Health Tips: ಆರೋಗ್ಯಕರ ಆಹಾರ ತಿಂದ್ರೂ ಪ್ರಯೋಜನ ಇಲ್ವಾ? ಹಾಗಿದ್ರೆ ಈ ತಪ್ಪು ನಿಲ್ಲಿಸಿ
ಸಣ್ಣ ಜೀವನಶೈಲಿ ಬದಲಾವಣೆಗಳನ್ನು ಮಾಡುವ ಮೂಲಕ ಮತ್ತು ಯಾವುದೇ ಕಟ್ಟುನಿಟ್ಟಾದ ಆಹಾರವನ್ನು ಅನುಸರಿಸದ ಮೂಲಕ, ನೀವು ಆರೋಗ್ಯವಾಗಿ ಉಳಿಯಬಹುದು, ಮತ್ತು ನೀವು ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ, ಅದು ಸಾಧ್ಯವಿಲ್ಲ. ಸರಿಯಾದ ಆಹಾರ ಕ್ರಮದೊಂದಿಗೆ ನೀವು ಕೆಲವೊಂದು ಅಭ್ಯಾಸಗಳನ್ನು ರೂಢಿ ಮಾಡಬೇಕು. ಅವುಗಳ ಬಗ್ಗೆ ತಿಳಿಯೋಣ.
ನಾವು ಚೆನ್ನಾಗಿ ತಿನ್ನಬೇಕು, ಆರೋಗ್ಯಕರ ಆಹಾರವನ್ನು ಸೇವಿಸಬೇಕು, ಸಮಯಕ್ಕೆ ಸರಿಯಾಗಿ ತಿನ್ನಬೇಕು ಎಂದು ಹಿರಿಯರು ಹೇಳೋದನ್ನು ನಾವು ಯಾವಾಗಲೂ ಕೇಳುತ್ತೇವೆ. ಆದರೆ ಆರೋಗ್ಯಕರ ಆಹಾರ (healthy food) ಸೇವಿಸಿದ ನಂತರವೂ, ಅದು ಸಂಪೂರ್ಣವಾಗಿ ಆರೋಗ್ಯಕರವಾಗಿಲ್ಲದಿದ್ದರೆ, ಅಥವಾ ಆದರಿಂದ ಏನು ಪ್ರಯೋಜನ ಆಗ್ತಾ ಇಲ್ಲ ಎಂದಾದರೆ ಇದಕ್ಕೆ ಕಾರಣವೇನು?
ಸಣ್ಣ ಜೀವನಶೈಲಿ ಬದಲಾವಣೆಗಳನ್ನು (lifestyle changes) ಮಾಡುವ ಮೂಲಕ ಮತ್ತು ಕಟ್ಟುನಿಟ್ಟಾದ ಆಹಾರ ಕ್ರಮವನ್ನು ಅನುಸರಿಸದೆ ನೀವು ಆರೋಗ್ಯವಾಗಿ ಉಳಿಯಬಹುದು, ಜೊತೆಗೆ ನೀವು ತೂಕ ಇಳಿಸಿಕೊಳ್ಳಲು ಯೋಚಿಸುತ್ತಿದ್ದರೆ ಅದು ಸಹ ಸಾಧ್ಯವಿದೆ. ನಿಮಗೆ ಬೇಕಾಗಿರುವುದು ಎಚ್ಚರಿಕೆಯಿಂದ ತಿನ್ನುವುದು ಏಕೆಂದರೆ ಅದು ನಿಮ್ಮ ಭಾವನೆಗಳು ಮತ್ತು ದೈಹಿಕ ಸಂವೇದನೆಗಳನ್ನು ಗುರುತಿಸುತ್ತದೆ.
ಈಟಿಂಗ್ ಡಿಸಾರ್ಡರ್ (eating disorder), ಖಿನ್ನತೆ (Depression), ಆತಂಕ (Anxiety) ಮತ್ತು ವಿವಿಧ ಆಹಾರ-ಸಂಬಂಧಿತ ನಡವಳಿಕೆಗಳು ಆರೋಗ್ಯದ ಮೇಲೆ ಪರಿಣಾಮ ಬೀರುತ್ತೆ. ಅಲ್ಲದೆ, ಎಚ್ಚರಿಕೆಯಿಂದ ತಿನ್ನುವುದು ತೂಕ ಇಳಿಸಿಕೊಳ್ಳಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ ಆಹಾರವನ್ನು ತಿನ್ನಲು ಅಂತಹ ಕೆಲವು ಸಲಹೆಗಳ ಬಗ್ಗೆ ತಿಳಿದುಕೊಳ್ಳೋಣ, ಆಹಾರ ತಿನ್ನುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳಿವು :
ಸೆರಾಮಿಕ್ ಅಥವಾ ಸ್ಟೀಲ್ ಪಾತ್ರೆಗಳಲ್ಲಿ ತಿನ್ನಿ: (use ceramic or steal plate)
ಆಹಾರಕ್ಕಾಗಿ ಯಾವಾಗಲೂ ಸೆರಾಮಿಕ್ ಅಥವಾ ಸ್ಟೀಲ್ ಪ್ಲೇಟ್ ಗಳನ್ನು ಬಳಸಿ. ಇದನ್ನು ಮಾಡುವುದರಿಂದ, ನೀವು ಎಷ್ಟು ತಿನ್ನುತ್ತಿದ್ದೀರಿ ಎಂದು ನಿಮಗೆ ತಿಳಿಯುತ್ತದೆ. ಜನರು ಕಾಗದದ ತಟ್ಟೆಯ ಬದಲು ಸೆರಾಮಿಕ್ ಪ್ಲೇಟ್ನಿಂದ ಆಹಾರವನ್ನು ಸೇವಿಸಿದಾಗ, ಅವರು ಅದನ್ನು ಉಪಾಹಾರಕ್ಕಿಂತ ಹೆಚ್ಚಾಗಿ ಇಡೀ ಊಟವಾಗಿ ನೋಡುತ್ತಾರೆ ಎಂದು ಒಂದು ಅಧ್ಯಯನವು ಕಂಡುಹಿಡಿದಿದೆ. ಇದು ಅವರಿಗೆ ಹೊಟ್ಟೆ ತುಂಬಿದ ಅನುಭವವನ್ನು ನೀಡುತ್ತೆ. ಇದರಿಂದ ಬೇಗನೆ ಹಸಿವಾಗೋದಿಲ್ಲ.
ಸ್ವಲ್ಪ ಸ್ವಲ್ಪ ಆಹಾರ ಸೇವಿಸಿ (eat less food) :
ನೀವು ಆಹಾರ ಸೇವಿಸುವಾಗ ಒಂದೇ ಬಾರಿಗೆ ತುಂಬಾ ಸೇಸಿದಿದರೆ ಮತ್ತಷ್ಟು ತಿನ್ನುವ ಬಯಕೆಯಾಗುತ್ತೆ. ಇದರ ಬದಲಾಗಿ ನೀವು ಸ್ವಲ್ಪ ಸ್ವಲ್ಪ ಆಹಾರವನ್ನು ನಿಧಾನವಾಗಿ ಸೇವಿಸಿದರೆ ಹೊಟ್ಟೆ ತುಂಬಿದ ಅನುಭವ ಆಗುತ್ತೆ. ಇದಲ್ಲದೆ, ಸ್ವಲ್ಪ ಸ್ವಲ್ಪ ಆಹಾರವನ್ನು, 32 ಬಾರಿ ಜಗಿಯಬೇಕು, ಇದರಿಂದ ಅವು ನಮ್ಮ ದೇಹದಲ್ಲಿ ಚೆನ್ನಾಗಿ ಕರಗುತ್ತವೆ. ಇದರಿಂದ ತೂಕ ಇಳಿಸಲು ಸಹ ಸಹಾಯವಾಗುತ್ತೆ.
ನೆಲದ ಮೇಲೆ ಕುಳಿತು ತಿನ್ನಿ (sit on floor):
ಇಂದಿನ ಜೀವನಶೈಲಿ ಹೇಗಿದೆಯೆಂದರೆ ಎರಡು ನಿಮಿಷಗಳ ಕಾಲ ಕುಳಿತು ತಿನ್ನುವುದು ಸಹ ಕಷ್ಟಕರವಾಗಿದೆ. ಜನರು ವಿಚಿತ್ರವಾಗಿ ತಿನ್ನೋದನ್ನು ನಾವು ನೋಡಿರುತ್ತೇವೆ. ಇತ್ತೀಚಿನ ಸಂಶೋಧನೆಯ ಪ್ರಕಾರ ಜನರು ನಡೆದುಕೊಂಡು ತಿಂದರೆ, ಆವಾಗ 5 ಪ್ರತಿಶತದಷ್ಟು ಹೆಚ್ಚು ತಿನ್ನುತ್ತಾರೆ. ಕುಳಿತುಕೊಳ್ಳುವುದು ಮತ್ತು ತಿನ್ನುವುದು ಪ್ರಜ್ಞಾಪೂರ್ವಕ ಆಹಾರದ ಭಾಗವಾಗಿದೆ.
ಶತಮಾನಗಳಿಂದ, ನಾವು ನೆಲದ ಮೇಲೆ ಕುಳಿತು ಆಹಾರ ತಿನ್ನುವ ಸಂಪ್ರದಾಯವನ್ನು ಹೊಂದಿದ್ದೇವೆ, ಇದಕ್ಕೆ ವೈಜ್ಞಾನಿಕ ಕಾರಣವೆಂದರೆ ನಾವು ಸರಿಯಾದ ಪ್ರಮಾಣದ ಆಹಾರವನ್ನು ತೆಗೆದುಕೊಳ್ಳುತ್ತೇವೆ, ಜೊತೆಗೆ ಜೀರ್ಣಿಸಿಕೊಳ್ಳಲು ಸುಲಭ. ಇದಲ್ಲದೆ, ಇದು ನಿಮ್ಮ ಆಹಾರದ ಮೇಲೆ ಗಮನ ಹರಿಸಲು ಸಹ ನಿಮಗೆ ಸಹಾಯ ಮಾಡುತ್ತದೆ. ಆದ್ದರಿಂದ, ಮೇಜಿನ ಬದಲು ನೆಲದ ಮೇಲೆ ಕುಳಿತುಕೊಳ್ಳುವುದು ಉತ್ತಮ.
ಅನೇಕ ಜನರು ರಾತ್ರಿಯಲ್ಲಿ ಅಥವಾ ಹಗಲಿನಲ್ಲಿ ಆಹಾರವನ್ನು ತಿನ್ನುವಾಗ ತಮ್ಮ ಮೊಬೈಲ್ ಫೋನ್ (using mobile phone while eating) ಪರದೆ ನೋಡುವ ಅಭ್ಯಾಸ ಹೊಂದಿದ್ದಾರೆ. ಆಹಾರವನ್ನು ಸೇವಿಸುವಾಗ ತಮ್ಮ ಫೋನ್ ಗಳನ್ನು ಬಳಸುವ ಜನರು ತಮ್ಮ ಆದರ್ಶ ಆಹಾರಕ್ಕಿಂತ ಸುಮಾರು 11 ಪ್ರತಿಶತದಷ್ಟು ಹೆಚ್ಚು ತಿನ್ನುತ್ತಾರೆ ಎಂದು ಅಧ್ಯಯನವೊಂದು ಕಂಡು ಹಿಡಿದಿದೆ. ನಿಮ್ಮ ಮನಸ್ಸು ಆಹಾರವನ್ನು ಹೊರತುಪಡಿಸಿ ಬೇರೆ ಯಾವುದರ ಮೇಲೆ ಕೇಂದ್ರೀಕರಿಸಿದಾಗ, ನಿಮ್ಮ ಗಮನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗುತ್ತದೆ, ಇದರಿಂದಾಗಿ ನೀವು ಹೆಚ್ಚು ತಿನ್ನುತ್ತೀರಿ. ಆದ್ದರಿಂದ ಆಹಾರವನ್ನು ತಿನ್ನುವಾಗ ಎಂದಿಗೂ ಮೊಬೈಲ್ ಬಳಸಬೇಡಿ. ಇದು ಉತ್ತಮ ಆರೋಗ್ಯಕ್ಕೆ ಸಹಕಾರಿ.