ಮುಂದೊಂದು ದಿನ ಗಾಳಿ ಸಿಗದೇ ಕಷ್ಟವಾಗಬಹುದು, ಇವತ್ತೇ ಗಿಡ ಬೆಳೆಸಿ

First Published May 21, 2021, 7:16 PM IST

ಮನುಷ್ಯ ಪ್ರಾಣಿಗಳಿಗೆ ಬೇಕಾಗಿರುವುದು ಬೆಳಕು, ನೀರು, ಗಾಳಿ, ಆಹಾರ ಇದರಲ್ಲಿ ಮುಖ್ಯವಾಗಿ ಬೇಕಾಗಿರುವುದು ಗಾಳಿ. ಹೌದು,  ಆಕ್ಸಿಜನ್ (ಆಮ್ಲಜನಕ). ಮನುಷ್ಯ ತನ್ನ ಆಸೆ ಆಮಿಷಕ್ಕೆ ಒಳಗಾಗಿ ಲಕ್ಷಾನುಗಟ್ಟಲೆ ಮರಗಳನ್ನು ಕಡಿಯುತ್ತಿದ್ದಾನೆ. ಆದರೆ ಅದಕ್ಕೆ ಬದಲಾಗಿ ಯಾವ ಗಿಡಗಳನ್ನು ನೆಡುವ ಕಾರ್ಯವನ್ನು ಮಾಡುತ್ತಿಲ್ಲ. ಹೀಗಾಗಿ ಪರಿಸ್ಥಿತಿ ಹೇಗಿದೆ ಎಂದರೆ ಹವಾಮಾನ ವೈಪರೀತ್ಯ ಉಂಟಾಗಿದೆ. ಹೀಗಾಗಿ ಭೂಮಿಯಲ್ಲಿ ಅಸಮತೋಲನ ಎದ್ದು ಕಾಡುತ್ತಿದೆ. ಮಳೆಗಾಲದಲ್ಲಿ ಸರಿಯಾಗಿ ಮಳೆಯಾಗುತ್ತಿಲ್ಲಿ. ಚಳಿ ಪ್ರದೇಶಗಳಲ್ಲಿ ಬೇಸಿಗೆಯಂತಾಗಿವೆ. ಧ್ರುವಗಳಲ್ಲಿ ಹಿಮ ಕರಗುತ್ತಿದೆ. ಹೀಗಾಗಿ ಈಗ ನಾವು ಎಚ್ಚೆತ್ತು ಕೊಳ್ಳಲೇ ಬೇಕಾಗಿದೆ. ಕಾಡು ಕಡಿದು ನಾಡು ಮಾಡಿದರೆ ಮನುಷ್ಯ ಕೊನೆಗೆ ಗಾಳಿ ಇಲ್ಲದೆ ಆ ನಾಡಿನಲ್ಲೂ ಬದುಕಲು ಅಸಾಧ್ಯ.