ಗರ್ಭಿಣಿಯರು ಕೇಸರಿ ಹಾಲು ಕುಡಿದ್ರೆ ಹುಟ್ಟೋ ಮಗು ಬಿಳಿಯಾಗಿರೋದು ಹೌದಾ?
ಪ್ರಾಚೀನ ಕಾಲದಿಂದಲೂ, ಗರ್ಭಾವಸ್ಥೆಯಲ್ಲಿ ಕೇಸರಿಯನ್ನು ಪ್ರತಿದಿನವೂ ಸೇವಿಸುವುದರಿಂದ ಮಗು ಬಿಳಿಯಾಗಿ ಹುಟ್ಟುತ್ತೆ ಎಂದು ಹೇಳಲಾಗುತ್ತದೆ. ಇದು ನಿಜವಾಗಿಯೂ ಸಂಭವಿಸುತ್ತದೆಯೇ? ತಜ್ಞರಿಂದ ತಿಳಿದುಕೊಳ್ಳೋಣ.
ಗರ್ಭಧಾರಣೆಯು (pregnancy) ಮಹಿಳೆಯ ಜೀವನದ ಅತ್ಯಂತ ಸುಂದರ ಹಂತ. ಈ ಸಮಯದಲ್ಲಿ, ತಾಯಿ ತನ್ನ ಆರೋಗ್ಯ ಮತ್ತು ಆಹಾರದ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಗರ್ಭದಲ್ಲಿರುವ ಮಗುವಿನ ಬೆಳವಣಿಗೆಗಾಗಿ, ತಾಯಿ ಎಲ್ಲಾ ರೀತಿಯ ಹಣ್ಣುಗಳು ಮತ್ತು ತರಕಾರಿಗಳನ್ನು ಸೇವಿಸುತ್ತಾಳೆ. ಅದೇ ಸಮಯದಲ್ಲಿ, ಕೆಲವು ವಿಚಿತ್ರ ನಂಬಿಕೆಗಳು ಸಹ ಈ ಸಮಯದಲ್ಲಿ ಕಂಡುಬರುತ್ತವೆ ಮತ್ತು ಕೇಳಲ್ಪಡುತ್ತವೆ.
ಕೆಲವು ಮಹಿಳೆಯರು ಬಿಳಿಯಾದ ಮಗುವನ್ನು (baby with fair skin) ಪಡೆಯಲು ಕೇಸರಿಯನ್ನು ಸೇವಿಸುತ್ತಾರೆ. ವಾಸ್ತವವಾಗಿ, ಪ್ರಾಚೀನ ಕಾಲದಿಂದಲೂ ಬಿಳಿಯಾದ ಮಗುವನ್ನು ಪಡೆಯಲು ಕೇಸರಿ ಹಾಲನ್ನು ಕುಡಿಯಲು ಜನರು ಸಲಹೆ ನೀಡುತ್ತಿದ್ದಾರೆ, ಇದನ್ನು ಇಲ್ಲಿಯವರೆಗೆ ಅನುಸರಿಸಲಾಗುತ್ತಿದೆ. ಕೇಸರಿ ಹಾಲು ಕುಡಿಯುವುದರಿಂದ ಮಗು ನಿಜವಾಗಿಯೂ ಬಿಳಿಯಾಗುತ್ತದೆಯೇ ಅಥವಾ ಇದು ಕೇವಲ ಮಿಥ್ಯೆಯೇ ಎಂಬುದು ಈಗ ಪ್ರಶ್ನೆಯಾಗಿದೆ.
ಕೇಸರಿಯ ಸೇವನೆಯು ಮಗುವಿನ ಬಣ್ಣವನ್ನು ಬಿಳಿಯಾಗಿಸುತ್ತದೆಯೇ?
ತಜ್ಞರ ಪ್ರಕಾರ, ಮಗುವನ್ನು ಬಿಳಿಯಾಗಿಸಲು ತಾಯಿ ಕೇಸರಿಯನ್ನು (saffron milk) ತಿನ್ನುವುದಕ್ಕೂ ಯಾವುದೇ ಸಂಬಂಧವಿಲ್ಲ. ಮಗುವಿನ ಬಣ್ಣ ಬಿಳಿ ಅಥವಾ ಕಪ್ಪು ಎಂಬುದು ಸಂಪೂರ್ಣವಾಗಿ ಮೆಲನಿನ್ ಮತ್ತು ಜೀನ್ ಗಳನ್ನು ಅವಲಂಬಿತವಾಗಿರುತ್ತದೆ. ದೇಹದಲ್ಲಿ ಮೆಲನಿನ್ ಮಟ್ಟ ತುಂಬಾ ಹೆಚ್ಚಾದಾಗ ಚರ್ಮವು ಕಪ್ಪಾಗಿರುತ್ತದೆ, ಆದರೆ ಸಮತೋಲಿತ ಪ್ರಮಾಣದ ಮೆಲನಿನ್ ಚರ್ಮದ ಬಣ್ಣವನ್ನು ಬಿಳಿಯಾಗಿಸಲು ಸಹಾಯ ಮಾಡುತ್ತದೆ.
ಕೇಸರಿ ಮತ್ತು ಹಾಲಿನ ಬಗ್ಗೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ, ಅದರೆ ಇದು ಇತರ ಪ್ರಯೋಜನಗಳನ್ನು ಹೊಂದಿದೆ, ಇದರಿಂದಾಗಿ ಅದರ ಸೇವನೆಯು ಮಗುವನ್ನು ಬಿಳಿಯಾಗಿಸುತ್ತದೆ ಎಂದು ಜನರು ಅರ್ಥಮಾಡಿಕೊಳ್ಳುತ್ತಾರೆ. ತಜ್ಞರ ಪ್ರಕಾರ, ಯಾವುದನ್ನಾದರೂ ಗರ್ಭಾವಸ್ಥೆಯಲ್ಲಿ ಕುಡಿಯುವ ಮೊದಲು ನೀವು ವೈದ್ಯರನ್ನು ಸಂಪರ್ಕಿಸಬೇಕು, ಏಕೆಂದರೆ ಅನೇಕ ಬಾರಿ ನೀವು ಏನನ್ನಾದರೂ ತಪ್ಪಾಗಿ ಸೇವಿಸೋದರಿಂದ ಅದು ನಿಮಗೆ ಹಾನಿಯನ್ನುಂಟು ಮಾಡುತ್ತದೆ.
ಕೇಸರಿ ಅಥವಾ ಕೇಸರಿ ಹಾಲು ಕುಡಿಯುವುದರಿಂದ ಆಗುವ ಪ್ರಯೋಜನಗಳು ಯಾವುವು?
ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಅಸಮತೋಲನದಿಂದಾಗಿ, ಮೂಡ್ ಸ್ವಿಂಗ್ ಸಮಸ್ಯೆ ಉಂಟಾಗುತ್ತೆ, ಇದರಿಂದಾಗಿ ಕೋಪಗೊಳ್ಳುವುದು, ಉದ್ರೇಕಗೊಳ್ಳುವುದು, ಯಾವುದೇ ವಿಷಯದ ಬಗ್ಗೆ ತಕ್ಷಣ ಅಳುವುದು ಮುಂತಾದ ಅನೇಕ ಸಮಸ್ಯೆಗಳು ಉಂಟಾಗುತ್ತವೆ. ಅಂತಹ ಪರಿಸ್ಥಿತಿಯಲ್ಲಿ, ಇದು ಮೂಡ್ ಸ್ವಿಂಗ್ (Mood swing) ನಿಯಂತ್ರಿಸಲು ಸಹಾಯ ಮಾಡುತ್ತದೆ.
ಕೇಸರಿ ಖಿನ್ನತೆ ನಿವಾರಕದಂತೆ ಕಾರ್ಯನಿರ್ವಹಿಸುತ್ತದೆ. ಇದರ ಸೇವನೆಯು ಸಿರೊಟೋನಿನ್ ಹಾರ್ಮೋನ್ ಅನ್ನು ಬಿಡುಗಡೆ ಮಾಡುತ್ತದೆ, ಇದು ಮನಸ್ಥಿತಿಯನ್ನು ಸುಧಾರಿಸುತ್ತದೆ. ಗರ್ಭಾವಸ್ಥೆಯಲ್ಲಿ ಅಧಿಕ ರಕ್ತದೊತ್ತಡದ (high blood pressure) ಸಮಸ್ಯೆಗಳು ಸಾಮಾನ್ಯವಾಗಿ ಕಂಡುಬರುತ್ತೆ, ಅಂತಹ ಪರಿಸ್ಥಿತಿಯಲ್ಲಿ, ಕೇಸರಿಯ ಸೇವನೆಯು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.
ಗರ್ಭಾವಸ್ಥೆಯಲ್ಲಿ, ಮಹಿಳೆಯರು ಗ್ಯಾಸ್ಟ್ರಿಕ್ (gastric), ಅಜೀರ್ಣ ಮತ್ತು ವಾಂತಿಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ಸಹ ಎದುರಿಸುತ್ತಾರೆ. ಈ ಸಮಯದಲ್ಲಿ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಕೇಸರಿ ಚಯಾಪಚಯವನ್ನು ಹೆಚ್ಚಿಸುತ್ತದೆ. ಅಷ್ಟೇ ಅಲ್ಲ ಕೇಸರಿಯ ಸೇವನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.