ಹಳೆಯ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸುಂದರ ಹೂಕುಂಡ..!
ಮಡಿಕೇರಿಯ ಶನಿವಾರಸಂತೆ ಸಮಿಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಾಥಮಿಕ ಶಾಲೆಯ ಚಿರಪರಿಚಿತ ಮತ್ತು ಕ್ರಿಯಾಶೀಲ ಶಿಕ್ಷಕ ಸಿ.ಎಸ್. ಸತೀಶ್ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿಕೊಂಡು ಹೂಕುಂಡಗಳನ್ನು ನಿರ್ಮಿಸುವ ಮೂಲಕ ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ. ಇಲ್ಲಿವೆ ಫೋಟೋಸ್
ಮಡಿಕೇರಿಯ ಶನಿವಾರಸಂತೆ ಸಮಿಪದ ಮುಳ್ಳೂರು ಸರ್ಕಾರಿ ಕಿರಿಯ ಪ್ರಾಾಥಮಿಕ ಶಾಲೆಯ ಚಿರಪರಿಚಿತ ಮತ್ತು ಕ್ರಿಯಾಶೀಲ ಶಿಕ್ಷಕ ಸಿ.ಎಸ್. ಸತೀಶ್ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಬಳಸಿಕೊಂಡು ಹೂಕುಂಡಗಳನ್ನು ನಿರ್ಮಿಸುವ ಮೂಲಕ ಪರಿಸರ ದಿನವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.
ಈ ಹಿಂದೆ ಅವರು ಹಳೆಯ ಪ್ಲಾಸ್ಟಿಕ್ ಕ್ಯಾನ್‌ಗಳನ್ನು ಬಳಸಿಕೊಂಡು ಯೂರಿನಲ್ ಕಮೊಡ್‌ಗಳನ್ನು ನಿರ್ಮಿಸಿದ್ದರು.
ಈ ಬಾರಿ ಶಾಲೆಗೆ ರಜೆ ಇರುವುದರಿಂದ ತಮ್ಮ ನಿವಾಸದಲ್ಲಿ ಮನೆ ಬಳಕೆಗೆ ತಂದ ಅಡುಗೆ ಕ್ಯಾಾನ್, ನೀರಿನ ಬಾಟಲ್, ಕಂಫರ್ಟ್ ಡಬ್ಬ ಮುಂತಾದ ಪ್ಲಾಾಸ್ಟಿಕ್ ತ್ಯಾಜ್ಯಗಳನ್ನು ಬಳಸಿಕೊಂಡು ಅವುಗಳನ್ನು ಅಲಂಕಾರಿಕವಾಗಿ ಕತ್ತರಿಸಿ ಬಳಸಿದ್ದಾರೆ.
ಅವುಗಳ ಮೇಲೆ ತಮ್ಮ ಕೈಚಳಕದಿಂದ ಆಕರ್ಷಣಿಯವಾಗಿ ವರ್ಣ ಚಿತ್ರ ಬಿಡಿಸಿ ಸುಂದರವಾಗಿ ಕಾಣುವಂತೆ ಹೂ ಕುಂಡಗಳನ್ನು ನಿರ್ಮಿಸಿದ್ದಾರೆ.
ಪ್ಲಾಸ್ಟಿಕ್ ಕ್ಯಾನ್‌ಗಳಿಂದ ಕೇವಲ ನೆಲದಲ್ಲಿ ಇಡುವ ಹೂವುಕುಂಡಗಳು ಮಾತ್ರ ಅಲ್ಲದೆ ಹ್ಯಾಾಂಗಿಂಗ್ ಪಾಟ್‌ಗಳು, ಗೋಡೆ ಮತ್ತು ಕಂಬಗಳಿಗೆ ಸಿಕ್ಕಿಸುವ ಪಾಟ್‌ಗಳನ್ನು ಸಹ ನಿರ್ಮಿಸಬಹುದು ಎಂದು ಶಿಕ್ಷಕ ಸತೀಶ್ ಹೇಳುತ್ತಾರೆ.
ಇಲ್ಲಿ ವಿಶೇಷವಾಗಿ ಪಕ್ಷಿಗಳಿಗೆ ಬೇಸಿಗೆಯಲ್ಲಿ ನೀರನ್ನು ಒದಗಿಸುವ ಉದ್ದೇಶದಿಂದ ಹ್ಯಾಂಗಿಂಗ್ ಪಾಟಿನ ಮೇಲೆ ಸುರಿದ ನೀರು ಹೆಚ್ಚಾ ದರೆ ಒಂದೆಡೆ ಸಂಗ್ರಹವಾಗುವಂತೆ ನೀರಿನ ಬಾಟಲ್‌ಗಳ ತಳಭಾಗವನ್ನು ಕೊಯ್ದು ಹ್ಯಾಂಗಿಂಗ್ ಪಾಟ್ ತಳಭಾಗದಲ್ಲಿ ಅಳವಡಿಸಲಾಗಿದೆ., ಇಲ್ಲಿ ಸಂಗ್ರಹವಾದ ನೀರನ್ನು ಬೇಸಿಗೆಯಲ್ಲಿ ಪಕ್ಷಿಗಳು ಕುಡಿಯಲು ಅನುಕೂಲ ಮಾಡಲಾಗಿದೆ.