ಜಯ, ಯಶಸ್ಸು ಸುಮ್ ಸುಮ್ಮನೆ ಸಿಗೋಲ್ಲ, ಬದಲಾಗಬೇಕು ಜೀವನಶೈಲಿ!
ನಿಮ್ಮ ದಿನ ಪೂರ್ತಿಯಾಗಿ ಹೇಗಿರಲಿದೆ ಅನ್ನೋದು, ನೀವು ಯಾವ ರೀತಿ ನಿಮ್ಮ ದಿನವನ್ನು ಆರಂಭಿಸುತ್ತೀರಿ ಅನ್ನೋದರ ಮೇಲೆ ಅವಲಂಭಿಸಿದೆ. ಹಾಗಾದ್ರೆ ಅತ್ಯುತ್ತಮ ದಿನಕ್ಕಾಗಿ ದಿನದ ಆರಂಭ ಹೇಗಿರಬೇಕು?

ಮುಂಜಾನೆ ಅನ್ನೋದು ತುಂಬಾ ಮ್ಯಾಜಿಕಲ್ ಆಗಿರುತ್ತೆ. ಅದನ್ನು ಹೇಗೆ ಸ್ಪೆಂಡ್ ಮಾಡೋದು ಅನ್ನೋದು ನಿಮಗೆ ತಿಳಿದಿರಬೇಕು. ಹೆಚ್ಚಿನ ಯಶಸ್ವಿ ಜನರು ತಮ್ಮ ದಿನವನ್ನು ಬೇಗ ಪ್ರಾರಂಭಿಸುತ್ತಾರೆ, ಅದು ಶಿಸ್ತುಬದ್ಧ ಮತ್ತು ಉತ್ಪಾದಕ ಜೀವನವನ್ನು ನಡೆಸಲು ಸಹಾಯ ಮಾಡುತ್ತದೆ. ಪ್ರತಿದಿನ ನಿಮ್ಮ ಅತ್ಯುತ್ತಮ ಪ್ರದರ್ಶನ ನೀಡಲು ಬೆಳಿಗ್ಗೆ 7 ಗಂಟೆಯ ಮೊದಲು (before 7pm) ಅನುಸರಿಸಬೇಕಾದ ಕೆಲವು ಬೆಳಿಗ್ಗೆ ಆಚರಣೆಗಳು ಇಲ್ಲಿವೆ.
ನೀರು ಕುಡಿಯಿರಿ (Drink water): ಗಡಿಯಾರವು ಬೆಳಗ್ಗೆ 7 ಗಂಟೆಗೆ ತಲುಪುವ ಮೊದಲು ಒಂದರಿಂದ ಎರಡು ಲೀಟರ್ ನೀರನ್ನು ಕುಡಿಯಿರಿ. ಬೇಕಾದರೆ, ನೀವು ನೀರಿಗೆ ನಿಂಬೆ ಅಥವಾ ಜೇನುತುಪ್ಪವನ್ನು ಸಹ ಸೇರಿಸಬಹುದು. ಇದು ನಿಮ್ಮ ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ ಮತ್ತು ಹೆಚ್ಚು ಕೇಂದ್ರೀಕರಿಸಲು ಸಹಾಯ ಮಾಡುತ್ತದೆ.
ವ್ಯಾಯಾಮ (Exercise): ಯಾವುದೇ ರೀತಿಯ ವಾಕಿಂಗ್ ಅಥವಾ ಎಕ್ಸರ್ ಸೈಜ್ ಮಾಡುವುದರಿಂದ ನಿಮ್ಮ ದೇಹವನ್ನು ಸಕ್ರಿಯಗೊಳಿಸಲು ಮತ್ತು ಪ್ರಯೋಜನಕಾರಿ ಹಾರ್ಮೋನುಗಳನ್ನು ಬಿಡುಗಡೆ ಮಾಡಲು ಸಹಾಯ ಮಾಡುತ್ತದೆ. ಮುಂಜಾನೆ ತ್ವರಿತ ವ್ಯಾಯಾಮವು ನಿಮ್ಮ ದೇಹವನ್ನು ದಿನದ ಕಾರ್ಯಗಳಿಗೆ ಸಿದ್ಧಗೊಳಿಸುತ್ತದೆ.
ಡಿಸ್ ಕನೆಕ್ಟ್ ಆಗಿ (Disconnect) : ನೀವು ಎಚ್ಚರವಾದ ಕೂಡಲೇ, ನೇರವಾಗಿ ಇಮೇಲ್ ಚೆಕ್ ಮಾಡೋದು, ಮೆಸೇಜ್ ನೋಡೋದು, ಸೋಶಿಯಲ್ ಮೀಡೀಯಾ ಸ್ಕ್ರೋಲ್ ಮಾಡುವ ಅಭ್ಯಾಸ ಇದ್ದರೆ ಅದನ್ನು ಬದಲಾಯಿಸಿ. ದಿನದ ಅಮೂಲ್ಯವಾದ ಮೊದಲ ಕ್ಷಣಗಳನ್ನು ವಿಶ್ರಾಂತಿ ಪಡೆಯಲು ಅಥವಾ ನಿಮ್ಮ ಕುಟುಂಬದೊಂದಿಗೆ ಸ್ವಲ್ಪ ಸಮಯ ಕಳೆಯಲು ತೆಗೆದುಕೊಳ್ಳುವುದು ಹೆಚ್ಚು ಆರೋಗ್ಯಕರವಾಗಿದೆ, ಹಾಗಾಗಿ ಮೊಬೈಲ್, ಟಿವಿಯಿಂದ ಡಿಸ್ ಕನೆಕ್ಟ್ ಆಗಿ.
ಧ್ಯಾನ (Meditation): ಬೆಳಿಗ್ಗೆ 7 ಗಂಟೆ ಮೊದಲು, ಸುಮಾರು ಹತ್ತರಿಂದ ಇಪ್ಪತ್ತು ನಿಮಿಷಗಳ ಕಾಲ ಸಣ್ಣ ಧ್ಯಾನ ಮಾಡುವುದು ಒಳ್ಳೆಯದು. ಇದು ನಿಮ್ಮನ್ನು ಕೇಂದ್ರೀಕರಿಸಲು, ಮನಸ್ಸನ್ನು ಶಾಂತಗೊಳಿಸಲು ಮತ್ತು ದಿನಕ್ಕೆ ಶಾಂತಿಯನ್ನು ನೀಡಲು ಸಹಾಯ ಮಾಡುತ್ತದೆ.
ಕೃತಜ್ಞತೆ (Gratitude) : ಕೃತಜ್ಞತೆಗೆ ನಿಮ್ಮ ಜೀವನ ಪರಿವರ್ತಿಸುವ ಶಕ್ತಿ ಇದೆ. ಇದು ನಿಮ್ಮ ಜೀವನದಲ್ಲಿನ ದೊಡ್ಡ ಮತ್ತು ಸಣ್ಣ ವಿಷಯಗಳಿಗೆ ಕೃತಜ್ಞರಾಗಿರಲು ನಿಮಗೆ ಸಹಾಯ ಮಾಡುತ್ತದೆ. ಹಾಗಾಗಿ ಮುಂಜಾನೆ ಎದ್ದ ಕೂಡಲೇ ಗ್ರಾಟಿಟ್ಯೂಡ್ ನೋಟ್ ಬರೆದಿಡಲು ಆರಂಭಿಸಿ. ಇದರಿಂದ ನಿಮ್ಮ ದಿನ ಸುಧಾರಿಸುತ್ತೆ.
ಓದು (Reading) : ಓದುವುದು ನಿಮ್ಮ ದಿನವಿಡೀ ಪ್ರಗತಿಯಲ್ಲಿರಲು ಮತ್ತು ಏಕಾಗ್ರತೆಗೆ ಹೊಂದಿಸಲು ಸಹಾಯ ಮಾಡುತ್ತದೆ. ಈ ಅಭ್ಯಾಸವು ಕಲಿಕೆ, ಪ್ರೇರಣೆ ಮತ್ತು ಏಕಾಗ್ರತೆಯಿಂದ ತುಂಬಿದ ದಿನವನ್ನು ನಿಮಗೆ ಅರ್ಪಿಸುತ್ತೆ.
ಆರೋಗ್ಯಕರ ಉಪಾಹಾರ (Healthy breakfast): ನೀವು ಆರೋಗ್ಯಕರ ಉಪಾಹಾರ ಸೇವಿಸಿದಾಗ, ನಿಮ್ಮ ದಿನ ಪ್ರೊಡಕ್ಟಿವ್ ಆಗೋದು ಖಚಿತ. ಇದು ನಿಮ್ಮ ಸ್ಮರಣೆಯನ್ನು ಸುಧಾರಿಸುತ್ತದೆ ಮತ್ತು ದೀರ್ಘಕಾಲದವರೆಗೆ ಹೆಚ್ಚುಫೋಕಸ್ ಆಗಿರಲು ಸಹಾಯ ಮಾಡುತ್ತದೆ.
ದಿನದ ಗುರಿ ನಿಗದಿಪಡಿಸಿ (Set goals for the day): ನಿಮ್ಮ ಕ್ಯಾಲೆಂಡರ್, ಟು ಡು ಲಿಸ್ಟ್ ಮತ್ತು ಗುರಿ ನಿಯತಕಾಲಿಕದೊಂದಿಗೆ ಕುಳಿತು, ದಿನದ ನಿಮ್ಮ ವೇಳಾಪಟ್ಟಿಗಾಗಿ ಯೋಜಿಸಿ. ಅರ್ಥಪೂರ್ಣ ಚಟುವಟಿಕೆಗಳಿಗೆ ಆದ್ಯತೆ ನೀಡಿ ಮತ್ತು ದಿನದ ನಿಮ್ಮ ಯೋಜನೆಯ ಆರಂಭದಲ್ಲಿಯೇ ಅವುಗಳನ್ನು ಹಂಚಿಕೆ ಮಾಡಿ. ಇದರಿಂದ ನಿಮ್ಮ ದಿನವು ಸುಂದರವಾಗಿರುತ್ತೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.