ಫಳ ಫಳ ಅಂತ ಹೊಳೆಯೋ ಚರ್ಮ ನಿಮ್ಮದಾಗಬೇಕಂದ್ರೆ ಈ ಹಣ್ಣು-ಹಂಪಲು ತಿನ್ನಿ!
ದೇಹವು ನೈಸರ್ಗಿಕವಾಗಿ ಹೈಲುರಾನಿಕ್ ಆಮ್ಲವನ್ನು ಉತ್ಪಾದಿಸುತ್ತದೆ, ಇದು ನಮ್ಮ ಅಂಗಾಂಶಗಳನ್ನು ಲುಬ್ರಿಕೇಟ್‌ಗೊಳ್ಳಿಸಲು ಸಹಾಯ ಮಾಡುತ್ತದೆ. ಇದು ಚರ್ಮದ ಆರೋಗ್ಯ, ಗಾಯದ ವಾಸಿಮಾಡುವಿಕೆ, ಮೂಳೆಯ ಬಲ, ಮತ್ತು ಇತರ ಹಲವು ದೈಹಿಕ ವ್ಯವಸ್ಥೆಗಳು ಅಥವಾ ಕಾರ್ಯಗಳಲ್ಲಿ ಪಾತ್ರವನ್ನು ವಹಿಸುತ್ತದೆ. ಹೈಲುರಾನಿಕ್ ಆಸಿಡ್ ಚರ್ಮ, ಸಂಯೋಜಕ ಅಂಗಾಂಶ ಮತ್ತು ಕಣ್ಣುಗಳಲ್ಲಿ ಕಂಡುಬರುತ್ತದೆ. ಇದರ ಮುಖ್ಯ ಕಾರ್ಯವೆಂದರೆ ನೀರನ್ನು ಉಳಿಸಿಕೊಳ್ಳುವುದು. ಅಂಗಾಂಶಗಳು ಲುಬ್ರಿಕೇಟ್ ಮಾಡುವುದು ಮತ್ತು ತೇವಾಂಶ ಕಾಪಾಡುವುದು. ಚರ್ಮದ ಆರೋಗ್ಯವಾಗಿರಲು ಹೈಲುರಾನಿಕ್ ಆಮ್ಲ ಹೇರಳವಾಗಿರುವ ಈ ಆಹಾರಗಳನ್ನು ದಿನದ ಡಯಟ್‌ನಲ್ಲಿ ತಪ್ಪದೇ ಆಳವಡಿಸಿಕೊಳ್ಳಿ.
ಬೋನ್ ಬ್ರಾಥ್:
ಹೈಲುರಾನಿಕ್ ಆಸಿಡ್ ಹೆಚ್ಚಿಸಿಕೊಳ್ಳಲು ಬೋನ್ ಬ್ರಾಥ್ ಅಥವಾ ಮೂಳೆ ಸಾರು ತಿನ್ನುವುದು ಅತ್ಯುತ್ತಮ. ಬೋನ್ ಬ್ರಾಥ್ ಹೈಲುರಾನಿಕ್ ಆಸಿಡ್ ಉತ್ಪತ್ತಿಯನ್ನು ಹೆಚ್ಚಿಸಿ ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.
ನಟ್ಸ್ ಮತ್ತು ಸೀಡ್ಸ್:
ನಟ್ಸ್ ಮತ್ತು ಸೀಡ್ಸ್ ದೇಹಕ್ಕೆ ದೈನಂದಿನ ಪೋಷಕಾಂಶಗಳನ್ನು ಒದಗಿಸುತ್ತದೆ. ಅವುಗಳಲ್ಲಿರುವ ಹೆಚ್ಚಿನ ಮೆಗ್ನೀಸಿಯಮ್ ಅಂಶದಿಂದ, ಹೈಲುರೊನಾನ್ ಉತ್ಪಾದನೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ. ಅಗತ್ಯವಾದ ಫ್ಯಾಟಿ ಆಸಿಡ್‌ಗಳನ್ನು ಹೊಂದಿರುವ ಇವು ಚರ್ಮವನ್ನು ಹೈಡ್ರೇಟ್ ಮಾಡುತ್ತದೆ.
ಹಸಿರು ಎಲೆ ತರಕಾರಿ:
ಇವುಗಳು ಮೆಗ್ನೀಷಿಯಮ್‌ನ ಬಲವಾದ ಮೂಲವಾಗಿದ್ದು ದೇಹದಲ್ಲಿ ಹೈಲುರಾನಿಕ್ ಆಸಿಡ್ ಉತ್ಪಾದನೆ ವೇಗ ಹೆಚ್ಚಿಸುತ್ತದೆ. ಮೃದು ಚರ್ಮಕ್ಕಾಗಿ ಮತ್ತು ರೇಡಿಯಂಟ್ ಗ್ಲೋಗಾಗಿ ಎಲೆಕೋಸು, ಪಾಲಕ್, ಕೇಲ್ ಮತ್ತು ಮೈಕ್ರೋಗ್ರೀನ್‌ಗಳು ಆಹಾರದಲ್ಲಿ ಸೇರಿಸಕೊಳ್ಳುವುದು ಅಗತ್ಯ.
ರೂಟ್ ವೇಜಿಟೇಬಲ್ಸ್:
ಬೇರಿನ ತರಕಾರಿ ದೇಹದಲ್ಲಿ ಹೈಲುರಾನಿಕ್ ಆಸಿಡ್ ಉತ್ಪಾದನೆಯನ್ನು ಹೆಚ್ಚಿಸಬಹುದು ಎಂದು ಕೆಲವು ಸಂಶೋಧನೆಗಳು ಸೂಚಿಸುತ್ತವೆ ಈ ಆಹಾರಗಳಲ್ಲಿ ಆಲೂಗಡ್ಡೆ (Potato), ಗೆಣಸು, ಬೀಟ್ರೂಟ್ ಮತ್ತು ಇತರ ಗೆಡ್ಡೆಗಳು ಸೇರಿವೆ.ಜೊತೆಗೆ ಇವುಗಳು ಪೊಟ್ಯಾಸಿಯಮ್, ಫೈಬರ್, ವಿಟಮಿನ್ ಬಿ 6, ವಿಟಮಿನ್ ಎ ಮತ್ತು ವಿಟಮಿನ್ ಸಿ ಯ ಉತ್ತಮ ಮೂಲಗಳು. ಇವೆಲ್ಲವೂ ನಮ್ಮ ದೇಹಕ್ಕೆ ಅತ್ಯಗತ್ಯ.
ಟಮೋಟೋ:
ಟೊಮೆಟೊಗಳಲ್ಲಿ ಲೈಕೋಪೀನ್ ಹೇರಳವಾಗಿದ್ದು, ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ ಮತ್ತು ಹೈಲುರಾನಿಕ್ ಆಮ್ಲದ ಮಟ್ಟವನ್ನು ಪರೋಕ್ಷವಾಗಿ ಬೆಂಬಲಿಸುತ್ತದೆ.
ಮೀನು:
ಸಾಲ್ಮನ್ ಮತ್ತು ಮ್ಯಾಕೆರೆಲ್‌ನಂತಹ ಮೀನುಗಳಲ್ಲಿರುವ ಒಮೆಗಾ 3 ಕೊಬ್ಬಿನಾಮ್ಲ ಚರ್ಮದ ಆರೋಗ್ಯಕ್ಕೆ (Skin Health) ಪ್ರಯೋಜನಕಾರಿ.
ಬೆರ್ರಿ:
ಬೆರಿ ಹಣ್ಣುಗಳಾದ ಬ್ಲ್ಯೂ ಬೆರಿ ಸ್ಟ್ರಾಬೆರಿ ಮತ್ತು ರಾಸ್ಬೆರಿಗಳಲ್ಲಿ ಆಂಟಿಆಕ್ಸಿಡೆಂಟ್‌ಗಳು ಸಮೃದ್ಧವಾಗಿವೆ. ಇದು ಚರ್ಮದ ಆರೋಗ್ಯವನ್ನು ರಕ್ಷಿಸುತ್ತದೆ ಮತ್ತು ಹೆಚ್ಚಿಸುತ್ತದೆ.
ಸಿಟ್ರಸ್ ಹಣ್ಣುಗಳು:
ಲಿಂಬೆ , ಕಿತ್ತಳೆ ಮತ್ತು ದ್ರಾಕ್ಷಿಯಂತಹ ಹಣ್ಣುಗಳಲ್ಲಿ ವಿಟಮಿನ್ ಸಿ ಹೇರಳವಾಗಿದೆ ಹೈಲುರಾನಿಕ್ ಆಸಿಡ್ ಹೆಚ್ಚಿಸುತ್ತದೆ ಈ ಹಣ್ಣುಗಳನ್ನು ತಿನ್ನುವುದರಿಂದ ಮೂರು ವಾರಗಳಲ್ಲಿ ಹೆಚ್ಚು ಮೃದುವಾದ ಹೊಳೆಯುವ ಚರ್ಮಕ್ಕೆ ನಿಮ್ಮದಾಗುತ್ತದೆ.
ಸೋಯಾ ಉತ್ಪನ್ನಗಳು:
ಟೋಫು ಮತ್ತು ಸೋಯಾ ಹಾಲು ಜೆನಿಸ್ಟೀನ್ ಅಂಶವನ್ನು ಹೊಂದಿರುತ್ತದೆ. ಇದು ಹೈಲುರಾನಿಕ್ ಆಸಿಡ್ ಉತ್ಪಾದನೆಗೆ ಸಹಾಯ ಮಾಡುತ್ತದೆ.
ಬೆಲ್ ಪೆಪರ್ಸ್:
ವಿಟಮಿನ್ ಸಿ ಅಂಶ ಅಧಿಕವಾಗಿರುವ ದಪ್ಪ ಮೆಣಸಿನಕಾಯಿ ಕಾಲಜನ್ ಉತ್ಪಾದನೆ ಮತ್ತು ಹೈಲುರಾನಿಕ್ ಆಮ್ಲದ ಸಂಶ್ಲೇಷಣೆಯನ್ನು ಬೆಂಬಲಿಸುತ್ತದೆ.