ರಾತ್ರಿ ತಡವಾಗಿ ಮಲಗುವ ಅಭ್ಯಾಸ ಇರೋರಿಗೆ ಶಾಕಿಂಗ್ ಸುದ್ದಿ; ಚಿಕ್ಕವಯಸಿನಲ್ಲೇ ಕೂದಲು ಉದುರುವಿಕೆಗೆ ಇದೂ ಒಂದು ಕಾರಣ!
ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಆದರೆ, ಕೂದಲು ಉದುರುವುದಕ್ಕೆ ಕಾರಣಗಳೇನು ಗೊತ್ತಾ?
ಸಾಮಾನ್ಯವಾಗಿ ಕೂದಲು ಉದುರುವುದು ವಯಸ್ಸಾದಂತೆ ಸಂಭವಿಸುತ್ತದೆ, ಆದರೆ ಪ್ರಸ್ತುತ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರು ಸಮಸ್ಯೆ ಹೆಚ್ಚಿದೆ. ಅದಕ್ಕೆ ಕೆಲವು ನಿರ್ದಿಷ್ಟ ಕಾರಣಗಳಿರಬಹುದು. ಅನೇಕ ಯುವಕರು ಈಗ ಕೂದಲು ಉದುರುವ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವ ಕೆಲವು ಸಾಮಾನ್ಯ ಅಂಶಗಳ ಬಗ್ಗೆ ವೈದ್ಯಕೀಯ ಸಂಶೋಧಕರು ಹೇಳಿದ ವಿವರಗಳನ್ನು ಈಗ ತಿಳಿದುಕೊಳ್ಳೋಣ.
ಚಿತ್ರ: ಗೆಟ್ಟಿ
ಕೂದಲು ಉದುರುವುದಕ್ಕೆ ಪ್ರಮುಖ ಕಾರಣ ಒತ್ತಡ. ಅತಿಯಾದ ಒತ್ತಡವು ದೇಹದಲ್ಲಿ ಕಾರ್ಟಿಸೋಲ್ ಮಟ್ಟವನ್ನು ಹೆಚ್ಚಿಸುತ್ತದೆ, ಇದು ನಿಮ್ಮ ಕೂದಲಿಗೆ ಹಾನಿಕಾರಕ ಹಾರ್ಮೋನ್. ಇದರಿಂದ ಕೂದಲು ಉದುರುತ್ತದೆ.
ಅಲ್ಲದೆ, ನಿಮ್ಮ ಆಹಾರ ಕೂಡ ನಿಮ್ಮ ಕೂದಲಿನ ಮೇಲೆ ಪರಿಣಾಮ ಬೀರುತ್ತದೆ. ಪ್ರಸ್ತುತ, ಆಹಾರದಲ್ಲಿ ಹೆಚ್ಚು ಜಂಕ್ ಫುಡ್ ಸೇವಿಸುತ್ತಾರೆ. ಇದರಿಂದ ಪ್ರೋಟೀನ್ ಕಡಿಮೆಯಾಗುತ್ತದೆ.. ಕಾರ್ಬೋಹೈಡ್ರೇಟ್‌ಗಳು ಹೆಚ್ಚಾಗುತ್ತವೆ, ಆದ್ದರಿಂದ ಈ ಆಹಾರವು ದೇಹದಲ್ಲಿ ಉರಿಯೂತವನ್ನು ಉಂಟುಮಾಡುತ್ತದೆ. ಉಷ್ಣತೆಯನ್ನು ಹೆಚ್ಚಿಸುತ್ತದೆ. ಹೀಗೂ ಕೂಡ ಇವು ನಿಮ್ಮ ಕೂದಲು ಉದುರುವಿಕೆಯನ್ನು ಹೆಚ್ಚಿಸುತ್ತವೆ.
ನಿಮ್ಮ ಈ ತಪ್ಪುಗಳಿಂದಲೂ ಕೂದಲು ಉದುರಬಹುದು
ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವುದಕ್ಕೆ ಪ್ರಮುಖ ಕಾರಣಗಳಲ್ಲಿ ಸ್ಕಾಲ್ಪ್ ಸೋರಿಯಾಸಿಸ್ ಅಥವಾ ಹೆವಿ ತಲೆಹೊಟ್ಟು ಮುಂತಾದ ಸ್ಕಾಲ್ಪ್ ಕಾಯಿಲೆಗಳು ಕೂಡ ಕಾರಣವಾಗಿರುತ್ತವೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.
ಧೂಮಪಾನ ಮಾಡುವವರಲ್ಲಿ ಕೂದಲು ಉದುರುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಯಲ್ಲಿ ತಿಳಿದುಬಂದಿದೆ. ಈಗಾಗಲೇ ತುಂಬಾ ತೆಳುವಾದ ಕೂದಲು ಇರುವವರಿಗೆ ಹೆಚ್ಚಿನ ಅಪಾಯವಿದೆ ಎಂದು ವೈದ್ಯಕೀಯ ತಜ್ಞರು ಹೇಳುತ್ತಾರೆ.
ನಿಮ್ಮ ಜೀವನಶೈಲಿ ಕೂಡ ನಿಮ್ಮ ಕೂದಲ ಮೇಲೆ ಪರಿಣಾಮ ಬೀರುತ್ತದೆ. ನೀವು ಯಾವಾಗ ಮಲಗುತ್ತೀರಿ, ಎಷ್ಟು ಹೊತ್ತು ಮಲಗುತ್ತೀರಿ, ಸರಿಯಾದ ವ್ಯಾಯಾಮ ಮಾಡುತ್ತೀರೋ ಇಲ್ಲವೋ, ಒಟ್ಟಾರೆ ಎಷ್ಟು ಒತ್ತಡಕ್ಕೆ ಒಳಗಾಗುತ್ತೀರಿ, ಇವೆಲ್ಲವೂ ಚಿಕ್ಕ ವಯಸ್ಸಿನಲ್ಲೇ ಕೂದಲು ಉದುರುವಿಕೆಗೆ ಕಾರಣವಾಗಬಹುದು.
ಕೂದಲು ಉದುರುವಿಕೆ
ಅಲೋಪೆಸಿಯಾ ಅರೆಟಾ, ಪೋಷಕಾಂಶಗಳ ಕೊರತೆ ಅಥವಾ ಔಷಧಿಗಳ ಬಳಕೆ ಮುಂತಾದ ಆರೋಗ್ಯ ಸಂಬಂಧಿ ಸಮಸ್ಯೆಯಿಂದಲೂ ಕೂದಲು ಉದುರುತ್ತದೆ. ಕೂದಲು ಉದುರುವುದಕ್ಕೆ ಕಾರಣಗಳನ್ನು ಪರಿಗಣಿಸಿ ವೈದ್ಯರು ಚಿಕಿತ್ಸೆ ನೀಡುತ್ತಾರೆ.
ಕೂದಲು ಉದುರುವುದಕ್ಕೆ ವೃದ್ಧಾಪ್ಯ, ವಂಶವಾಹಿ, ಟೆಸ್ಟೋಸ್ಟೆರಾನ್ ಹಾರ್ಮೋನ್‌ನಲ್ಲಿನ ಬದಲಾವಣೆಗಳು ಕಾರಣವಾಗಿರುತ್ತದೆ ಎಂದು ವೈದ್ಯಕೀಯ ಸಂಶೋಧಕರು ಹೇಳುತ್ತಾರೆ. ಯೌವನದ ನಂತರ ಯಾವಾಗ ಬೇಕಾದರೂ ಬೋಳು ಬರಬಹುದು ಎಂದು ಹೇಳುತ್ತಾರೆ.