಿಫಾರಸು ಮಾಡಲಾಗುವುದಿಲ್ಲ. ನೀವು ಆಹಾರಗಳು, ಸೂಪ್ ಮತ್ತು ಬೆಚ್ಚಗಿನ ನೀರಿನೊಂದಿಗೆ ಅರಿಶಿನ ಬೆರೆಸಿ ಸೇವಿಸಬಹುದು.
ಶುಂಠಿ ತಿನ್ನೋದ್ರಿಂದ ರಕ್ತ ದುರ್ಬಲಗೊಳ್ಳುತ್ತದೆಯೇ?
ಶುಂಠಿಯು ಉರಿಯೂತ ಶಮನಕಾರಿ ಮಸಾಲೆಯಾಗಿದ್ದು, ಇದು ರಕ್ತ ಹೆಪ್ಪುಗಟ್ಟುವಿಕೆಯನ್ನು ತಡೆಯುತ್ತದೆ. ಇದು ಸ್ಯಾಲಿಸಿಲೇಟ್ ಎಂಬ ನೈಸರ್ಗಿಕ ಆಮ್ಲವನ್ನು ಹೊಂದಿದೆ. ಅಸಿಟೈಲ್ಸಾಲಿಸಿಲಿಕ್ ಆಮ್ಲ ಎಂದು ಕರೆಯಲ್ಪಡುವ ಆಸ್ಪಿರಿನ್ ಸ್ಯಾಲಿಸಿಲೇಟ್, ಸಂಶ್ಲೇಷಿತ ಗುಣಲಕ್ಷಣಗಳನ್ನು ಹೊಂದಿರುವ ಶಕ್ತಿಯುತ ಬ್ಲಡ್ ಥಿನ್ನರ್ ಆಗಿದೆ.
ರಕ್ತ ದಪ್ಪವಾಗಿದ್ದರೆ ದುರ್ಬಲಗೊಳಿಸಲು ಕೆಂಪು ಮೆಣಸು ತಿನ್ನಿ
ಕೆಂಪು ಮೆಣಸಿನಕಾಯಿ ನಮ್ಮ ರಕ್ತವನ್ನು ದುರ್ಬಲಗೊಳಿಸಲು ಸಹಾಯ ಮಾಡುವ ಗುಣಲಕ್ಷಣಗಳಿಂದ ಸಮೃದ್ಧವಾಗಿವೆ. ಸ್ಯಾಲಿಸಿಲೇಟ್‌ಗಳು ಕೆಂಪು ಮೆಣಸುಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತವೆ. ಆದುದರಿಂದ ಇದು ಬೆಸ್ಟ್ ಬ್ಲಡ್ ಥಿನ್ನರ್ ಆಗಿದೆ. ಆಹಾರದಲ್ಲಿ ಕೆಂಪು ಮೆಣಸನ್ನು ಸೇರಿಸೋದ್ರಿಂದ ನಿಮ್ಮ ರಕ್ತದೊತ್ತಡವನ್ನು ಕಡಿಮೆ ಮಾಡಬಹುದು ಮತ್ತು ರಕ್ತ ಪರಿಚಲನೆಯನ್ನು ಸುಧಾರಿಸಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.