ಈ ಸಮಸ್ಯೆ ಇರೋರು ಸಂಜೆ ಟೀ ಕುಡಿಯಲೇಬೇಡಿ!
ಸಂಜೆ ಟೀ ಅಪಾಯಗಳು : ಸಾಯಂಕಾಲ ಟೀ ಕುಡಿಯೋದು ಕುಡಿಯೋದು ಕೆಲವರಿಗೆ ಕಡ್ಡಾಯವಾಗಿದೆ. ಈ ರೀತಿ ಸಂಜೆ ಟೀ ಕುಡಿಯುವ ಅಭ್ಯಾಸ ಆರೋಗ್ಯಕ್ಕೆ ಒಳ್ಳೆಯದಾ? ಕೆಟ್ಟದ್ದಾ? ಯಾರು ಇದನ್ನ ಖಂಡಿತಾವಾಗ್ಲೂ ಕುಡಿಯುವುದನ್ನು ಬಿಡಬೇಕು ಅನ್ನೋದನ್ನು ಇಲ್ಲಿ ತಿಳಿಸಲಾಗಿದೆ.
ಸಂಜೆ ಟೀ ಯಾರು ಕುಡಿಯಬಾರದು?
ನಮ್ಮಲ್ಲಿ ಹಲವರು ಟೀ ಪ್ರಿಯರು. ಅವರಿಗೆ ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯೋದಿಷ್ಟ. ಬೆಳಗ್ಗೆ ಮಾತ್ರ ಕುಡಿಯೋರಾ ಅಂದ್ರೆ ಇಲ್ಲ. ಮತ್ತೆ ಸಂಜೆ 4 ಗಂಟೆ ಆದ ತಕ್ಷಣ ಟೀ ಕುಡಿಯೋರು. ಆ ಸಮಯದಲ್ಲಿ ಅವರಿಗೆ ಟೀ ಸಿಕ್ಕಿಲ್ಲ ಅಂದ್ರೆ ಬೇರೆ ಯಾವ ಕೆಲಸಾನೂ ಮಾಡೋಕೆ ಮನಸು ಬರೊಲ್ಲ. ಆದ್ರೆ ಹಾಗೆ ಸಂಜೆ ಟೀ ಎಲ್ಲರೂ ಕುಡಿಯಬಾರದು. ಕೆಲವರು ಕುಡಿಯಲೇಬಾರದು. ಯಾವ ತರಹದವರು ಸಂಜೆ ಟೀ ಕುಡಿಯೋದನ್ನ ಬಿಡಬೇಕು ಅನ್ನೋದನ್ನ ಈಗ ತಿಳ್ಕೊಳ್ಳೋಣ.
ಸಂಜೆ ಟೀ ಬಿಡಬೇಕಾದವರು
ಟೀ, ಕಾಫಿಲಿ ಇರೋ ಕೆಫೀನ್ ನಮ್ಮ ನಿದ್ದೆಗೆ ತೊಂದರೆ ಕೊಡುತ್ತೆ ಅಂತ ತಜ್ಞರು ಹೇಳ್ತಾರೆ. ಹಾಗಾಗಿ, ರಾತ್ರಿ ಮಲಗೋಕೆ 10 ಗಂಟೆ ಮುಂಚೆ ಯಾವುದೇ ಕೆಫೀನ್ ಇರೋ ಪದಾರ್ಥಗಳನ್ನ ಸೇವಿಸಬಾರದು. ಅಂದ್ರೆ ಸಂಜೆ ಟೀ, ಕಾಫಿನ ಬಿಡಬೇಕು. ಉದಾಹರಣೆಗೆ, ನೀವು ರಾತ್ರಿ 11-12 ಗಂಟೆಗೆ ಮಲಗಿದ್ರೆ, ಮಧ್ಯಾಹ್ನ 2 ಗಂಟೆ ನಂತರ ನೀವು ಟೀ ಅಥವಾ ಕಾಫಿ ಕುಡಿಯಬಾರದು.
ಸಂಜೆ ಟೀ ಬಿಡಬೇಕಾದವರು
ಸಂಜೆ ಯಾರ್ಯಾರು ಟೀ ಕುಡಿಯಬಾರದು?
ಸಂಜೆ ಟೀ ಕುಡಿದ್ರೆ, ಲಿವರ್ ವಿಷ ತೆಗೆಯೋದಿಲ್ಲ, ಕಾರ್ಟಿಸೋಲ್ ಮಟ್ಟ ಮತ್ತು ಊತ ಹೆಚ್ಚಾಗುತ್ತೆ. ಇದಲ್ಲದೆ, ಇದು ಜೀರ್ಣಕ್ರಿಯೆಯ ಮೇಲೂ ಕೆಟ್ಟ ಪರಿಣಾಮ ಬೀರುತ್ತೆ. ವಿಶೇಷವಾಗಿ ರಾತ್ರಿ ನಿದ್ರಾಹೀನತೆಯಿಂದ ಬಳಲುತ್ತಿರುವವರು ಸಂಜೆ ಟೀ ಕುಡಿಯಬಾರದು. 1 ಕಪ್ ಟೀ ಕುಡಿದು ನಮಗೆ ನಿದ್ದೆ ಬರಲ್ಲ ಅಂತ ಹಲವರು ದೂರುತ್ತಾರೆ. ಅಂಥವರು ಮೊದಲು ಈ ಸಂಜೆ ಟೀ ಕುಡಿಯೋದನ್ನ ಬಿಟ್ಟರೆ ರಾತ್ರಿ ಚೆನ್ನಾಗಿ ನಿದ್ದೆ ಮಾಡಬಹುದು.
ಸಂಜೆ ಟೀ ಬಿಡಬೇಕಾದವರು
ಕೆಲವರು ಒತ್ತಡ, ಆತಂಕದಿಂದ ಟೀ ಕುಡಿಯುತ್ತಾರೆ. ಆದರೆ ನಿಜವಾಗಿ ಹಾಗೆ ಒತ್ತಡ, ಆತಂಕದಲ್ಲಿರುವವರು ಟೀ ಕುಡಿಯೋದನ್ನ ಬಿಡಬೇಕು.
ಸಂಜೆ ಟೀ ಬಿಡಬೇಕಾದವರು
ಹೊಟ್ಟೆಯಲ್ಲಿ ಗ್ಯಾಸ್ ಹೆಚ್ಚಾಗಿ ಆಗುವವರು, ಒಣ ಚರ್ಮ, ಒಣ ಕೂದಲು ಇರುವವರು ಸಂಜೆ ಟೀ ಕುಡಿಯಬಾರದು. ಇನ್ನೂ ಹೆಚ್ಚು ಗ್ಯಾಸ್ ಆಗುತ್ತೆ. ಒಣ ಚರ್ಮದ ಸಮಸ್ಯೆ ಹೆಚ್ಚಾಗುತ್ತೆ. ನಿಮ್ಮ ದೇಹದಲ್ಲಿ ಹಾರ್ಮೋನುಗಳ ಅಸಮತೋಲನ ಇದ್ದರೆ ಅಥವಾ ನಿಮ್ಮ ತೂಕ ಕಡಿಮೆ ಇದ್ದರೆ, ಸಂಜೆ ಟೀ ಬಿಡಿ.
ನಿಮ್ಮ ಮೆಟಬಾಲಿಸಮ್ ದುರ್ಬಲವಾಗಿದ್ದರೆ, ನಿಮಗೆ ಆಗಾಗ್ಗೆ ಗ್ಯಾಸ್, ಆಸಿಡಿಟಿ, ಮಲಬದ್ಧತೆ ಆಗುತ್ತಿದ್ದರೆ, ನಿಮಗೆ ಹಸಿವಾಗದಿದ್ದರೆ, ಸಂಜೆ ಟೀ ಕುಡಿಯಬೇಡಿ. ಈ ಸಮಸ್ಯೆಗಳಿರುವವರು ಸಾಧ್ಯವಾದಷ್ಟು ಟೀ ಕುಡಿಯೋದನ್ನೇ ಬಿಡೋದು ಒಳ್ಳೆಯದು.