ಚಮಚ ಬಿಡಿ, ಕೈಯಿಂದಲೇ ಆಹಾರ ತಿಂದ್ರೆ ಆರೋಗ್ಯಕ್ಕೆ ಲಾಭ ಎನ್ನುತ್ತೆ ವಿಜ್ಞಾನ, ಹೇಗೆ?
ಆಯುರ್ವೇದದ ಪ್ರಕಾರ, ಚಮಚದಲ್ಲಿ ಊಟ ಮಾಡೋದಕ್ಕಿಂತ ಕೈಗಳಿಂದ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ, ಇದು ಪಂಚೇಂದ್ರಿಯಗಳಿಗೆ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು.
ಕೈಗಳಿಂದ ತಿನ್ನುವುದು (eating in hands) ಏನೋ ಒಂಥರಾ ಖುಷಿ ಕೊಡುತ್ತೆ. ಆಗಾಗ್ಗೆ ಮನೆಯ ಹಿರಿಯರು ಇಂತಹ ವಿಷಯಗಳನ್ನು ಹೇಳುತ್ತಲೇ ಇರುತ್ತಾರೆ, ಆದರೆ ಇತ್ತೀಚಿಗೆ ಹೆಚ್ಚಿನ ಜನರು ಹೋಟೆಲ್-ರೆಸ್ಟೋರೆಂಟ್ ಅಥವಾ ಮನೆಯಲ್ಲಿ ಸಹ ಚಮಚದಿಂದ ತಿನ್ನಲು ಪ್ರಾರಂಭಿಸಿದ್ದಾರೆ. ಆದರೆ ಯಾವುದು ಸರಿ? ಕೈಯಲ್ಲಿ ತಿನ್ನೋದು ಸರೀನಾ? ಅಥವಾ ಸ್ಪೂನ್ ನಲ್ಲಿ ತಿನ್ನೋದಾ?
ಭಾರತೀಯ ಸಂಪ್ರದಾಯದಲ್ಲಿ, ಆಹಾರವನ್ನು ಯಾವಾಗಲೂ ನೆಲದ ಮೇಲೆ ಕುಳಿತು, ಕೈಗಳಿಂದ ತಿನ್ನಲಾಗುತ್ತದೆ. ಕೈಗಳಿಂದ ಆಹಾರ ಸೇವಿಸಿದರೆ, ಅದರಿಂದ ಬಹಳಷ್ಟು ಆರೋಗ್ಯ ಪ್ರಯೋಜನಗಳಿವೆ (health benefits). ವಿಜ್ಞಾನ ಕೂಡ ಹಾಗೆ ನಂಬುತ್ತದೆ. ಕೈಗಳಿಂದ ತಿನ್ನುವ ಬಗ್ಗೆ ಆಯುರ್ವೇದ ಏನು ಹೇಳುತ್ತದೆ ಮತ್ತು ಅದರ ಪ್ರಯೋಜನಗಳು ಯಾವುವು ಎಂದು ತಿಳಿಯೋಣ …
ಕೈಗಳಿಂದ ತಿನ್ನುವ ಬಗ್ಗೆ ಆಯುರ್ವೇದ ಏನು ಹೇಳುತ್ತದೆ
ಆಯುರ್ವೇದದ (Ayurveda) ಪ್ರಕಾರ, ಕೈಗಳಿಂದ ತಿನ್ನುವುದು ಆರೋಗ್ಯಕ್ಕೆ ಪ್ರಯೋಜನಕಾರಿ, ಇದು ಪಂಚೇಂದ್ರಿಯಗಳಿಗೆ ಮತ್ತು ಜೀರ್ಣಕ್ರಿಯೆಗೆ ಒಳ್ಳೆಯದು. ನಮ್ಮ ಐದು ಬೆರಳುಗಳು ಐದು ವಿಭಿನ್ನ ಅಂಶಗಳನ್ನು ಪ್ರತಿನಿಧಿಸುತ್ತವೆ ಎಂದು ಆಯುರ್ವೇದ ಹೇಳುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನಾವು ನಮ್ಮ ಕೈಗಳಿಂದ ತಿನ್ನುವಾಗ, ಆ ಅಂಶಗಳು ಸಕ್ರಿಯವಾಗುತ್ತದೆ. ಇದು ದೇಹದ ಶಕ್ತಿಯನ್ನು ಹೆಚ್ಚಿಸುತ್ತದೆ.
ಇದಲ್ಲದೆ, ನಾವು ಕೈಗಳಿಂದ ಆಹಾರವನ್ನು ಸೇವಿಸಿದಾಗಲೆಲ್ಲಾ, ಆಹಾರವನ್ನು ಬೆರಳುಗಳಿಂದ ಸ್ಪರ್ಶಿಸುತ್ತೇವೆ, ಇದು ನಾವು ತಿನ್ನಲು ಸಂಪೂರ್ಣವಾಗಿ ಸಿದ್ಧರಾಗಿದ್ದೇವೆ ಎಂಬ ಸಂದೇಶವನ್ನು ಮೆದುಳಿಗೆ ಕಳುಹಿಸುತ್ತದೆ, ಇದು ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸಕ್ರಿಯಗೊಳಿಸುತ್ತದೆ ಮತ್ತು ಹೊಟ್ಟೆಯ ಆರೋಗ್ಯವನ್ನು ಸುಧಾರಿಸಲು ಕೆಲಸ ಮಾಡುತ್ತದೆ.
ವಿಜ್ಞಾನ ಹೇಳುವುದೇನು?
ಕೈಗಳಿಂದ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ, ಎಂದು ವಿಜ್ಞಾನ (science)ಹೇಳುತ್ತೆ. ಕೈಗಳಿಂದ ಆಹಾರ ಸೇವಿಸುವುದರಿಂದ ಜೀರ್ಣಕ್ರಿಯೆ (Digestive System) ಸುಧಾರಿಸುತ್ತದೆ. ಏಕೆಂದರೆ ಕೈಗಳಲ್ಲಿ ಕೆಲವು ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ, ಅವು ಹಾನಿಕಾರಕವಲ್ಲ ಆದರೆ ಪರಿಸರದಲ್ಲಿನ ವಿವಿಧ ಹಾನಿಕಾರಕ ಸೂಕ್ಷ್ಮಜೀವಿಗಳಿಂದ ದೇಹವನ್ನು ರಕ್ಷಿಸುತ್ತವೆ. ಆದರೂ, ತಿನ್ನುವ ಮೊದಲು ಕೈಗಳನ್ನು ಸರಿಯಾಗಿ ಸ್ವಚ್ಛಗೊಳಿಸಬೇಕು, ಇದರಿಂದ ರೋಗಗಳನ್ನು ತಪ್ಪಿಸಬಹುದು.
ಕೈಗಳಿಂದ ತಿನ್ನುವುದರ ಪ್ರಯೋಜನಗಳು
ಕೈಗಳಿಂದ ಆಹಾರವನ್ನು ತಿನ್ನುವುದು ನಾವು ಏನು ತಿನ್ನುತ್ತಿದ್ದೇವೆ ಮತ್ತು ಎಷ್ಟು ತಿನ್ನುತ್ತಿದ್ದೇವೆ, ನಾವು ಎಷ್ಟು ವೇಗವಾಗಿ ತಿನ್ನುತ್ತಿದ್ದೇವೆ, ಜೀರ್ಣಕಾರಿ ಆರೋಗ್ಯಕ್ಕೆ ಯಾವುದು ಅತ್ಯಂತ ಮುಖ್ಯವಾಗಿದೆ ಎಂಬುದರ ಬಗ್ಗೆ ಹೆಚ್ಚಿನ ಗಮನ ಹರಿಸುವಂತೆ ಮಾಡುತ್ತೆ. ಇದರೊಂದಿಗೆ, ಕೈಗಳಿಂದ ತಿನ್ನುವುದರಿಂದ ಅನೇಕ ಪ್ರಯೋಜನಗಳಿವೆ.